For Quick Alerts
ALLOW NOTIFICATIONS  
For Daily Alerts

ತಾಯ್ತನದ ರಜೆಯ ನಂತರ ವೃತ್ತಿಗೆ ಮರಳಲು ಸಲಹೆಗಳು

|

ತಾಯಿಯಾದ ನಂತರ ಮಗುವಿನ ಆರೈಕೆ, ಬಾಣಂತನ ಅಂತ ಸಮಯ ನೀಡಬೇಕಾದ ಅನಿವಾರ್ಯತೆಗೆ ಪ್ರತಿಯೊಬ್ಬ ಮಹಿಳೆಯೂ ಒಳಗಾಗುತ್ತಾಳೆ. ಹಾಗಾಗಿ ಈ ಸಂದಂರ್ಭದಲ್ಲಿ ಆಕೆ ತನ್ನ ವೃತ್ತಿ ಬದುಕಿನಿಂದ ಕೆಲವು ಸಮಯ ದೂರ ಉಳಿಯಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಾಳೆ.

How To Return To Work After Maternity Break

ಆದರೆ ಹೀಗೆ ದೂರ ಉಳಿದ ನಂತರ ಪುನಃ ಕೆಲಸಕ್ಕೆ ಸೇರುವುದು ಒಂದು ಚಾಲೆಂಜ್. ಮನೆಯಲ್ಲಿ ಹೆಚ್ಚಾಗಿರುವ ಮಗುವಿನ ಜವಾಬ್ದಾರಿಯ ಜೊತೆಜೊತೆಗೆ ಹೊರಗಿನ ಕಾರ್ಪೋರೇಟ್ ಕೆಲಸವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ.

ಆದರೆ ಪುನಃ ಕೆಲಸಕ್ಕೆ ಸೇರಲು ಅಥವಾ ತನ್ನ ವೃತ್ತಿ ಬದುಕಿಗೆ ತಾಯ್ತನದ ನಂತರ ಮರಳುವುದಾದರೆ ನೀವು ಈ ಟಿಪ್ಸ್ ಗಳನ್ನು ಮರೆಯದೇ ಇರುವುದು ಒಳ್ಳೆಯದು. ಹಾಗಾದ್ರೆ ಯಾವುದು ಆ ಸಲಹೆಗಳು ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ನಿಮ್ಮನ್ನ ನೀವು ಕೆಳಮಟ್ಟದಲ್ಲಿ ಕಂಡುಕೊಳ್ಳಬೇಡಿ

ನಿಮ್ಮನ್ನ ನೀವು ಕೆಳಮಟ್ಟದಲ್ಲಿ ಕಂಡುಕೊಳ್ಳಬೇಡಿ

ಮರಳಿ ಕೆಲಸಕ್ಕೆ ಸೇರುವ ಎಲ್ಲಾ ಹಕ್ಕೂ ನಿಮಗಿದೆ. ತಾಯಿಯಾದ ಮಾತ್ರಕ್ಕೆ ನೀವು ಕೇವಲ ಮಗುವಿನ ಸುತ್ತ ಇರಬೇಕು ಎಂದಲ್ಲ. ಅದೊಂದು ಜವಾಬ್ದಾರಿ. ಕೆಲಸಕ್ಕೆ ಹೋಗಿಯೂ ಕೂಡ ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುವುದಕ್ಕೆ ಸಾಧ್ಯವಿದೆ. ನಿಮ್ಮನ್ನ ನೀವು ತಾಯಿಯಾದ ನಂತರ ಕಡೆಗಾಡಿಸಿಕೊಳ್ಳಬೇಡಿ. ನಿಮ್ಮ ಸೌಂದರ್ಯದಲ್ಲಿ, ದೈಹಿಕ ಸ್ಥಿತಿಯಲ್ಲಿ ಕೇವಲ ಕೆಲವು ಬದಲಾವಣೆಗಳಾಗಿರುತ್ತದೆ ಅಷ್ಟೇ. ಅದು ನೈಸರ್ಗಿಕ ಪ್ರಕ್ರಿಯೆ. ಆ ಬದಲಾವಣೆಯು ನಿಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸದಿರಿ. ತಾಯ್ತನದ ನಂತರ ವೃತ್ತಿ ಬದುಕನ್ನು ನಿಭಾಯಿಸುವುದು ಬಿಡುವಿಲ್ಲದ ಆಟದಂತೆ. ನಿಮ್ಮ ಭವಿಷ್ಯದ ಬಗ್ಗೆ ಕನಸುಗಳಿರುವ ವ್ಯಕ್ತಿಗಳ ಸುತ್ತ ಇರಿ. ನಿಮ್ಮ ಭವಿಷ್ಯ, ವೃತ್ತಿ ಬದುಕಿಗೆ ಸಹಕರಿಸುವವರ ಸಹಾಯ ತೆಗೆದುಕೊಳ್ಳಿ.

ಕಲಿಯಿರಿ, ಸ್ಕಿಲ್ ಹೆಚ್ಚಿಸಿಕೊಳ್ಳಿ, ಅಪ್ ಡೇಟ್ ಆಗುತ್ತಿರಿ

ಕಲಿಯಿರಿ, ಸ್ಕಿಲ್ ಹೆಚ್ಚಿಸಿಕೊಳ್ಳಿ, ಅಪ್ ಡೇಟ್ ಆಗುತ್ತಿರಿ

ಹೊಸ ಕೋರ್ಸ್ ಗಳಿಗೆ ಸೇರಿ ಮತ್ತು ನಿಮ್ಮ ಸಿವಿ(ರೆಸ್ಯೂಮ್) ನ್ನು ಅಪ್ ಡೇಟ್ ಮಾಡಿ. ಹೊಸ ಹೊಸ ಸರ್ಟಿಫಿಕೇಟ್ ಮತ್ತು ಡಿಗ್ರಿಯನ್ನು ಪಡೆದುಕೊಳ್ಳಿ. ನೀವು ಈಗಾಗಲೇ ಕಲಿತಿರುವ ವಿದ್ಯೆಗಳನ್ನು ಪುನಃ ನಿಮ್ಮ ಸಿವಿಯಲ್ಲಿ ಸೇರಿಸಿ. ತಾಯ್ತನಕ್ಕಾಗಿ ನೀವು ಬ್ರೇಕ್ ತೆಗೆದುಕೊಂಡಿದ್ದೀರಿ ಅಷ್ಟೇ. ಹಾಗಾಗಿ ಹೊಸದಾಗಿ ತಾಯ್ತನದ ಬ್ರೇಕ್ ನಂತರ ನೀವು ಟೇಬಲ್ ನಲ್ಲಿ ನಿಮ್ಮ ರೆಸ್ಯೂಮ್ ಇಡುವಾಗ ಹೊಸ ಸ್ಕಿಲ್ ಗಳನ್ನು ಕಲಿಯುವುದರಲ್ಲಿ ನಿಮಗೆ ಭಯವಿಲ್ಲ ಎಂಬುದನ್ನು ಸಾಬೀತು ಪಡಿಸಿ.

ನಿಮ್ಮ ನೆಟ್‌ವರ್ಕ್ ಅನ್ನು ತಲುಪಿ

ನಿಮ್ಮ ನೆಟ್‌ವರ್ಕ್ ಅನ್ನು ತಲುಪಿ

ಸಾಮಾಜಿಕ ಜಾಲತಾಣಗಳನ್ನು ಬಳಸಿ. ನಿಮ್ಮ ನೆಟ್ ವರ್ಕ್ ನ್ನು ಹೆಚ್ಚಿಸಿಕೊಂಡಿರಿ. ನಿಮ್ಮದೇ ರೀತಿ ಬ್ರೇಕ್ ತೆಗೆದುಕೊಂಡಿರುವ ಮತ್ತು ನಿಮ್ಮನ್ನ ಅರ್ಥೈಸಿಕೊಳ್ಳುವ ಹಲವು ವ್ಯಕ್ತಿಗಳು ಅಲ್ಲಿರುತ್ತಾರೆ. ನೀವು ವೃತ್ತಿ ಬದುಕಿಗೆ ತೆಗೆದುಕೊಂಡಿರುವ ಬ್ರೇಕ್ ನ್ನು ಅರ್ಥೈಸಿಕೊಳ್ಳುವ ಮನಸ್ಥಿತಿಯವರು ಖಂಡಿತ ನಿಮಗೆ ಇಲ್ಲಿ ಲಭ್ಯವಾಗುವುದರಿಂದಾಗಿ ಅವರು ನಿಮಗೆ ಪುನಃ ವೃತ್ತಿ ಬದುಕನ್ನು ಪ್ರಾರಂಭಿಸುವುದಕ್ಕೆ ಸಹಕರಿಸುವ ಸಾಧ್ಯತೆ ಇರುತ್ತದೆ.

ಸುಲಭವಾಗಿ ಹೊಂದಿಕೊಳ್ಳುವಂತಿರಿ

ಸುಲಭವಾಗಿ ಹೊಂದಿಕೊಳ್ಳುವಂತಿರಿ

ಉದ್ಯೋಗ ಪಡೆಯುವ ಆಲೋಚನೆಯಲ್ಲಿ ನೀವು ರಾಜಿ ಮಾಡಿಕೊಳ್ಳಬಾರದು. ಆದರೆ ಸಂಬಳ, ಹುದ್ದೆಯ ಪಾತ್ರ ಮತ್ತು ಇತರ ವಿಷಯಗಳ ಬಗ್ಗೆ ನೀವು ಹೆಚ್ಚು ಅವಕಾಶಗಳನ್ನು ನೀಡಬೇಕಾಗಬಹುದು. ಆತ್ಮವಿಶ್ವಾಸದಿಂದಿರಿ. ನಿಮಗೆ ಉದ್ಯೋಗ ನೀಡುವವರಿಗೆ ನಿಮ್ಮ ಆಸಕ್ತಿ ಏನು ಎಂಬುದನ್ನು ತಿಳಿಸಿ. ನಂತರ ನಿಮ್ಮ ವೇತನ,ಸ್ಥಾನದ ವಿಮರ್ಷೆ ಅಥವಾ ಮರುಮೌಲ್ಯಮಾಪನವನ್ನು ನಿಗದಿ ಪಡಿಸಿಕೊಳ್ಳಿ. ಉದ್ಯೋಗದಾತರು ಮತ್ತು ನಿಮ್ಮ ನಡುವೆ ಒಂದು ಹೊಂದಾಣಿಕೆಯ ಅಗತ್ಯತೆ ಇರುವುದರಿಂದಾಗಿ ಅದಕ್ಕೆ ನೀವು ಸುಲಭವಾಗಿ ಹೊಂದಿಕೆಯಾಗುವಂತೆ ನಿಮ್ಮ ಸ್ಕಿಲ್ ಹೆಚ್ಚಿಸಿಕೊಂಡಿರಿ.

English summary

How To Return To Work After Maternity Break

Here we are discussing about How To Return To Work After Maternity Break. Returning to work after a maternity break has never been an easy one for women in corporate jobs. We list easy ways that can help women get back into the workforce. Read more.
X
Desktop Bottom Promotion