For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್‌ ಡೆಲಿವರಿಯಲ್ಲಿ ಹೀಗೆಲ್ಲಾ ಕೂಡ ನಡೆಯುತ್ತೆ ಗೊತ್ತಾ?

|

ಇತ್ತೀಚಿನ ವರ್ಷಗಳಲ್ಲಿ ಸಿ-ಸೆಕ್ಷನ್ ಡೆಲಿವರಿ ಅಧಿಕವಾಗಿದೆ. ಕೆಲವರು ಬಯಸಿ ಸಿ-ಸೆಕ್ಷನ್‌ ಡೆಲಿವರಿ ಮಾಡಿಸಿದರೆ ಇನ್ನು ಕೆಲವರಿಗೆ ಸಹಜ ಹೆರಿಗೆಯಾಗುವುದು ಕಷ್ಟವಾದಾಗ ಸಿಸೇರಿಯನ್ ಮಾಡಬೇಕಾಗುತ್ತದೆ. ಮಗುವಿನ ತೂಕ ಹೆಚ್ಚು ಇದ್ದಾಗ , ಕರುಳ ಬಳ್ಳಿ ಸುತ್ತಿದಾಗ ಅಥವಾ ಮತ್ತಿತರ ಕ್ಲಿಷ್ಟಕರ ಸಂದರ್ಭದಲ್ಲಿ ತಾಯಿ-ಮಗುವಿನ ಸುರಕ್ಷತೆಗೆ ಸಿಸೇರಿಯನ್‌ ಮಾಡಬೇಕಾಗುತ್ತದೆ.

 Caesarean

ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್‌ ಸುಲಭ ಕೂಡ. ಆದರೆ ಸಿಸೇರಿಯನ್ ಆದರೇ ನೋವೇ ಇರಲ್ಲ ಎಂದು ಕೆಲವರು ಹೇಳುತ್ತಾರೆ, ಆದರೆ ಸಿಸೇರಿಯನ್ ಆದ ಬಳಿಕ ಕಾಡುವ ತಲೆನೋವು ಎಷ್ಟು ಭಯಾನಕವಾಗಿರುತ್ತೆ ಎಂಬುವುದು ಸಿಸೇರಿಯನ್‌ ಆದವರಿಗಷ್ಟೇ ಗೊತ್ತು.

ಇನ್ನು ಸ್ಟಿಚ್‌ ಕಾರಣ ಎದ್ದು ಕೂರಲು ಕಷ್ಟವಾಗುವುದು, ಮಗುವಿಗೆ ಸರಿಯಾಗಿ ಹಾಲುಣಿಸಲೂ ಕಷ್ಟವಾಗುವುದು. ಯಾರಾದರು ಮಗುವನ್ನು ಎದೆ ಸಮೀಪ ಹಿಡಿದರೆ ಕೊಡಬಹುದು, ಇದ್ದು ತುಂಬಾ ಹೊತ್ತು ಕೂರಲು ಸಾಧ್ಯವಾಗುವುದಿಲ್ಲ, ಬೆನ್ನು ಎಳೆಯಲಾರಂಭಿಸುತ್ತದೆ, ಈ ರೀತಿಯ ಸಮಸ್ಯೆ ಸಹಜ ಹೆರಿಗೆಯಾದವರಿಗೆ ಇರಲ್ಲ. ಹೆರಿಗೆಯಾಗುವಾಗ ಅಸಾಧ್ಯ ನೋವು ಅನುಭವಿಸಿದರೂ ನಂತರ ಬೇಗನೆ ಚೇತರಿಸಿಕೊಳ್ಳುವಂತಾಗುವುದು. ಆದರೆ ಸಿಸೇರಿಯನ್‌ ಆದರೆ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ.

ಇನ್ನು ಸಿಸೇರಿಯನ್ ಆಗುವಾಗ ಕೆಲವೊಂದು ತಮಾಷೆಯ ಘಟನೆಗಳು ನಡೆಯುತ್ತವೆ, ಏನು ತಮಾಷೆಯ ಘಟನೆಯೇ? ಎಂದು ಅಚ್ಚರಿ ಉಂಟಾಗುವುದು, ಇದನ್ನು ಓದಿದಾಗ ಸಿಸೇರಿಯನ್ ಆದವರಿಗೆ ಹೌದಲ್ವಾ ಅನಿಸಿದರೆ ಇನ್ನು ಸಿಸೇರಿಯನ್ ಬಗ್ಗೆ ತಿಳಿಯದವರಿಗೆ ಹೀಗೆಲ್ಲಾ ಎಂದು ಅನಿಸುವುದು ಗ್ಯಾರಂಟಿ...

ಸಿಸೇರಿಯನ್ ಮಾಡುವಾಗ ಆಸ್ಪತ್ರೆ ಸಿಬ್ಬಂದಿ ಯಾವುದೋ ಕಷ್ಟ-ಸುಖ ಮಾತನಾಡುತ್ತಿರುತ್ತಾರೆ

ಸಿಸೇರಿಯನ್ ಮಾಡುವಾಗ ಆಸ್ಪತ್ರೆ ಸಿಬ್ಬಂದಿ ಯಾವುದೋ ಕಷ್ಟ-ಸುಖ ಮಾತನಾಡುತ್ತಿರುತ್ತಾರೆ

ಹೌದು ನಮ್ಮನ್ನು ಸಿಸೇರಿಯನ್ ಮಾಡುವ ಹೆರಿಗೆ ವಾರ್ಡ್‌ಗೆ ತೆಗೆದುಕೊಂಡು ಹೋದಾಗ ಮನೆಯವರೆಲ್ಲಾ ಹೊರಗಡೆ ಟೆನ್ಷನ್‌ನಿಂದ ಕಾಯುತ್ತಿರುತ್ತಾರೆ. ಆದರೆ ಒಳಗಡೆ ಸಿಬ್ಬಂದಿ ತಮ್ಮ ಪಾಡಿಗೆ ತಾವು ಮಾತನಾಡುತ್ತಾ ನಮ್ಮ ಮಗುವನ್ನು ತೆಗೆಯುತ್ತಿರುತ್ತಾರೆ. ಆ ಸಂದರ್ಭದಲ್ಲಿ ಸಹೋದ್ಯೋಗಿ ಮದುವೆಗೆ ಹೇಗೆ ಹೋಗುವುದು? ಡ್ರೆಸ್ಸಿಂಗ್ ಇಂಥ ಸಿಲ್ಲಿ ವಿಷಯ ಕೂಡ ಮಾತನಾಡುತ್ತಾ ಇರಬಹುದು.ಅನಸ್ತೇಷಿಯಾ ಕೊಟ್ಟಿರುತ್ತಾರೆ, ನಿಮಗೆ ಹೊಟ್ಟೆಯ ಕೆಳಗಡೆ ಏನಾಗುತ್ತದೆ ಎಂದು ಮಾತ್ರ ಗೊತ್ತಾಗಲ್ಲ, ಆದರೆ ಅವರು ಮಾತನಾಡುವುದೆಲ್ಲಾ ಕಿವಿಗೆ ಬೀಳುತ್ತಿರುತ್ತದೆ. ಅವರ ಮಾತುಗಳನ್ನು ಕೇಳುವಾಗ ಇನ್ನು ಕೆಲಸ ಶುರುವಾಗಿಲ್ಲ ಅಂತ ಭಾವಿಸುತ್ತೇವೆ, ಆದರೆ ಅವರು ಪರಿಣಿತರಾಗಿದ್ದು ಮಗುವನ್ನುಹೊರ ತೆಗೆದು ಹೊಟ್ಟೆ ಕ್ಲೀನ್‌ ಮಾಡುತ್ತಾ ಇರುತ್ತಾರೆ, ಆದರೆ ಇನ್ನೂ ಮಗುವನ್ನು ತೆಗೆದಿಲ್ಲ ಎಂದೇ ಭಾವಿಸಿರುತ್ತೇವೆ.

ಮಗು ಅತ್ತಾಗ ಅದು ನಮ್ಮ ಮಗು ಎಂದು ಗೊತ್ತಾಗುವುದೇ ಇಲ್ಲ

ಮಗು ಅತ್ತಾಗ ಅದು ನಮ್ಮ ಮಗು ಎಂದು ಗೊತ್ತಾಗುವುದೇ ಇಲ್ಲ

ಹೌದು ಮೊದಲೇ ಹೇಳಿದಂತೆ ಸಿಸೇರಿಯನ್‌ ಮಾಡುತ್ತಿರುವಾಗ ಗಮಗೆ ಏನೂ ಗೊತ್ತಾಗುವುದಿಲ್ಲ. ಮಗುವಿನ ಅಳು ಕೇಳಿದಾಗ ಅಯ್ಯೋ ನನಗೆ ಹೆರಿಗೆಯಾಯ್ತಾ? ಅದು ನನ್ನ ಮಗುನಾ ಎಂದು ಎಮೋಷನಲ್ ಆಗುತ್ತೇವೆ.

 ದೇಹದ ಕೆಳಭಾಗ ಮರಗಟ್ಟಿದಂತೆ ಇರುತ್ತದೆ

ದೇಹದ ಕೆಳಭಾಗ ಮರಗಟ್ಟಿದಂತೆ ಇರುತ್ತದೆ

ಎದೆಯಿಂದ ಕೆಳಭಾಗ ಮರಗಟ್ಟಿದಂತೆ ಇರುತ್ತದೆ, ಯಾವುದೇ ಸ್ಪರ್ಶ, ನೋವು ಗೊತ್ತಾಗುವುದಿಲ್ಲ.ಮಗು ಹೊರಗೆ ತೆಗೆದ ಮೇಲೆ ಸ್ವಚ್ಛ ಮಾಡಿ ಸ್ಟಿಚ್‌ ಹಾಕುವುದು ಏನೂ ತಿಳಿಯುವುದೇ ಇಲ್ಲ. ಹೆರಿಗೆ ಅಂದರೆ ಇಷ್ಟು ಸುಲಭನಾ ಅನಿಸಬಹುದು. ಆದರೆ ಸಿಸೇರಿಯನ್ ನೋವು ಎಂಥದ್ದು ಎಂದು ಕೆಲ ಗಂಟೆಗಳು ಕಳೆದ ಮೇಲೆ ಗೊತ್ತಾಗುವುದು.

ನೀವು ಊಹಿಸಿರುವುದಕ್ಕಿಂತಲೂ ಬೇಗ ಎಲ್ಲಾ ನಡೆದಿರುತ್ತದೆ

ನೀವು ಊಹಿಸಿರುವುದಕ್ಕಿಂತಲೂ ಬೇಗ ಎಲ್ಲಾ ನಡೆದಿರುತ್ತದೆ

ನೀವು ಸಿಸೇರಿಯನ್‌ನಲ್ಲಿ ತುಂಬಾ ಸಮಯ ಹಿಡಿಯುತ್ತೆ ಅಂದುಕೊಂಡಿದ್ದರೆ ಅಬ್ಬಾಬ್ಬ ಎಂದರೆ 40 ನಿಮಿಷದಲ್ಲಿ ಮಗುವನ್ನು ಹೊರತೆಗೆದು ಗಾಯವನ್ನು ಸ್ಟಿಚ್ ಕೂಡ ಮಾಡಿ ಮುಗಿಸಿರುತ್ತಾರೆ.

ಕೆಲವು ಕಡೆ ಮಗು ಹೊಟ್ಟೆಯಿಂದ ಹೊರ ತೆಗೆಯುವುದನ್ನು ತೋರಿಸಲಾಗುವುದು

ಕೆಲವು ಕಡೆ ಮಗು ಹೊಟ್ಟೆಯಿಂದ ಹೊರ ತೆಗೆಯುವುದನ್ನು ತೋರಿಸಲಾಗುವುದು

ಕೆಲವೊಂದು ಆಸ್ಪತ್ರೆಗಳು ಫ್ಯಾಮಿಲಿ ಸೆಂಟರ್ಡ್ ಸಿ ಸೆಕ್ಷನ್ ಮಾಡುತ್ತಾರೆ. ಅಂಥ ಕಡೆ ಬಟ್ಟೆ ಬದಲಿಗೆ ಪಾರದರ್ಶಕ ಪ್ಲಾಸ್ಟಿಕ್‌ ಬಳಸಲಾಗುವುದು, ನಿಮಗೆ ಕೆಳ ಭಾಗದಲ್ಲಿ ಏನು ನಡೆಯುತ್ತಿದೆ, ಮಗು ಹೊರ ಬರುವುದನ್ನೂ ನೋಡಬಹುದು.

ಪ್ರಾರಂಭದಲ್ಲಿ ಸ್ತನ ಪಾನ ಕಷ್ಟವಾಗುವುದು

ಪ್ರಾರಂಭದಲ್ಲಿ ಸ್ತನ ಪಾನ ಕಷ್ಟವಾಗುವುದು

ಕೆಲವರಲ್ಲಿ ಹಾಲು ಇನ್ನೂ ಉತ್ಪತ್ತಿಯಾಗಿರುವುದಿಲ್ಲ, ಮಗುವಿಗೆ ಸರಿಯಾಗಿ ಕುಡಿಸಲೂ ಸಾಧ್ಯವಾಗುವುದಿಲ್ಲ, ಅಲ್ಲದೆ ಮೊದಲ ದಿನ ಮಗುವನ್ನು ಕೈಯಲ್ಲಿ ಹಿಡಿಯಲೂ ಸಾಧ್ಯವಾಗುವುದಿಲ್ಲ. ಆಗ ಅಸಮಧಾನ-ಕೋಪ ಎಲ್ಲವೂ ಬರುತ್ತೆ.

ಮಗು ಮಡಿಲಿಗೆ ಬಂದಾಗ ಎಲ್ಲಾ ಮರೆತು ಹೋಗುತ್ತೆ

ಮಗು ಮಡಿಲಿಗೆ ಬಂದಾಗ ಎಲ್ಲಾ ಮರೆತು ಹೋಗುತ್ತೆ

ಯಾವಾಗ ಮಗುವನ್ನು ನಮ್ಮ ಎದೆ ಬಳಿ ಅಥವಾ ಮಡಿಲಿನಲ್ಲಿ ಇಡುತ್ತಾರೋ ಆಗ ಅದರ ಮುದ್ದಾ ಮುಖ ನೋಡಿದಾಗ ಎಲ್ಲವನ್ನೂ ಮರೆತು ಆ ಮಗುವಿನ ನೋಡುತ್ತಾ ಮೈ ಮರೆಯುತ್ತೇವೆ, ಅದುವೇ ಅಲ್ಲವೇ ತಾಯ್ತನದ ಮಹತ್ವ...

English summary

Things You May Not Know About a Caesarean Section in Kannada

Things You May Not Know About a Caesarean Section in Kannada, read on...
X
Desktop Bottom Promotion