For Quick Alerts
ALLOW NOTIFICATIONS  
For Daily Alerts

ಎದೆಹಾಲು ನೀಡುವ ತಾಯಿ ಪ್ರತಿನಿತ್ಯ ಸಿಟ್ರಸ್ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು ಏಕೆ?

|

ಹಾಲುಣಿಸುವ ತಾಯಿ, ತನ್ನ ಆಹಾರದಲ್ಲಿ ತಾಜಾ ಹಣ್ಣು-ತರಕಾರಿ ಸೇರಿಸುವುದು ಬಹಳ ಮುಖ್ಯವಾಗಿದೆ. ಆದರೆ ಈ ಸಂದರ್ಭದಲ್ಲಿ ಸಿಟ್ರಸ್ ಹಣ್ಣುಗಳನ್ನು ದೂರಮಾಡಬೇಕು ಎಂಬುದನ್ನು ಬಹಳ ಕಾಲದಿಂದ ಕೇಳೆಕೊಂಡು ಬಂದಿದ್ದೇವೆ. ಏಕೆಂದರೆ ಈ ಹಣ್ಣುಗಳಲ್ಲಿರುವ ಆಮ್ಲೀಯ ಗುಣವು, ಮಗುವಿಗೆ ಗ್ಯಾಸ್ಟಿಕ್ ಉಂಟುಮಾಡಬಹುದು, ಎದೆಹಾಲಿನ ರುಚಿ ಬದಲಾಯಿಸಬಹುದೆಂಬ ಕಾರಣದಿಂದ. ಆದರೆ ಆಹಾರ ತಜ್ಞರ ಪ್ರಕಾರ, ಹೆರಿಗೆಯ ನಂತರ ಹಾಲುಣಿಸುವ ತಾಯಿ ಸಿಟ್ರಸ್ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಬೇಕು ಎನ್ನುತ್ತಾರೆ. ಹಾಗಾದರೆ ಯಾಕೆ ಸೇವಿಸಬೇಕು ಎಂಬುದನ್ನು ಇಲ್ಲಿ ನೋಡೋಣ.

ಸಿಟ್ರಸ್ ಹಣ್ಣುಗಳನ್ನು ಬಾಣಂತಿಯರು ಏಕೆ ಸೇವಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಸಿಟ್ರಸ್ ಹಣ್ಣುಗಳಲ್ಲಿರುವ ಪೋಷಕಾಂಶಗಳು:

ಸಿಟ್ರಸ್ ಹಣ್ಣುಗಳಲ್ಲಿರುವ ಪೋಷಕಾಂಶಗಳು:

ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ, ನೆಲ್ಲಿಕಾಯಿ ಮೊದಲಾದವುಗಳಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು ಮತ್ತು ಫೈಬರ್‌ಗಳ ಸಮೃದ್ಧವಾಗಿದ್ದು, ಹಲವಾರು ರೋಗಗಳ ವಿರುದ್ಧ ರಕ್ಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಜೊತೆಗೆ ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಫೋಲೇಟ್, ಕ್ಯಾಲ್ಸಿಯಂ, ಥಯಾಮಿನ್, ನಿಯಾಸಿನ್, ವಿಟಮಿನ್ ಬಿ 6, ರಂಜಕ, ಮೆಗ್ನೀಷಿಯಂ, ತಾಮ್ರ, ರಿಬೋಫ್ಲಾವಿನ್, ಪ್ಯಾಂಟೊಥೆನಿಕ್ ಆಮ್ಲ ಮೊದಲಾದ ಪೋಷಕಾಂಶಗಳಿಂದ ತುಂಬಿಕೊಂಡಿವೆ. ಈ ಎಲ್ಲಾ ಪೋಷಕಾಂಶಗಳು ಉತ್ತಮ ಆರೋಗ್ಯ ಪಡೆಯುವಲ್ಲಿ ಸಹಕಾರಿಯಾಗಿವೆ.

ಹಾಲುಣಿಸುವ ತಾಯಿ ಎಷ್ಟು ಪ್ರಮಾಣ ಸೇವಿಸಬೇಕು?:

ಹಾಲುಣಿಸುವ ತಾಯಿ ಎಷ್ಟು ಪ್ರಮಾಣ ಸೇವಿಸಬೇಕು?:

ದೇಹವು ವಿಟಮಿನ್ ಸಿ ಯನ್ನು ಸ್ವತಃ ತಯಾರಿಸುವುದಿಲ್ಲ, ಆದ್ದರಿಂದ ಹಾಲುಣಿಸುವ ತಾಯಿ ಸೇರಿದಂತೆ ಪ್ರತಿಯೊಬ್ಬರೂ ಸಿಟ್ರಸ್ ಹಣ್ಣುಗಳನ್ನು ದೈನಂದಿನವಾಗಿ ಸೇವಿಸುವುದು ಉತ್ತಮ. ದೈನಂದಿನ ಸೇವನೆಯು ಕಡ್ಡಾಯವಾಗಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎನ್ನುವುದು ಮುಖ್ಯ. ಏಕೆಂದರೆ, ಯಾವುದೇ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ನಕಾರಾತ್ಮಕ ಪ್ರಭಾವಗಳು ಬೀರುತ್ತವೆ. ಆದ್ದರಿಂದ ತಾಯಿ- ಮಗುವಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಹಾಲುಣಿಸುವ ತಾಯಿ ದಿನಕ್ಕೆ 3-4 ಹಣ್ಣುಗಳನ್ನು ತಿನ್ನಲು ಸೂಚಿಸಲಾಗುತ್ತದೆ, ಅದರಲ್ಲಿ 2 ಸಿಟ್ರಸ್ ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು. ಯಾವುದೇ ಆಹಾರದ ಹೆಚ್ಚಿನ ಪ್ರಮಾಣವು ಮಗುವಿಗೆ ಒಳಿತಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಆದ್ದರಿಂದ ಆಹಾರದ ಭಾಗವನ್ನು ನಿಯಂತ್ರಿಸಬೇಕು.

ಹಾಲುಣಿಸುವ ತಾಯಿಗೆ ಸಿಟ್ರಸ್ ಹಣ್ಣಿನ ಕೆಲವು ಪರಿಣಾಮಗಳನ್ನು ಕೆಳಗೆ ನೀಡಲಾಗಿದೆ:

ಹಾಲುಣಿಸುವ ತಾಯಿಗೆ ಸಿಟ್ರಸ್ ಹಣ್ಣಿನ ಕೆಲವು ಪರಿಣಾಮಗಳನ್ನು ಕೆಳಗೆ ನೀಡಲಾಗಿದೆ:

  • ಇದು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವ ಮೂಲಕ ತಾಯಿಯ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವುದು.
  • ಎದೆಹಾಲು ನೀಡುವ ತಾಯಿಯನ್ನು ಸದಾ ಕಾಲ ಹೈಡ್ರೇಟ್ ಆಗಿಡುವುದು.
  • ಇದು ಹೆರಿಗೆಯ ನಂತರದ ಗಾಯವನ್ನು ಗುಣಪಡಿಸಲು ಸಹಾಯ ಮಾಡುವುದು.
  • ಇದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುವುದಲ್ಲದೇ, ಇದರಿಂದ ಮಗುವಿಗೆ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಂಟಿ-ಬಾಡಿಗಳು ಸಿಗುತ್ತವೆ.
  • ಕಡಿಮೆ ಪ್ರಮಾಣದ ಕಾಲಜನ್ ಉತ್ಪಾದನೆಯಿಂದ ಹೆರಿಗೆಯ ನಂತರದಲ್ಲಿ ಕಾಡುವ ಸ್ರ್ಟೆಚ್ ಮಾರ್ಕ್ಸ್ ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವುದು.
  • ನೆಲ್ಲಿಕಾಯಿ ಜ್ಯೂಸ್, ನಿಂಬೆ ಹಾಗೂ ಪುದೀನಾ ನೀರನ್ನು ಬೆರೆಸಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಸಹಿತ ಕೆಲವು ಜೀರ್ಣ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವುದು.
  • ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.
  • ಸ್ತನ್ಯಪಾನ ಮಾಡುವಾಗ ನಿಂಬೆ ರಸದಂತಹ ಸಿಟ್ರಸ್ ಜ್ಯೂಸ್ ಸೇವಿಸಿದರೆ ಅದು ನಿಮಗೆ ಉಲ್ಲಾಸವನ್ನು ನೀಡುವುದಲ್ಲದೆ ನಿಮ್ಮನ್ನು ಹೈಡ್ರೇಟ್ ಆಗಿಡುವುದು. ಇದು ನಿಮ್ಮ ಮಗುವಿಗೆ ಸಾಕಷ್ಟು ಹಾಲು ಪೂರೈಕೆಗೆ ಸಹಾಯ ಮಾಡುತ್ತದೆ.
  • ಎದೆಹಾಲಿನ ಉತ್ಪಾದನೆ ಸುಧಾರಿಸಿ, ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಕೆಲವು ಪಾಕವಿಧಾನಗಳು:

    ಎದೆಹಾಲಿನ ಉತ್ಪಾದನೆ ಸುಧಾರಿಸಿ, ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಕೆಲವು ಪಾಕವಿಧಾನಗಳು:

    ದ್ರಾಕ್ಷಿ ಮತ್ತು ಕಿವಿ ಹಣ್ಣಿನ ಸಲಾಡ್:

    ದ್ರಾಕ್ಷಿಹಣ್ಣು ಮತ್ತು ಕಿವಿ ಸಂಯೋಜನೆಯು ವಿಟಮಿನ್ ಸಿ ಮತ್ತು ಫೈಬರ್ ನ ಸಮೃದ್ಧ ಮೂಲವಾಗಿದೆ. ಇದು ಜೀರ್ಣಕ್ರಿಯೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಚಯಾಪಚಯವನ್ನು ಹೆಚ್ಚಿಸಿ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

    ಟೊಮೆಟೊ ರಸಂ :

    ಟೊಮೆಟೊ ರಸಂ :

    ಈ ಆಹಾರ ನಾರುಗಳಿಂದ ತುಂಬಿದ್ದು, ಜೀರ್ಣಕ್ರಿಯೆಗೆ ಬಹಳ ಸಹಕಾರಿ. ರಸಮ್ ನಲ್ಲಿ ಥಯಾಮಿನ್, ಫೋಲಿಕ್ ಆಸಿಡ್, ವಿಟಮಿನ್ ಎ, ವಿಟಮಿನ್ ಸಿ ಸಮೃದ್ಧವಾಗಿದ್ದು, ಎದೆ ಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಉತ್ತಮ ಪ್ರಮಾಣದಲ್ಲಿ ನೀಡುತ್ತದೆ.

    ನಿಂಬೆ ಮತ್ತು ಪುದೀನ ನೀರು :

    ನಿಂಬೆ ಮತ್ತು ಪುದೀನ ನೀರು :

    ಈ ಸಂಯೋಜನೆಯು ನಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು. ಹೆರಿಗೆಯ ನಂತರ ಉಂಟಾಗುವ ಉಬ್ಬುವಿಕೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

    ಕಿತ್ತಳೆ / ಕಿವಿ / ಸಿಹಿ ನಿಂಬೆ ಸ್ಮೂಥಿ:

    ಕಿತ್ತಳೆ / ಕಿವಿ / ಸಿಹಿ ನಿಂಬೆ ಸ್ಮೂಥಿ:

    ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸ್ಮೂಥೀ ಬಹಳ ಒಳ್ಳೆಯದು. ಈ ಮೂರು ಹಣ್ಣಿನ ಸ್ಮೂಥಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು, ಎದೆಹಾಲು ಹೆಚ್ಚಿಸುವುದರ ಜೊತೆಗೆ ಉತ್ತಮ ಪೋಷಕಾಂಶಗಳನ್ನು ನೀಡುತ್ತವೆ. ಹಾಗೂ ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.

FAQ's
  • ಹಾಲುಕುಡಿಯುವ ಮಗುವಿಗೆ ಸಮಸ್ಯೆ ಉಂಟುಮಾಡುವ ಆಹಾರಗಳು ಯಾವುವು?

    ನೀವು ಸೇವಿಸುವ ಕಾಫಿ, ಟೀ, ಸೋಡಾ ಹಾಗೂ ಕೆಲವೊಮ್ಮೆ ಚಾಕೋಲೇಟ್ ಗಳು ಸಹ ಮಗುವಿಗೆ ಸಮಸ್ಯೆ ಉಂಟುಮಾಡುತ್ತವೆ, ಮುಖ್ಯವಾಗಿ ಮಗುವಿಗೆ ನಿದ್ದೆಯಿಲ್ಲದಂತಾಗುವುದು. ಇದರ ಜೊತೆಗೆ ಮಸಾಲೆಯುಕ್ತ ಆಹಾರಗಳು, ಅಲರ್ಜಿಯುಂಟುಮಾಡುವ ಆಹಾರಗಳನ್ನು ಕೂಡ ಎದೆಹಾಲು ನೀಡುವ ವೇಳೆ ಕಡಿಮೆ ಮಾಡಬೇಕು.

  • ಎದೆಹಾಲನ್ನು ಕಡಿಮೆಮಾಡುವ ಆಹಾರಗಳು ಯಾವುವು?

    ಸಂಸ್ಕರಿಸಿದ ಪಾನೀಯಗಳಾದ ಸಾಫ್ಟ್ ಡ್ರಿಂಕ್ಸ್, ಕಾಫಿ, ಟೀ, ಸೋಡಾ ಜೊತೆಗೆ ಅತಿಯಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದು ತಾಯಿಯ ಎದೆಹಾಲಿನ ಮೇಲೆ ಪ್ರಭಾವ ಬೀರುತ್ತದೆ. ಸಿಟ್ರಸ್ ಹಣ್ಣುಗಳು ಒಳ್ಳೆಯದು, ಆದರೆ ಹೆಚ್ಚಿನ ಪ್ರಮಾಣ ನಕಾರಾತ್ಮಕ ಪರಿಣಾಮ ಬೀರುತ್ತದೆ.

English summary

Why Breastfeeding Mothers should Eat Citrus Fruits in Kannada

Here we talking about Why breastfeeding mothers should eat citrus fruits in Kannada, read on
Story first published: Wednesday, September 8, 2021, 10:44 [IST]
X
Desktop Bottom Promotion