For Quick Alerts
ALLOW NOTIFICATIONS  
For Daily Alerts

ಎದೆಹಾಲು ಉಣಿಸುವ ತಾಯಂದಿರು ಈ ತಪ್ಪುಗಳನ್ನ ಮಾಡಬೇಡಿ

|

ಪ್ರತಿಹೆಣ್ಣಿಗೂ ತನ್ನ ಮೊದಲ ಹೆರಿಗೆಯ ಬಳಿಕ ಕಲಿಯಲು ಸಾಕಷ್ಟಿರುತ್ತದೆ. ಎಲ್ಲವೂ ಹೊಸದಾಗಿರುವ ಆ ಬಾಣಂತನ ವೇಳೆಗೆ ಮಗುವಿಗೆ ಎದೆಹಾಲು ನೀಡುವುದು ಸಹ ಸವಾಲಿನ ಕೆಲಸ ಏಕೆಂದರೆ, ಎದೆಹಾಲು ನೀಡುವ ವೇಳೆ ಆಗುವ ತಪ್ಪುಗಳು ಮಗುವಿನ ಆರೋಗ್ಯದ ಜೊತೆಗೆ ತಾಯಿಯ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಆದ್ದರಿಂದ ಬಹಳ ಜಾಗರೂಕವಾಗಿರಬೇಕು. ಒಂದು ವೇಳೆ ನೀವು ಹೊಸ ತಾಯಿಯಾಗಿದ್ದರೆ ಎದೆಹಾಲು ನೀಡುವಾಗ ತಪ್ಪಿಸಬೇಕಾದ ಕೆಲವು ತಪ್ಪುಗಳನ್ನು ಇಲ್ಲಿ ನೀಡಲಾಗಿದೆ:

ಎದೆಹಾಲು ಉಣಿಸುವಾಗ ಮಾಡಬಾರದ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ನೋವು ಸಹಜ ಎಂದು ನೀವು ಭಾವಿಸುವುದು:

ನೋವು ಸಹಜ ಎಂದು ನೀವು ಭಾವಿಸುವುದು:

ಆರಂಭದಲ್ಲಿ ಎದೆಹಾಲು ಉಣಿಸುವಾಗ ನೋವು ಆಗುವುದು ಸಾಮಾನ್ಯ. ಆದರೆ, ಈ ನೋವು ಸುದೀರ್ಘವಾಗಿದ್ದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು. ಸ್ತನ್ಯಪಾನದಿಂದ ನೋವು ದೀರ್ಘಕಾಲದವರೆಗೆ ಇದ್ದರೆ, ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ತಪ್ಪಾಗಿ ಹಾಲುಣಿಸುವುದು, ನಾಲಗೆಯ ಬಿಗಿತ ಸೇರಿದಂತೆ ಇದಕ್ಕೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದ್ದರಿಂದ ಸ್ತನಪಾನದ ವೇಳೆ ಉಂಟಾಗುವ ನೋವು ದೀರ್ಘಕಾಲದವರೆಗೂ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ನೀಡುವುದು ಉತ್ತಮ.

ಸ್ತನ್ಯಪಾನ ಮಾಡಲು ವೇಳಾಪಟ್ಟಿ ತಯಾರಿಸುವುದು:

ಸ್ತನ್ಯಪಾನ ಮಾಡಲು ವೇಳಾಪಟ್ಟಿ ತಯಾರಿಸುವುದು:

ಒಂದುವೇಳೆ ನೀವು ವೇಳಾಪಟ್ಟಿ ತಯಾರಿಸಿ ಮಗುವಿಗೆ ಎದೆಹಾಲು ನೀಡುವವರಾಗಿದ್ದರೆ, ಅದರಲ್ಲೂ ನೀವು ತಪ್ಪು ಮಾಡುತ್ತಿರಬಹುದು. ಏಕೆಂದರೆ ಮಗುವಿಗೆ ಹಸಿವಾದಾಗ ಎದೆಹಾಲು ನೀಡದೇ ನೀವು ನಿಗದಿಪಡಿಸಿದ ಸಮಯಕ್ಕೆ ಹಾಲು ಕೊಟ್ಟರೆ, ಅದು ಪ್ರಯೋಜನಕ್ಕೆ ಬಾರದು. ಆದ್ದರಿಂದ ಮಗುವಿನ ಹಸಿವನ್ನ ಅದು ನಿಡುವ ಸೂಚನೆಗಳ ಆಧಾರದ ಮೇಲೆ ಅರಿತುಕೊಂಡು, ಸ್ತನ ಪಾನ ಮಾಡಿಸಬೇಕು. ಅಂದರೆ ಮಗುವಿಗೆ ಹಸಿವಾದಾಗ ಅದು ಮಾಡುವ ಒಂದೇ ಕೆಲಸ ಅಳುವುದು. ಆದ್ದರಿಂದ ಹಸಿವಿನ ಅಳುವನ್ನು ಅರಿತು ಎದೆಹಾಲು ನೀಡಬೇಕೇ ಹೊರತು, ಟೈಮ್ ಟೇಬಲ್ ಪ್ರಕಾರ ಅಲ್ಲ.

ಬಾಟಲ್ ನಲ್ಲಿ ಹಾಲು ಕುಡಿಸುವುದನ್ನು ಬೇಗ ಪರಿಚಯಿಸುವುದು:

ಬಾಟಲ್ ನಲ್ಲಿ ಹಾಲು ಕುಡಿಸುವುದನ್ನು ಬೇಗ ಪರಿಚಯಿಸುವುದು:

ಅನೇಕ ಮಹಿಳೆಯರು ಒತ್ತಡದ ಬದುಕಿನಿಂದಾಗಿ ಅಥವಾ ತಮ್ಮ ಕೆಲಸಕ್ಕೆ ಹಿಂತಿರುಗಬೇಕಾಗಿರುವುದರಿಂದ ಬಾಟಲಿಯ ಹಾಲನ್ನು ಬೇಗನೇ ಪರಿಚಯಿಸುತ್ತಾರೆ. ಬಾಟಲಿಯ ಮೂಲಕ ಹಾಲು ನೀಡುವುದು ಅನುಕೂಲಕರ ದಾರಿಯೇ ಆದರೆ, ಮಗುವಿಗೆ ಬೇಗನೆ ಪರಿಚಯಿಸುವುದು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಎದೆಹಾಲಿಗೆ ಹೊಂದಿಕೊಳ್ಳುವ ಮೊದಲೇ ಬಾಟಲಿಯಲ್ಲಿ ನೀಡಬೇಡಿ, ಏಕೆಂದರೆ ಬಾಟಲಿ ಹಾಲು ಮಕ್ಕಳಿಗೆ ಸುಲಭವಾಗುವುದರಿಂದ ಅವರು ನಂತರ ಎದೆಹಾಲನ್ನು ನಿರಾಕರಿಸಬಹುದು. ಆದ್ದರಿಂದ ಅನಿವಾರ್ಯವಾಗಿ ಬಾಟಲಿ ಹಾಲು ಕೊಡಲೇಬೇಕಾದ ಸಂದರ್ಭವಿದ್ದರೆ, 6-8 ವಾರಗಳ ನಂತರ ನೀಡಿ, ಅದಕ್ಕಿಂತ ಮುಂಚೆ ಅಲ್ಲ.

ಎದೆ ಹಾಲು ಮತ್ತು ಫಾರ್ಮುಲಾ ಹಾಲು ಒಂದೇ ಎಂದು ನಂಬುವುದು:

ಎದೆ ಹಾಲು ಮತ್ತು ಫಾರ್ಮುಲಾ ಹಾಲು ಒಂದೇ ಎಂದು ನಂಬುವುದು:

ಎದೆ ಹಾಲು ಮತ್ತು ಫಾರ್ಮುಲಾ ಹಾಲು ಎರಡೂ ಸಂಪೂರ್ಣವಾಗಿ ವಿಭಿನ್ನವಾಗಿವೆ. ಎದೆಹಾಲು ನವಜಾತ ಶಿಶುಗಳಿಗೆ ನೈಸರ್ಗಿಕ ಆಹಾರ ಮೂಲವಾಗಿದ್ದು, ಅದರಲ್ಲಿರುವ ಪೌಷ್ಟಿಕಾಂಶಗಳು ತಾಯಿ ಮತ್ತು ಮಗುವಿಗೆ ಪ್ರಯೋಜನವನ್ನು ನೀಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಫಾರ್ಮುಲಾ ಹಾಲಿನಲ್ಲಿ ಸ್ವಲ್ಪ ಪ್ರಮಾಣದ ಪೌಷ್ಟಿಕಾಂಶವಿದೆ. ಜೊತೆಗೆ ಎದೆ ಹಾಲಿನಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿರುವುದಿಲ್ಲ. ಇದನ್ನು ವೈದ್ಯರ ಸಲಹೆಯ ಮೇರೆಗೆ ಅಥವಾ ತುರ್ತು ಸಮಯದಲ್ಲಿ ಶಿಶುಗಳಿಗೆ ಮಾತ್ರ ನೀಡಲಾಗುವುದು.

ಸಹಾಯ ಕೇಳಲು ಹಿಂಜರಿಯುವುದು:

ಸಹಾಯ ಕೇಳಲು ಹಿಂಜರಿಯುವುದು:

ಸ್ತನ್ಯಪಾನವು ನೈಸರ್ಗಿಕ ಪ್ರಕ್ರಿಯೆಯಾಗಿದ್ದು ಅದು ಸುಲಭ ಮತ್ತು ಸಹಜವಾಗಿದೆ. ಆದರೆ ಸವಾಲುಗಳಂತೂ ಖಂಡಿತ. ಇದು ನಿಮ್ಮನ್ನು ಕೆಲವು ತಪ್ಪುಗಳನ್ನು ಮಾಡಲು ಕಾರಣವಾಗಬಹುದು. ನಿಮ್ಮ ಸಂಗಾತಿ, ನಿಮ್ಮ ಹಿರಿಯರು ಅಥವಾ ನಿಮ್ಮ ಸ್ನೇಹಿತರಿಂದ ಸಹಾಯವನ್ನು ಕೇಳದೇ ಇರುವುದರಿಂದ ತಪ್ಪುಗಳು ಹೆಚ್ಚಾಗಬಹುದು. ನಿಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವುದು ಮತ್ತು ಬೆಂಬಲ ಮತ್ತು ಸಲಹೆಗಳಿಗಾಗಿ ಅವರನ್ನು ಕೇಳುವುದು ನಿಮಗೆ ಮತ್ತು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಿದೆ. ಕೆಲವರಿಗೆ ಎದೆಹಾಲುಣಿಸುವಲ್ಲಿ ಮುಂಚಿನ ಅನುಭವವಿರಬಹುದು, ಆದ್ದರಿಂದ ಅಂತಹವರ ಸಲಹೆ ಪಡೆಯುವುದು ಮುಖ್ಯ.

FAQ's
  • ಎದೆಹಾಲು ನೀಡುವಾಗ ಏನು ಮಾಡಬಾರದು?

    ಎದೆಹಾಲು ನೀಡುವ ತಾಯಂದಿರು ಮಧ್ಯಪಾನ, ಧೂಮಪಾನ ಜೊತೆಗೆ ಇತರ ಯಾವುದೇ ಡ್ರಗ್ಸ್ ಗಳನ್ನು ತೆಗೆದುಕೊಳ್ಳುವಂತಿಲ್ಲ. ಇದು ನಿಮ್ಮ ಮಗುವಿಗೆ ಅದರ ಮೆದುಳಿಗೆ ಸಾಕಷ್ಟು ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡಬಹುದು.

     

  • ಹಾಲುಣಿಸುವಾಗ ಮಗುವಿಗೆ ಹೊಟ್ಟೆ ತುಂಬಿದೆ ಎಂದು ಹೇಗೆ ತಿಳಿಯುವುದು?

    ನಿಮ್ಮ ಮಗುವಿಗೆ ಹೊಟ್ಟೆ ತುಂಬಿದ್ದರೆ, ಅದು ಮೆಲ್ಲಗೆ ನಿಮ್ಮನ್ನು ನೋಡುವುದು, ಅಷ್ಟೇ ಅಲ್ಲ ಹೊಟ್ಟೆ ತುಂಬಿದ ಭಾವನೆ ಅದರ ಮುಖದಲ್ಲಿರುವುದು ಜೊತೆಗೆ ಮಗು ನಿಧಾನವಾಗಿ ನಿದ್ದೆಗೆ ಜಾರುತ್ತಿದ್ದರೆ, ಅದಕ್ಕೆ ಹೊಟ್ಟೆ ತುಂಬಿದೆ ಎಂದರ್ಥ.

English summary

Common Breastfeeding Mistakes All New Mothers Should Avoid in Kannada

Here we talking about Common Breastfeeding Mistakes All New Mothers Should Avoid in Kannada, read on
Story first published: Saturday, September 4, 2021, 16:09 [IST]
X
Desktop Bottom Promotion