For Quick Alerts
ALLOW NOTIFICATIONS  
For Daily Alerts

  ಗರ್ಭಾವಸ್ಥೆಯಲ್ಲಿ ಗರ್ಭಿಣಿಗೆ ಯಾರೂ ಹೇಳದೇ ಇರುವ ಕಿವಿಮಾತುಗಳು

  |

  ತಾಯ್ತನ ಅನ್ನುವುದು ಪ್ರಾಕೃತಿಯ ಅನುಭೂತಿಯ ದಿವ್ಯದರ್ಶನ.. ನಿಮ್ಮ ಜೀವನದ ಮಹತ್ವದ ಅನುಭವ ಅದು. ಆದರೆ ಅಂತಹ ಒಂದು ಅನುಭವ ನಿಮಗೆ ಅದ್ಭುತವಾಗಿರಬೇಕು ಅಂದರೆ ನೀವು ಅದನ್ನು ಸ್ವೀಕರಿಸಲು ಸಂಪೂರ್ಣ ತಯಾರಾಗಿರಬೇಕಾಗುತ್ತದೆ. ಹಾಗಾಗಿ ತಾಯಿಯಾಗುವುದಕ್ಕೆ ಒಂದಷ್ಟು ಪೂರ್ವ ತಯಾರಿಗಳ ಅಗತ್ಯವಿರುತ್ತೆ. ಆ ತಯಾರಿ ಸರಿಯಾಗಿದ್ದಲ್ಲಿ ನಿಮ್ಮ ಮಗು ಸಾಕಷ್ಟು ಸುರಕ್ಷಿತವಾಗಿ ನಿಮ್ಮ ತೋಳನ್ನು ಸೇರಲು ಅನುಕೂಲವಾಗುತ್ತೆ.

  ತಾಯಿಯಾಗುವ ಸಂದರ್ಭವೆಂದರೆ ಅದು ಸಾಮಾನ್ಯ ದಿನಗಳಲ್ಲ. ಕೇವಲ ಭಾವನಾತ್ಮಕ ಏರುಪೇರುಗಳು ಮಾತ್ರ ಈ ದಿನಗಳಲ್ಲಿ ಸಂಭವಿಸುವುದಿಲ್ಲ. ಬದಲಾಗಿ ಹಾರ್ಮೋನಿನಲ್ಲಿ ಆಗುವ ಬದಲಾವಣೆಗಳು ನಿಮ್ಮ ದೇಹದಲ್ಲಿ ಅನೇಕ ವ್ಯತ್ಯಾಸಗಳಿಗೆ ಕಾರಣವಾಗಬಲ್ಲದು. ಕೆಲವೊಂದು ಬಹಳ ವಿಚಿತ್ರವಾಗಿರುತ್ತೆ ಮತ್ತು ನೀವಿದನ್ನು ಹಿಂದೆಂದೂ ಯಾರಿಂದಲೂ ಕೇಳಿಲ್ಲದೆಯೂ ಇರಬಹುದು.

  ನಿಮ್ಮೊಳಗೆಯೇ ಇನ್ನೊಂದು ಜೀವಕ್ಕೆ ಜನ್ಮ ನೀಡುವಂತಹ ಅನುಭವ ಅನನ್ಯವಾಗಿದ್ದು ಅದಕ್ಕೆ ಯಾವುದೇ ಪರಿಧಿಯನ್ನು ನೀಡಲಾಗುವುದಿಲ್ಲ. ಹೆಣ್ಣು ಈ ಸಂದರ್ಭದಲ್ಲಿ ತಾಯ್ತನದ ಕ್ಷಣವನ್ನು ಆನಂದದಿಂದ ಅನುಭವಿಸುತ್ತಾಳೆ ಮತ್ತು ಆಕೆಗೆ ಇದಕ್ಕಿಂತ ಖುಷಿ ಕೊಡುವ ಸಂಗತಿ ಬೇರಾವುದೂ ಇರುವುದಿಲ್ಲ. ಒಂಭತ್ತು ತಿಂಗಳು ತನ್ನದೇ ಕುಡಿಯನ್ನು ತಮ್ಮ ಉದರದಲ್ಲಿ ಹೊತ್ತುಕೊಂಡು ಆ ಸಂದರ್ಭದಲ್ಲಿ ಅನುಭವಿಸಬೇಕಾದ ಮಾನಸಿಕ ಬೇಗುದಿಗಳನ್ನು ಸಹಿಸಿಕೊಂಡು ಒಂಭತ್ತನೆಯ ತಿಂಗಳಿಗೆ ಜೀವವನ್ನು ರೂಪಿಸುವ ಈ ಹಂತವನ್ನು ಹೆಣ್ಣಿನ ಮರುಜನ್ಮ ಎಂದು ಕರೆಯಲಾಗುತ್ತದೆ.

  ನೀವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದಂತೆ ಕೆಲವೊಂದು ಬದಲಾವಣೆ ಹಾಗೂ ಮಾರ್ಪಾಡುಗಳನ್ನು ನಿಮ್ಮ ದೇಹ ಒಳಗೊಳ್ಳುತ್ತದೆ. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ಬದಲಾವಣೆಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಬೇಕಾಗುತ್ತದೆ. ನಿಸರ್ಗದ ಕೊಡುಗೆಯೆನಿಸಿದ ತಾಯಿಯಾಗುವ ಅತ್ಯಂತ ಅಮೂಲ್ಯವಾದ ಕ್ಷಣವನ್ನು ಅನ್ನುಭವಿಸಲು ಪ್ರತಿಯೊಬ್ಬ ಮಹಿಳೆಯೂ ಕೂಡ ಬಯಸುವುದು ಸಹಜವಾದುದು. ಹಾಗೆ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ತಾಯಿಯಾಗುವ ಅನುಭವವನ್ನು ಹೊಂದುವ ಈ ಪ್ರಕ್ರಿಯೆಯಲ್ಲಿ ಮಹಿಳೆ ಅದೆಷ್ಟೋ ಕಷ್ಟಗಳನ್ನನುಭವಿಸುತ್ತಾಳೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗಳಿಗೊಳಪಡುವ ಗರ್ಭಿಣಿಯರು ತಮ್ಮೊಳಗೆ ಇನ್ನೊಂದು ಜೀವವನ್ನು ಸಲಹಿ-ಪೋಷಿಸಿ ಅದನ್ನು ಭೂಮಿಗೆ ತರುವಂತಹ ಕಾರ್ಯವನ್ನು ಮಾಡುತ್ತಾಳೆ.

  ಅದಾಗ್ಯೂ ನಿಮ್ಮ ಸ್ನೇಹಿತೆ, ಸಹೋದರಿಯರು ಗರ್ಭಿಣಿಯಾಗಿದ್ದಾಗ ನಿಮಗೂ ಈ ರೀತಿಯ ಅನುಭೂತಿ ಉಂಟಾಗಬೇಕು ಎಂದಾಗಿ ನೀವು ಬಯಸುತ್ತೀರಿ. ಹೀಗೆ ನಿಮ್ಮಲ್ಲೂ ತಾಯ್ತನದ ಸಂತಸ ಕುಡಿಯೊಡೆಯುತ್ತದೆ. ಮನೆಯವರು ಬೇಕಾದಷ್ಟು ಸಲಹೆಗಳನ್ನು ಸೂಚನೆಗಳನ್ನು ಈ ಸಮಯದಲ್ಲಿ ನಿಮಗೆ ನೀಡಬಹುದು. ಅದಲ್ಲದೆ ತಾಯಿಯಾಗಿದ್ದಾಗ ಈ ಕುರಿತು ಕೆಲವೊಂದು ಲೇಖನಗಳನ್ನು ನೀವು ಓದಿ ಈ ಮಹತ್ತರ ಕಾರ್ಯದ ಬಗ್ಗೆ ಮಾಹಿತಿಗಳನ್ನು ಕಲೆಹಾಕಬಹುದಾಗಿದೆ. ಅದಾಗ್ಯೂ ಗರ್ಭಾವಸ್ಥೆಯಲ್ಲಿ ಕೆಲವೊಂದು ವಿಷಯಗಳ ಮಹತ್ವತೆಯನ್ನು ನೀವು ತಿಳಿಯಬೇಕಾಗಿದ್ದು ಇದನ್ನು ಯಾರೂ ನಿಮಗೆ ತಿಳಿಸುವುದಿಲ್ಲ. ಇಂದಿನ ಲೇಖನದಲ್ಲಿ ಆ ಸೂಚನೆಗಳನ್ನು ನಾವು ನೀಡುತ್ತಿದ್ದು ಇದರಿಂದ ಗರ್ಭಾವಸ್ಥೆಯ ಕುರಿತು ಮತ್ತಷ್ಟು ಅಂಶಗಳನ್ನು ಮನನ ಮಾಡಿಕೊಳ್ಳಬಹುದಾಗಿದೆ.

  ಹೆರಿಗೆ ಕೊಠಡೊಯಲ್ಲಿ ನೀವು ಮಲವಿಸರ್ಜಿಸಬಹುದು

  ಹೆರಿಗೆ ಕೊಠಡೊಯಲ್ಲಿ ನೀವು ಮಲವಿಸರ್ಜಿಸಬಹುದು

  ನೀವು ನೈಸರ್ಗಿಕ ಹೆರಿಗೆಗೆ ಒಳಗಾಗುತ್ತೀರಿ ಎಂದಾದಲ್ಲಿ ಈ ಸಮಯದಲ್ಲಿ ತಳ್ಳುವಿಕೆಯನ್ನು ನೀವು ಮಾಡಬೇಕಾಗುತ್ತದೆ. ಈ ತಳ್ಳುವಿಕೆಯಿಂದ ಮಲವಿಸರ್ಜನೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಹೀಗಿದ್ದಾಗ ಮಗುವಿನ ಬದಲು ಮಲ ಬರುತ್ತದೆ. ಈ ಸಮಯದಲ್ಲಿ ದಾದಿ ಇಲ್ಲವೇ ವೈದ್ಯರು ಅಸಹ್ಯ ಪಟ್ಟುಕೊಳ್ಳುವುದಿಲ್ಲ. ಏಕೆಂದರೆ ಇದೊಂದು ನೈಸರ್ಗಿಕ ಕ್ರಿಯೆಯಾಗಿದೆ. ಇದರಿಂದ ಅವರು ಏನೂ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸಬಹುದು.

  ನಿಮ್ಮ ಮಗುವನ್ನು ವ್ಯಾಕ್ಯೂಮ್ ಮಾಡಬಹುದು

  ನಿಮ್ಮ ಮಗುವನ್ನು ವ್ಯಾಕ್ಯೂಮ್ ಮಾಡಬಹುದು

  ನಿಮ್ಮ ಮಲಗುವ ಕೋಣೆಯಲ್ಲಿ ಕೊಳಕನ್ನು ನಿರ್ಮೂಲನೆ ಮಾಡಲು ವಾಕ್ಯೂಮ್ ಅನ್ನು ಹೇಗೆ ಬಳಸುತ್ತಾರೋ ಅದೇ ರೀತಿ ನಿಮ್ಮ ಮಗುವಿನ ಸುತ್ತ ಇರುವ ಕೊಳಕನ್ನು ನಿವಾರಿಸಲು ವೈದ್ಯರು ವಾಕ್ಯೂಮ್ ಅನ್ನು ಬಳಸಬಹುದು. ನೀವು ಥೈರಾಯ್ಡ್, ಹೆಚ್ಚು ರಕ್ತದೊತ್ತಡದಿಂದ ನೀವು ಬಳಲುತ್ತಿದ್ದರೆ ದೂಡುವಿಕೆಯಿಂದ ನೀವು ಆಯಾಸಗೊಳ್ಳಬಹುದು ಮತ್ತು ತಾಯಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆ ಸಮಯದಲ್ಲಿ ವೈದ್ಯರು ವ್ಯಾಕ್ಯೂಮ್ ಮೂಲಕ ಮಗುವನ್ನು ಗರ್ಭದಿಂದ ಹೊರತೆಗೆಯಲು ನಿರ್ಧರಿಸುತ್ತಾರೆ.

  ನೀರಿನ ಸೋರಿಕೆ

  ನೀರಿನ ಸೋರಿಕೆ

  ನಿಮ್ಮ ಹೆರಿಗೆಯ ಮೊದಲು ನಿಮ್ಮ ಮಗುವಿನ ರಕ್ಷಣೆಯನ್ನು ಮಾಡುತ್ತಿದ್ದ ಅಮ್ನಿಯೋಟಿಕ್ ದ್ರವ ಸ್ಫೋಟಗೊಳ್ಳುತ್ತದೆ. ಇದನ್ನೇ ನೀರಿನ ಸೋರಿಕೆ ಅಥವಾ ವಾಟರ್ ಬ್ರೇಕಿಂಗ್ ಎಂದು ಕರೆಯಲಾಗುತ್ತದೆ. ಈ ಕ್ರಿಯೆಯು ದಿನಪೂರ್ತಿ ನಡೆಯುವ ಸಂಭವ ಇರುತ್ತದೆ. ನೀವು ಈ ಸಮಯದಲ್ಲಿ ಪ್ಯಾಡ್‌ಗಳ ಬಳಕೆಯನ್ನು ಮಾಡಬಹುದಾಗಿದೆ.

  ಹೆಚ್ಚು ಪ್ಯಾಡ್‌ಗಳ ಬಳಕೆ

  ಹೆಚ್ಚು ಪ್ಯಾಡ್‌ಗಳ ಬಳಕೆ

  ಒಂಭತ್ತು ತಿಂಗಳ ಗರ್ಭಾವಸ್ಥೆಯಲ್ಲಿ ನೀವು ಋತುಸ್ರಾವಕ್ಕೆ ಒಳಗಾಗದೇ ಇದ್ದರೂ ಹೆರಿಗೆಯ ನಂತರ ಒಂಭತ್ತು ತಿಂಗಳ ಋತುಸ್ರಾವದ ಹರಿವಿಗೆ ನೀವು ಒಳಗಾಗುವ ಸಾಧ್ಯತೆ ಇರುತ್ತದೆ. ಹೆರಿಗೆಯ ನಂತರ ಕೆಲವು ವಾರಗಳವರೆಗೆ ಈ ರಕ್ತಸ್ರಾವ ನಿರಂತರವಾಗಿರುತ್ತದೆ. ಹೆಚ್ಚು ಪ್ಯಾಡ್‌ಗಳ ಬಳಕೆಯನ್ನು ನೀವು ಈ ಸಮಯದಲ್ಲಿ ಮಾಡಬೇಕಾಗುತ್ತದೆ. ಸೆಳೆತ ಮೊದಲಾದ ಋತುಸ್ರಾವದ ನೋವುಗಳಿಗೆ ನೀವು ಒಳಗಾಗಬಹುದು.

  ನೋವು

  ನೋವು

  ಹೆರಿಗೆಯ ಸಮಯದಲ್ಲಿ ನೀವು ಅನುಭವಿಸುವ ನೋವನ್ನು ಬಹುಶಃ ಪ್ರತಿಯೊಬ್ಬರೂ ಹೇಳುತ್ತಾರೆ. ಬರಿಯ ಹೊಟ್ಟೆಯಲ್ಲಿ ಮಾತ್ರವೇ ಈ ನೋವು ಬರದೇ ನಿಮ್ಮ ಹಿಂಭಾಗವನ್ನು ಇದು ತಲುಪಬಹುದು. ಕೆಳಹೊಟ್ಟೆಯನ್ನು ಪ್ರವೇಶಿಸಬಹುದು. ಈ ನೋವು ನಿಮಗೇ ಬೇಡದೇ ಇದ್ದಲ್ಲಿ ಮತ್ತು ಆರೋಗ್ಯವಂತ ಮಗುವನ್ನು ನೀವು ಹೊಂದಬೇಕು ಎಂದಾದಲ್ಲಿ ಎಪಿಡ್ಯೂರಲ್ ಬಗ್ಗೆ ನಿಮ್ಮ ವೈದ್ಯರಲ್ಲಿ ನೀವು ಮಾತನಾಡಬಹುದು.

  ಸ್ಕ್ವಿರ್ಟ್ ಬಾಟಲ್ಸ್

  ಸ್ಕ್ವಿರ್ಟ್ ಬಾಟಲ್ಸ್

  ನಿಮ್ಮ ಹೆರಿಗೆಯ ನಂತರ ಕೆಲವು ವಾರದವರೆಗೆ ಈ ಬಾಟಲಿಗಳನ್ನು ನೀವು ಬಳಸಬೇಕಾಗುತ್ತದೆ. ಈ ಬಾಟಲಿಗಳ ಉದ್ದೇಶ ಬೆಚ್ಚಗಿನ ನೀರನ್ನು ಹೊರಹಾಕುವುದಾಗಿದೆ. ಇದು ನಿಮಗೆ ಉತ್ತಮ ಸೌಕರ್ಯವನ್ನು ಒದಗಿಸುತ್ತದೆ ಮತ್ತು ನಿತ್ಯ ಕರ್ಮಗಳನ್ನು ಮಾಡುವಾಗ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಶಸ್ತ್ರಕ್ರಿಯೆಯ ನಂತರ ಹಾಕಿರುವ ಹೊಲಿಗೆಗಳಿಂದ ಕಿರಿಕಿರಿಯುಂಟಾಗುವುದಿಲ್ಲ.

  ಕೂದಲು ಉದುರುವಿಕೆ

  ಕೂದಲು ಉದುರುವಿಕೆ

  ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನೀವು ಉತ್ತಮ ಕೂದಲನ್ನು ಹೊಂದಿದ್ದರೆ ಮತ್ತು ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಂಡಿದ್ದರೆ ಹೆರಿಗೆಯ ನಂತರ ಕೂದಲು ಮತ್ತು ತ್ವಚೆ ಕಳೆಗುಂದಲು ಆರಂಭಿಸುತ್ತದೆ. ದೇಹದಲ್ಲಾಗುವ ಬದಲಾವಣೆಗಳಿಂದ ಈ ಅತ್ಯಧಿಕ ಮಟ್ಟದ ಕೂದಲು ಉದುರುವಿಕೆ ಸಂಭವಿಸುತ್ತದೆ. ಅಂತೆಯೇ ಹಲವಾರು ತ್ವಚೆಗೆ ಸಂಬಂಧಿಸಿರುವ ಪರಿಣಾಮಗಳಿಗೂ ನೀವು ಒಳಗಾಗಬಹುದು. ಇದು ಹಲವಾರು ತಿಂಗಳವರೆಗೆ ನಿಮ್ಮನ್ನು ಕಾಡಬಹುದು.

   ರಾತ್ರಿ ಸಮಯದಲ್ಲಿ ಬೆವರುವುದು

  ರಾತ್ರಿ ಸಮಯದಲ್ಲಿ ಬೆವರುವುದು

  ಪ್ರಥಮ ಕೆಲವು ವಾರಗಳವರೆಗೆ ರಾತ್ರಿ ಸಮಯದಲ್ಲಿ ಬೆವರುವುದು ಉಂಟಾಗುತ್ತದೆ. ಇದಕ್ಕಾಗಿ ಹೆದರುವುದು ಬೇಕಾಗಿಲ್ಲ. ಈ ಬೆವರುವಿಕೆಯಿಂದ ನೀವು ರಾತ್ರಿ ಸಮಯದಲ್ಲಿ ಆಗಾಗ ಎಚ್ಚರಗೊಳ್ಳಬಹುದು. ನಿಮಗೆ ಜ್ವರ ಬಂದು ಇದೀಗ ಅದು ಬಿಡುತ್ತಿರಬಹುದು ಎಂಬ ಅನುಭವ ಕೂಡ ನಿಮ್ಮಲ್ಲಿ ಉಂಟಾಗಬಹುದು. ಹೆರಿಗೆಯ ನಂತರ ನಿಮ್ಮನ್ನು ಕಾಡುವ ಸಹಜ ಬೆವರುವಿಕೆ ಇದಾಗಿದೆ. ನಿಮ್ಮ ಹೊದಿಕೆಯನ್ನು ಬದಲಾಯಿಸುವುದು ಅಥವಾ ಎಸಿಯ ತಾಪಮಾನ ಹೆಚ್ಚಿಸುವುದನ್ನು ನೀವು ಮಾಡಬಹುದು.

  ತಾಯೊಯ ಡೈಪರ್

  ತಾಯೊಯ ಡೈಪರ್

  ಹೆರಿಗೆಯ ನಂತರ ನೀವು ಋತುಸ್ರಾವಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಯಾವಾಗಲೂ ಡೈಪರ್ ಬಳಕೆಯನ್ನು ಮಾಡಿ. ನಿತ್ಯವೂ ಬಳಸುವ ಪ್ಯಾಡ್‌ಗಳ ಬದಲಿಗೆ ತಾಯಂದಿರಿಗಾಗಿ ಇರುವ ವಿಶೇಷ ಪ್ಯಾಡ್‌ಗಳನ್ನು ಬಳಸಿ. ಇದು ದಪ್ಪನೆಯ ಐಸಿ ಕಾಟನ್ ಅನ್ನು ಒಳಭಾಗದಲ್ಲಿ ಹೊಂದಿರುತ್ತದೆ. ನಿಮಗೆ ಇದು ಆರಾಮದಾಯಕವನ್ನು ನೀಡುತ್ತದೆ. ಇದರಿಂದ ನಿಮ್ಮ ಮಗುವಿನೆಡೆಗೂ ನೀವು ಗಮನವನ್ನು ಹರಿಸಬಹುದಾಗಿದೆ.

  ಊದಿಕೊಂಡಿರುವ ಪಾದಗಳು

  ಊದಿಕೊಂಡಿರುವ ಪಾದಗಳು

  ಊದಿಕೊಂಡಿರುವ ಪಾದಗಳು ಗರ್ಭಾವಸ್ಥೆಯಲ್ಲಿ ಸಹಜವಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಈ ಊದುವಿಕೆ ಗಂಭೀರವಾಗಿರುತ್ತದೆ. ಹೆರಿಗೆಯ ನಂತರ ಈ ಊದುವಿಕೆ ಕಡಿಮೆಯಾಗುವುದಿಲ್ಲ. ಸ್ವಲ್ಪ ಊದುವಿಕೆ ಪಾದಗಳಲ್ಲಿ ಹಾಗೆಯೇ ಇರುತ್ತದೆ. ಈ ಸಮಯದಲ್ಲಿ ಸಾಕಷ್ಟು ವಿಶ್ರಾಂತಿಯನ್ನು ತಾಯಿಯು ತೆಗೆದುಕೊಳ್ಳಬೇಕಾಗುತ್ತದೆ. ನಂತರ ಸ್ವಲ್ಪ ದಿನಗಳ ನಂತರ ಸರಿಹೋಗುತ್ತದೆ.

  English summary

  What No One Told You About Pregnancy

  The wide variety of news, health articles and other details that were available to you and the thorough research on your part ensured that you were a pregnancy-know-all. Yet, as your pregnancy progressed, you realized that there were things that no one told you about. In order to prevent such a thing from happening to anyone else, we bring to you a list of 10 things that no one usually talks about in a pregnancy.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more