For Quick Alerts
ALLOW NOTIFICATIONS  
For Daily Alerts

ಎಲೆಕೋಸು ಎಲೆಗಳು- ಸ್ತನಗಳ ಊತದ ಸಮಸ್ಯೆಗೆ ರಾಮಬಾಣ

By Deepak
|

ಗರ್ಭಧಾರಣೆಯ ನಂತರದ ದಿನಗಳಲ್ಲಿ ಸ್ತನದ ಊತ ಬರುವುದು ಸಾಮಾನ್ಯ. ಇದು ಬರಲು ಹಲವಾರು ಕಾರಣಗಳು ಇರುತ್ತವೆ. ಇದಕ್ಕೆ ಪ್ರಮುಖ ಕಾರಣಗಳು, ಮಗುವಿಗೆ ಸರಿಯಾಗಿ ಹಾಲು ಕುಡಿಸದೆ ಇರುವುದು. ಹಾಲನ್ನು ಖಾಲಿ ಮಾಡದೆ ಇರುವುದು, ಹಾಲು ಕುಡಿಸುವ ನಡುವೆ ದೀರ್ಘ ಕಾಲದ ಅಂತರವಿರುವುದು, ಇತ್ಯಾದಿಗಳಾಗಿರುತ್ತವೆ.

Cabbage leaves – a natural way to treat breast engorgement

ಈ ಸಮಸ್ಯೆಯು ತಾಯಿಗೆ ಹೆಚ್ಚಿನ ವೇದನೆಯನ್ನು ನೀಡಿ, ಹಾಲು ಕುಡಿಸಲು ಕಷ್ಟವಾಗುವಂತೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಮಗುವಿಗೆ ಹಸಿವಾದಾಗ ತಪ್ಪದೆ ಹಾಲು ಕುಡಿಸಿ. ನಿಮ್ಮ ಮಗು ಸರಿಯಾಗಿ ಹಾಲನ್ನು ಕುಡಿಯುತ್ತಿದ್ದಲ್ಲಿ, ನಿಮಗೆ ಈ ಸಮಸ್ಯೆ ಬರುವುದಿಲ್ಲ. ಎರಡು ಹಾಲು ಕುಡಿಸುವ ಅವಧಿಯ ನಡುವಿನ ಅಂತರದಲ್ಲಿ ನಿಮಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು

ಅಧ್ಯಯನಗಳ ಪ್ರಕಾರ ನಿಮ್ಮ ಸ್ತನದ ಊತವನ್ನು ಮತ್ತು ನೋವನ್ನು ಕಡಿಮೆ ಮಾಡಲು ಸ್ವಾಭಾವಿಕ ಮಾರ್ಗಗಳು ಇವೆ. ಅದು ಯಾವುದು ಎಂದರೆ ಎಲೆ ಕೋಸಿನ ಎಲೆ. ಇದರಿಂದ ಅತ್ಯುತ್ತಮ ಫಲಿತಾಂಶವನ್ನು ಫ್ರೀಜರ್‌ನಲ್ಲಿಡಿ, ಇದನ್ನು ಸ್ತನದ ಮೇಲೆ ಇರಿಸಿಕೊಳ್ಳುವುದರಿಂದ ತಂಪು ಕಂಪ್ರೆಸ್ ರೀತಿ ಇದು ನಿಮಗೆ ಆರಾಮ ನೀಡುತ್ತದೆ.

120 ಮಕ್ಕಳ ತಾಯಂದಿರ ಮೇಲೆ ಮಾಡಿದ ಅಧ್ಯಯನದ ಆಧಾರದ ಮೇಲೆ ಹೆರಿಗೆಯಾದ 72 ಗಂಟೆಗಳ ಒಳಗೆ ಎಲೆ ಕೋಸಿನ ಚಿಕಿತ್ಸೆಯನ್ನು ಮಾಡಿದ ತಾಯಂದಿರು ಸ್ತನ ಊತವಾಗುವಿಕೆಯಿಂದ ಪಾರಾಗಿದ್ದಾರೆ ಎಂದುತಿಳಿದು ಬಂದಿದೆ. ಇದು ಕನಿಷ್ಠ ಆರು ವಾರಗಳ ತನಕ ಈ ಸಮಸ್ಯೆ ಬರದಂತೆ ತಡೆಯುತ್ತದೆಯಂತೆ. ಇದಲ್ಲದೆ ಈ ಪರಿಹಾರವು ಹಾಲು ಕುಡಿಸುವ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಎಲೆಕೋಸಿನ ಅತ್ಯುತ್ತಮ 10 ಪ್ರಯೋಜನಗಳು

ಎಲೆ ಕೋಸಿನ ಎಲೆಗಳು ಹೇಗೆ ಕೆಲಸ ಮಾಡುತ್ತವೆ?

ಎಲೆ ಕೋಸಿನ ಎಲೆಗಳು ಹೇಗೆ ಈ ಸಮಸ್ಯೆಗೆ ಸಹಾಯ ಮಾಡುತ್ತವೆ ಎಂದು ಸಂಪೂರ್ಣವಾಗಿ ತಿಳಿದಿಲ್ಲ. ಆದರೆ ಇದು ಶಾಖ ಮತ್ತು ತಂಪು ತತ್ವದ ಆಧಾರದ ಮೇಲೆ ಕೆಲಸ ಮಾಡುತ್ತದೆ. ಮಂಜುಗಟ್ಟಿದ ಎಲೆ ಕೋಸಿನ ಎಲೆಗಳನ್ನು ಊತ ಬಂದ ಸ್ತನದ ಮೇಲೆ ಇಡುವುದರಿಂದ ನಿಮಗೆ ಸ್ವಲ್ಪ ಆರಾಮ ನೀಡುತ್ತದೆ. ಇದು ನಿಮ್ಮ ಸ್ತನದಲ್ಲಿರುವ ಅಧಿಕ ಹಾಲನ್ನು ಕಡಿಮೆ ಮಾಡಿ, ಗಡ್ಡೆಕಟ್ಟಿಕೊಳ್ಳುವುದನ್ನು ತಡೆಯುತ್ತದೆ. ನಿಯಮಿತವಾಗಿ ಬಳಸಿದರೆ, ಇದು ಹಾಲಿನ ಸರಬರಾಜನ್ನು ಹೆಚ್ಚಿಸುತ್ತದೆ ಮತ್ತು ಹಾಲು ಕುಡಿಸುವ ನೋವನ್ನು ಕಡಿಮೆ ಮಾಡುತ್ತದೆ.
English summary

Cabbage leaves – a natural way to treat breast engorgement

Breast engorgement is very common during the initial days post delivery. There could be a variety of reason for this – improper latch of the baby, unable to empty the breasts, long gaps between feeds, etc. One way to relieve yourself of this problem is to feed your baby on demand and as long as she is comfortably feeding. However, if that doesn’t help and your breasts get often engorged between two feeds – try applying cabbage leaves on them to get relief. Studies suggest that this is a natural way to help ease engorgement and painful breasts.
X
Desktop Bottom Promotion