For Quick Alerts
ALLOW NOTIFICATIONS  
For Daily Alerts

ಎದೆ ಹಾಲುಣಿಸುತ್ತಿರುವ ಮಹಿಳೆಯರು 'ಕೆಫೀನ್‌'ನಿಂದ ದೂರವಿರಿ...

By Manu
|

ಹೆಣ್ಣು ಗರ್ಭಾವಸ್ಥೆಯಲ್ಲಿ ಆಹಾರ ಸೇವನೆಯ ಮೇಲೆ ಎಷ್ಟು ಕಾಳಜಿಯನ್ನು ವಹಿಸಬೇಕೋ ಅಂತೆಯೇ ಮಗು ಜನಿಸಿದ ನಂತರ ಹಾಲುಣಿಸುವ ಸಮಯದಲ್ಲಿ ಕೂಡ ದೇಹದ ಆರೈಕೆಯತ್ತ ಮತ್ತು ಆಹಾರದಂತಹ ಮುಖ್ಯ ಅಂಶಗಳತ್ತ ಪ್ರತ್ಯೇಕ ಗಮನವನ್ನು ನೀಡಬೇಕು. ಮಗುವಿನ ಜನನದ ನಂತರ ಬಾಣಂತಿಯ ದೇಹವನ್ನು ಹಸಿ ಮೈ ಎಂದು ಕರೆಯುತ್ತಾರೆ.

ಈ ಸಮಯದಲ್ಲಿ ಯಾವುದೇ ಪರಿಣಾಮಗಳು ದೇಹಕ್ಕೆ ಬೇಗನೇ ಉಂಟಾಗುತ್ತದೆ . ಅದಕ್ಕಾಗಿಯೇ ಈ ಸಮಯದಲ್ಲಿ ತಾಯಿಯ ಆರೈಕೆಯನ್ನು ಚೆನ್ನಾಗಿ ಮಾಡಬೇಕು ಮತ್ತು ಹಳ್ಳಿ ಮದ್ದಿನ ಮೂಲಕ ಆಕೆಯನ್ನು ನೋಡಿಕೊಳ್ಳಲಾಗುತ್ತದೆ. ಆದರೆ ಇಂದಿನ ಮಹಿಳೆಯರು ಮಗು ಜನಿಸಿದ ನಂತರ ಒಂದೆರಡು ತಿಂಗಳಲ್ಲೇ ಉದ್ಯೋಗಕ್ಕೆ ಹೋಗಲು ಆರಂಭಿಸಿ ಬಿಡುತ್ತಾರೆ. ಅಂತೆಯೇ ಈ ಸಮಯದಲ್ಲಿ ತಮ್ಮ ಪ್ರಸ್ತುತ ಸ್ಥಿತಿಯನ್ನು ಮರೆತುಬಿಡುತ್ತಾರೆ. ಅದರಲ್ಲೂ ತಮ್ಮದು ಹಸಿ ಮೈ ಎಂಬ ವಿಷಯ ಅವರಿಗೆ ಕೆಲಸದ ಒತ್ತಡದ ನಡುವೆ ನೆನಪೇ ಇರುವುದಿಲ್ಲ. ಇದುವೇ ನಂತರದ ದಿನಗಳಲ್ಲಿ ಬೇರೆ ಬೇರೆ ದೇಹದ ನೋವುಗಳು ಕಾಣಿಸಿಕೊಳ್ಳಲು ಕಾರಣವಾಗಿಬಿಡುತ್ತವೆ.

ಗರ್ಭಿಣಿಯರೇ ಟೀ-ಕಾಫಿಯಿಂದ ಸಾಧ್ಯವಾದಷ್ಟು ದೂರವಿರಿ!

ಇಂದಿನ ಲೇಖನದಲ್ಲಿ ಹಾಲುಣಿಸುತ್ತಿರುವ ತಾಯಿಯು ಕೆಫೀನ್ ಸೇವನೆ ಮಾಡುವುದು ಒಳ್ಳೆಯದೋ ಇಲ್ಲವೇ ಎಂಬುದನ್ನು ಚರ್ಚಿಸುತ್ತಿದ್ದೇವೆ. ಕೆಫೀನ್ ಎಂಬ ಅಂಶವು ತಾಯಿಯ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದ್ದರಿಂದಲೇ ಗರ್ಭಾವಸ್ಥೆ ಮತ್ತು ಹಾಲುಣಿಸುತ್ತಿರುವ ಸಮಯದಲ್ಲಿ ತಾಯಿಯು ಕಾಫಿ, ಚಹಾ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂಬುದಾಗಿಯೇ ಸಲಹೆ ಮಾಡುತ್ತಾರೆ. ಇಂದು ಇನ್ನಷ್ಟು ಮಾಹಿತಿಯನ್ನು ಈ ಲೇಖನದಲ್ಲಿ ನಾವು ನೀಡಲಿದ್ದು ಮಗುವಿಗೆ ಕೆಫೇನ್‌ನಿಂದ ಏನೆಲ್ಲಾ ದುಷ್ಪರಿಣಾಮಗಳಿದೆ ಎಂಬುದನ್ನು ಅರಿತುಕೊಳ್ಳಿ....

ಕೆಫೀನ್ ಪರಿಣಾಮ ಮಗುವಿನ ಮೇಲೆ ಯಾವ ರೀತಿಯಿಂದ ಉಂಟಾಗಲಿದೆ

ಕೆಫೀನ್ ಪರಿಣಾಮ ಮಗುವಿನ ಮೇಲೆ ಯಾವ ರೀತಿಯಿಂದ ಉಂಟಾಗಲಿದೆ

ಮಗುವು ಕೆಫೀನ್ ಅವಲಂಬನೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಆಧರಿಸಿ ಇದನ್ನು ನಿರ್ಧರಿಸಪಡಿಸಲಾಗಿದೆ. ಈ ಅಂಶದ ಕಡಿಮೆ ಪರಿಣಾಮ ಕೂಡ ಮಗುವಿನ ಮೇಲೆ ಹೆಚ್ಚಿನ ಪ್ರಭಾವವನ್ನು ಉಂಟುಮಾಡಬಹುದು. ಕೆಫೀನ್ ಅಂಶವನ್ನು ತನ್ನಲ್ಲಿ ಒಳಪಡಿಸಿ ಕೊಳ್ಳುವಷ್ಟು ಮಗುವಿನ ದೇಹವು ಬೆಳವಣಿಗೆಯನ್ನು ಪಡೆದಿರುವುದಿಲ್ಲ. ಮಗುವಿಗೆ ಇದು ಕಿರಿಕಿರಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಇದರಿಂದ ದೂರವಿರುವುದೇ ಒಳಿತು....

ಇದರಿಂದ ದೂರವಿರುವುದೇ ಒಳಿತು....

ಹೆರಿಗೆಯ ನಂತರ ತಾಯಿಗೆ ಸುಸ್ತಾಗುವುದು ಸಹಜವಾಗಿದೆ. ಅಂತೆಯೇ ಈ ದಿನಗಳಲ್ಲಿ ಅವರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ನಿಮಗಿಷ್ಟದ ಪೇಯವನ್ನು ಆಸ್ವಾದಿಸುವುದು ಉತ್ತಮವೇ ಆಗಿದೆ. ಸಲಹೆ ಮಾಡಿರುವ ಕೆಫೀನ್ ಪ್ರಮಾಣ ದಿನಕ್ಕೆ 300 ಗ್ರಾಮ್‌ಗಳಾಗಿವೆ. ಅಂದರೆ ಇದು 6 ರಿಂದ 7 ಕಪ್‌ಗಳ ಕಾಫಿ, ಟೀ ಮತ್ತು ಕೋಲಾಕ್ಕೆ ಸಮನಾಗಿದೆ. ಮಗುವಿಗೆ ಇಂತಹ ಸೇವನೆಯಿಂದ ಕಿರಿಕಿರಿಯಿಂದ ಉಂಟಾಗುತ್ತಿದೆ ಎಂದಾದಲ್ಲಿ ನೀವು ಈ ಸೇವನೆಯನ್ನು ಕಡಿಮೆ ಮಾಡಬೇಕು.

 ಇಂತಹ ಪೇಯಗಳಿಗೆ ಪರ್ಯಾಯವಾಗಿ ಏನನ್ನು ಸೇವಿಸಬಹುದು?

ಇಂತಹ ಪೇಯಗಳಿಗೆ ಪರ್ಯಾಯವಾಗಿ ಏನನ್ನು ಸೇವಿಸಬಹುದು?

ಹಾಲು, ಎಳನೀರು, ಲಿಂಬೆ ಜ್ಯೂಸ್, ಮತ್ತು ಹಣ್ಣಿನ ಜ್ಯೂಸ್‌ಗಳಂತಹ ಕೆಫೇನ್ ರಹಿತ ಪೇಯಗಳನ್ನು ನಿಮಗೆ ಸೇವಿಸಬಹುದಾಗಿದೆ. ಇನ್ನು ನೀವು ಕೆಫೀನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದ್ದೀರಿ ಎಂದಾದಲ್ಲಿ ಕೂಡ ಸಾಕಷ್ಟು ನೀರು ಸೇವಿಸಿ ಮತ್ತು ಈ ನೀರು ಸೇವನೆ ಅತ್ಯಧಿಕ ಪ್ರಮಾಣದ ಕೆಫೀನ್ ಅನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಹೆಚ್ಚು ಬಳಸುವ ಆಹಾರ ವಸ್ತುಗಳು ಮತ್ತು ಪಾನೀಯಗಳಲ್ಲಿರುವ ಕೆಫೇನ್ ಪ್ರಮಾಣವೆಷ್ಟು?

ಹೆಚ್ಚು ಬಳಸುವ ಆಹಾರ ವಸ್ತುಗಳು ಮತ್ತು ಪಾನೀಯಗಳಲ್ಲಿರುವ ಕೆಫೇನ್ ಪ್ರಮಾಣವೆಷ್ಟು?

*ಬ್ರ್ಯೂ ಮಾಡಿದ ಕಾಫಿ - 200 ಗ್ರಾಂ

*ಎಸ್‌ಪ್ರೆಸೊ - 90 ಗ್ರಾಂ

*ಇನ್‌ಸ್ಟಂಟ್ ಕಾಫಿ - 173 ಗ್ರಾಂ

*ಡಿಕಾಫಿನೇಟೆಡ್ ಕಾಫಿ - 12 ಗ್ರಾಂ

*ಬ್ರ್ಯೂ ಮಾಡಿದ ಚಹಾ - 75 ಗ್ರಾಂ

*ಐಸ್ ಚಹಾ - 40 ಗ್ರಾಂ

*ಇನ್‌ಸ್ಟಂಟ್ ಚಹಾ - 30 ಗ್ರಾಂ

*ಕೋಲಾ - 56 ಗ್ರಾಂ

*ಡಯೆಟ್ ಕೋಲಾ - 64 ಗ್ರಾಂ

*ಚಾಕಲೇಟ್ - 50 ಗ್ರಾಂ

English summary

Caffeine During Breastfeeding: Is It Bad?

Caffeine is a substance that is potentially harmful for your baby. Doctors recommend that the consumption of caffeine be avoided or at least be reduced while pregnant and breastfeeding. For most parents, a cup of coffee, tea or a cold can of aerated cola is a godsend when they try to relax. Abstaining from caffeinated drinks might not be easy. We have made a list of facts that tell you more about caffeine and its consumption during breastfeeding.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more