For Quick Alerts
ALLOW NOTIFICATIONS  
For Daily Alerts

ಮಗುವಿನ ಆಗಮನದ ನಂತರ ಲೈಂಗಿಕ ಜೀವನ ಹೇಗೆ ಬದಲಾಗುವುದು ನೋಡಿ

|

ಮಗು ಹುಟ್ಟುವ ಮುಂಚೆ ದಂಪತಿಗಳ ನಡುವೆ ಸಾಕಷ್ಟು ಸ್ವಾತಂತ್ರ್ಯ ಹಾಗೂ ಸಮಯಗಳು ಇರುತ್ತವೆ. ಪರಸ್ಪರ ಪ್ರೀತಿ- ವಿನೋದಗಳಲ್ಲಿ ಹೆಚ್ಚಿನ ಸಮಯವು ಕಳೆಯುವುದು. ಇಬ್ಬರ ನಡುವೆ ಸಾಕಷ್ಟು ಕಾಳಜಿಗಳು ಹಾಗೂ ಬೇಕು ಬೇಡದ ಸಂಗತಿಯನ್ನು ಅರಿಯುತ್ತಾರೆ. ತಮ್ಮ ಬಿಡುವಿನ ಸಮಯವನ್ನು ಸಂಗಾತಿಗಾಗಿಯೇ ಮೀಸಲಿಡುವುದು, ಅವರ ಸಂತೋಷಕ್ಕೆ ಕಾರಣವಾಗುವುದು ಸಾಮಾನ್ಯವಾಗಿರುತ್ತದೆ. ಅದೇ ಅವರ ನಡುವೆ ಅವರ ಪ್ರೀತಿಯ ಜ್ಯೋತಕವಾಗಿರುವ ಮಗು ಬಂದಾಗ ಸಾಕಷ್ಟು ಬದಲಾವಣೆಗಳು ಸಂಭಿಸುವುದು.

ಮಗು ಹುಟ್ಟಿದ ನಂತರ ದಂಪತಿಗಳ ನಡುವೆ ಇರುವ ಆದ್ಯತೆಗಳು ಭಿನ್ನವಾಗಿರುತ್ತವೆ. ಹೆಚ್ಚಿನ ಸಮಯವನ್ನು ಮಗುವಿಗಾಗಿಯೇ ಮೀಸಲಿಡುತ್ತಾರೆ. ತಮ್ಮ ಬೇಕು ಬೇಡಗಳನ್ನು ಬದಿಗಿಟ್ಟು, ಮಗುವಿನ ಆದ್ಯತೆಗೆ ಮೊದಲ ಸ್ಥಾನ ನೀಡಲಾಗುವುದು. ದಂಪತಿಗಳ ನಡುವೆ ಪ್ರಬುದ್ಧತೆಯು ಬೆಳೆಯುವುದು. ತಮಗಾಗಿ ವ್ಯಯಿಸುವ ಸಮಯವನ್ನು ಮಗುವಿಗಾಗಿ ಮೀಸಲಿಡುವರು. ತಮ್ಮ ಅಗತ್ಯತೆಗಳಿಗಿಂತ ಮಗುವಿನ ಆದ್ಯತೆಗಳು ಪ್ರಮುಖವಾದದ್ದು ಎಂದು ಭಾವಿಸುತ್ತಾರೆ. ಹಾಗಾಗಿಯೇ ಮಕ್ಕಳು ಹುಟ್ಟಿದ ನಂತರ ದಂಪತಿಗಳ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಹೆಚ್ಚುವುದು ಎನ್ನುತ್ತಾರೆ.

ಕೆಲವೊಮ್ಮೆ ಮಗುವಿಗೆ ಆಹಾರ ನೀಡುವುದು, ಪಾಲನೆ, ಪೋಷಣೆ, ಅದರ ಅವಶ್ಯಕತೆಗಳನ್ನು ಪೂರ್ಣಗೊಳಿಸುವುದು ಹೀಗೆ ಪ್ರತಿಯೊಂದು ವಿಷಯದಲ್ಲೂ ಭಿನ್ನಾಭಿಪ್ರಾಯಗಳು ಹುಟ್ಟಬಹುದು. ಮಗುವಿಗಾಗಿ ಮಾಡುವ ಕೆಲಸ ಕಾರ್ಯಗಳಲ್ಲಿ ದೋಷಗಳು ಅಥವಾ ಸಂಪೂರ್ಣ ತಲ್ಲೀನತೆ ಇರದೆ ಹೋದರೆ ಅಂತಹ ಸಂದರ್ಭದಲ್ಲೂ ದಂಪತಿಗಳ ನಡುವೆ ಸಣ್ಣ-ಪುಟ್ಟ ವಾದಗಳು ಇಲ್ಲವೇ ಮುನಿಸು ಉಂಟಾಗುವ ಸಾಧ್ಯತೆಗಳು ಹೆಚ್ಚು. ಅವು ದಿನಗಳು ಹಾಗೂ ತಿಂಗಳುಗಳ ಕಾಲವೂ ಮುಂದುವರಿಯುವ ಸಾಧ್ಯತೆಗಳು ಹೆಚ್ಚು. ಹಾಗಾಗಿ ಮಗು ನಮ್ಮ ಪ್ರೀತಿಯ ಸಂಕೇತವಾಗಿದ್ದರೂ ಅದರ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಯನ್ನು ದಂಪತಿಗಳು ಕಂಡುಕೊಳ್ಳುತ್ತಾರೆ.

ಮಾನಸಿಕ ಸಿದ್ಧತೆಯನ್ನು ಹೊಂದಿರಬೇಕು

ಮಾನಸಿಕ ಸಿದ್ಧತೆಯನ್ನು ಹೊಂದಿರಬೇಕು

ಮಗುವಿನ ಪಾಲನೆ ಹಾಗೂ ಅದರ ಬೆಳವಣಿಗೆಯ ಬಗ್ಗೆ ದಂಪತಿಗಳು ಸಾಕಷ್ಟು ಚಿಂತನೆ ಹಾಗೂ ಮಾನಸಿಕ ಸಿದ್ಧತೆಯನ್ನು ಹೊಂದಿರಬೇಕು. ಇಲ್ಲವಾದರೆ ಮಗುವನ್ನು ಬೆಳೆಸುವುದು ಮತ್ತು ಅವರಿಗೆ ಸೂಕ್ತ ಸಂಸ್ಕಾರವನ್ನು ನೀಡುವುದು ಸಾಕಷ್ಟು ಕಷ್ಟವಾಗಬಹುದು. ನಮ್ಮ ಆದ್ಯತೆಗಳ ಜೊತೆಗೆ ಮಗುವಿನ ಅವಶ್ಯಕತೆ ಹಾಗೂ ಭವಿಷ್ಯದ ಬಗ್ಗೆ ಪ್ರತಿ ಬಾರಿಯೂ ಚಿಂತಿಸಬೇಕು. ಅದೇ ನಮ್ಮ ಜೀವನವಾಗಿ ಮುಂದುವರಿಯುವುದು. ಈ ನಿಟ್ಟಿನಲ್ಲಿ ಮಗುವಿನ ಬೆಳವಣಿಗೆಗೆ ಸಂಬಂಧಿಸಿದಂತೆ ಅಧಿಕ ಚಿಂತನೆ ಹಾಗೂ ಭಯಕ್ಕೆ ಒಳಗಾಗುವವರು ಇದ್ದಾರೆ. ಮಗುವನ್ನು ಪಡೆಯುವುದು ನಮ್ಮ ಪ್ರೀತಿಯ ಜ್ಯೋತಕವಾಗಿ. ಅದರ ಆಗಮನ ಹಾಗೂ ಉಪಸ್ಥಿತಿ ಮೇಲ್ನೋಟಕ್ಕೆ ಕಾಳಜಿ ಹಾಗೂ ಜವಾಬ್ದಾರಿಯನ್ನು ಸೂಚಿಸುತ್ತದೆ ಆದರೂ ಅದೇ ನಮ್ಮ ಜೀವನದ ಬರವಸೆ ಹಾಗೂ ಆಸರೆಯಾಗಿರುತ್ತದೆ. ಹಾಗಾಗಿ ಪ್ರತಿಯೊಂದು ದಂಪತಿಗಳು ಮಗುವನ್ನು ಪಡೆದ ಮೇಲೆ ತಮ್ಮ ವೈಯಕ್ತಿಕ ಆಸೆ, ಜೀವನದಲ್ಲಿ ಕೆಲವು ಹೊಂದಾಣಿಕೆ ಹಾಗೂ ಬದಲಾವಣೆಯನ್ನು ಕಂಡುಕೊಳ್ಳುತ್ತಾರೆ. ಅದಕ್ಕಾಗಿ ನಮ್ಮ ಮಾನಸಿಕ ಸಿದ್ಧತೆಯು ಇರಬೇಕು ಎಂದು ಹೇಳಲಾಗುವುದು. ಹಾಗಾದರೆ ಆ ಬದಲಾವಣೆಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದಿನ ವಿವರಣೆಯನ್ನು ಪರಿಶೀಲಿಸಿ.

ನೀವು ಬಯಸಬಹುದು

ನೀವು ಬಯಸಬಹುದು

ಮಗುವಿನ ಆಗಮನವು ಜೀವನದಲ್ಲಿ ಸಾಕಷ್ಟು ಖುಷಿಯ ಜೊತೆಗೆ ಬದಲಾವಣೆಯನ್ನು ತಂದುಕೊಡುವುದು. ಮಗುವನ್ನು ಪಡೆದ ಕೆಲವು ವಾರಗಳ ಬಳಿಕ ನೀವು ಲೈಂಗಿಕ ಜೀವನವನ್ನು ಹೊಂದಲು ಬಯಸಬಹುದು. ಅದು ನಿಮ್ಮ ಬಯಕೆ ಆಗಿದ್ದರೂ ಕೆಲವು ಅನಿವಾರ್ಯತೆ ಅಥವಾ ಮಗುವಿನ ಆದ್ಯತೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಮೂಲಕ ಅದನ್ನು ಮರೆ ಮಾಚಬಹುದು. ಇಲ್ಲವೇ ಮುಂದಿನ ದಿನಗಳಲ್ಲಿ ಪಡೆದರಾಯಿತು ಎನ್ನುವ ಭಾವನೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಪರಸ್ಪರ ಈ ಭಾವನೆಗಳು ದಂಪತಿಗಳ ನಡುವೆ ಸಹಮತವನ್ನು ನೀಡುವುದು.

Most Read: ಮಹಿಳೆಯರು ಹೆರಿಗೆಯಾದ ಬಳಿಕ ಸೆಕ್ಸ್‌ಗಾಗಿ ಎಷ್ಟು ದಿನಗಳವರೆಗೆ ಕಾಯಬೇಕು?

ಅದು ಒಳ್ಳೆಯ ಅನುಭವ ಆಗಿರದೆ ಹೋಗಬಹುದು

ಅದು ಒಳ್ಳೆಯ ಅನುಭವ ಆಗಿರದೆ ಹೋಗಬಹುದು

ಮಗುವನ್ನು ಪಡೆದ ನಂತರದ ದಿನದಲ್ಲಿ ನಡೆಸುವ ಸಂಭೋಗ ಅಥವಾ ಲೈಂಗಿಕ ಕ್ರಿಯೆಯು ಮಹಿಳೆಗೆ ಹೆಚ್ಚಿನ ನೋವನ್ನುಂಟುಮಾಡಬಹುದು. ದೀರ್ಘ ಸಮಯದ ಬಳಿಕ ನಡೆಸುವ ಸಂಭೋಗ ಕ್ರಿಯೆಗೂ ಮುಂಚೆ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಕೆಲವರಿಗೆ ಸಂಭೋಗ ನಡೆಸುವಾಗ ಶುಷ್ಕತೆಯ ಅನುಭವ ಉಂಟಾಗಬಹುದು. ಇದರಿಂದ ನಿಮ್ಮ ಪ್ರಣಯದ ಸಂಗತಿಯು ನೋವು ಹಾಗೂ ಬೇಸರವನ್ನು ಉಂಟುಮಾಡುವುದು. ಹಾಗಾಗಿ ಮಗುವನ್ನು ಪಡೆದ ನಂತರ ಮೊದಲ ಬಾರಿಗೆ ಲೂಬ್ರಿಕಂಟ್‍ಅನ್ನು ಬಳಸುವುದು ಒಳ್ಳೆಯದು ಎಂದು ಸಲಹೆ ನಿಡಲಾಗುವುದು.

ಸ್ವಲ್ಪ ಬದಲಾವಣೆಗಳು ಇರುತ್ತವೆ

ಸ್ವಲ್ಪ ಬದಲಾವಣೆಗಳು ಇರುತ್ತವೆ

ಮಗುವಿನ ಜನ್ಮದ ಬಳಿಕ ತಾಯಿಯ ಶರೀರದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿರುತ್ತವೆ. ಗರ್ಭದಲ್ಲಿ ಮಗುವಿರುವಾಗ ತಾಯಿಯ ದೇಹವು ವಿಸ್ತರಣೆ ಪಡೆದಂತೆ ದೇಹದ ಪ್ರತಿಯೊಂದು ಅಂಗಾಂಗಗಳಲ್ಲೂ ಬದಲಾವಣೆ ಇರುತ್ತವೆ. ಅಂತೆಯೇ ತಾಯಿಯ ಯೋನಿಯು ಸಾಕಷ್ಟು ವಿಸ್ತರಿಸಲ್ಪಟ್ಟಿರುತ್ತದೆ. ಹಾಗಾಗಿ ದೀರ್ಘ ಸಮಯದ ಬಳಿಕ ನಡೆಸುವ ಲೈಂಗಿಕ ಕ್ರಿಯೆಯು ಸಂತೋಷವನ್ನು ಅಥವಾ ತೃಪ್ತಿಯನ್ನು ನೀಡದೆ ಹೋಗಬಹುದು. ಆದರೆ ಮಗುವಿಗೆ ಹಾಲುಣಿಸುವ ಪ್ರಕ್ರಿಯೆ ಮುಂದುವರಿದಂತೆ ತಾಯಿಯ ದೇಹದ ಅಂಗಾಂಗಗಳು ನಿಧಾನವಾಗಿ ಮೊದಲಿನ ಸ್ಥಿತಿಯನ್ನು ಪಡೆದುಕೊಳ್ಳುವುದು ಎಂದು ಹೇಳಲಾಗುವುದು. ಹಾಗಾಗಿ ಮೊದಲಿನ ಸ್ಥಿತಿಗೆ ಹಿಂದಿರುಗಲು ಸ್ವಲ್ಪ ಸಮಯ ಬೇಕಾಗುವುದು.

ಕೆಲವು ಭಯವು ನಿಮ್ಮನ್ನು ಕಾಡಬಹುದು

ಕೆಲವು ಭಯವು ನಿಮ್ಮನ್ನು ಕಾಡಬಹುದು

ಪ್ರಸವದ ನಂತರ ಯೋನಿಯ ಭಾಗದಲ್ಲಿ ಹೊಲಿಗೆಯನ್ನು ಹಾಕಿರಲಾಗುವುದು. ಆ ಹೊಲಿಗೆಯು ಒಣಗುವ ತನಕ ಅಥವಾ ಕೂಡುವ ಒಳಗೆ ಸಂಭೋಗವನ್ನು ನಡೆಸಬಾರದು. ಅಂತಹ ಸಂದರ್ಭದಲ್ಲಿ ಸಂಗಾತಿಯು ನಿಮ್ಮಿಂದ ಲೈಂಗಿಕತೆಯನ್ನು ಬಯಸುತ್ತಿದ್ದರೆ ನಿಮಗೆ ಭಯ ಹಾಗೂ ನೋವು ಉಂಟಾಗುವುದು. ಅಂತಹ ಸಂದರ್ಭದಲ್ಲಿ ಸಂಭೋಗ ನಡೆಸಿದರೆ ಸಮಸ್ಯೆಗಳು ಉದ್ಭವ ಆಗುವ ಸಾಧ್ಯತೆಗಳಿರುತ್ತವೆ. ಪ್ರಸವದ ನಂತರ ನೀವು ಸಾಕಷ್ಟು ಚಿಕಿತ್ಸೆ ಅಥವಾ ಆರೈಕೆಯಲ್ಲಿ ಇದ್ದರೆ ಸಂಭೋಗದ ಕ್ರಿಯೆಗೆ ಸ್ವಲ್ಪ ತಡೆಯನ್ನು ಒಡ್ಡಬೇಕು. ಅದು ನಿಮ್ಮ ಆತ್ಮ ವಿಶ್ವಾಸ ಹಾಗೂ ಸಂಗಾತಿಯ ನಡುವೆ ಕೆಲವು ಮೌನ ಹಾಗೂ ಅಂತರದ ಭಾವನೆ ಮೂಡಿಸಬಹುದು. ಆದರೆ ಮಗುವಿನ ನಗುವಿನ ಮುಂದೆ ಎಲ್ಲವೂ ನಿಧಾನವಾಗಿ ಮರೆಯಾಗುವುದು.

ಲೈಂಗಿಕತೆಗಿಂತ ನಿದ್ರೆಯೇ ಹೆಚ್ಚು ಎನಿಸುವುದು

ಲೈಂಗಿಕತೆಗಿಂತ ನಿದ್ರೆಯೇ ಹೆಚ್ಚು ಎನಿಸುವುದು

ಮಗುವಿನ ಜನನದ ನಂತರ ತಾಯಿಯು ಸಾಕಷ್ಟು ದಣಿವನ್ನು ಹೊಂದಬೇಕಾಗುವುದು. ಮಗುವಿನ ಪೋಷಣೆ ಹಾಗೂ ನಿದ್ರೆಗೆ ಅನುಗುಣವಾಗಿ ತನ್ನ ದಿನಚರಿ ಹಾಗೂ ಕೆಲಸದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕು. ಇದರ ಪ್ರಭಾವದಿಂದ ಹೆಚ್ಚು ದಣಿವು ಹಾಗೂ ನಿದ್ರೆಯು ಕಾಡುವುದು. ಹಾಗಾಗಿ ಸಿಕ್ಕ ಸ್ವಲ್ಪ ನಿದ್ರೆಯ ಸಮಯದಲ್ಲಿ ಸಂಭೋಗ ನಡೆಸುವುದಕ್ಕಿಂತ ನಿದ್ರೆ ಮಾಡುವುದೇ ಸೂಕ್ತ ಎನಿಸುವುದು. ಲೈಂಗಿಕತೆಗೆ ಕೊನೆಯ ಆದ್ಯತೆ ನೀಡುವಿರಿ.

ಕೊಂಚ ಅನುಭವವೇ ಸಾಕಷ್ಟು ಖುಷಿ ನೀಡುವುದು

ಕೊಂಚ ಅನುಭವವೇ ಸಾಕಷ್ಟು ಖುಷಿ ನೀಡುವುದು

ಮಗು ಒಂದು ಬೆಳವಣಿಗೆಯನ್ನು ಹೊಂದುವ ತನಕವೂ ದಂಪತಿಗಳು ಸಾಕಷ್ಟು ಪೋಷಣೆ ಹಾಗೂ ಕಾಳಜಿಯಲ್ಲಿ ಇರಬೇಕು. ಅವುಗಳ ನಡುವೆ ಸಾಕಷ್ಟು ದಣಿವು ಹಾಗೂ ಒತ್ತಡವನ್ನು ಅನುಭವಿಸುವರು. ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮಗೆ ಲೆಂಗಿಕತೆಗೆ ಸಂಬಂಧಿಸಿದ ಸಣ್ಣ ಪುಟ್ಟ ಅನುಭವವೇ ಸಾಕಷ್ಟು ಸಂತೋಷ ಹಾಗೂ ತೃಪ್ತಿ ನೀಡುವುದು. ಸ್ನಾನ ಗೃಹ, ಅಡುಗೆ ಮನೆಗಳಂತಹ ಜಾಗದಲ್ಲಿ ನಡೆಸುವ ಸಣ್ಣ ಪುಟ್ಟ ಪ್ರಣಯದ ಸಂಗತಿಗಳು ದಂಪತಿಗಳಿಗೆ ಸಂತೋಷ ನೀಡುವುದು. ಜೊತೆಗೆ ಇಷ್ಟೇ ಸಾಕು ಎನ್ನುವ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ.

English summary

how sex and intimacy changes post baby

Welcoming your little bundle of joy into the world is no doubt one of the greatest pleasures in life. But the same little bundle might play havoc with your sex life. Here’s how sex and intimacy changes post-baby.
X
Desktop Bottom Promotion