For Quick Alerts
ALLOW NOTIFICATIONS  
For Daily Alerts

ತಾಯಂದಿರ ದಿನ : ಹೊಸದಾಗಿ ತಾಯಿಯಾದವರು ಈ ನ್ಯೂಟ್ರಿಷಿಯನ್ ಸಲಹೆಗಳನ್ನು ಪಾಲಿಸಿ

|

ಹೆಣ್ಣಿನ ಜೀವನದಲ್ಲಿ ತಾಯ್ತನ ಎಂಬುದು ಬಹಳ ಮುಖ್ಯವಾದ ಘಟ್ಟ. ಒಂದು ಜೀವವನ್ನು ಒಂಬತ್ತು ತಿಂಗಳುಗಳ ಕಾಲ ಹೊತ್ತು, ನಂತರ ಈ ಭೂಮಿಗೆ ತರುತ್ತಾಳೆ. ಈ ಸಮಯದಲ್ಲಿ ಅಂದರೆ ಹೆರಿಗೆಯ ನಂತರ ಆಕೆಯಲ್ಲಿ ಅನೇಕ ದೈಹಿಕ ಹಾಗೂ ಭಾವನಾತ್ಮಕವಾಗಿ ಬದಲಾವಣೆಗಳು ಆಗಲು ಪ್ರಾರಂಭಿಸುತ್ತವೆ.

ಹೆರಿಗೆಯ ಬಳಿಕ ಸುಮಾರು 6 ​​ರಿಂದ 8 ವಾರಗಳವರೆಗೆ ಆಕೆಯನ್ನು ಚೆನ್ನಾಗಿ ಕಾಳಜಿ ಮಾಡಬೇಕು. ಏಕೆಂದರೆ ತನ್ನ ಹೆರಿಗೆಯ ವೇಳೆ ಕಳೆದುಕೊಂಡ ಶಕ್ತಿಯನ್ನು ಮತ್ತೆ ಮರಳಿ ಪಡೆಯಬೇಕಾಗಿರುತ್ತದೆ. ಇದಕ್ಕೆ ಒಂದೇ ಮಾರ್ಗ ಅಂದ್ರೆ ಉತ್ತಮ ಪೌಷ್ಠಿಕಾಂಶ ಪಡೆಯುವುದು. ಅದು ಹೇಗೆ ಎಂದು ಚಿಂತೆ ಮಾಡುತ್ತಿದ್ದೀರಾ? ಹಾಗಾದರೆ ಈ ಲೇಖನ ಓದಿ.

ಹೊಸ ಅಮ್ಮಂದಿರಿಗಾಗಿ ಕೆಲವೊಂದು ನ್ಯೂಟ್ರಿಷನ್ ಸಲಹೆಗಳು ಈ ಕೆಳಗಿವೆ:

1. ಕುಟುಂಬಸ್ಥರಿಂದ ಸಹಾಯ ಪಡೆಯಿರಿ:

1. ಕುಟುಂಬಸ್ಥರಿಂದ ಸಹಾಯ ಪಡೆಯಿರಿ:

ಮೊದಲ ಒಂದೆರಡು ವಾರಗಳ ಕಾಲ, ನೀವು ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಆದ್ದರಿಂದ ಹೆರಿಗೆಯ ಬಳಿಕ ನಿಮಗೆ ಊಟ ರೆಡಿ ಮಾಡಿ ಕೊಡುವಂತೆ ನಿಮ್ಮ ಕುಟುಂಬಸ್ಥರು ಅಥವಾ ನಿಮ್ಮ ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳಿ. ನೀವಾಗಿಯೇ ಎದ್ದು ಓಡಾಡಿ, ಊಟ ತಯಾರಿಸುವ ಗೋಜಿಗೆ ಹೋಗದಿರುವುದು ಉತ್ತಮ.

2. ಉಪಹಾರ ತಪ್ಪಿಸಬೇಡಿ:

2. ಉಪಹಾರ ತಪ್ಪಿಸಬೇಡಿ:

ನಿಮ್ಮ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಎದೆಹಾಲು ಉತ್ಪಾದನೆಯಾಗಲು ನೀವು ಬೆಳಿಗ್ಗೆ ಎದ್ದ ಮೇಲೆ ಉತ್ತಮ ಉಪಹಾರ ಸೇವಿಸಬೇಕು. ನಿಮ್ಮ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಇರಲೇಬೇಕು ಅದರ ಜೊತೆಗೆ ಧಾನ್ಯದ, ಹಣ್ಣು ಅಥವಾ ತರಕಾರಿಗಳನ್ನು ಸೇರಿಸಿಕೊಳ್ಳಿ.

3. ಪ್ರೋಟೀನ್:

3. ಪ್ರೋಟೀನ್:

ಈ ವಿಚಾರವನ್ನು ಮತ್ತೊಮ್ಮೆ ಹೇಳುತ್ತಿದ್ದೇವೆ ಏಕೆಂದರೆ ಪ್ರೋಟೀನ್ ಅಷ್ಟು ಅಗತ್ಯವಾಗಿದೆ. ನೀವು ಸೇವಿಸುವು ಪ್ರತಿ ಆಹಾರದಲ್ಲಿ ಪ್ರೋಟೀನ್ ಇರಲಿ. ಎದೆಹಾಲು ಉಣಿಸುವ ನಿಮಗೆ ಇದು ಅಗತ್ಯವಾದ ಪೋಷಕಾಂಶವಾಗಿದೆ. ಇದು ಎಲ್ಲರ ಜೀವನವನ್ನು ಸ್ವಲ್ಪ ಸುಲಭವಾಗಿಸುತ್ತದೆ. ಮಾಂಸ, ಮೀನು ಮತ್ತು ಕೋಳಿಯಂತಹ ಪ್ರಾಣಿ ಆಧಾರಿತ ಪ್ರೋಟೀನ್‌ಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ. ಸಸ್ಯ-ಆಧಾರಿತ ಪ್ರೋಟೀನ್‌ಗಳಾದ ಧಾನ್ಯಗಳು, ಬೀಜಗಳನ್ನು ಹೆಚ್ಚು ಸೇವಿಸಬಹುದು.

4. ಆರೋಗ್ಯಕರ ತಿಂಡಿಗಳನ್ನು ಆಗಾಗ ಸೇವಿಸಿ:

4. ಆರೋಗ್ಯಕರ ತಿಂಡಿಗಳನ್ನು ಆಗಾಗ ಸೇವಿಸಿ:

ಕೆಲವು ಪೌಷ್ಠಿಕಾಂಶವನ್ನು ಲಘು ಪ್ರಮಾಣದಲ್ಲಿ ಆಗಾಗ ಸೇವಿಸಿ. ಹಣ್ಣು ಮತ್ತು ತರಕಾರಿ, ಬೇಯಿಸಿದ ಮೊಟ್ಟೆಗಳು, ಹೀಗೆ ಆಗಾಗ ಏನಾದರೂ ತಿನ್ನುತ್ತಿರಿ. ಇದು ನಿಮ್ಮ ಶಕ್ತಿ ಕುಂದದಂತೆ ಮಾಡುತ್ತದೆ. ಎದೆಹಾಲು ನೀಡುವ ನಿಮಗೆ ಇದು ಬಹಳ ಮುಖ್ಯವಾಗಿರುತ್ತದೆ.

5. ಹೈಡ್ರೇಟ್ ಆಗಿರಿ:

5. ಹೈಡ್ರೇಟ್ ಆಗಿರಿ:

ಇದು ಅತ್ಯಂತ ಮುಖ್ಯವಾಗಿದೆ. ಹಾಲುಣಿಸುವ ತಾಯಂದಿರು ತಮ್ಮ ಬಾಯಾರಿಕೆಯನ್ನು ನೀಗಿಸಲು ಮತ್ತು ಸಾಕಷ್ಟು ಎದೆ ಹಾಲು ಉತ್ಪಾದಿಸಲು ದಿನಕ್ಕೆ 10 ರಿಂದ 15 ಗ್ಲಾಸ್ ನೀರು ಕುಡಿ. ಆರೋಗ್ಯಕರ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹ ಮುಖ್ಯವಾಗಿದೆ. ಯಾವಾಗಲೂ ಸ್ವಲ್ಪ ನೀರನ್ನು ನಿಮ್ಮ ಕೈಗೆ ಸಿಗುವ ಹಾಗೇ ಇಟ್ಟುಕೊಳ್ಳಿ. ಇದು ನಿಮಗೂ, ನಿಮ್ಮ ಮಗುವಿಗೂ ತುಂಬಾ ಸಹಕಾರಿ.

6. ಕಾಲಜನ್ ಭರಿತ ಆಹಾರವನ್ನು ಸೇವಿಸಿ:

6. ಕಾಲಜನ್ ಭರಿತ ಆಹಾರವನ್ನು ಸೇವಿಸಿ:

ಕಾಲಜನ್ ನಿಮ್ಮ ಅಂಗಾಂಶಗಳನ್ನು ಪುನರ್ನಿರ್ಮಿಸಲು ಒಂದು ಸೂಪರ್ ಆಹಾರ ಆಗಿದೆ. ಬೇಯಿಸಿದ ಮಾಂಸ ಹಾಗೂ ಮೂಳೆಗಳನ್ನು ಸೇವಿಸುವುದರ ಮೂಲಕ ಇದನ್ನು ಪಡೆಯಬಹುದು. ಅಂಗಡಿಯಲ್ಲಿ ನೀವು ಹೈಡ್ರೊಲೈಸ್ಡ್ ಕಾಲಜನ್ ಪುಡಿಗಳನ್ನು ಸಹ ಪಡೆಯಬಹುದು.

7. ಸೂಕ್ತವಾದ ಪೂರಕಗಳನ್ನು ತೆಗೆದುಕೊಳ್ಳಿ:

7. ಸೂಕ್ತವಾದ ಪೂರಕಗಳನ್ನು ತೆಗೆದುಕೊಳ್ಳಿ:

ಸ್ತನ್ಯಪಾನ ಮಾಡುವಾಗ ನಿಮ್ಮ ಉತ್ತಮ ಗುಣಮಟ್ಟದ ಜೀವಸತ್ವಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿ. ಸಾಧ್ಯವಾದಾಗಲೆಲ್ಲಾ, ವೈದ್ಯರು ಶಿಫಾರಸು ಮಾಡಿದ ಉತ್ತಮ-ಗುಣಮಟ್ಟದ, ಆಹಾರ ಆಧಾರಿತ ಪೂರಕಗಳನ್ನು ಆರಿಸಿ.

English summary

Mother's Day 2021: Nutrition Tips for New Mothers

Here we talking about Nutrition Tips for New Mothers, read on
X