For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರದ ಲೈಂಗಿಕ ಕ್ರಿಯೆ ಸುರಕ್ಷಿತವೇ?

By CM prasad
|

ಪ್ರೀತಿಯನ್ನು ಮನಸ್ಸುಗಳ ಮದ್ಯೆ ಹಂಚಿಕೊಂಡರೂ ಅದರ ಪೂರ್ಣ ಅನುಭವವನ್ನು ಪ್ರಣಯದ ಪ್ರಕ್ರಿಯೆಯಲ್ಲಿ ಮಾತ್ರ ಪಡೆಯಬಹುದು ಎಂದು ಅನೇಕರು ನಂಬಿದ್ದಾರೆ. ಇದನ್ನು ಪಡೆದೂಕೊಂಡಿದ್ದಾರೆ ನಿಜ. ಒಂದು ವಾಕ್ಯ ಪೂರ್ಣವಾಗಬೇಕಾದರೆ ಅದರ ಮದ್ಯೆ ಕೆಲವು ಅಲ್ಪವಿರಾಮಗಳು ಇದ್ದೇ ಇರುತ್ತದೆ. ಹಾಗೆಯೇ ನಮ್ಮ ಜೀವನದಲ್ಲಿಯೂ ಸಹ ಸುದೀರ್ಘವಾಗಿ ಪ್ರಯಣದ ಪ್ರಕ್ರಿಯೆಯನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಮಹಿಳೆಯರ ಗರ್ಭಧಾರಣೆಯಿಂದ ಸುಮಾರು ತಿಂಗಳುಗಳು ನೀವು ಕೂಡಿವಿಕೆಯನ್ನು ಮಾಡಲು ಸಾಧ್ಯವಿರುವುದಿಲ್ಲ. ಇದೊಂದು ಪ್ರಾಕೃತಿಕ ನಿಯಮ. ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಗರ್ಭಧಾರಣೆ ಮುಗಿಸಿ ಶಿಶುವಿನ ಜನನವಾದ ನಂತರ ಕೆಲವು ತಿಂಗಳು ಅಥವಾ ಎರಡು ವರ್ಷದ ತನಕ ಶಿಶುವಿನ ಪೋಷಣೆಯಲ್ಲಿಯೇ ಸಮಯ ಕಳೆದುಹೋಗಿರುತ್ತದೆ.

ಮತ್ತೊಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮಹಿಳೆಯರ ದೇಹ ಸ್ಥಿತಿ ಸಹಜ ಸ್ಥಿತಿಗೆ ಮರಳುವ ತನಕ ನೀವು ಕಾಯಲೇಬೇಕು. ಇದು ಅನಿವಾರ್ಯವೂ ಹೌದು. ಇನ್ನೂ ಕೆಲವು ಪ್ರಕರಣಗಳಲ್ಲಿ ಶಿಶುವಿನ ಜನನವಾದ ಕೆಲವೇ ದಿನಗಳಲ್ಲಿ ಕೂಡುವಿಕೆ ಮಾಡಲು ಹೋಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿವ ಸುದ್ದಿಗಳು ನಮ್ಮ ಕಣ್ಣ ಮುಂದಿವೆ. ಎಂಟನೆಯ ತಿಂಗಳಲ್ಲಿ ದೈಹಿಕ ಸಂಪರ್ಕ ಎಷ್ಟು ಸರಿ ?

ಸುರಕ್ಷಿತ ಲೈಂಗಿಕ ಕ್ರಿಯೆಗೆ ಕನಿಷ್ಠವೆಂದರೂ ಶಿಷುವಿನ ಜನನವಾದ 6 ವಾರಗಳ ತನಕ ಕಾಯಲೇಬೇಕು. ಇಲ್ಲವಾದರೆ ಈ ಪ್ರಕ್ರಿಯೆಯಿಂದ ಹೆಚ್ಚು ನೋವು ಉಂಟಾಗಿ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಗರ್ಭಧಾರಣೆಯ ನಂತರ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ನೀವು ಅವಶ್ಯವಾಗಿ ತಿಳಿದುಕೊಳ್ಳಬೇಕಾದ ಕೆಲ ವಿಶೇಷ ಸಂಗತಿಗಳನ್ನು ನಿಮಗಾಗಿ ಈ ಲೇಖನವು ನೀಡುತ್ತಿದೆ. ವಿವರಗಳಿಗೆ ಮುಂದೆ ಓದಿ...

ಹೆರಿಗೆಯ ನಂತರ 6 ವಾರಗಳ ತನಕ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ

ಹೆರಿಗೆಯ ನಂತರ 6 ವಾರಗಳ ತನಕ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ

ಸಿ-ಸೆಕ್ಷನ್ ಅಥವಾ ಸಹಜ ಹೆರಿಗೆಯಾಗಿರಲಿ, ಪ್ರಾರಂಭಿಕ 6 ವಾರಗಳ ತನಕ ಲೈಂಗಿಕ ಕ್ರಿಯೆಯಿಂದ ದೂರವಿರಿ ಎಂದು ನಿಮ್ಮ ವೈದ್ಯರು ಸಲಹೆ ನೀಡುತ್ತಾರೆ. ಹೆಚ್ಚು ಸಂಭ್ರಮಿಸಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ಮಹಿಳೆಯರ ದೇಹವು ಸಹಜ ಸ್ಥಿತಿಗೆ ಮರಳಲು ಕನಿಷ್ಠ 2 ವರ್ಷವಾದರೂ ಬೇಕಾಗುತ್ತದೆ. ಇದನ್ನು ನಿರ್ಲಕ್ಷಿಸುವಂತಿಲ್ಲ.

ಹೆರಿಗೆಯ ನಂತರದ ಲೈಂಗಿಕ ಕ್ರಿಯೆಯಲ್ಲಿ ಹೊಸ ಅನುಭವ

ಹೆರಿಗೆಯ ನಂತರದ ಲೈಂಗಿಕ ಕ್ರಿಯೆಯಲ್ಲಿ ಹೊಸ ಅನುಭವ

ಹೌದು! ಹೆರಿಗೆಯ ನಂತರದ ಲೈಂಗಿಕ ಕ್ರಿಯೆಯು ನಿಮಗೆ ಹೊಸ ಅನುಭವವನ್ನುಂಟು ಮಾಡುತ್ತದೆ. ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳು, ನಿದ್ರೆಗೆಡುವಿಕೆ ಮತ್ತು ನವಜಾತ ಶಿಶುವಿನ ಬೇಡಿಕೆಗಳು- ಇವೆಲ್ಲವೂ ನಿಮ್ಮ ದೇಹವನ್ನು ಘಾಸಿಗೊಳಿಸಿರುತ್ತದೆ. ಒಟ್ಟಾರೆಯಾಗಿ ನಿಮೊಗೊಂದು ಹೊಸ ಅನುಭವವನ್ನು ನೀಡುತ್ತದೆ.

ನಿಮ್ಮ ಕಾಮದ ದಾಹ ಕಡಿಮೆಯಾದ ಅನುಭವವಾಗುತ್ತದೆ

ನಿಮ್ಮ ಕಾಮದ ದಾಹ ಕಡಿಮೆಯಾದ ಅನುಭವವಾಗುತ್ತದೆ

ಆಕ್ಸಿಟಾಕ್ಸಿನ್ ಎಂಬ ಸತ್ವವು ತಾಯಂದಿರಲ್ಲಿ ಸ್ರವಿಸುವುದರಿಂದ ನವಜಾತ ಶಿಶುವಿನೊಂದಿಗೆ ಹೊಂದಾಣಿಕೆಗೆ ನೆರವಾಗಲಿದ್ದು, ಕಾಮದ ದಾಹವನ್ನು ಮೊದಲಿಗಿಂತ ಕಡಿಮೆಗೊಳಿಸಿರುತ್ತದೆ. ತಂದೆಯರೂ ಸಹ ಇದಕ್ಕೆ ಹೊರತಾಗಿಲ್ಲ. ವಾಸೊಪ್ರೆಸ್ಸಿನ್ ಎಂಬ ಹಾರ್ಮೊನ್ ತಂದೆಯರಲ್ಲಿ ಸ್ರವಿಸಲಿದ್ದು, ನವಜಾತ ಶಿಶುವಿನೊಂದಿಗೆ ಹೊಂದಾಣಿಕೆಗೆ ನೆರವಾಗಲಿದ್ದು, ಇದರಿಂದ ಕಾಮದ ಪ್ರಮಾಣವು ಕಡಿಮೆಯಾಗುತ್ತದೆ.

ತುರ್ತು ಲೈಂಗಿಕ ಕ್ರಿಯೆಗೆ ತೃಪ್ತಿಪಡಬೇಕಾಗುತ್ತದೆ

ತುರ್ತು ಲೈಂಗಿಕ ಕ್ರಿಯೆಗೆ ತೃಪ್ತಿಪಡಬೇಕಾಗುತ್ತದೆ

ನೀವು ಎದೆ ಹಾಲುಣಿಸುವುದನ್ನು ನಿಲ್ಲಿಸಿದರೂ ಅಥವಾ ನಿಮ್ಮ ಹಾರ್ಮೊನ್ ಗಳು ನಿಮ್ಮ ಮೇಲೆ ಪ್ರಭಾವ ಬೀರದಿದ್ದರೂ ಸಹ ದೀರ್ಘವಾದ ವಿರಾಮದಿಂದ ಮತ್ತೆ ಅದೇ ಹುರುಪಿನಲ್ಲಿ ಲೈಂಗಿಕ ಕ್ರಿಯೆಯನ್ನು ನಿರ್ವಹಿಸುವುದು ಒಂದು ಪ್ರಶ್ನೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತುರ್ತು ಲೈಂಗಿಕ ಕ್ರಿಯೆಗೆ ತೃಪ್ತಿಪಡಬೇಕಾಗುತ್ತದೆ

ತುರ್ತು ಲೈಂಗಿಕ ಕ್ರಿಯೆಗೆ ತೃಪ್ತಿಪಡಬೇಕಾಗುತ್ತದೆ

ಅಲ್ಲದೆನಿಮ್ಮ ದೇಹ ಸ್ಥಿತಿಯು ಲೈಂಗಿಕ ಕ್ರಿಯೆಗೆ ಸಂಪೂರ್ಣವಾಗಿ ಹೊಂದುಕೊಳ್ಳುವವರೆಗೂ ತುರ್ತು ಲೈಂಗಿಕ ಕ್ರಿಯೆಯಲ್ಲಿಯೇ ತೃಪ್ತಿಪಡಬೇಕಾದ ಅನಿವಾರ್ಯತೆ ಇರುತ್ತದೆ.

English summary

Facts about sex after pregnancy you need to know

Everyone knows that sex life goes for a toss post pregnancy and childbirth. It is difficult for you and your partner to be on the same page, especially at nights when you are drop-dead tired. What more? Sex could also be more pain that pleasure during the initial months post delivery, and this has nothing to do with the love you nurture for each other. Here are some facts about sex after 
 pregnancy that you should know.
X
Desktop Bottom Promotion