For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಎದೆಹಾಲುಣಿಸುವುದು ಹೃದಯಾಘಾತದ ಅಪಾಯ ತಪ್ಪಿಸಲಿದೆ!

By Hemanth
|

ಎದೆಹಾಲುಣಿಸಿದ ಮಹಿಳೆಯರಿಗಿಂತ ಎದೆಹಾಲುಣಿಸದ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ಹೇಳಿವೆ. ಎದೆಹಾಲುಣಿಸಿದರೆ ವಯಸ್ಸಾಗುವ ಕಾಲದಲ್ಲಿ ಬರುವಂತಹ ಹೃದಯಾಘಾತದ ಸಮಸ್ಯೆ ತಪ್ಪಿಸಬಹುದು ಎಂದು ಜರ್ನಲ್ ಆಫ್ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌‪ನಲ್ಲಿ ಪ್ರಕಟಗೊಂಡಿರುವ ಅಧ್ಯಯನದಲ್ಲಿ ಹೇಳಿದೆ. ಎದೆಹಾಲುಣಿಸುವ ಮಹಿಳೆಯರಲ್ಲಿ ಹೃದಯಾಘಾತವಾಗುವ ಸಾಧ್ಯತೆಯು ಶೇ.10ರಷ್ಟಾದರೂ ಕಡಿಮೆಯಿರುತ್ತದೆ ಎಂದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ.

Breastfeeding

ಮಹಿಳೆಯರಲ್ಲಿ ಎದೆಹಾಲುಣಿಸಿದ ಬಳಿಕ ಸಿಗುವ ಆರೋಗ್ಯ ಲಾಭಗಳಲ್ಲಿ ಗರ್ಭಧಾರಣೆ ಬಳಿಕ ತಾಯಿಯ ಚಯಾಪಚಾಯ ಕ್ರಿಯೆಯಲ್ಲಿ ಆಗುವಂತಹ ವೇಗವಾದ ಬದಲಾವಣೆ ಕಾರಣವಾಗಿದೆ ಎಂದು ವಿಶ್ಲೇಷಿಸಬಹುದು ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕ ಸ್ಯಾನ್ನೆ ಪೀಟರ್ಸ್ ತಿಳಿಸಿದರು.

ಎದೆಹಾಲು ಕುಡಿಸಲು ಉಪಾಯಗಳು ಮತ್ತು ಸಲಹೆಗಳು

ಗರ್ಭಧಾರಣೆಯು ಮಹಿಳೆಯರ ಚಯಾಪಚಾಯ ಕ್ರಿಯೆಯಲ್ಲಿ ಹೆಚ್ಚಿನ ಬದಲಾವಣೆ ಉಂಟು ಮಾಡುತ್ತದೆ. ಯಾಕೆಂದರೆ ಈ ವೇಳೆ ಮಹಿಳೆಯರು ತನ್ನ ಮಗುವಿನ ಬೆಳವಣಿಗೆಗಾಗಿ ದೇಹದಲ್ಲಿ ಹೆಚ್ಚಿನ ಕೊಬ್ಬನ್ನು ಶೇಖರಿಸಿಕೊಳ್ಳುತ್ತಾಳೆ. ಎದೆಹಾಲುಣಿಸುವುದರಿಂದ ಶೇಖರಣೆಗೊಂಡಿರುವ ಕೊಬ್ಬು ವೇಗವಾಗಿ ಕರಗುವುದು ಅಥವಾ ಸಂಪೂರ್ಣವಾಗಿ ಕರಗುವುದು ಎಂದು ಪೀಟರ್ಸ್ ಹೇಳಿದರು.

ಚೀನಾದ ಕಡೂರ್ ಬಯೋಬ್ಯಾಂಕ್ ನ ಅಧ್ಯಯನದಲ್ಲಿ ಪಾಲ್ಗೊಂಡ ಸುಮಾರು 289573 ಮಹಿಳೆಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇದರಲ್ಲಿ ಪಾಲ್ಗೊಂಡ ಮಹಿಳೆಯರ ಸಂತಾನೋತ್ಪತ್ತಿ ಇತಿಹಾಸ ಮತ್ತು ಜೀವನಶೈಲಿ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.

ಎದೆಹಾಲುಣಿಸುವುದರಿಂದ ಮಹಿಳೆಯರಿಗೆ ಕೆಲವೊಂದು ಆರೋಗ್ಯ ಲಾಭಗಳು ಸಿಗಲಿದೆ. ಎದೆಹಾಲುಣಿಸುವುದರಿಂದ ತೂಕ ಕಡಿಮೆಯಾಗಿ, ಕೊಲೆಸ್ಟ್ರಾಲ್ ತಗ್ಗುವುದು, ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿರುವುದಾಗಿ ಹಿಂದೆ ನಡೆಸಿರುವ ಕೆಲವೊಂದು ಅಧ್ಯಯನಗಳು ಕೂಡ ಹೇಳಿವೆ.

ತಮ್ಮ ಸೌಂದರ್ಯ ಕೆಡುವುದೆಂದು ಎದೆಹಾಲುಣಿಸಲು ಹಿಂಜರಿಯುವಂತಹ ಮಹಿಳೆಯರು ಈ ಅಧ್ಯಯನ ವರದಿ ನೋಡಿದ ಬಳಿಕ ಖಂಡಿತವಾಗಿಯೂ ಎದೆಹಾಲುಣಿಸಬಹುದು. ಇದು ಎದೆಹಾಲುಣಿಸಲು ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸೋಂಕುಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಝೆನ್ಗಿಮಿಂಗ್ ಚೆನ್ ಹೇಳುತ್ತಾರೆ.

English summary

Does Breastfeeding Cut Heart Attack Risk?

Breastfeeding may reduce a mother's heart attack and stroke risk later in life, says a new study. The study, published in the Journal of the American Heart Association, showed that women who breastfed their babies had about a 10 percent lower risk of developing heart disease or stroke later in life.
X
Desktop Bottom Promotion