For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ನಂತರದ ತಲೆ ನೋವಿಗೆ ಕಾರಣ, ಲಕ್ಷಣಗಳು ಮತ್ತು ಪರಿಹಾರ

|

ಹೆರಿಗೆಯ ನಂತರದ ತಲೆ ನೋವಿಗೆ ಕಾರಣ ತಿಳಿಬೇಕಾದ್ರೆ ಹೆರಿಗೆಯ ವಿಧಾನದ ಬಗ್ಗೆ ನಾವು ಅರಿತುಕೊಳ್ಳಬೇಕು. ಹೆರಿಗೆಯಲ್ಲಿ ಎರಡು ವಿಧಗಳನ್ನ ವೈದ್ಯರು ಬಳಸ್ತಾರೆ. ಮೊದಲೆನೆಯದು ನೈಸರ್ಗಿಕ ವಿಧಾನ, ಎರಡನೆಯದು ಸಿ-ಸೆಕ್ಷನ್ (ಸಿಸೇರಿಯನ್). ನೈಸರ್ಗಿಕ ವಿಧಾನದಲ್ಲಿ ತಾಯಿ ಅಥವಾ ಮಗುವಿಗೆ ತೊಂದರೆಯಾಗುವುದೆಂದು ಕಂಡುಬಂದಲ್ಲಿ, ತಾಯಿ ಮಗುವಿನ ಆರೋಗ್ಯದ ವಿಚಾರವಾಗಿ ಸಿಸೇರಿಯನ್ ಮಾಡಲೇಬೇಕಾಗಿ ಬರುತ್ತದೆ. ಈ ಸಿಸೇರಿಯನ್ ಮಾಡಬೇಕೆಂದರೆ ಅನೆಸ್ತೇಷಿಯ ಇಂಜೆಕ್ಷನ್ ಕೊಟ್ಟು ಗರ್ಭಿಣಿಯ ಹೊಟ್ಟೆಯಿಂದ ಸಂಪೂರ್ಣ ಕೆಳಗಡೆ ಅಂದರೆ ದೇಹದ ಕೆಳ ಅರ್ಧ ಭಾಗವು ಜೊವ್ವು ಬರುವಂತೆ ಮಾಡಬೇಕಾಗುತ್ತದೆ.

ಇಂಜೆಕ್ಷನ್ ನ ಬೆನ್ನಿಗೆ ಅಂದರೆ ಸ್ಪೈನಲ್ ಕಾರ್ಡ್ ಗೆ ಕೊಡಲಾಗುತ್ತದೆ. ಕೆಳಹೊಟ್ಟೆಯನ್ನು ಸಣ್ಣದಾಗಿ ಕುಯ್ದು ಯುಟೆರಸ್ ನ ತೆರೆದು ಮಗು ಹೊರತೆಗೆಯುವ ವಿಧಾನ ಅದು. ಆದರೆ ಈ ವಿಧಾನದಿಂದ ಸಮಸ್ಯೆ ಇಲ್ಲ ಎಂದೇನಿಲ್ಲ. ಇದರಿಂದ ಹೆರಿಗೆಯು ಯಾವುದೇ ತೊಂದರೆ ಇಲ್ಲದೆ ಸುಸೂತ್ರವಾಗಿ ನೆಡೆದರೂ ಇದರಿಂದ ಮುಂದೆ ಆಗುವ ಅಡ್ಡ ಪರಿಣಾಮಗಳಾಗಬಹುದು, ಅದರಲ್ಲಿ ಪ್ರಮುಖವಾದುದು ತಲೆ ನೋವು.

Headache

ಹೆರಿಗೆಯ ನಂತರ ಕಾಡುವ ತಲೆ ನೋವಿಗೆ ಕಾರಣಗಳೇನು ?

ಹೆರಿಗೆಯ ನಂತರದ ತಲೆ ನೋವಿಗೆ ಹಲವಾರು ಕಾರಣಗಳನ್ನ ನಾವು ತಿಳಿಯಬಹುದಾದರೂ, ಅತಿ ಮುಖ್ಯವಾದುದು ಆಪರೇಷನ್ ಸಮಯದಲ್ಲಿ ಕೊಡುವ ಅನೆಸ್ತೇಷಿಯ. ಸ್ಪೈನಲ್ ಕಾರ್ಡ್ ಗೆ ಕೊಡುವ ಅನೆಸ್ತೇಷಿಯವು ಆಪರೇಷನ್ ಆದ ಕೆಲವು ದಿನಗಳ ಬಳಿಕ ನಿಧಾನವಾಗಿ ಬೆನ್ನು, ಕುತ್ತಿಗೆ ಹಾಗು ತಲೆ ನೋವಿಗೂ ಕಾರಣವಾಗಬಲ್ಲದು. ಈ ಇಂಜೆಕ್ಷನ್ ಎಷ್ಟು ಅಪಾಯಕಾರಿ ಎಂದರೆ ಬರೀ ಬೆನ್ನಿನಲ್ಲಷ್ಟೇ ಅಲ್ಲದೆ ಇಂಜೆಕ್ಷನ್ ಭಾಗದ ಅಕ್ಕ ಪಕ್ಕ ಇರುವ ಚರ್ಮದ ಪದರಗಳನ್ನು ಇದು ಘಾಸಿ ಗೊಳಿಸಬಲ್ಲದು. ಇದೆ ಕಾರಣದಿಂದ ಉಂಟಾಗುವ ದೇಹದೊಳಗಿನ ಬದಲಾವಣೆಯೇ ತಲೆ ನೋವಿಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Most Read: ಸಿಸೇರಿಯನ್ ಬಳಿಕ ನಾರ್ಮಲ್ ಡೆಲಿವರಿಯಾಗಬಹುದೇ?

ತಲೆ ನೋವಿಗೆ ಕಾರಣವಾಗಬಲ್ಲ ಇತರೆ ಅಂಶಗಳು

ಪ್ರಸವಾನಂತರದ ಪ್ರಿಕ್ಲಾಂಪ್ಸಿಯಾ ಎಂಬ ತೊಂದರೆಯು ಸಹ ಸಿಸೇರಿಯನ್ ನಂತರದ ತಲೆನೋವಿಗೆ ಸಂಬಂಧಿಸಿದೆ. ಅಧಿಕ ರಕ್ತದೊತ್ತಡ ಜೊತೆಗೆ ನಿಮ್ಮ ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ಇರುವಾಗ ಈ ಪರಿಸ್ಥಿತಿಯು ಸಂಭವಿಸುತ್ತದೆ. ಇದನ್ನು ಹೊರತು ಪಡಿಸಿ ಕೆಳಗಿನವುಗಳು ಸಹ ತಲೆ ನೋವಿಗೆ ಕಾರಣಗಳಾಗಿಹಬಹುದು.

→ ಕಬ್ಬಿಣದ ಕೊರತೆ
→ ಸ್ನಾಯು ಸೆಳೆತ
→ ಹಾರ್ಮೋನಿನ ಅಸಮತೋಲನ
→ ರಕ್ತದ ಒತ್ತಡದಲ್ಲಿ ಏರಿಳಿತಗಳು
→ ನಿದ್ದೆಯ ಅಭಾವ

ನೋವಿನ ಅನುಭವ ಹೀಗಿರುತ್ತದೆ......

ಹೆರಿಗೆಯ ನಂತರ ಯಾವುದೇ ರೀತಿಯ ತಲೆ ನೋವನ್ನು ನೀವು ಅನುಭವಿಸುತ್ತಿದ್ದರೆ ಉದಾಸೀನ ಮಾಡದೆ ವೈದ್ಯರನ್ನು ಕಾಣುವುದು ಉತ್ತಮ. ಇಂಜೆಕ್ಷನ್ ನಿಂದ ಸ್ಪೈನಲ್ ಕಾರ್ಡ್ ಮೇಲೆ ಹಲ್ಲೆಯಾಗಿರುವ ಸಾಧ್ಯತೆ ಯನ್ನು ಅಲ್ಲಗಳೆಯುವಂತಿಲ್ಲ.

ಮುಖ್ಯವಾಗಿ ತಲೆಯ ಹಿಂದೆ ಹಾಗು ಕಿವಿಗಳ ಹಿಂದೆ ಕಾಣಬರಬಹುದಾದ ಈ ನೋವು ಕಾಲಾ ನಂತರ ಕುತ್ತಿಗೆ ಮತ್ತು ಭುಜದ ವರೆಗೂ ಹರಡಬಹುದು. ಆದಾಗ್ಯೂ ಆಪರೇಷನ್ ಆದ ತಕ್ಷಣದಲ್ಲಿ ಈ ನೋವು ಕಾಣಬೇಕೆಂದೇನಿಲ್ಲ, ಈ ನೋವು ಸ್ಪೈನಲ್ ಕಾರ್ಡ್ ನ ಛಿದ್ರವಾದ ಸ್ಥಿತಿಗೆ ಪೂರಕವಾಗಿರುವ ಸಾಧ್ಯತೆ ಇರುವುದರಿಂದ ತಪ್ಪದೆ ವೈದರನ್ನು ಕಾಣಿ.

Most Read: ಗರ್ಭಿಣಿಯರು ಮೂಲಂಗಿ ತಿನ್ನಬಹುದು! ಆದರೆ ಇದೆಲ್ಲಾ ಸಂಗತಿಗಳು ನೆನಪಿರಲಿ

ಕೆಳಕಂಡವು ತಲೆನೋವಿಗೆ ಸಾಮಾನ್ಯ ರೋಗಲಕ್ಷಣಗಳು

*ವಾಕರಿಕೆ
*ಹೊಟ್ಟೆ ಕೆಟ್ಟಿರುವುದು
*ವಾಂತಿ
*ನಿಂತಾಗ, ಕುಳಿತಾಗ, ಓಡಾಡುವಾಗ ಹೆಚ್ಚಾಗುವ ತಲೆ ನೋವು
*ಅಷ್ಟೇನೂ ತೊಂದರೆ ಕೊಡದ ನೋವು ಮತ್ತು ಇದ್ದಕ್ಕಿದ್ದ ಹಾಗೆ ಹೆಚ್ಚುವ ನೋವು

ಸಿಸೇರಿಯನ್ ನಂತರದ ತಲೆ ನೋವಿಗೆ ಚಿಕಿತ್ಸೆ ಹೇಗೆ?

ಮೇಲೆ ಹೇಳಿದಂತ ತಲೆ ನೋವು ಅಸಾಮಾನ್ಯವಾದುದೇನಲ್ಲ, ಎಷ್ಟೋ ಜನರಲ್ಲಿ ಕೆಲವು ವಾರಗಳ ನಂತರ ತಾನೇ ತಾನಾಗಿ ಸರಿ ಹೋಗಿರುವಂತ ಉದಾಹರಣೆಗಳನ್ನ ನಾವು ಕಾಣಬಹುದು. ಆದಾಗ್ಯೂ, ಮನೆಯಲ್ಲೇ ಮಾಡಬಹುದಾದಂತ ಕೆಲವು ಮನೆ ಔಷಧಿಗಳನ್ನ ಕೆಳಗೆ ಕೊಡಲಾಗಿದೆ.
1. ಪ್ರಾಣಾಯಾಮ ಮಾಡಬಹುದು
2. ಕೆಲವು ಯೋಗಾಸನಗಳು, ಮುಖ್ಯವಾಗಿ ಉಸಿರಾಟಕ್ಕೆ ಸಂಬಂಧಿಸಿದ ಕೆಲವು ಆಸನಗಳು
3. ಕತ್ತಲು ಕೋಣೆಯಲ್ಲಿ ವಿಶ್ರಾಂತಿಸುವುದು
4. ಸಾಧ್ಯವಾದಷ್ಟು ಮಲಗಿಕೊಂಡಿರುವುದು
5. ಹೆಚ್ಚಾಗಿ ನೀರು ಸೇವಿಸುವುದು
6. ನೀರಿನಂಶ ಉಳ್ಳ ಹಣ್ಣು ತರಕಾರಿ ಸೇವನೆ
7. ಕಾಫಿಯ ಸೇವನೆ ಇಂದ ತಲೆ ನೋವು ಕಡಿಮೆ ಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ
8. ಕೆಲವು ಅಡ್ಡ ಪರಿಣಾಮಗಳಿಲ್ಲದ ಮಾತ್ರೆ ಸೇವನೆ
9. ವಾಕ್ ಮಾಡುವುದು, ಇತ್ಯಾದಿ

ಮೇಲಿನ ವಿಧಾನಗಳು ಅತಿಯಾದ ಭಾದನೆ ಇಲ್ಲದ ಸುಮಾರಿನ ತಲೆ ನೋವಿಗೆ ಮಾತ್ರ, ಮುಖ್ಯವಾಗಿ ತೀವ್ರತರವಾದ ತಲೆ ನೋವಿಗೆ ಮನೆ ಮದ್ದು ಅಪಾಯಕಾರಿಯೂ ಆಗಬಹುದು, ವೈದ್ಯರ ಸಲಹೆ ಪಡೆದು ಮುಂದುವರೆಯುವುದು ಉತ್ತಮ. ಹಾಲುಣಿಸುತ್ತಿರುವ ತಾಯಿಗೆ ಮಾತ್ರೆಗಳಿಂದ ಅಡ್ಡ ಪರಿಣಾಮ ಆಗಬಹುದು, ಎಚ್ಚರ.

Most Read: ಗರ್ಭಿಣಿಯಾಗಿರುವಾಗ ಕಾಡುವ ಬೆನ್ನುನೋವು ನಿವಾರಣೆಗೆ ಟಿಪ್ಸ್

ಸ್ಪೈನಲ್ ಕಾರ್ಡ್ ಗೆ ಕೊಟ್ಟ ಅನಸ್ತೇಶಿಯದಿಂದ ಬೆನ್ನು ಹುರಿ ಅಥವಾ ಸುತ್ತ ಮುತ್ತ ರಕ್ತ ಸೋರಿಕೆಯಾಗಿದ್ದಲ್ಲಿ ಅದೇ ವ್ಯಕ್ತಿಯ ಅಂದರೆ ಸಿಸೇರಿಯನ್ ಗೆ ಒಳಗಾದ ಅದೇ ಮಹಿಳೆಯ ರಕ್ತವನ್ನು ಸ್ಪೈನಲ್ ಕಾರ್ಡ್ ಗೆ ಕೊಡುವ ಮುಖಾಂತರ ಆ ಜಾಗವನ್ನು ಗುಣಪಡಿಸುವ ವಿಧಾನ ಈಗ ಲಭ್ಯವಿದೆ. ಇದರಿಂದ ರಕ್ತ ಸೋರಿಕೆಯಾದ ಜಾಗದಲ್ಲಿ ರಕ್ತ ಮರು ಪೂರೈಕೆ ಯಾಗಿ ನೋವು ಕಡಿಮೆ ಯಾಗುತ್ತದೆ. ಮುಂದೆ ಗಾಯ ಉಲ್ಬಣಗೊಳ್ಳದೆ, ಬೆನ್ನು ಹುರಿ ಮತ್ತು ಸುತ್ತ ಮುತ್ತಲಿನ ಜಾಗ ಆರೋಗ್ಯದಾಯಕ ಸ್ಥಿತಿಗೆ ಮರಳುತ್ತದೆ. ಇದರ ನಂತರದ ದಿನಗಳಲ್ಲಿ ತಲೆ ನೋವು ಗುಣಮುಖ ವಾಗುವುದು ಖಂಡಿತ. ಆದರೂ ನಿಮ್ಮ ಸ್ಥಿತಿಗೆ ಪೂರಕವಾಗಿ ಈ ರಕ್ತ ಪೂರೈಕೆ ಅಗತ್ಯವಿದೆಯೇ ಇಲ್ಲವೇ ಎಂದು ಡಾಕ್ಟರ್ ಬಳಿ ವಿಚಾರಿಸಿ ಮುಂದುವರೆಯಿರಿ. ನಿಮ್ಮ ಸ್ಥಿತಿ ತೀರಾ ಕ್ಲಿಷ್ಟಕರ ವಾಗಿರದೆ ಇದ್ದಾರೆ, ನಿಮಗೆ ಹೊಂದುವ ಅಂದರೆ ಹಾಲುಣಿಸುವ ವೇಳೆ ಆರೋಗ್ಯಕ್ಕೆ ತೊಂದರೆಯಾಗದಂತೆ ತಕ್ಕುದಾದ ಮಾತ್ರೆ ಅಥವಾ ಟಾನಿಕ್ ನಿಂದ ತಲೆ ನೋವು ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ವೈದ್ಯರೊಂದಿದೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ಕೊನೆಯದಾಗಿ ನಾವು ಕೊಟ್ಟ ಎಲ್ಲಾ ಮಾಹಿತಿಯಿಂದ ನಿಮಗೆ ಉಪಯೋಗ ವಾಗುವುದೆಂದು ನಂಬಿದ್ದೇವೆ ಹಾಗು ನಿಮ್ಮ ಹೆರಿಗೆ ಮತ್ತು ತದನಂತರದ ಅರೋಗ್ಯ ಸುಖಕರ ವಾಗಿರಲೆಂದು ಈ ಮೂಲಕ ಬಯಸುತ್ತೇವೆ.

English summary

Headache After C-section: Causes, Symptoms And Treatment

The C-section delivery involves making a small cut in the abdomen of the mother that allows the uterus to be opened up to allow the baby to be delivered. Prior to the surgery, you would be given an anaesthetic. This is usually in the form of injecting the anaesthesia through the spinal cord or via an epidural. The partial anaesthesia numbs the lower half of the body, thus allowing the doctor to perform the surgical procedure.
X
Desktop Bottom Promotion