For Quick Alerts
ALLOW NOTIFICATIONS  
For Daily Alerts

ಸ್ತನದ ಗಾತ್ರ v/s ಎದೆ ಹಾಲು-ಈ ವಿಷಯದಲ್ಲಿ ತಪ್ಪು ಕಲ್ಪನೆ ಬೇಡ!

ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರದ ಸಮಯದಲ್ಲಿ ತಾಯಿಯ ದೇಹದಲ್ಲಿ ಸ್ರವಿಸುವ ಕೆಲವಾರು ರಸದೂತಗಳು ಸೂಕ್ತಕಾಲದಲ್ಲಿ ಸ್ರವಿಸಿ ಹಾಲು ಉತ್ಪಾದನಾ ಗ್ರಂಥಿಗಳಲ್ಲಿ ಹಾಲು ಉತ್ಪತ್ತಿಯಾಗುವಂತೆ ಹಾಗೂ ಸಂಗ್ರಹಗೊಳ್ಳುವಂತೆ ನೋಡಿಕೊಳ್ಳುತ್ತವೆ.

By Deepu
|

ತಮ್ಮ ಸ್ತನದಗಾತ್ರ ಚಿಕ್ಕದಿರುವ ಮಹಿಳೆಯರಿಗೆ ಹೆರಿಗೆಯ ಬಳಿಕ ಮಗುವಿಗೆ ಅಗತ್ಯವಿದ್ದಷ್ಟು ತಾಯಿಹಾಲು ಉತ್ಪತ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕ ಇದ್ದೇ ಇರುತ್ತದೆ. ಪ್ರತಿ ತಾಯಿಗೂ ತನ್ನ ಮಗುವಿಗೆ ಅತ್ಯುತ್ತಮ ಆಹಾರ ಮತ್ತು ಪೋಷಕಾಂಶಗಳು ದೊರಕಬೇಕೆಂಬ ಬಯಕೆ ಇರುತ್ತದೆ.

ಹುಟ್ಟುವ ಮಗುವಿಗೆ ತಾಯಿಹಾಲೇ ಅತ್ಯುತ್ತಮ ಆಹಾರವಾಗಿರುವ ಕಾರಣ ತಮ್ಮ ಚಿಕ್ಕ ಗಾತ್ರದ ಸ್ತನ ಮಗುವಿಗೆ ಅಗತ್ಯವಿದ್ದಷ್ಟು ಹಾಲನ್ನು ಉತ್ಪಾದಿಸಲು ಸಮರ್ಥವೇ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ಸ್ತನದ ಗಾತ್ರವೇ ಹಾಲಿನ ಉತ್ಪತ್ತಿಯ ಪ್ರಮಾಣವನ್ನು ನಿರ್ಧರಿಸುತ್ತದೆಯೇ? ಇಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ - ಮಗುವಿಗೆ ಎದೆಹಾಲು ಉಣಿಸುವುದರಿಂದ ಸೌಂದರ್ಯ ಕೆಡದು...

ಈ ಬಗ್ಗೆ ಹೆಚ್ಚಿನವರ ಮನದಲ್ಲಿ ಹುದುಗಿರುವ ತಪ್ಪು ಕಲ್ಪನೆ ಹಾಗೂ ತಪ್ಪು ವಾಸ್ತವಗಳ ಬಗ್ಗೆ ಇಂದು ಹಲವಾರು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಪ್ರತಿ ಮಹಿಳೆಯೂ ಈ ಬಗ್ಗೆ ಅರಿತಿರುವುದು ಅವಶ್ಯವಾಗಿದೆ...

ವಾಸ್ತವಾಂಶ #1

ವಾಸ್ತವಾಂಶ #1

ಸ್ತನದ ಗಾತ್ರಕ್ಕೂ ಹಾಲಿನ ಪ್ರಮಾಣಕ್ಕೂ ಸಂಬಂಧವಿಲ್ಲ. ತಾಯಿಯ ಆರೋಗ್ಯವೇ ಈ ಪ್ರಮಾಣವನ್ನು ನಿರ್ಧರಿಸುವುದೇ ಹೊರತು ಸ್ತನದ ಗಾತ್ರವಲ್ಲ ಎಂದು ತಜ್ಞರು ಖಚಿತಪಡಿಸುತ್ತಾರೆ.

ವಾಸ್ತವಾಂಶ #2

ವಾಸ್ತವಾಂಶ #2

ಸ್ತನದ ಗಾತ್ರಕ್ಕೆ ಸ್ತನಗಳಲ್ಲಿರುವ ಕೊಬ್ಬಿನ ಅಂಗಾಂಶವೇ ಕಾರಣ. ಈ ಅಂಗಾಂಶಕ್ಕೆ ಹಾಲನ್ನು ಉತ್ಪಾದಿಸುವ ಅಥವಾ ಸಂಗ್ರಹಿಸುವ ಗುಣ ಇಲ್ಲದಿರುವ ಕಾರಣ ಸ್ತನದ ಗಾತ್ರ ಹಾಲಿನ ಪ್ರಮಾಣವನ್ನು ನಿರ್ಧರಿಸುವುದಿಲ್ಲ.

ವಾಸ್ತವಾಂಶ #3

ವಾಸ್ತವಾಂಶ #3

ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರದ ಸಮಯದಲ್ಲಿ ತಾಯಿಯ ದೇಹದಲ್ಲಿ ಸ್ರವಿಸುವ ಕೆಲವಾರು ರಸದೂತಗಳು ಸೂಕ್ತಕಾಲದಲ್ಲಿ ಸ್ರವಿಸಿ ಹಾಲು ಉತ್ಪಾದನಾ ಗ್ರಂಥಿಗಳಲ್ಲಿ ಹಾಲು ಉತ್ಪತ್ತಿಯಾಗುವಂತೆ ಹಾಗೂ ಸಂಗ್ರಹಗೊಳ್ಳುವಂತೆ ನೋಡಿಕೊಳ್ಳುತ್ತವೆ.

ವಾಸ್ತವಾಂಶ #4

ವಾಸ್ತವಾಂಶ #4

ಯಾವಾಗ ಹಾಲಿನ ಉತ್ಪತ್ತಿಯಾಗತೊಡಗಿ ಹಾಲು ಸಂಗ್ರಹವಾಗತೊಡಗುತ್ತದೆಯೋ, ಆಗ ಸ್ವಾಭಾವಿಕವಾಗಿ ಸ್ತನಗಳ ಗಾತ್ರ ಕೊಂಚ ಹೆಚ್ಚುತ್ತದೆ. ಆದರೆ ದೊಡ್ಡ ಸ್ತನಗಳಿದ್ದರೆ ಹೆಚ್ಚು ಹಾಲು ಚಿಕ್ಕ ಸ್ತನಗಳಿದ್ದರೆ ಕಡಿಮೆ ಹಾಲು ಎಂದೇನೂ ಇಲ್ಲ.

ವಾಸ್ತವಾಂಶ #5

ವಾಸ್ತವಾಂಶ #5

ನಿಸರ್ಗ ತಾಯಿಗೆ ನೀಡಿದ ಇನ್ನೊಂದು ಅದ್ಭುತ ವರವೆಂದರೆ ಮಗು ಎಷ್ಟು ಹೆಚ್ಚು ಹಾಲು ಕುಡಿಯುತ್ತದೆಯೋ, ತಾಯಿಯ ದೇಹ ಅಷ್ಟೇ ಹೆಚ್ಚು ಹಾಲನ್ನು ಉತ್ಪಾದಿಸುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಒಂದು ವೇಳೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಬಳಿಕ ಸ್ತನಗಳ ಗಾತ್ರ ಹೆಚ್ಚದೇ ಇದ್ದರೆ ಇದಕ್ಕೆ IFT (insufficient glandular tissue) ಅಥವಾ ಸ್ತನದ ಕೊಬ್ಬಿನ ಅಂಗಾಂಶದ ಕೊರತೆ ಎಂಬ ಕಾರಣವಿರಬಹುದು. ಈ ತೊಂದರೆ ಇರುವ ಮಹಿಳೆಯರು ಮಗುವಿಗೆ ಅಗತ್ಯವಿರುವಷ್ಟು ಹಾಲು ಉತ್ಪಾದಿಸಲಾರರು. ತಜ್ಞ ವೈದ್ಯರು ಮಾತ್ರ ಸೂಕ್ತ ಪರೀಕ್ಷೆಗಳ ಮೂಲಕ ಅಗತ್ಯವಾದ ಔಷಧಿಗಳನ್ನು ನೀಡಿ ಈ ಕೊರತೆಯನ್ನು ನೀಗಿಸಬಲ್ಲರು.

ವಾಸ್ತವಾಂಶ #7

ವಾಸ್ತವಾಂಶ #7

ಸೂಕ್ತ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗದೇ ಇರಲು ಇರುವ ಕಾರಣಗಳೆಂದರೆ ಗರ್ಭ ನಿರೋಧಕ ಗುಳಿಗೆಗಳ ಹೆಚ್ಚಿನ ಬಳಕೆ, ಸ್ತನಗಳ ಶಸ್ತ್ರಚಿಕಿತ್ಸೆ ಹಾಗೂ ಧೂಮಪಾನಗಳಂತಹ ದುರಭ್ಯಾಸಗಳಾಗಿವೆ.

English summary

Do Small Breasts Produce Less Milk?

Any mother would want to feed the baby with enough nutrients and as milk is the best way to nourish infants, the concern about milk production is natural. But does breast size dictate the milk production? No, say health experts. Here are some more facts that will eliminate all fears and squash myths surrounding the breast size.
X
Desktop Bottom Promotion