ಎದೆಹಾಲುಣಿಸುವ ತಾಯಂದಿರಿಗೆ, ಒಂದಿಷ್ಟು ಆರೋಗ್ಯಕರ ಟಿಪ್ಸ್

By: Hemanth
Subscribe to Boldsky

ಹೆರಿಗೆ ಬಳಿಕ ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಮಗುವಿಗೆ ಬೇಕಾಗುವಷ್ಟು ಹಾಲಿನ ಉತ್ಪತ್ತಿ ಆಗದೆ ಇರುವುದು. ಇದು ಹೆಚ್ಚಿನವರ ಸಮಸ್ಯೆಯಾಗಿದೆ. ಬಾಣಂತಿ ಮಹಿಳೆಯರಿಗೆ ಯಾವುದೇ ರೀತಿಯ ಔಷಧಿ ನೀಡಲು ಕಷ್ಟವಾಗುವ ಕಾರಣ ಕೆಲವೊಂದು ಆಹಾರಗಳಿಂದಲೇ ಎದೆಹಾಲನ್ನು ಹೆಚ್ಚಿಸಿಕೊಳ್ಳಬೇಕು. ಹಾಲಿನ ಉತ್ಪಾದನೆಯು ಕಡಿಮೆಯಿದ್ದಲ್ಲಿ ಮನೆಮದ್ದನ್ನು ಬಳಸುವುದೇ ಸೂಕ್ತವೆಂದು ಹೊಸ ಅಧ್ಯಯನವೊಂದು ಹೇಳಿದೆ.

ಅದರಲ್ಲೂ ಮಸಾಲೆಗಳಲ್ಲಿ ಎದೆಹಾಲನ್ನು ಹೆಚ್ಚಿಸುವಂತಹ ಗುಣಗಳು ಇವೆ. ಸರಿಯಾದ ಆಹಾರ ಕ್ರಮ ಹಾಗೂ ತೂಕ ಹೆಚ್ಚಳವಾಗುವ ಕಡೆ ಗಮನಹರಿಸಬೇಕು. ಪಾನೀಯ ಹಾಗೂ ಊಟದ ಜತೆಗೆ ಕೆಲವು ಮಸಾಲೆಗಳನ್ನು ಸೇವಿಸಿದರೆ ಅದರಿಂದ ಎದೆಹಾಲಿನ ಉತ್ಪತ್ತಿ ಹೆಚ್ಚಾಗುವುದು. ಇದರಿಂದ ಮಗು ಹಾಗೂ ತಾಯಿಗೆ ಯಾವುದೇ ರೀತಿಯ ಹಾನಿಯಾಗದು.

ಹೆರಿಗೆಯ ಬಳಿಕ ಇಂತಹ ಪಾನೀಯಗಳನ್ನು ಕುಡಿದರೆ ಬಹಳ ಒಳ್ಳೆಯದು....

ನಿಮ್ಮ ಆಹಾರದಲ್ಲಿ ಮಸಾಲೆ ಸೇರಿಸಿ ಸೇವನೆ ಮಾಡಿದರೆ ಹೆಚ್ಚಿನ ಲಾಭಗಳು ಆಗಲಿದೆ. ತುಂಬಾ ಅಗ್ಗ ಹಾಗೂ ಪರಿಣಾಮಕಾರಿಯಾದ ಸೋಂಪು ಗಿಡವು ಹಾಲಿನ ಉತ್ಪತ್ತಿಗೆ ಮಾತ್ರ ನೆರವಾಗುವುದಲ್ಲದೆ ಜೀರ್ಣಕ್ರಿಯೆ ಸರಾಗವಾಗಿಸಿ ಶೀತ ಹಾಗೂ ಜ್ವರ ನಿವಾರಣೆ ಮಾಡುವುದು.

ಎದೆಹಾಲು ಕುಡಿಸಲು ಉಪಾಯಗಳು ಮತ್ತು ಸಲಹೆಗಳು

ಚೀನಾದ ವೈದ್ಯಕೀಯ ಜಗತ್ತಿನ ಪ್ರಕಾರ ಈ ಗಿಡವನ್ನು ಬಾಣಂತಿ ಮಹಿಳೆಯರ ಔಷಧಿಗಳಿಗೆ ಸೇರಿಸಲಾಗುತ್ತದೆ. ಸೋಂಪು ಗಿಡದಲ್ಲಿ ಅನೆಥೊಲ್ ಎನ್ನುವ ಅಂಶವಿದೆ. ಇದು ತುಂಬಾ ಶಕ್ತಿಶಾಲಿಯಾಗಿದ್ದು, ಮಹಿಳೆಯರಲ್ಲಿ ಒಸ್ಟ್ರೋಜನ್ ಉತ್ಪತ್ತಿ ಹೆಚ್ಚು ಮಾಡುವುದು. ಇದು ಕ್ಷೀರಚೋದಕವಾಗಿ ಕೆಲಸ ಮಾಡಿ ಬಾಣಂತಿ ಮಹಿಳೆಯರಲ್ಲಿ ಹಾಲಿನ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸುವುದು. ಈ ಗಿಡಮೂಲಿಕೆಯನ್ನು ನಿಮ್ಮ ಪಾನೀಯ ಅಥವಾ ಆಹಾರಕ್ಕೆ ಸೇರಿಸುವುದು ಹೇಗೆಂಬ ಕಾತರ ನಿಮ್ಮಲ್ಲಿರಬಹುದು. ಲೇಖನ ಮುಂದೆ ಓದುತ್ತಾ ಸಾಗಿದರೆ ಪ್ರತಿಯೊಂದು ನಿಮಗೆ ತಿಳಿಯುವುದು..... 

ಚಹಾಗೆ ಸೇರಿಸಿ

ಚಹಾಗೆ ಸೇರಿಸಿ

ಸೋಂಪು ಗಿಡದ ಚಹಾವನ್ನು ನೀವು ಕುಡಿಯಬಹುದು. ಇದನ್ನು ಸಾಮಾನ್ಯ ಚಹಾದೊಂದಿಗೆ ಸೇರಿಸಿ ಸೇವಿಸಬಹುದು ಅಥವಾ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಿ ಸೋಸಿಕೊಂಡು ಕುಡಿಯಬಹುದು.

ಮೊಸರಾನ್ನ

ಮೊಸರಾನ್ನ

ಚಹಾ ಕುಡಿಯುವುದು ನಿಮಗೆ ಇಷ್ಟವಿಲ್ಲವೆಂದಾದರೆ ಈ ಮಸಾಲೆಯನ್ನು ಮೊಸರಾನ್ನಗೆ ಬೆರೆಸಿ ಸೇವಿಸಿ. ಈ ಮಸಾಲೆಯ ಹುಡಿಯನ್ನು ಒಂದು ಕಪ್ ಮೊಸರಿಗೆ ಹಾಕಿ ಸೇವಿಸಬಹುದು.

ಅನ್ನಕ್ಕೆ ಹಾಕಿ

ಅನ್ನಕ್ಕೆ ಹಾಕಿ

ದಕ್ಷಿಣ ಭಾರತೀಯ ಆಹಾರಗಳಲ್ಲಿ ಹೆಚ್ಚಾಗಿ ಸೋಂಪನ್ನು ಬಳಸಿಕೊಳ್ಳುವರು. ಸೋಂಪು ಗಿಡವನ್ನು ಪಲಾವ್ ಅಥವಾ ಬಿರಿಯಾನಿಗೆ ಹಾಕಬಹುದು. ಇದು ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಹೆಚ್ಚಿನ ಆರೋಗ್ಯ ಲಾಭ ನೀಡುವುದು.

ಸ್ಯಾಂಟ್ ವಿಚ್‌ಗೆ

ಸ್ಯಾಂಟ್ ವಿಚ್‌ಗೆ

ಸ್ಯಾಂಟ್ ವಿಚ್‌ಗೆ ಕರಿಮೆಣಸಿನ ಹುಡಿ ಹಾಕಿಕೊಳ್ಳುವ ಬದಲು ಸೋಂಪು ಗಿಡದ ಹುಡಿ ಹಾಕಿಕೊಳ್ಳಿ. ರುಚಿಯು ಅಷ್ಟಾಗಿ ನಿಮಗೆ ಹಿಡಿಸದೆ ಇದ್ದರೂ ಇದರಿಂದ ಎದೆಹಾಲಿನ ಉತ್ಪತ್ತಿಯು ಹೆಚ್ಚಾಗುವುದು.

ಸಲಾಡ್ ಜೊತೆಗೆ

ಸಲಾಡ್ ಜೊತೆಗೆ

ನೀವು ಊಟದ ವೇಳೆ ಸಲಾಡ್ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರೆ ತುಂಡು ಮಾಡಿಕೊಂಡಿರುವ ತರಕಾರಿಗಳ ಮೇಲೆ ಸೋಂಪು ಗಿಡದ ಹುಡಿ ಸಿಂಪಡಿಸಿ. ನಿಮಗೆ ಇದರ ಸುವಾಸನೆಯು ಹಿಡಿಸದೆ ಇದ್ದರೆ ಸ್ವಲ್ಪ ಮೊಸರು ಸೇರಿಸಿ.

ಸೂಚನೆ

ಸೂಚನೆ

ಎದೆಹಾಲುಣಿಸುವ ಮಹಿಳೆಯರಿಗೆ ಈ ಮಸಾಲೆ ತುಂಬಾ ಒಳ್ಳೆಯದು. ಅದರೆ ಪ್ರತಿನಿತ್ಯ ಮಿತಿಗಿಂತ ಹೆಚ್ಚು ಸೇವನೆ ಮಾಡಿದರೆ ಅದರಿಂದ ಮಗುವಿಗೆ ಸಮಸ್ಯೆ ಸೃಷ್ಟಿಯಾಗಬಹುದು. ಮಗು ವಾಂತಿ ಮಾಡಿಕೊಂಡು ಕಿರಿಕಿರಿ ಅನುಭವಿಸಬಹುದು. ವೈದ್ಯರ ಸಲಹೆ ಪಡೆದುಕೊಂಡ ಬಳಿಕ ಆಹಾರದಲ್ಲಿ ಇದನ್ನು ಮಿತವಾಗಿ ಸೇರಿಸಿ.

English summary

Which Spices Will Increase Breast Milk Production?

How many of you new mothers add spices to your meal? A new study suggests that if you are having trouble with milk production, the only thing that can help is using home remedies. Apart from having a well-balanced meal and watching your weight gain, including certain spices to your beverages and meals can increase your breast milk production. Experts also state that these spices will have no effect on the baby as well and they will also benefit your health. Anise is one spice that you should add to your meals every single day.
Subscribe Newsletter