Just In
Don't Miss
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Automobiles
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೆರಿಗೆಯ ಬಳಿಕ ಮೊದಲಿನ ಮೈ ಮಾಟ ಮರಳಿ ಪಡೆಯಬೇಕೆ?
ತಾಯಿಯಾಗುತ್ತಿದ್ದಂತೆ ಸ್ತ್ರೀಯ ದೇಹದಲ್ಲಿ ಬದಲಾವಣೆ ಉಂಟಾಗುವುದು ಸಹಜ. ಗರ್ಭಿಣಿಯಾದ ಬಳಿಕ ತಿಂಗಳಿನಿಂದ ತಿಂಗಳಿಗೆ ಮೈ ತೂಕ ಹೆಚ್ಚಾಗುತ್ತಾ ಹೋಗುತ್ತದೆ. ಹೆರಿಗೆಯ ಬಳಿಕ ಕೂಡ ಮೈ ತೂಕ ಕಡಿಮೆಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ.
ಆದರೆ ಕೆಲವರು ನಾನು ಮೊದಲಿನ ಮೈ ತೂಕ ಪಡೆಯಬೇಕೆಂದು ಅದಕ್ಕಾಗಿ ಡಯಟ್ ಮಾಡಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ಹೆರಿಗೆಯ ಬಳಿಕ ಮೈ ತೂಕ ಹೆಚ್ಚಾಗಿದೆ ಇದು ಕಡಿಮೆಯಾಗಲ್ಲ ಅಂದುಕೊಳ್ಳುತ್ತಾರೆ. ಆದರೆ ಈ ಎರಡೂ ಆಲೋಚನೆಗಳು ತಪ್ಪು.
ಹೆರಿಗೆಯ ಬಳಿಕ ಮೊದಲಿನ ಮೈ ಸೌಂದರ್ಯ ಪಡೆಯಬಹುದು, ಅದಕ್ಕಾಗಿ ಸ್ವಲ್ಪ ತಾಳ್ಮೆ ಹಾಗೂ ಪ್ರಯತ್ನ ಅಗತ್ಯ.
ನಾವಿಲ್ಲಿ ಹೆರಿಗೆಯ ಬಳಿಕ ವ್ಯಾಯಾಮ ಯಾವಾಗ ಪ್ರಾರಂಭಿಸಬಹುದು? ತೂಕ ಇಳಿಕೆಗೆ ಏನು ಮಾಡಬೇಕು ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ:

ಹೆರಿಗೆಯ ಬಳಿಕ ತೂಕ ಇಳಿಕೆ
ಹೆರಿಗೆಯ ಬಳಿಕ ತೂಕ ಇಳಿಕೆಗೆ ಪ್ರಯತ್ನಿಸುವಾಗ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಬೇಕು. ಸಹಜ ಹೆರಿಗೆಯಾವರು ಬೇಗನೆ ಪ್ರಾರಂಭಿಸಬಹುದು, ಸಿ ಸೆಕ್ಷನ್ ಆಗಿದ್ದರೆ ವೈದ್ಯರು ನಿಮ್ಮ ದೇಹ ಪರಿಸ್ಥಿತಿಯನ್ನು ನೋಡಿ ಯಾವಾಗ ಪ್ರಾರಂಭಿಸಬಹುದು ಎಂದು ಹೇಳುತ್ತಾರೆ. ವೈದ್ಯರು ಸಾಮಾನ್ಯವಾಗಿ ಮೂರು ತಿಂಗಳ ನಂತರ ಪ್ರಾರಂಭಿಸಬಹುದು ಅಂತಾರೆ.

ನಡೆಯುವ ವ್ಯಾಯಾಮ ಬೇಗನೆ ಪ್ರಾರಂಭಿಸಬಹುದೇ?
ಹೆರಿಗೆಯಾದ ಬಳಿಕ ದಿನದಲ್ಲಿ ಸ್ವಲ್ಪ ನಡೆಯಲು ವೈದ್ಯರು ಸಲಹೆ ನೀಡುತ್ತಾರೆ. ಇದನ್ನು ಸಹಜ ಹೆರಿಗೆಯಾದವರು ಮಾತ್ರವಲ್ಲ ಸಿ-ಸೆಕ್ಷನ್ ಆದವರೂ ಮಾಡುವುದು ತುಂಬಾ ಒಳ್ಳೆಯದು. ದಿನದಲ್ಲಿ ಒಂದು 15-20 ನಿಮಿಷ ವಾಕ್ ಮಾಡಿ.

ತಿನ್ನುವ ಆಹಾರದಲ್ಲಿ ನಿಯಂತ್ರಣ ಬೇಡ
ಹೆರಿಗೆಯ ಬಳಿಕ ನೀವು ಪೌಷ್ಠಿಕ ಆಹಾರ ತಿನ್ನಬೇಕು. ಅದಕ್ಕಾಗಿ ನೀವು ಯಾವುದೇ ಕಾರಣಕ್ಕೆ ಕಡಿಮೆ ಆಹಾರ ತಿನ್ನುವುದು ಅಥವಾ ಎಣ್ಣೆ, ತುಪ್ಪ ದೂರವಿಡುವುದು ಮಾಡಬಾರದು. ನೀವು ಚೆನ್ನಾಗಿ ತಿಂದರೆ ಮಗುವಿಗೆ ಹಾಲು ಚೆನ್ನಾಗಿ ಸಿಗುವುದು. ಇಲ್ಲದಿದ್ದರೆ ಮಗುವಿಗೆ ಪೌಷ್ಠಿಕ ಎದೆ ಹಾಲಿನ ಕೊರತೆ ಉಂಟಾಗುತ್ತದೆ. ಅಲ್ಲದೆ ನಿಮ್ಮ ದೇಹ ಬೇಗನೆ ಚೇತರಿಸಿಕೊಳ್ಳಲು ಕೂಡ ಪೌಷ್ಠಿಕ ಆಹಾರ ಅಗ್ಯತವಾಗಿದೆ.

6 ತಿಂಗಳ ಬಳಿಕ ಲಘು ವ್ಯಾಯಾಮ ಮಾಡಿ
6 ತಿಂಗಳ ಬಳಿಕ ಟ್ವಿಸ್ಟಿಂಗ್, ಯೋಗ ಇವುಗಳನ್ನು ಮಾಡಲು ಪ್ರಾರಂಭಿಸಿ. ಹೆರಿಗೆಯ ಬಳಿಕ ಮಗುವಿನಲ್ಲಿ ಆರೈಕೆಯಲ್ಲಿ ನಿಮಗಾಗಿ ಸಮಯ ಸಿಗುವುದು ಕಷ್ಟ. ಆದರೆ ಈ ಸಮಯದಲ್ಲಿ ಗಂಡ ಅಥವಾ ಮನೆಯವರ ಸಹಾಯ ಅವಶ್ಯಕ. ಒಂದು ಅರ್ಧ ಗಂಟೆ ಅವರ ಬಳಿ ಮಗುವನ್ನು ನೋಡಿಕೊಳ್ಳಲು ಹೇಳಿ ನೀವು ವ್ಯಾಯಾಮ ಮಾಡಿ.

ತೂಕ ಇಳಿಕೆ ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ
ತೂಕ ಇಳಿಕೆ ಬೇಗನೆ ಆಗುವುದು, ನಿಧಾನಕ್ಕೆ ಆಗುವುದು ನಿಮ್ಮ ಪ್ರಾಯವನ್ನು ಅವಲಂಭಿಸಿದೆ. 25 ವರ್ಷ ಒಳಗಿನವರು ಬೇಗನೆ ತೂಕ ಕಡಿಮೆಯಾಗುತ್ತಾರೆ. ನಂತರ ಚಯಪಚಯ ನಿಧಾನವಾಗುವುದರಿಂದ ಕ್ಯಾಲೋರಿ ನಿಧಾನಕ್ಕೆ ಕರಗುವುದು, ಈ ಕಾರಣದಿಂದ ದೇಹ ತೂಕ ಕಡಿಮೆಯಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಆದ್ದರಿಂದ ತಾಳ್ಮೆ ಇರಬೇಕು ಹಾಗೂ ವ್ಯಾಯಾಮವನ್ನು ನಿಲ್ಲಿಸಬಾರದು.

ಎದೆ ಹಾಲು ಉಣಿಸುವುದರಿಂದಲೂ ಮೈ ತೂಕ ಕಡಿಮೆಯಾಗುವುದು
ಹೆರಿಗೆಯ ಬಳಿಕ ಮೈ ತೂಕ ಕಡಿಮೆಯಾಗಲು ನಿಮ್ಮ ಮಗುವೇ ಸಹಾಯ ಮಾಡುತ್ತದೆ. ಮಗು ಚೆನ್ನಾಗಿ ಹಾಲು ಕುಡಿದಷ್ಟೂ ನಿಮ್ಮ ಕ್ಯಾಲೋರಿ ಕರಗುತ್ತದೆ. ಆದ್ದರಿಂದ ಮಗುವಿಗೆ ಕನಿಷ್ಠ ಒಂದು ವರ್ಷ ಎದೆ ಹಾಲು ಕೊಡುವುದು ತಾಯಿ ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಎದೆ ಹಾಲು ಉಣಿಸುವುದರಿಂದ ದಿನದಲ್ಲಿ 500 ಕ್ಯಾಲೋರಿ ಕರಗಿಸಬಹುದು.

ಆಹಾರಕ್ರಮ
* ನಿಮ್ಮ ಆಹಾರದಲ್ಲಿ ನಾರಿನ ಪದಾರ್ಥಗಳು ಹೆಚ್ಚಾಗಿ ಇರುವಂತೆ ನೋಡಿಕೊಳ್ಳಿ. ನಾರಿನ ಪದಾರ್ಥಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ. ಜೀರ್ಣಕ್ರಿಯೆ ಚೆನ್ನಾಗಿ ಆದರೆ ಮೈ ತೂಕ ಹೆಚ್ಚುವುದು.
* ಹಣ್ಣುಗಳನ್ನು ತಿನ್ನಿ.
* ತೆಳು ಮಾಂಸ ಆಹಾರ ಸೇವನೆ ಮಾಡಿ.
* ಆಹಾರವನ್ನು ತುಂಬಾ ತಿನ್ನುವ ಬದಲು ಸ್ವಲ್ಪ-ಸ್ವಲ್ಪವಾಗಿ 5-6 ಬಾರಿ ತಿನ್ನಿ.
* ಬಿಸಿ -ಬಿಸಿಯಾದ ನೀರು ದಿನದಲ್ಲಿ ಕನಿಷ್ಠ ಮೂರು ಲೀಟರ್ ಕುಡಿಯಿರಿ.

ನಿದ್ದೆ
ತೂಕ ಇಳಿಕೆಗೆ ನಿದ್ದೆ ಕೂಡ ಅವಶ್ಯಕ. ಹೆರಿಗೆಯ ಬಳಿಕ ಸಾಕಷ್ಟು ನಿದ್ದೆ ಕಡಿಮೆಯಾಗುತ್ತದೆ. ನಮಗೆ ನಿದ್ದೆ ಬರುತ್ತದೆ ಎಂದ ತಕ್ಷಣ ಮಗು ಏಳುತ್ತದೆ, ಹೀಗಾಗಿ ಸುಖ ನಿದ್ದೆ ಎನ್ನುವುದು ದೂರದ ಮಾತು. ಸಾಧ್ಯವಾದರೆ ಮಗು ಮಲಗಿದ್ದಾಗ ಸ್ವಲ್ಪ ನಿದ್ರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿ.

ಇತರ ಸಲಹೆ:
ನಿಮ್ಮನ್ನು ತಯಾರಿ ಮಾಡಿಕೊಳ್ಳಿ: ತೂಕ ಇಳಿಕೆಯಾಗಬೇಕೆಂದರೆ ಮೊದಲು ನಿಮ್ಮನ್ನು ನೀವು ತಯಾರಿ ಮಾಡಬೇಕು. ಅದಕ್ಕಾಗಿ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಬೇಕು ಹಾಗೂ ತಿನ್ನುವ ಆಹಾರದ ಕಡೆ ಗಮನ ನೀಡಬೇಕು.
* ನಿಮ್ಮ ದಿನಚರಿ ಬದಲಾಯಿಸಲೇಬೇಡಿ
ಒಮ್ಮೆ ತೂಕ ಇಳಿಕೆಗೆ ಮನಸ್ಸು ಮಾಡಿದರೆ ನೀವು ನಿಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಬೇಡಿ. ದಿನ ನಿಮಗೊಂದಿಷ್ಟು ಸಮಯ ವ್ಯಾಯಾಮಕ್ಕಾಗಿ ಇಡಿ.
ಸಕಾರಾತ್ಮಕವಾಗಿರಿ: Stay positive, ಇದು ತುಂಬಾನೇ ಮುಖ್ಯ. ನಿಮ್ಮ ದೇಹವನ್ನು ಮೊದಲು ನೀವು ಪ್ರೀತಿಸಬೇಕು, ದೇಹವನ್ನು ಆರೋಗ್ಯವಾಗಿ ಇಡುವ ಕಡೆ ಗಮನ ನೀಡಬೇಕೇ ಹೊರತು ಮೈ ತೂಕ ಕಡೆ ತುಂಬಾ ತಲೆಕೆಡಿಸಿಕೊಳ್ಳಬಾರದು.