For Quick Alerts
ALLOW NOTIFICATIONS  
For Daily Alerts

ಮಗುವಿಗೆ ಎದೆಹಾಲು ಉಣಿಸುವುದರಿಂದ ಸೌಂದರ್ಯ ಹಾಳಾಗದು

ವರ್ಷಾನುಗಟ್ಟಲೆ ಮಗುವಿಗೆ ಎದೆಹಾಲು ಉಣಿಸುತ್ತಿದ್ದರೆ ತಾಯಿಯ ಸ್ತನಗಳು ಜೋತು ಬಿದ್ದಂತೆ ಆಗುತ್ತವೆ. ಹಾಗಾದರೆ ಏನು ಮಾಡಬೇಕು? ಮಗುವಿಗೆ ಹಾಲುಣಿಸಬೇಕಾ? ಅಥವಾ ತಾಯಿ ತನ್ನ ಸೌಂದರ್ಯ ಕಾಪಾಡಿಕೊಳ್ಳಬೇಕಾ? ಎನ್ನುವ ಪ್ರಶ್ನೆ ಕಾಡುವುದು ಸಹಜ

By Divya
|

ಹುಟ್ಟಿದ ಮಗುವಿಗೆ ಕಡಿಮೆ ಎಂದರೂ ಒಂದು ವರೆ ವರ್ಷದಿಂದ ಎರಡು ವರ್ಷದ ವರೆಗೆ ತಾಯಿ ಎದೆಹಾಲು ಉಣಿಸಬೇಕು. ಇಲ್ಲವಾದರೆ ಮಗುವಿಗೆ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗೆ ವರ್ಷಾನುಗಟ್ಟಲೆ ಮಗುವಿಗೆ ಎದೆಹಾಲು ಉಣಿಸುತ್ತಿದ್ದರೆ ತಾಯಿಯ ಸ್ತನಗಳು ಜೋತು ಬಿದ್ದಂತೆ ಆಗುತ್ತವೆ. ಹಾಗಾದರೆ ಏನು ಮಾಡಬೇಕು? ಮಗುವಿಗೆ ಹಾಲುಣಿಸಬೇಕಾ? ಅಥವಾ ತಾಯಿ ತನ್ನ ಸೌಂದರ್ಯ ಕಾಪಾಡಿಕೊಳ್ಳಬೇಕಾ? ಎನ್ನುವ ಪ್ರಶ್ನೆ ಕಾಡುವುದು ಸಹಜ. ತಾಯಿಯ ಎದೆಹಾಲು ಹೆಚ್ಚಿಸುವ ಅತ್ಯುತ್ತಮ ಆಹಾರಗಳು

ಕೆಲವರು ಇದೇ ಕಾರಣಗಳಿಗೆ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿಬಿಡುತ್ತಾರೆ. ತಾಯಿ ಮತ್ತು ಮಗುವಿನ ಬಾಂಧವ್ಯ ಗಟ್ಟಿಯಾಗುವುದು ಈ ಕ್ರಿಯೆಯಿಂದಲೆ. ಹಾಗಾಗಿ ತಾಯಿ ಮಗುವಿಗೆ ಕಮ್ಮಿ ಎಂದರೂ ಒಂದು ವರೆ ವರ್ಷದ ವರೆಗೆ ಹಾಲುಣಿಸಲೇ ಬೇಕು. ಮಗುವನ್ನು ಸ್ತನ್ಯಪಾನದಿಂದ ಬಿಡಿಸುವುದು ಹೇಗೆ?

ನಂತರ ಸ್ತನಗಳು ತಮ್ಮ ಆಕಾರದಲ್ಲಿ ವ್ಯತ್ಯಯ ಹೊಂದುತ್ತದೆಯಾದರೂ ಅದಕ್ಕೆ ಪರ್ಯಾಯ ಕ್ರಮಗಳನ್ನು ಅನುಸರಿಸಬಹುದು. ಇವುಗಳಿಂದ ತಾಯಿ ತನ್ನ ಸೌಂದರ್ಯವನ್ನು ಪುನಃ ಪಡೆಯಬಹುದು. ಹಾಗಾದರೆ ಅದ್ಯಾವ ಕ್ರಮಗಳು ಎನ್ನುವುದನ್ನು ತಿಳಿಯಲು ಮುಂದೆ ಓದಿ...

ಸತ್ಯ-1

ಸತ್ಯ-1

ಎದೆಹಾಲು ಉಣಿಸುವುದರಿಂದ ಮಗುವಿಗೆ ಮಾತ್ರವಲ್ಲದೆ ತಾಯಿಯ ಆರೋಗ್ಯವೂ ಸುಧಾರಣೆಯಾಗುತ್ತದೆ. ಜೊತೆಗೆ ಗರ್ಭಧಾರಣೆಯ ಮುಂಚೆ ಇದ್ದ ದೇಹದ ದೃಢತೆಯನ್ನು ಪಡೆಯುತ್ತಾ ಹೋಗುತ್ತಾಳೆ.

ಸತ್ಯ-2

ಸತ್ಯ-2

ಹೆರಿಗೆಯ ನಂತರ ಸಮಯದಲ್ಲಿ ಸಡಿಲಗೊಂಡ ದೇಹದ ನರವ್ಯವಸ್ಥೆ, ಮಾಂಸಕಂಡಗಳು ಮೊದಲಿನ ಸ್ಥಿತಿಗೆ ಬರುತ್ತಾ ಹೋಗುತ್ತವೆ. ಇವುಗಳ ಹೊರತು ದೇಹದ ಸೌಂದರ್ಯ ಹಾಳಾಗದು.

ಸತ್ಯ-3

ಸತ್ಯ-3

ತಜ್ಞರ ಪ್ರಕಾರ ಎದೆ ಹಾಲು ಉಣಿಸುವುದರಿಂದ ಸಡಿಲವಾದ ಚರ್ಮವು ಗಟ್ಟಿಯಾಗುತ್ತಾ ಹೋಗುತ್ತದೆ. ಜೊತೆಗೆ ಆರೋಗ್ಯಕರ ತ್ವಚೆಯ ಸೃಷ್ಟಿಗೆ ಕಾರಣವಾಗುತ್ತದೆ.

ಸತ್ಯ-4

ಸತ್ಯ-4

ಗರ್ಭಾವಸ್ಥೆಯ ಸಂದರ್ಭದಲ್ಲಿ ಸ್ತನಗಳ ಗಾತ್ರ ಹಾಗೂ ಆಕಾರಗಳು ಬದಲಾವಣೆ ಹೊಂದುತ್ತಾ ಹೋಗುತ್ತವೆ. ನಂತರ ಹಾಲುಣಿಸುವುದರಿಂದ ಪುನಃ ತಮ್ಮ ಮೊದಲಿನ ಸ್ಥಿತಿಗೆ ಮರಳುತ್ತವೆ.

ಸತ್ಯ-5

ಸತ್ಯ-5

ಗರ್ಭಿಣಿಯಾದಾಗ ಆದ ತೂಕದ ಏರಿಕೆಯು ಹಾಲುಣಿಸುವ ಪ್ರಕ್ರಿಯೆಯಿಂದ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗ ಬಿರಿದ ಚರ್ಮಗಳು ಪುನಃ ಸೇರಿಕೊಳ್ಳುತ್ತವೆ.

ಸತ್ಯ-6

ಸತ್ಯ-6

ಆನುವಂಶಿಕವಾಗಿ ಬಂದ ಅಂಶಗಳಿಂದ ದೇಹದ ಆಕಾರ ಹಾಗೂ ದೃಢತೆಗೆ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು.

ಸತ್ಯ-7

ಸತ್ಯ-7

ದೇಹ ಮತ್ತು ಸ್ತನದ ಆಕಾರ, ಗಾತ್ರಗಳು ಬದಲಾವಣೆ ಹಾಗೂ ಜೋತು ಬೀಳುವಿಕೆಗೆ ಕಾಣ ನಮ್ಮ ದಿನನಿತ್ಯದ ವ್ಯಾಯಾಮ ಚಟುವಟಿಕೆಯನ್ನು ಸಹ ಅವಲಂಭಿಸಿರುತ್ತದೆ. ಧೂಮಪಾನ, ದೇಹದ ಕೊಬ್ಬು ಹೆಚ್ಚಾಗುವುದರಿಂದಲೂ ದೇಹದ ಆಕಾರ ಕುಂಟಿತಗೊಳ್ಳುತ್ತದೆ.

ಸತ್ಯ-8

ಸತ್ಯ-8

ಎದೆ ಹಾಲು ಉಣಿಸುವ ಪ್ರಕ್ರಿಯೆಯಿಂದ ಋತುಬಂಧದ ಸಮಯದಲ್ಲಿ ಉಂಟಾಗುವ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್‌ಗಳಂತಹ ಅಪಾಯಗಳನ್ನು ತಡೆಯುತ್ತದೆ.

ಸತ್ಯ-9

ಸತ್ಯ-9

ಧೂಮಪಾನಗಳನ್ನು ತ್ಯಜಿಸುವುದು, ಚಟುವಟಿಕೆಯಿಂದ ಕ್ರಿಯಾಶೀಲರಾಗಿರುವುದು, ತೂಕ ಹೆಚ್ಚುವಿಕೆಯ ನಿಯಂತ್ರಣ, ನಿಯಮಿತವಾದ ವ್ಯಾಯಾಮ, ಸ್ತನಗಳನ್ನು ಬೆಂಬಲಿಸುವಂತಹ ಒಳಉಡುಪುಗಳನ್ನು ಧರಿಸುವುದರಿಂದ ಸ್ತನದ ಆಕಾರ ಮತ್ತು ಗಾತ್ರದ ಸೌಂದರ್ಯವನ್ನು ಕಾಪಾಡಬಹುದು.

English summary

Breastfeeding and Sagging Breasts:The Myths and Facts

Blaming only breastfeeding for the problem of saggy breasts isn't fair say experts who have concluded that many other factors play a role.
X
Desktop Bottom Promotion