For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗು ಚೆನ್ನಾಗಿ ನಿದ್ರೆ ಮಾಡಲು ಈ ತಂತ್ರಗಳನ್ನು ಪಾಲಿಸಿ

|

ಹಿರಿಯರಂತೆ, ಮಕ್ಕಳು ನಿದ್ದೆಗೆ ಹೋಗಬೇಕಾದರೆ ವಿಭಿನ್ನ ಅಭ್ಯಾಸಗಳನ್ನು ಹೊಂದಿರುತ್ತಾರೆ. ಅನೇಕ ಮಕ್ಕಳು ದೈಹಿಕ ಚಟುವಟಿಕೆಗಳನ್ನು ಮಾಡಿದ ತಕ್ಷಣ ನಿದ್ರೆಗೆ ಜಾರುತ್ತಾರೆ. ಆದರೆ ಇನ್ನೂ ಕೆಲವು ಮಕ್ಕಳು ತುಂಬಾ ಕಷ್ಟಪಟ್ಟು ಮಲಗುತ್ತಾರೆ. ಮಕ್ಕಳ ಆರೋಗ್ಯಕ್ಕೆ 10-11 ಗಂಟೆಗಳ ನಿದ್ರೆ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಗು ನಿದ್ರೆ ಮಾಡದಿದ್ದರೆ, ಅವರು ನಿದ್ರೆ ಮಾಡುವಂತೆ ಮಾಡಲು ನೀವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳಬೇಕು. ಅವುಗಲಾವುವು ಎಂಬುದನ್ನು ಈ ಕೆಳಗೆ ನೋಡೋಣ.

ಮಕ್ಕಳನ್ನು ಮಲಗಿಸುವ ತಂತ್ರಗಳನ್ನು ಈ ಕೆಳಗೆ ನೀಡಲಾಗಿದೆ:

ನಿದ್ದೆಯ ರುಚಿ ಹತ್ತಿಸಿ:

ನಿದ್ದೆಯ ರುಚಿ ಹತ್ತಿಸಿ:

ಮಗುವನ್ನು ಪ್ರತಿದಿನ ಮಲಗಿಸಲು ಪ್ರಯತ್ನಿಸಿ. ನೀವು ಇದನ್ನು ಮೊದಲಿನಿಂದಲೂ ಮಾಡಿದರೆ, ಅದು ತನ್ನಷ್ಟಕ್ಕೆ ಅಭ್ಯಾಸವಾಗಿಸುತ್ತದೆ. ದಿನಕಳೆದಂತೆ ನೀವು ಮಲಗಿಸುವುದು ಬೇಕಾಗಿಲ್ಲ. ಅದರ ಟೈಮ್ ಬಂದಾಗ ಅದೇ ನಿದ್ದೆಗೆ ಜಾರುತ್ತದೆ. ಹಾಗಂತ ದಿನವೆಲ್ಲ ಮಲಗಿರುವುದು ಒಳ್ಳೆಯದಲ್ಲ. ಯಾವ ಸಮಯಕ್ಕೆ ಮಲಗಬೇಕೋ ಆ ಸಮಯವನ್ನು ಅಭ್ಯಾಸ ಮಾಡಿಸಿ. ಇದು ಮಗುವಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು.

ಮಸಾಜ್ ಮಾಡಿ:

ಮಸಾಜ್ ಮಾಡಿ:

ಮಲಗುವ ಮೊದಲು ಮಗುವಿಗೆ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಅವರ ದೇಹ ನಿದ್ರಾವಸ್ಥೆಗೆ ಜಾರುತ್ತದೆ. ಜೊತೆಗೆ ಮಸಾಜ್ ಮಕ್ಕಳಿಗೆ ನಿದ್ದೆ ಬರಲು ಸಹಾಯ ಮಾಡುತ್ತದೆ. ಜೊತೆಗೆ ಮಲಗುವ ಮುನ್ನ ಮಗುವಿನ ಸ್ವಚ್ಛತೆಗೆ ಗಮನ ಕೊಡಿ. ವಿಶೇಷವಾಗಿ ಮೂಗು, ಕಿವಿ ಮತ್ತು ಬಾಯಿಯನ್ನು ಸ್ವಚ್ಛ ಗೊಳಿಸಿ ಮಲಗಲು ಬಿಡಿ. ಇಲ್ಲವಾದಲ್ಲಿ ಅವರಿಗೆ ಈ ವಿಚಾರಗಳೇ ಕಿರಿಕಿರಿ ಉಂಟುಮಾಡುತ್ತದೆ.

ಮಲಗುವ ಕೋಣೆ ಕತ್ತಲಾಗಿರಲಿ:

ಮಲಗುವ ಕೋಣೆ ಕತ್ತಲಾಗಿರಲಿ:

ಮಗುವನ್ನು ಮಲಗಿಸುವಾಗ ಕೋಣೆ ಕತ್ತಲಾಗಿರುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಕತ್ತಲೆಯಲ್ಲಿ, ನಿದ್ರೆಗೆ ಸಂಬಂಧಿಸಿದ ಹಾರ್ಮೋನ್ ಸಕ್ರಿಯಗೊಳ್ಳುತ್ತದೆ. ಈ ಹಾರ್ಮೋನ್ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಸಾಧ್ಯವಾದರೆ ಬಾಗಿಲು ಮುಚ್ಚಿ ಇದರಿಂದ ಮಗುವಿಗೆ ಅಡಚಣೆಯಿಲ್ಲದ ಉತ್ತಮ ನಿದ್ರೆ ಸಿಗುತ್ತದೆ.

ಮನೆಯಲ್ಲಿ ನಿಶ್ಯಬ್ದವಿರಲಿ:

ಮನೆಯಲ್ಲಿ ನಿಶ್ಯಬ್ದವಿರಲಿ:

ನಿಮ್ಮ ಮಗು ನಿದ್ದೆ ಮಾಡುವಾಗ, ಮನೆಯಲ್ಲಿ ಮಿಕ್ಸರ್, ವ್ಯಾಕ್ಯೂಮ್ ಕ್ಲೀನರ್ ಮುಂತಾದ ದೊಡ್ಡ ಶಬ್ದ ಬರುವ ಸಾಧನಗಳನ್ನು ಬಳಸಬೇಡಿ. ಈ ಶಬ್ದ ಕೇಳಿ ಮಕ್ಕಳು ಈ ಭಯದಿಂದ ಎಚ್ಚರಗೊಳ್ಳುತ್ತಾರೆ. ಅದಲ್ಲದೇ, ಮಗುವಿಗೆ ಉತ್ತಮ ನಿದ್ರೆ ಬರಲು ಸಣ್ಣ ಸಂಗೀತ ಮತ್ತು ಬೆಚ್ಚಗಿನ ಗಾಳಿ ಸಹಕಾರಿಯಾಗಿದೆ. ನೀವು ಇದನ್ನು ಅವರ ಕೋಣೆಯಲ್ಲಿ ಫಿಕ್ಸ್ ಮಾಡಬಹುದು.

ಮಗುವಿನ ಜೊತೆ ನೀವೂ ಮಲಗಬೇಡಿ:

ಮಗುವಿನ ಜೊತೆ ನೀವೂ ಮಲಗಬೇಡಿ:

ನೀವು ಬಯಸಿದಲ್ಲಿ, ಮಕ್ಕಳು ನಿದ್ರಿಸುವವರೆಗೂ ಅವರೊಂದಿಗೆ ಮಲಗಬಹುದು. ಆದರೆ ನಿದ್ದೆಬಂದ ಮೇಲೂ ಅವನೊಂದಿಗೆ ಅಲ್ಲಿಯೇ ಮಲಗಬೇಡಿ. ನೀವು ಹಾಗೇ ಮಲಗಿದ್ದೇ ಆದಲ್ಲಿ ಮಗುವಿಗೆ ನಿಮ್ಮ ಶಾಖ ಅಭ್ಯಾಸವಾಗುವುದು. ಮತ್ತು ನೀವು ದೂರ ಹೋದಾಗ ಮಗು ಎಚ್ಚರಗೊಳ್ಳುತ್ತದೆ. ಆದ್ದರಿಂದ ನಿಮ್ಮ ಮಗುವಿನಲ್ಲಿ ಈ ರೀತಿಯ ಅಭ್ಯಾಸವನ್ನು ನೀವು ಬೆಳೆಸಿಕೊಳ್ಳದಿರುವುದು ಉತ್ತಮ. ಮಗುವಿಗೆ ನಿದ್ದೆ ಬಂದಾಗ, ನಂತರ ಅವನನ್ನು ತೊಡೆಯಿಂದ ಅಥವಾ ಸ್ವಿಂಗ್ನಿಂದ ಹೊರಗೆ ಮಲಗಿಸಿ.

English summary

Best Ways to Put Children to Good Sleep in Kannada

Here we talking about Best ways to put children to good sleep in Kannada, read on
Story first published: Friday, May 21, 2021, 17:26 [IST]
X
Desktop Bottom Promotion