For Quick Alerts
ALLOW NOTIFICATIONS  
For Daily Alerts

ಗರ್ಭಪಾತ ಮಾಡಿಸುವ ಮುನ್ನ ತಿಳಿದಿರಬೇಕಾದ 5 ಸತ್ಯಗಳು.

|

ಗರ್ಭಧಾರಣೆ ಹಾಗೂ ಅದರ ಸುಂದರ ಅನುಭವವು ಮಹಿಳೆಗೆ ಪರಿಪೂರ್ಣತೆಯ ಭಾವವನ್ನು ನೀಡುವುದು. ಆದರೆ ಇಂದು ಅದೆಷ್ಟೋ ಜನರು ತಾಯ್ತನದ ಅನುಭವವನ್ನು ಅನುಭವಿಸುವ ಮುನ್ನವೇ ಗರ್ಭಪಾತ ಮಾಡಿಸುತ್ತಿದ್ದಾರೆ. ಹೆಣ್ಣು ಮಗು ಎನ್ನುವ ದೃಷ್ಟಿಯಿಂದ ಅಥವಾ ತಮ್ಮ ಅನಾನುಕೂಲದ ಪರಿಸ್ಥಿತಿ ಎನ್ನುವ ಕಾರಣದಿಂದಾಗಿ ಗರ್ಭಪಾತವು ನಡೆಯುತ್ತಿವೆ. ಅನೇಕ ಹುಡುಗಿಯರು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಹಾಗೂ ಅವುಗಳ ಗರ್ಭಪಾತಕ್ಕೆ ಮುಂದಾಗುವ ಸನ್ನಿವೇಶಗಳು ಹೆಚ್ಚುತ್ತಿವೆ ಎಂದು ಹೆಳಲಾಗುತ್ತಿದೆ.

ಗರ್ಭಪಾತ ಮಾಡುವುದು ನಮ್ಮ ದೇಶದಲ್ಲಿ ಕಾನೂನು ಪ್ರಕಾರ ಅಪರಾಧ. ಗರ್ಭಪಾತ ಮಾಡಿಸುತ್ತಿರುವುದು ಬೆಳಕಿಗೆ ಬಂದರೆ ಶಿಕ್ಷೆಗೆ ಒಳಗಾಗಬೇಕಾಗುವುದು. ಆದರೂ ಇಂದು ಎಗ್ಗಿಲ್ಲದೆ ಮರೆಯಲ್ಲಿ ವಿಪರೀತದವಾದ ಗರ್ಭಪಾತಗಳು ನಡೆಯುತ್ತಲೇ ಇವೆ. ಗರ್ಭಪಾತ ಎನ್ನುವುದನ್ನು ಏಕೆ ಮಾಡಿಸಬಾರದು? ಅದರ ಪರಿಣಾಮ ತಾಯಿಯ ಮೇಲೆ ಹೇಗಿರುತ್ತದೆ? ಕಾನೂನು ಪ್ರಕಾರ ಅದು ಏಕೆ ಅಪರಾಧ? ಎನ್ನುವಂತದ ಅನೇಕ ವಿಚಾರಗಳು ಬಹಳಷ್ಟು ಮಂದಿಗೆ ತಿಳಿದಿಲ್ಲ.

ನಿಜ, ಇಂದು ಮಹಿಳೆ ಗರ್ಭಧಾರಣೆ, ಗರ್ಭಪಾತ, ಅದರ ಹಿಂದಿರುವ ಕಾನೂನು ಹಾಗೂ ತನ್ನ ದೇಹದಲ್ಲಾಗುವ ಬದಲಾವಣೆ ಸೇರಿದಂತೆ ಅನೇಕ ಪ್ರಮುಖ ವಿಚಾರವನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಕುರಿತು ನಿಮ್ಮಲ್ಲೂ ಕೆಲವುಗೊಂದಲಗಳು ಹಾಗೂ ಪ್ರಶ್ನೆಗಳು ಉಳಿದುಕೊಂಡಿವೆ ಎಂದಾದರೆ ಈ ಮುಂದೆ ಬೋಲ್ಡ್ ಸ್ಕೈ ವಿವರಿಸಿರುವ ಕೆಲವು ವಿವರಣೆಯನ್ನು ಅರಿಯಿರಿ...

ಗರ್ಭಪಾತದ ಅಂಕಿ ಅಂಶ:

ಗರ್ಭಪಾತದ ಅಂಕಿ ಅಂಶ:

ವಿವಿಧ ಕಾರಣಗಳಿಂದ ಇಂದು ಅನೇಕರು ಗರ್ಭಪಾತದ ಮೊರೆ ಹೂಗುತ್ತಿದ್ದಾರೆ. ಕೆಲವು ಅಧ್ಯಯನ ಹಾಗೂ ಸಂಶೋಧನೆಯ ಪ್ರಕಾರ ಶೇ.6.4 ದಶಲಕ್ಷದಷ್ಟು ಗರ್ಭಪಾತಗಳು ನಡೆಯುತ್ತವೆ. ಶೇ.3.6 ಮಿಲಿಯನ್ ಗರ್ಭಪಾತಗಳು ಅಸುರಕ್ಷಿತ ಎನ್ನುವ ಕಾರಣಕ್ಕೆ ಸಂಭವಿಸುತ್ತದೆ. ಈ ಅಸುರಕ್ಷಿತ ಗರ್ಭಪಾತದಡಿಯಲ್ಲಿ ನಮ್ಮ ದೇಶದಲ್ಲಿ ಪ್ರತಿಶತ 13 ತಾಯಂದಿರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಲಾಗುವುದು. ಹಾಗಾಗಿಯೇ ವಿಶ್ವ ತಾಯಂದಿರ ದಿನದ ಪ್ರಯುಕ್ತ ಮಹಿಳೆಯರಿಗೆ ಕೆಲವು ಅರಿವನ್ನು ಮೂಡಿಸುವ ಪ್ರಯತ್ನ ಬೋಲ್ಡ್ ಸ್ಕೈದಾಗಿದೆ.

ಕಾನೂನು ಪ್ರಕಾರ:

ಕಾನೂನು ಪ್ರಕಾರ:

ಮೊದಲು ಗರ್ಭಪಾತ ಎನ್ನುವುದಕ್ಕೆ ಕಾನೂನಿನ ಯಾವುದೇ ನಿರ್ಬಂಧ ಇರಲಿಲ್ಲ. ಈ ಹಿನ್ನೆಲೆಯಲ್ಲಿಯೇ ಅನೇಕರು ಹೆಣ್ಣುಮಗು ಎನ್ನುವ ಕಾರಣಕ್ಕೆ ಗರ್ಭಪಾತ ಮಾಡಿಸಲು ಮುಂದಾದರು. ಈ ಕ್ರಮವನ್ನು ತಡೆಯುವ ಕಾರಣಕ್ಕೆ ನಮ್ಮ ದೇಶದಲ್ಲಿ ಗರ್ಭಪಾತವನ್ನು ಕಾನೂನಾತ್ಮಕವಾಗಿ ಅಪರಾಧ ಎಂದು ಪರಿಗಣಿಸಲಾಗಿದೆ. ಆದರೂ ಕೆಲವು ಕಾರಣಗಳಿಗೆ ವಿನಾಯತಿ ನೀಡುವ ಮೂಲಕ ಗರ್ಭಪಾತ ಮಾಡಿಸಬಹುದಾಗಿದೆ.

- ಗರ್ಭಧಾರಣೆಯ ಮುಂದುವರಿಕೆಯಿಂದ ತಾಯಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾಗುತ್ತಿದ್ದರೆ,

- ಭ್ರೂಣವು ತೀವ್ರತರದ ಅಸಹಜತೆ ಹೊಂದಿದ್ದರೆ,

- ಗರ್ಭನಿರೋಧಕದ ವಿಫಲತೆಯಿಂದ ಗರ್ಭಧಾರಣೆ ಸಂಭವಿಸಿದರೆ (ವಿವಾಹಿತ ಮಹಿಳೆಯರಿಗೆ ಮಾತ್ರ ಅನ್ವಯಿಸುತ್ತದೆ)

- ಆಕ್ರಮಣ ಅಥವಾ ಅತ್ಯಾಚಾರದ ಮೂಲಕ ಗರ್ಭಧಾರಣೆಯಾಗಿದ್ದರೆ, ಹೀಗೆ ನಾಲ್ಕು ಕಾರಣಗಳಲ್ಲಿ ಯಾವುದಾದರೂ ಸಂಭವಿಸಿದರೆ ಗರ್ಭಪಾತಕ್ಕೆ ಅನುಮತಿ ದೊರೆಯುವುದು.

ನೀವು ನಿರ್ಧರಿಸುವಂತಿಲ್ಲ:

ನೀವು ನಿರ್ಧರಿಸುವಂತಿಲ್ಲ:

ಗರ್ಭಧಾರಣೆಯಾದ ನಂತರ ಮಹಿಳೆಯೊಬ್ಬಳೇ ತನ್ನ ಗರ್ಭಪಾತದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅದಕ್ಕೆ ಸೂಕ್ತ ಕಾರಣ ಹಾಗೂ ಪತಿ-ಪತ್ನಿ ಇಬ್ಬರ ಸಮ್ಮತಿ ಅಗತ್ಯವಿರುತ್ತದೆ. ಜೊತೆಗೆ ಗರ್ಭಪಾತಕ್ಕೆ ಒಪ್ಪಿಗೆಯನ್ನು ವೈದ್ಯರು ಸಹ ನೀಡಬೇಕಾಗುತ್ತದೆ. 12 ವಾರದೊಳಗಿನ ಗರ್ಭಧಾರಣೆಯಾಗಿದ್ದರೆ ಒಬ್ಬ ವೈದ್ಯರು ಗರ್ಭಪಾತ ಮಾಡಿಸಬಹುದು. ಅದೇ 12 ರಿಂದ 20 ವಾರದೊಳಗಿನ ಗರ್ಭಾವಸ್ಥೆಯಾಗಿದ್ದರೆ ಗರ್ಭಪಾತಕ್ಕೆ ಎರಡು ವೈದ್ಯರ ಅಗತ್ಯವಿರುತ್ತದೆ. ಎಮ್ ಟಿ ಪಿ ಆಕ್ಟ್ ನ ಅನ್ವಯದಡಿಯಲ್ಲಿ ವಯಸ್ಕ ಮಹಿಳೆಯು ತನ್ನ ನಿರ್ಧಾರವನ್ನು ಸ್ವಾಯತ್ತತೆಯಿಂದ ನಿರ್ಧರಿಸಬಹುದು.

ಗೌಪ್ಯತೆಯ ಹಕ್ಕು :

ಗೌಪ್ಯತೆಯ ಹಕ್ಕು :

ನಿಜ, ಬೆಂಚ್ಮಾರ್ಕ್ ತೀರ್ಪಿನಲ್ಲಿ, ಭಾರತದ ಸುಪ್ರೀಂ ಕೋರ್ಟ್ "ಮಹಿಳೆ ಗರ್ಭಧಾರಣೆ ಹೊಂದುವುದು, ಗರ್ಭಧಾರಣೆಯನ್ನು ಸ್ಥಗಿತಗೊಳಿಸುವುದು ಅವಳ ವೈಯಕ್ತಿಕ ವಿಚಾರ ಹಾಗೂ ಸ್ವಾತಂತ್ರ್ಯ ಎಂದು ಹೇಳಿದೆ."

ಸರ್ವೆಯ ಪ್ರಕಾರ:

ಸರ್ವೆಯ ಪ್ರಕಾರ:

ಇತ್ತೀಚೆಗೆ ಟೈಮ್ಸ್ ಹೆಲ್ತ್ ಸಮೀಕ್ಷೆಯೊಂದನ್ನು ನಡೆಸಿತು. ಈ ಸಮೀಕ್ಷೆಯಲ್ಲಿ ಮಹಿಳೆಯರು ಗರ್ಭಪಾತವನ್ನು ಹೇಗೆ ಪರಿಗಣಿಸುತ್ತಾರೆ? ಅವರ ನಿಲುವೇನು? ಎನ್ನುವುದನ್ನು ಅರಿಯುವುದಾಗಿತ್ತು. ಅವರ ಸರ್ವೆಯ ಪ್ರಕಾರ. ಶೇ. 80ಕ್ಕಿಂತಲೂ ಹೆಚ್ಚಿನ ಮಹಿಳೆಯರು ಗರ್ಭಪಾತದ ಹಕ್ಕಿನ ಸ್ವಾತಂತ್ರ್ಯ ಹಾಗೂ ನಿರ್ಧಾರ ಕೈಗೊಳ್ಳುವ ಹಕ್ಕನ್ನು ನೀಡಬೇಕು ಎಂದು ಹೇಳಿದ್ದಾರೆ. ಶೇ.ರಷ್ಟು ಮಹಿಳೆಯರು ಇದನ್ನು ತಿರಸ್ಕರಿಸಿದರು ಜೊತೆಗೆ ಯಾವುದೇ ಬಗೆಯಲ್ಲೂ ಒಪ್ಪಿಗೆಯನ್ನು ನೀಡಿಲ್ಲ. ಶೇ. 8.6 ರಷ್ಟು ಮಹಿಳೆಯರು ಗರ್ಭಪಾತದ ವಿರುದ್ಧವಾಗಿ ಮಾತನಾಡಿದರು.

ಸಮಸ್ಯೆಗಳು:

ಸಮಸ್ಯೆಗಳು:

ಭಾರತದಲ್ಲಿ ಕಾನೂನು ಎನ್ನುವುದು ಧಾರ್ಮಿಕ ನಂಬಿಕೆ ಅಥವಾ ಚಿಂತನೆಗಳನ್ನು ಒಳಗೊಂಡಿದೆ. ಆಯ್ಕೆ ಎನ್ನುವ ಕಲ್ಪನೆಯನ್ನು ಸಂಪೂರ್ಣವಾಗಿ ದೂರ ಇರಿಸಲಾಗಿದೆ. ಉದಾರವಾದಿ ಕಾಯ್ದೆಯು ಗರ್ಭಪಾತಕ್ಕೆ ಸಕಾರಾತ್ಮಕ ಕಾರಣಗಳಿಗೆ ಮಾನ್ಯಗೊಳಿಸಿದೆ. ಅಲ್ಲದೆ ಕೆಲವು ಅರ್ಹತೆಯನ್ನು ಪಡೆದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಿದೆ. ಮಹಿಳೆಯರು ಇಂದಿಗೂ ತಮ್ಮ ಗರ್ಭಪಾತದ ಬಗ್ಗೆ ಸೂಕ್ತ ಹಕ್ಕು ಹಾಗೂ ಅಧಿಕಾರವನ್ನು ಹೊಂದಿರದೆ ಇರುವುದು ಕಾರಣವಾಗಿದೆ.

20 ವಾರದ ನಿಗದಿ ಏಕೆ?

20 ವಾರದ ನಿಗದಿ ಏಕೆ?

ಎಮ್‍ಟಿಪಿ ಕಾಯ್ದೆಯ ಪ್ರಕಾರ ಗರ್ಭಪಾತವನ್ನು 20 ವಾರದೊಳಗೆ ಮಾತ್ರ ನಡೆಸಬಹುದಾಗಿದೆ. ಏಕೆಂದರೆ ಈ ಅವಧಿಯ ಒಳಗೆ ಭ್ರೂಣದ ಲಿಂಗವನ್ನು ಗುರುತಿಸಲು ಸಾಧ್ಯವಿಲ್ಲ. ಭ್ರೂಣದ ಆರೋಗ್ಯ ಸಮಸ್ಯೆ ಇದ್ದರಷ್ಟೆ ಗರ್ಭಪಾತ ಮಾಡಬಹುದಷ್ಟೆ. ಆದರೆ ಇತ್ತೀಚೆಗೆ ಹೊಸ ರಕ್ತ ಪರೀಕ್ಷೆಯ ಮೂಲಕ ಭ್ರೂಣದ ಪತ್ತೆಹಚ್ಚಬಹುದು. ಆಮ್ನಿಯೋಸೆನ್ಟೆಸಿಸ್ ಮೂಲಕ 15 ರಿಂದ 20 ವಾರದ ಒಳಗೆ ನಿರ್ಧರಿಸಬಹುದಾಗಿದೆ.

ಗರ್ಭಪಾತದ ಅವಧಿ 20ನೇ ವಾರಗಳಿಗೆ ನಿಗದಿ ಪಡಿಸಿದರೆ ಏನಾಗುವುದು?

ಗರ್ಭಪಾತದ ಅವಧಿ 20ನೇ ವಾರಗಳಿಗೆ ನಿಗದಿ ಪಡಿಸಿದರೆ ಏನಾಗುವುದು?

20ನೇ ವಾರದ ನಂತರ ಭ್ರೂಣವು ಸಾಕಷ್ಟು ಬೆಳವಣಿಗೆಯನ್ನು ಹೊಂದಿರುತ್ತದೆ. ಅಂತಹ ಸಂದರ್ಭದಲ್ಲಿ ಯಾತಿಯ ಆರೋಗ್ಯದಲ್ಲೂ ಯಾವುದೇ ತೊಂದರೆ ಉಂಟಾಗದು. ಅಂತಹ ನ್ಯೂನತೆ ಇದ್ದರೆ ಮಾತ್ರ ಬೆಳಕಿಗೆ ಬರುವುದು. ಆ ಸಂದರ್ಭದಲ್ಲಿ ಗರ್ಭಪಾತ ಮಾಡಲು ಅನುಮತಿ ಸಮ್ಮತಿಸಬೇಕು. ಆದರೆ ಅಪ್ರಾಪ್ತ ವಯಸ್ಸಿನಲ್ಲಿ ಅತ್ಯಾಚಾರಕ್ಕೆ ಒಳಗಾದವರಿಗೆ ತೊಂದರೆಯನ್ನುಂಟು ಮಾಡುವುದು. ಅಲ್ಲದೆ ಭ್ರೂಣದ ಬೆಳವಣಿಗೆ ಸಾಕಷ್ಟು ಆಗಿದ್ದು, ಆಗ ಅದರಲ್ಲಿರುವ ಆರೋಗ್ಯದ ನ್ಯೂನತೆ ಬೆಳಕಿಗೆ ಬಂದಾಗ ಗರ್ಭಪಾತ ಮಾಡುವುದು ಕೊಂಚ ಗಂಭೀರ ಸಮಸ್ಯೆಯನ್ನು ಸೃಷ್ಟಿಸಬಹುದು.

ಏನು ಮಾಡುವುದು:

ಏನು ಮಾಡುವುದು:

ಗರ್ಭಪಾತದ ಬಗ್ಗೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು. 24 ವಾರಗಳ ತನಕ ಗರ್ಭಪಾತವನ್ನು ನಡೆಸುವುದು ಸುರಕ್ಷಿತ ವಿಧಾನವಾಗಿದೆ. ಇಂದು ಗರ್ಭಪಾತದ ಚಟುವಟಿಕೆ ವಿಪರೀತವಾಗಿದೆ ಎಂದು ವೈದ್ಯರು ಅಭಿಪ್ರಾಯಿಸುತ್ತಾರೆ. ಹಾಗಾಗಿ ಸಮಾಜ ಹಾಗೂ ಕಾನೂನು ದೃಷ್ಟಿಯಿಂದ ಸೂಕ್ತ ಕ್ರಮ ಹಾಗೂ ಕಾನೂನನ್ನು ಕೈಗೊಳ್ಳುವುದು ಅಗತ್ಯವಿದೆ.

English summary

ಗರ್ಭಪಾತ ಮಾಡಿಸುವ ಮುನ್ನ ತಿಳಿದಿರಬೇಕಾದ 5 ಸತ್ಯಗಳು.

pregnancy-parenting/pre-nata
Story first published: Monday, May 21, 2018, 12:26 [IST]
X
Desktop Bottom Promotion