Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ತಾಯ್ತನದ ನಂತರ, ಜವಾಬ್ದಾರಿಗಳ ಸರಮಾಲೆ.....
ಸ್ತ್ರೀಯು ತನ್ನ ಜೀವನ ಕಾಲದಲ್ಲಿ ಪಡೆದುಕೊಳ್ಳಬಹುದಾದ ಅತಿದೊಡ್ಡ ಕೊಡುಗೆ ಎಂದರೆ ತಾಯಿಯಾಗುವುದಾಗಿದೆ. ಗರ್ಭವತಿಯಾಗುವುದು ಸ್ತ್ರೀಯ ಜೀವನದ ಮುಖ್ಯ ಘಟ್ಟಗಳಲ್ಲಿ ಒಂದಾಗಿದೆ. ಗರ್ಭಿಣಿಯಾಗಿರುವಾಗ ಮತ್ತು ಹೆರಿಗೆಯ ನಂತರವೂ ಸ್ತ್ರೀಯು ಕೆಲವೊಂದು ಆರೋಗ್ಯ ಸಲಹೆಗಳನ್ನು ಅರಿತುಕೊಂಡಿರಬೇಕಾಗಿರುತ್ತದೆ. ಮನೆಯಲ್ಲಿ ಹಿರಿಯರಿದ್ದಾಗ ಈ ಸಮಸ್ಯೆ ಉಂಟಾಗದೇ ಇದ್ದರೂ ಇಲ್ಲದಿದ್ದಲ್ಲಿ ನೀವೇ ಅವುಗಳನ್ನು ಅರಿತುಕೊಂಡು ಪಾಲಿಸಬೇಕಾಗುತ್ತದೆ. ಜಂಜಾಟದ ಬದುಕಿನ ನಡುವೆ, ತಾಯಿ-ಮಗುವಿನ ಮೂಕ ವೇದನೆ....
ಮಗುವಿನ ಪಾಲನೆ ಪೋಷಣೆಯ ಜವಬ್ದಾರಿ ತಂದೆ ತಾಯಿ ಇಬ್ಬರದ್ದಾಗಿದ್ದರೂ ತಾಯಿಯ ಮಮತೆ ವಾತ್ಸಲ್ಯ ತುಸು ಹೆಚ್ಚಾಗಿಯೇ ಬೇಕಾಗುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ತಾಯಿಯಾಗುವುದು ಕಷ್ಟಕರವಾದ ಕೆಲಸವೇ ಹೌದು. ಅದಾಗ್ಯೂ ತಾಯಿಯಾದ ನಂತರ ನೀವು ಮುಖ್ಯವಾಗಿ ಅರಿತುಕೊಳ್ಳಬೇಕಾದ ಸಲಹೆಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ....

ಕಲಿತುಕೊಳ್ಳುವುದು ಮುಗಿಯುವುದಿಲ್ಲ
ಡೈಪರ್ ತೊಡಿಸುವುದು, ಮಕ್ಕಳಿಗೆ ಬಹಿರ್ದಿಶೆಗೆ ಹೋಗುವುದನ್ನು ಕಲಿಸುವುದನ್ನು ನೀವು ಅವರಿಗೆ ತಿಳಿಸಿ ಕೊಡಬೇಕಾಗುತ್ತದೆ. ಮಕ್ಕಳು ದೊಡ್ಡದಾದಂತೆ ಅವರು ಮಾಡಬೇಕಾದ ಕೆಲಸಗಳನ್ನು ಅವರೇ ನಿರ್ವಹಿಸುವಂತೆ ನೀವು ತಿಳಿಸಿಕೊಡಬೇಕು.

ಕೆಲಸ ಹೆಚ್ಚು
ಮಗುವಿನ ಜನನದ ನಂತರ ನಿಮ್ಮ ಕೆಲಸಗಳೂ ಹೆಚ್ಚಾಗುತ್ತದೆ. ಮಗುವನ್ನು ಸ್ವಚ್ಛಪಡಿಸುವುದು, ಅವರಿಗೆ ತಿನ್ನಿಸುವುದು, ಸಾಂತ್ವಾನಪಡಿಸುವುದು, ಹೀಗೆ ಈ ಕೆಲಸ ಕಾರ್ಯಗಳು ಎಂದಿಗೂ ಮುಗಿಯುವುದೇ ಇಲ್ಲ.

ಅಸಹಾಯಕತೆ
ತಮ್ಮದೇ ಮಗುವನ್ನು ನೋಡಿಕೊಳ್ಳುವಾಗ ತಾಯಂದಿರು ಅಸಹಾಯಕರಾಗಿ ಬಿಡುತ್ತಾರೆ. ಮನೆ ಕೆಲಸ, ಉದ್ಯೋಗ ಜೊತೆಗೆ ರಚ್ಚೆ ಹಿಡಿಯುವ ಮಗು ಉಸ್ಸಪ್ಪಾ ಸಾಕಾಗುತ್ತಿದೆ ಎಂಬ ಉದ್ಗಾರ ತಾಯಂದಿರಿಂದ ಬರುತ್ತದೆ.

ನಿಮ್ಮಿಂದಲೂ ತಪ್ಪುಗಳು ಸಂಭವಿಸಬಹುದು
ಹೊಸದಾಗಿ ತಾಯಿಯಾದವರು, ಅದರಲ್ಲೂ ಪ್ರಥಮ ಮಗುವನ್ನು ಪಡೆದುಕೊಂಡವರು, ಮಗುವಿನ ಕಾಳಜಿ ವಿಷಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಈ ಸಮಯದಲ್ಲಿ ಆ ತಪ್ಪುಗಳನ್ನು ತಿದ್ದಿಕೊಂಡು ಮಗುವಿನ ಪೋಷಣೆಯನ್ನು ಮಾಡಬೇಕಾಗುತ್ತದೆ.

ತಮಗಾಗಿ ಸಮಯ ಇರುವುದಿಲ್ಲ
ಮಗುವನ್ನು ನೋಡಿಕೊಳ್ಳುವ ಭರದಲ್ಲಿ ತಮಗೆ ತಾವೇ ಮಹತ್ವ ನೀಡಲು ತಾಯಂದಿರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಮಗುವಿಗೆ ತಾಯಿಯ ಅಗತ್ಯವಾಗಿರುತ್ತದೆ.

ಎದೆಹಾಲುಣಿಸುವುದು
ನೀವು ಎದೆಹಾಲುಣಿಸುವ ತಂತ್ರವನ್ನು ಕಲಿಯುವವರೆಗೆ ಅದು ಕಚಗುಳಿಯನ್ನುಂಟು ಮಾಡುವಂತೆಯೂ, ನೋಯುವಂತೆಯೂ, ಮುಜುಗರಕ್ಕೆ ಈಡಾಗುವಂತೆಯೂ ಮಾಡುತ್ತದೆ.

ನಿಮ್ಮ ದೇಹದಲ್ಲಾಗುವ ಮಾರ್ಪಾಡುಗಳು
ಮಗುವಿನ ಜನನದ ನಂತರ ನಿಮ್ಮ ದೇಹದಲ್ಲಿ ಕೆಲವೊಂದು ಶಾಶ್ವತ ಬದಲಾವಣೆಗಳು ಉಂಟಾಗುತ್ತದೆ. ಅಂದರೆ ತೂಕ ಏರಿಕೆ, ನೇತುಬಿದ್ದಿರುವ ಹೊಟ್ಟೆ, ಸ್ಟ್ರೆಚ್ ಗುರುತುಗಳು, ಆದರೆ ಅದರೊಂದಿಗೆ ಸ್ವಲ್ಪ ಕಾಲ ನೀವು ಹೊಂದಿಕೊಳ್ಳಬೇಕಾಗುತ್ತದೆ.



Click it and Unblock the Notifications