For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಕೂದಲುದುರುವ ಸಮಸ್ಯೆ ಕಾಡುತ್ತಿದೆಯೇ?

By Deepak
|

ಜೀವನದಲ್ಲಿ ಎಲ್ಲದಕ್ಕೂ ಒಂದು ಸಮಯ ಎಂಬುದಿರುತ್ತದೆ. ನಮ್ಮ ದೇಹ ಕೂಡ ಹಂತ ಹಂತವಾಗಿ ಬೆಳೆದು ಸಮಯಕ್ಕೆ ಸರಿಯಾಗಿ ತಯಾರಾಗುತ್ತದೆ. ಅನಿರೀಕ್ಷಿತವಾಗಿ ಸಮಸ್ಯೆಗಳು ಬಂದಾಗ ಅದಕ್ಕೆ ಹೊಂದಿಕೊಳ್ಳಲು ನಮ್ಮ ದೇಹ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬ ಮಹಿಳೆಯೂ ಗರ್ಭಿಣಿಯಾಗುವುದರ ಬಗ್ಗೆ ತನ್ನದೇ ಆದ ಕನಸನ್ನು ಹೊಂದಿರುವುದು ಸಹಜ. ಮಗುವನ್ನು ಹೊತ್ತು ಹೆರುವುದು ತಾಯಿ ಹೃದಯಕ್ಕೆ ಸಂತೋಷ ನೀಡುವುದರ ಜೊತೆಗೆ ಮಹಿಳೆಯನ್ನು ಪರಿಪೂರ್ಣಳನ್ನಾಗಿಸುತ್ತದೆ.

ಈ ಅವಧಿಯಲ್ಲಿ ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಲ್ಪ ಹೆಚ್ಚು ಕಡಿಮೆಗಳು ಸಂಭವಿಸಿದರು ಸಹ ಆಕೆ ತನ್ನ ಮಗುವಿಗೆ ಜನ್ಮ ನೀಡುವ ಸಂತೋಷದಲ್ಲಿ ಈ ನೋವು ಮತ್ತು ಅಪಾಯಗಳನ್ನು ನುಂಗಿಕೊಳ್ಳುತ್ತಾಳೆ. ಆದರೆ ಗರ್ಭಿಣಿಯಾಗಿರುವಾಗ ಕೂದಲು ಉದುರುವಿಕೆ ಸಮಸ್ಯೆಯು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಹೆರಿಗೆಯಾದ ನಂತರ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಕೂದಲಿನ ಬಗ್ಗೆ ಜಾಗ್ರತೆಯಿರಲಿ

ವೈದ್ಯಕೀಯವಾಗಿ ಈ ಹಂತವನ್ನು ಟೆಲೊಜೆನ್ ಎಫ್ಲುವಿಯಮ್ ಎಂದು ಕರೆಯುತ್ತಾರೆ. ಇದು ಹೆರಿಗೆಯ ನಂತರ ಕೂದಲು ಉದುರುವಿಕೆಯ ಸಮಸ್ಯೆಯನ್ನು ತರುತ್ತದೆ. ಇದರ ಲಕ್ಷಣಗಳು ಮತ್ತು ಗಂಭೀರತೆಯು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವೊಂದು ತೀರಾ ಗಂಭೀರ ಪ್ರಕರಣಗಳಲ್ಲಿ ತಾಯಿಯು ತನ್ನ ತಲೆಯಲ್ಲಿರುವ ಸಂಪೂರ್ಣ ಕೂದಲುಗಳನ್ನು ಕಳೆದುಕೊಂಡು ಬೊಕ್ಕ ತಲೆಯವಳಾಗುವ ಅಪಾಯವನ್ನು ಎದುರಿಸಬಹುದು. ಅದಕ್ಕಾಗಿ ನಾವು ಇಂದು ಹೆರಿಗೆಯ ನಂತರ ಕೂದಲು ಉದುರುವ ಸಮಸ್ಯೆಯನ್ನು ತಡೆಯಲು ಬೇಕಾದ ಸಲಹೆಗಳನ್ನು ನೀಡುತ್ತಿದ್ದೇವೆ. ಒಂದು ವೇಳೆ ನಿಮಗೆ ಈ ಸಮಸ್ಯೆ ಇದ್ದಲ್ಲಿ, ಅಥವಾ ಸಮಸ್ಯೆ ಬರಬಹುದು ಎಂಬ ಮುನ್ನೆಚ್ಚರಿಕೆ ಇದ್ದಲ್ಲಿ ಇದನ್ನು ಓದಿ, ನಾವು ನೀಡಿದ ಸಲಹೆಗಳನ್ನು ಪಾಲಿಸಿ..

ಆರೋಗ್ಯಕರವಾದ ಡಯಟ್ ಪಾಲಿಸಿ

ಆರೋಗ್ಯಕರವಾದ ಡಯಟ್ ಪಾಲಿಸಿ

ನೀವು ಸೇವಿಸುವ ಆಹಾರವು ನಿಮ್ಮ ದೇಹದ ಆರೋಗ್ಯವನ್ನು ನಿರ್ಧರಿಸುತ್ತದೆ, ಅಷ್ಟೇ ಅಲ್ಲದೆ ನಿಮ್ಮ ಕೂದಲಿನ ಆರೋಗ್ಯವನ್ನು ಸಹ ನಿರ್ಧರಿಸುತ್ತದೆ. ಅದಕ್ಕಾಗಿ ನಿಮ್ಮ ಆಹಾರದ ಕುರಿತಾಗಿ ಸ್ವಲ್ಪ ಹೆಚ್ಚಿನ ಕಾಳಜಿಯನ್ನು ವಹಿಸಿ. ಹಣ್ಣು ಮತ್ತು ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿ.

 ಕೂದಲು ಬೆಳೆಯಲು ಔಷಧಿಯನ್ನು ಸೇವಿಸಬೇಡಿ

ಕೂದಲು ಬೆಳೆಯಲು ಔಷಧಿಯನ್ನು ಸೇವಿಸಬೇಡಿ

ಕೂದಲು ಚೆನ್ನಾಗಿ ಬೆಳೆಯಲಿ ಎಂದು ಮಾರುಕಟ್ಟೆಯಲ್ಲಿ ದೊರೆಯುವ ಔಷಧಿಗಳನ್ನು ಸೇವಿಸಲು ಹೋಗಬೇಡಿ. ಇದರಿಂದ ನಿಮ್ಮ ದೇಹದ ಮೇಲೆ ಅಡ್ಡಪರಿಣಾಮಗಳುಂಟಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಈ ವಿಧಾನವು ತೀರಾ ಕೃತಕವಾಗಿರುತ್ತದೆ. ಆದ್ದರಿಂದ ಈ ವಿಧಾನವನ್ನು ಪಾಲಿಸಲು ಹೋಗಬೇಡಿ, ಕೂದಲು ಬೆಳೆಯಲು ಮತ್ತು ಉದುರುವುದನ್ನು ನಿಲ್ಲಿಸಲು ಸ್ವಾಭಾವಿಕ ವಿಧಾನಗಳು ಇವೆ ಎಂಬುದನ್ನು ಮರೆಯಬೇಡಿ.

ಡಯಟ್‌ನಲ್ಲಿ ವಿಟಮಿನ್‌ಗಳನ್ನು ಮತ್ತು ಪೋಷಕಾಂಶಗಳನ್ನು ಸೇರಿಸಿ

ಡಯಟ್‌ನಲ್ಲಿ ವಿಟಮಿನ್‌ಗಳನ್ನು ಮತ್ತು ಪೋಷಕಾಂಶಗಳನ್ನು ಸೇರಿಸಿ

ವಿಟಮಿನ್‌ಗಳು ಮತ್ತು ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಿ. ಇವುಗಳು ನಿಮ್ಮ ಆಹಾರದಲ್ಲಿ ಅಗತ್ಯ ಪ್ರಮಾಣದಲ್ಲಿದ್ದರೆ ನಿಮ್ಮ ದೇಹದಲ್ಲಿರುವ ಓರೆ-ಕೋರೆಗಳು ತನ್ನಷ್ಟಕ್ಕೆ ತಾನೇ ಸರಿಯಾಗುತ್ತವೆ.

ಒಂದು ಒಳ್ಳೆಯ ಶಾಂಪೂವನ್ನು ಹುಡುಕಿಕೊಳ್ಳಿ

ಒಂದು ಒಳ್ಳೆಯ ಶಾಂಪೂವನ್ನು ಹುಡುಕಿಕೊಳ್ಳಿ

ನಿಮ್ಮ ಕೂದಲನ್ನು ಪ್ರತಿನಿತ್ಯ ಒಂದು ಒಳ್ಳೆಯ ಶಾಂಪೂವಿನಿಂದ ತೊಳೆದುಕೊಳ್ಳಿ. ಇದು ನಿಮ್ಮ ಕೂದಲಿನ ಬುಡವನ್ನು ಸರಿಪಡಿಸಿ, ಪೋಷಕಾಂಶವನ್ನು ಒದಗಿಸುತ್ತದೆ. ಇದು ಒಳ್ಳೆಯದು ಮತ್ತು ಧನಾತ್ಮಕವು ಸಹ ಆದ ಪರಿಹಾರೋಪಾಯವಾಗಿರುತ್ತದೆ. ಇದನ್ನು ಬಳಸಿಕೊಂಡು ಸಹ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು.

ಅಗಲ-ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಿ

ಅಗಲ-ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಿ

ಒಂದು ವೇಳೆ ನಿಮ್ಮ ಕೂದಲು ದುರ್ಬಲವಾಗಿದ್ದಲ್ಲಿ, ಕೂದಲನ್ನು ಕಿತ್ತು ಹಾಕುವಂತಹ ಸಣ್ಣ ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಬೇಡಿ. ಅದರ ಬದಲಿಗೆ ಅಗಲವಾದ ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಿ. ಇದರಿಂದ ಕೂದಲನ್ನು ಬಾಚುವಾಗ ಕಡಿಮೆ ಪ್ರಮಾಣದ ಕೂದಲುಗಳು ಉದುರುತ್ತವೆ. ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಸ್ವಲ್ಪ ಮಟ್ಟಿಗಾದರು ಕಡಿಮೆಯಾಗುತ್ತದೆ.

English summary

Tips To Prevent Hair Fall Post Pregnancy

Pregnancy has been a very memorable part of every woman’s life that brings the real meaning to her life. It brings her the rare experience of motherhood. Though it is a critical stage of her life, she bears all the pain and risks just to become the mother of her own child. Pregnancy brings quite a few bodily complications to the women, but most of these complications can be resolved after pregnancy period is over.
Story first published: Friday, September 4, 2015, 15:35 [IST]
X
Desktop Bottom Promotion