For Quick Alerts
ALLOW NOTIFICATIONS  
For Daily Alerts

ಎದೆ ಹಾಲು ಕುಂದಲು ಕಾರಣಗಳು

|

ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಯಾಗುತ್ತಾ ಹೋಗುವುದು ಎದೆಹಾಲು ಉಣಿಸುವುದರಿಂದ ಎಂದರೆ ತಪ್ಪಾಗಲಾರದು. ನವಜಾತ ಮಗು ಭೂಮಿಗೆ ಬಂದಾಗ ಆಹಾರದ ರೀತಿಯಲ್ಲಿ ಸಂಜೀವಿನಿಯಾಗುವುದು ತಾಯಿಯ ಎದೆಹಾಲು. ಎದೆಹಾಲು ಉಣ್ಣುವ ಮಕ್ಕಳಿಗೆ ಎಂತಹದ್ದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಮಗುವಿಗೆ ಬೇಕಾದ ಪ್ರೀತಿ ಹಾಗೂ ಆರೋಗ್ಯವನ್ನು ತಾಯಿ ತನ್ನ ಎದೆ ಹಾಲು ಉಣಿಸುವುದರ ಮೂಲಕ ಪೋಷಿಸುತ್ತಾಳೆ.

ಮಗು ದಿನದಿಂದ ದಿನಕ್ಕೆ ಬೆಳವಣಿಗೆಯನ್ನು ಕಾಣುತ್ತಾ ವಿಕಸನ ಹೊಂದಲು ತಾಯಿಯ ಎದೆಹಾಲು ಬಹಳ ಪ್ರಮುಖವಾದ್ದು. ಎದೆಹಾಲು ಉಣಿಸುತ್ತಿರುವ ತಾಯಿಯ ಆರೋಗ್ಯದಲ್ಲಿ ಕೊಂಚ ಬದಲಾವಣೆ ಅಥವಾ ಅನಾರೋಗ್ಯ ಉಂಟಾದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ಎದೆಹಾಲು ಉಣಿಸುವ ತಾಯಂದಿರು ತಮ್ಮ ಆರೋಗ್ಯದ ಬಗ್ಗೆಯೂ ಸೂಕ್ತ ಕಾಳಜಿ ವಹಿಸಬೇಕು.

ಎದೆ ಹಾಲು ಕುಂದಲು ಕಾರಣಗಳು

ಮಗು ತಾಯಿಯ ಗರ್ಭದಲ್ಲಿರುವಾಗಲೇ ನೈಸರ್ಗಿಕವಾಗಿ ಎದೆಹಾಲು ಉತ್ಪಾದನೆಗೆ ಬೇಕಾದಂತೆ ತಾಯಿಯ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತಲಿರುತ್ತದೆ. ಹಾಗಾಗಿ ಮಗು ಹುಟ್ಟಿದ ತಕ್ಷಣ ಎದೆ ಹಾಲನ್ನು ಉಣಿಸಲು ತಾಯಿ ಸಿದ್ಧಳಾಗಿರುತ್ತಾಳೆ.

ಆರೋಗ್ಯ ಸಮಸ್ಯೆ ಅಥವಾ ನ್ಯೂನತೆಯ ಕಾರಣದಿಂದಾಗಿ ಕೆಲವು ತಾಯಂದಿರಿಗೆ ಎದೆಹಾಲಿನ ಪ್ರಮಾಣ ಕಡಿಮೆಯಾಗುವುದು ಅಥವಾ ಇಲ್ಲದೆ ಇರುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಮಗು ಪರ್ಯಾಯ ರೂಪದ ಹಾಲನ್ನು ಸೇವಿಸಬೇಕಾಗುವುದು. ಆಗ ಶಿಶು ಅನೇಕ ಬಗೆಯ ಆರೋಗ್ಯ ಸಮಸ್ಯೆಯನ್ನು ಸಹ ಎದುರಿಸಬೇಕಾಗುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ.

ಮಗುವಿನ ಬೆಳವಣಿಗೆಗೆ ಕಾರಣವಾಗುವ ಎದೆಹಾಲು ಕೆಲವು ತಾಯಂದಿರಿಗೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದಕ್ಕೆ ಕಾರಣವೇನು? ಎನ್ನುವ ವಿಚಾರದ ಬಗ್ಗೆ ಬೋಲ್ಡ್ ಸ್ಕೈ ಸೂಕ್ತ ವಿವರಣೆಯೊಂದಿಗೆ ಈ ಮುಂದೆ ವಿವರಿಸಿದೆ...

1. ದುರ್ಬಲ ಗ್ರಂಥಿಗಳ ಅಂಗಾಂಶ:

1. ದುರ್ಬಲ ಗ್ರಂಥಿಗಳ ಅಂಗಾಂಶ:

ಎದೆಹಾಲಿನ ಉತ್ಪಾದನೆಗೆ ಹಲವಾರು ಕಾರಣಗಳು ಪ್ರಮುಖವಾಗಿರುತ್ತವೆ. ಕೆಲವರಲ್ಲಿ ಹಾಲು ಉತ್ಪಾದಿಸುವ ಸಾಕಷ್ಟು ನಾಳಗಳು ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರಿಗೆ ನಾಳಗಳ ಬೆಳವಣಿಗೆಯಾಗುತ್ತಿರುತ್ತವೆ.

ನಂತರ ಇವು ಹಾಲು ಉತ್ಪಾದನೆಗೆ ಉತ್ತೇಜಿಸುತ್ತವೆ. ಸಾಕಷ್ಟು ಪ್ರಮಾಣದ ಗ್ರಂಥಿಗಳು ಇಲ್ಲದಿರುವಾಗ ಹಾಲಿನ ಉತ್ಪಾದನೆ ಕಡಿಮೆ ಮಟ್ಟದಲ್ಲಿ ಇರುತ್ತವೆ.

ಅಂತಹ ಸಂದರ್ಭದಲ್ಲಿ ವೈದ್ಯರಿಂದ ಸೂಕ್ತ ಸಲಹೆ ಹಾಗೂ ತಪಾಸಣೆಗೆ ಒಳಗಾಗಬೇಕು. ಆಗ ಮಗುವಿಗೆ ಅಗತ್ಯವಿರುವಷ್ಟು ಹಾಲಿನ ಉತ್ಪಾದನೆ ಮಾಡಬಹುದು.

2. ಹಾರ್ಮೋನ್ ಸಮಸ್ಯೆ:

2. ಹಾರ್ಮೋನ್ ಸಮಸ್ಯೆ:

ಥೈರಾಯ್ಡ್ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಪಾಲಿಸಿಸ್ಟಿಕ್ ಓವೆರೆಸಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಎದೆಹಾಲು ಉತ್ಪಾದನೆಯಲ್ಲಿ ಕಡಿಮೆ ಪ್ರಮಾಣ ಇರುವುದು. ಜೊತೆಗೆ ಹಾಲುಣಿಸುವ ತೊಟ್ಟುಗಳು ಬಹಳ ಗಡುಸನ್ನು ಹೊಂದಿರುತ್ತವೆ.

ಹಾಗಾಗಿ ಹಾರ್ಮೋನ್‍ಗಳ ನಿಯಂತ್ರಣದಲ್ಲಿಡಲು ಮತ್ತು ಉತ್ತಮ ಹಾಲಿನ ಪ್ರಮಾಣಕ್ಕಾಗಿ ವೈದ್ಯರ ಸಲಹೆಗೆ ಒಳಪಡುವುದು ಉತ್ತಮ.

 3. ಸ್ತನ ಶಸ್ತ್ರ ಚಿಕಿತ್ಸೆ:

3. ಸ್ತನ ಶಸ್ತ್ರ ಚಿಕಿತ್ಸೆ:

ವೈದ್ಯಕೀಯ ಅಥವಾ ಕಾಸ್ಮೆಟಿಕ್ ಕಾರಣಗಳಿಂದಾಗಿ ಎದೆಹಾಲಿನ ಉತ್ಪಾದನೆಯಲ್ಲಿ ತೊಂದರೆ ಅಥವಾ ಪ್ರಮಾಣ ಕಡಿಮೆಯಾಗುವುದು. ಇದೊಂದು ಪರಿಶೀಲಿಸಲೇ ಬೇಕಾದ ಸಮಸ್ಯೆಗಳಾಗಿರುವುದರಿಂದ ವೈದ್ಯರ ತಪಾಸಣೆ ಬಹು ಮುಖ್ಯವಾಗಿರುತ್ತದೆ.

 4. ಜನನ ನಿಯಂತ್ರಣದ ಹಾರ್ಮೋನ್ ಬಳಕೆ:

4. ಜನನ ನಿಯಂತ್ರಣದ ಹಾರ್ಮೋನ್ ಬಳಕೆ:

ಜನನ ನಿಯಂತ್ರಣಕ್ಕೆ ಬಳಸುವ ಹಾರ್ಮೋನ್ ಮಾತ್ರೆಗಳು ಕೆಲವು ಮಹಿಳೆಯರಲ್ಲಿ ಹಾಲು ಉತ್ಪಾದನೆಯ ಮಟ್ಟವನ್ನು ಕಡಿಮೆಗೊಳಿಸುತ್ತವೆ.

ನೀವು ಜನನ ನಿಯಂತ್ರಣಕ್ಕೆ ಬಳಸುತ್ತಿರುವ ಹಾರ್ಮೋನ್ ಇಂಜೆಕ್ಷನ್ ಅಥವಾ ಮಾತ್ರೆಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ವೈದ್ಯರ ಸೂಕ್ತ ಸಲಹೆಯ ಮೇರೆಗೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು.

 5. ಔಷಧಿ ಹಾಗೂ ಗಿಡಮೂಲಿಕೆಗಳ ಸೇವನೆ:

5. ಔಷಧಿ ಹಾಗೂ ಗಿಡಮೂಲಿಕೆಗಳ ಸೇವನೆ:

ಕೆಲವೊಮ್ಮೆ ತಾಯಂದಿರು ಸೇವಿಸುವ ಔಷಧಿಗಳ ಸೇವನೆಯಿಂದಾಗಿ ಎದೆಹಾಲಿನ ಪೂರೈಕೆ ಕಡಿಮೆಯಾಗುತ್ತದೆ. ಔಷಧಗಳಲ್ಲಿರುವ ರಾಸಾಯನಿಕ ಪದಾರ್ಥಗಳು ಇಂತಹ ಸಮಸ್ಯೆಯನ್ನು ಹುಟ್ಟುಹಾಕುತ್ತವೆ.

ಕೆಲವರು ಸೇವಿಸುವ ಗಿಡಮೂಲಿಕೆ ಔಷಧಗಳು ಸಹ ಹಾರ್ಮೋನ್ ಅಥವಾ ಹಾಲು ಉತ್ಪಾದನೆ ಮಾಡುವುದರಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತವೆ. ಅದಕ್ಕಾಗಿಯೇ ತಾಯಿ ಯಾವುದೇ ಔಷಧ ಸ್ವೀಕರಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

6. ಶಿಶುಗಳ ಹೀರುವ ಶಕ್ತಿ:

6. ಶಿಶುಗಳ ಹೀರುವ ಶಕ್ತಿ:

ಮಗು ತನ್ನ ತಾಯಿಯ ಎದೆಹಾಲನ್ನು ಹೇಗೆ ಹೀರಿ ತೆಗೆದುಕೊಳ್ಳುತ್ತದೆಯೋ ಅದರ ಆಧಾರದ ಮೇಲೆ ಹಾಲಿನ ಉತ್ಪಾದನೆ ಹೆಚ್ಚುತ್ತಾ ಹೋಗುತ್ತದೆ. ಹೀರುವ ಪ್ರಕ್ರಿಯೆಯಿಂದ ಸ್ತನವು ಸಂಕುಚಿತಗೊಳ್ಳುತ್ತವೆ. ಜೊತೆಗೆ ಹಾಲು ಉತ್ಪಾದನೆಗೆ ಪ್ರಚೋದಿಸುತ್ತವೆ. ಕೆಲವು ಶಿಶುಗಳು ಹಾಲನ್ನು ಹೀರುವ ಶಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಹೀರುವ ಪ್ರಕ್ರಿಯೆ ತಿಳಿದಿರುವುದಿಲ್ಲ. ಈ ಕಾರಣದಿಂದಲೂ ತಾಯಿಯಲ್ಲಿ ಎದೆಹಾಲಿನ ಪ್ರಮಾಣ ಕಡಿಮೆಯಾಗಿರುತ್ತದೆ.

 7. ರಾತ್ರಿಹೊತ್ತು ಹಾಲುಣಿಸದೆ ಇರುವುದು:

7. ರಾತ್ರಿಹೊತ್ತು ಹಾಲುಣಿಸದೆ ಇರುವುದು:

ಕೆಲವರು ಮಗುವಿಗೆ ರಾತ್ರಿ ಸಮಯದಲ್ಲಿ ಹಾಲುಣಿಸದೆ ಇರುತ್ತಾರೆ. ರಾತ್ರಿ ಹೊತ್ತು ಹಾಲುಣಿಸದೆ ಇದ್ದರೆ ಮಗುವಿನ ತೂಕ ನಿಯಂತ್ರಣದಲ್ಲಿ ಇಡಬಹುದು ಹಾಗೂ ತಾಯಿ ನಿದ್ರಾ ಹೀನತೆಯಿಂದ ದೂರವಾಗಬಹುದು ಎಂದು ಭಾವಿಸುತ್ತಾರೆ.

ಆದರೆ ಈ ವಿಧಾನ ಹಾಲು ಉತ್ಪಾದಿಸುವ ಹಾರ್ಮೋನ್‍ಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಹಾಲು ಉತ್ಪಾದನೆಯು ಕಡಿಮೆಯಾಗುತ್ತದೆ.

 8. ಹಾಲುಣಿಸುವ ಸಮಯ ನಿಗದಿಪಡಿಸುವುದು:

8. ಹಾಲುಣಿಸುವ ಸಮಯ ನಿಗದಿಪಡಿಸುವುದು:

ಎದೆಹಾಲು ಉತ್ಪಾದನೆ ಹೆಚ್ಚಾಗಲು ಎಷ್ಟು ಬಾರಿ ಕಡಿಮೆಯಾಗಿದೆ ಎನ್ನುವುದನ್ನು ಆದರಿಸಿರುತ್ತದೆ. ಎಷ್ಟು ಬಾರಿ ಎದೆಹಾಲು ಕಡಿಮೆಯಾಗಿದೆ ಎನ್ನುವುದರ ಮೇಲೆ ಹಾಲು ಉತ್ಪಾದನೆ ಹೆಚ್ಚುತ್ತದೆ. ಹಾಲುಣಿಸುವ ಸಮಯ ನಿಗದಿಪಡಿಸುವುದರಿಂದ ಎದೆಹಾಲಿನ ಉತ್ಪಾದನೆ ಕಡಿಮೆಯಾಗುವುದು.

 9. ಜನನದ ಸಮಯದಲ್ಲಿ ಸ್ವೀಕರಿಸಿದ ಔಷಧಗಳು:

9. ಜನನದ ಸಮಯದಲ್ಲಿ ಸ್ವೀಕರಿಸಿದ ಔಷಧಗಳು:

ಕೆಲವೊಮ್ಮೆ ಎಪಿಡ್ಯೂರಲ್ ಅಥವಾ ಅರವಳಿಕೆ ಹಾಗೂ ಪ್ರಸವದ ಸಮಯದಲ್ಲಿ ಬಳಸಿದ ಔಷಧಗಳು ತಾಯಿಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಎದೆಹಾಲು ಉತ್ಪಾದನೆಯು ಕುಂಟಿತಗೊಳ್ಳುವುದು.

 10. ಹಾಲು ಉತ್ಪಾದಿಸುವ ಔಷಧಗಳು:

10. ಹಾಲು ಉತ್ಪಾದಿಸುವ ಔಷಧಗಳು:

ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಮಾತ್ರೆಗಳು ಕೆಲವೊಮ್ಮೆ ಆರೋಗ್ಯದ ಮೇಲೆ ಗಣನೀಯವಾದ ಪರಿಣಾಮ ಬೀರುವುದು. ಹಾಲಿನ ಪ್ರಮಾಣ ಹೆಚ್ಚಿಸುವುದು ಅಥವಾ ಇಳಿಸುವ ಮಾತ್ರೆಗಳು ಗಂಭೀರವಾದ ಪರಿಣಾಮ ಬೀರುವುದು.

ಇದರಿಂದ ಹಾಲು ಉತ್ಪಾದನೆಯು ಕಡಿಮೆಯಾಗುತ್ತವೆ. ಮಾತ್ರೆ ಅಥವಾ ಔಷಧಿ ಸ್ವೀಕರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದನ್ನು ಮರೆಯದಿರಿ.

English summary

ಎದೆ ಹಾಲು ಕುಂದಲು ಕಾರಣಗಳು

Breastfeeding is one of the most important phases that every new mother has to deal with. For some, breastfeeding can be a pleasant journey where the time spent during breastfeeding is considered the best time to bond with your infant. However, for some mothers, breastfeeding can turn unpleasant if they find themselves producing less breast milk. In spite of trying to comfort your fussy baby by breastfeeding, lack of breast milk can be a cause of serious concern.
X
Desktop Bottom Promotion