For Quick Alerts
ALLOW NOTIFICATIONS  
For Daily Alerts

ಮಗು ಎದೆಹಾಲು ಕುಡಿಯೋದು ಬಿಡಿಸಲು ಇದೆ ನೈಸರ್ಗಿಕ ವಿಧಾನ

By Su.Ra
|

ತಾಯಿಯ ಎದೆಹಾಲು ಮಗುವಿಗೆ ಅತ್ಯವಶ್ಯಕ. ಒಂದುವರೆ ವರ್ಷದವರೆಗೆ ತಾಯಿ ಎದೆಹಾಲನ್ನು ಮಗುವಿಗೆ ಕುಡಿಸುವುದು ಒಳಿತು. ತದನಂತ್ರ ಮಗುವಿಗೆ ಹಾಲು ಬಿಡಿಸಿ, ನಾರ್ಮಲ್ ಆಹಾರಕ್ರಮಕ್ಕೆ ಬರುವಂತೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳಿವೆ. ಎದೆಹಾಲು ಕಡಿಮೆ ಮಾಡಲು ಮತ್ತು ಮಗುವಿಗೆ ಹಾಲು ಬಿಡಿಸಲು ಇರುವ ಕೆಲವು ನೈಸರ್ಗಿಕ ಪದ್ಧತಿಗಳು ತಿಳಿದುಕೊಳ್ಳಲು ಮುಂದೆ ಓದಿ.

ಕೆಲವು ಸಂದರ್ಭದಲ್ಲಿ ಎದೆಹಾಲು ಬತ್ತಿಸಬೇಕಾದ ಅನಿರ್ವಾಯತೆ ಕೆಲವು ಮಹಿಳೆಯರಿಗೆ ಎದುರಾಗ್ಬಹುದು. ಅತಿಯಾಗಿ ಹಾಲಿದ್ದು ಬಸಿಯುತ್ತಿದ್ದಾಗ ಅಥ್ವಾ ಆರು, ಏಳು ತಿಂಗಳ ಗರ್ಭಿಣಿಗೆ ಅಬಾರ್ಷನ್ ಆದಾಗ ತಾಯಿ ಎದೆಹಾಲು ಇಂಗಿಸಬೇಕಾದ ಅನಿವಾರ್ಯತೆ ಎದುರಾಗ್ಬಹುದು. ಆ ಸಂದರ್ಭದಲ್ಲಿ ನೀವೇನು ಮಾಡ್ಬಹುದು ಇಲ್ಲಿದೆ ನೋಡಿ.

ವೀಳ್ಯದ ಎಲೆ
ನಿಮ್ಮ ಎದೆಹಾಲು ಕಡಿಮೆಯಾಗ್ಬೇಕು ಅಂದ್ರೆ ವೀಳ್ಯದೆಲೆ ಒಂದು ಬೆಸ್ಟ್ ಮೆಡಿಸಿನ್.. ವೀಳ್ಯೆದೆಲೆಯನ್ನು ನಿಮ್ಮ ಬ್ಲೌಸ್‌ನ ಒಳಗೆ ಇಟ್ಟುಕೊಂಡು ಎದೆಗೆ ಒತ್ತಿಕೊಳ್ಳುವಂತೆ ಇಟ್ಕೊಳ್ಳಿ

Tips to Dry Up Your Breast Milk Supply

ಎಲೆಕೋಸು
ಎಲೆಕೋಸಿನಲ್ಲಿರುವ ಕೆಲವು ಅಂಶಗಳು ನಿಮ್ಮ ಎದೆಹಾಲು ಕಡಿಮೆಗೊಳಿಸಲು ಸಹಕಾರಿಯಾಗಿರುತ್ತೆ. ಎಲೆಕೋಸಿನ ಒಂದೆರಡು ದಳಗಳನ್ನು ತೆಗೆದುಕೊಂಡು ಮಡಚಿ. ನಿಮ್ಮ ಎದೆಯ ಸೈಜ್‌ಗೆ ತಕ್ಕಂತೆ ಅದನ್ನು ನಿಮ್ಮ ರವಿಕೆಯಲ್ಲಿ ಇಟ್ಟುಕೊಳ್ಳಿ.. ಕೆಲವೇ ದಿನ ಹೀಗೆ ಮಾಡೋದ್ರಿಂದ ಎದೆ ಹಾಲು ಇಂಗುತ್ತೆ.

ಅವರೆ
ಅವರೆ ಬೇಳೆ ಅಥ್ವಾ ಕಾಳು ಎದೆಹಾಲು ನಿಯಂತ್ರಕಗಳಲ್ಲಿ ಒಂದು. ಅತಿಯಾಗಿ ಹಾಲಿದ್ದು ಎದೆನೋವು ಅನುಭವಿಸುವ ಮಹಿಳೆಯರು ಅಥ್ವಾ ಮಗುವಿಗೆ ಹಾಲು ಬಿಡಿಸಬೇಕು ಅಂದುಕೊಳ್ಳುವವರು ಅವರೆಯನ್ನು ಕೂಡ ಬಳಕೆ ಮಾಡ್ಬಹುದು.ಅವರೆ ಕಾಳಿನ ಅಡುಗೆ ಸೇವನೆ ಮಾಡ್ಬಹುದು.

ಮಲ್ಲಿಗೆ ಹೂವು
ಹೂವಿನಲ್ಲೂ ಇಂತದ್ದೊಂದು ಶಕ್ತಿ ಇದೆ ಅಂದ್ರೆ ನೀವು ಆಶ್ಚರ್ಯ ಪಡಲೇಬೇಕು. ಮಲ್ಲಿಗೆ ಹೂವನ್ನು ಕೂಡ ಎದೆಹಾಲು ಕುಗ್ಗಿಸಲು ಬಳಸ್ಬಹುದು. ಮಲ್ಲಿಗೆ ಹೂವಿನ ಪೇಸ್ಟ್ ತಯಾರಿಸಿಕೊಂಡು ನಿಮ್ಮ ಬ್ರಾದೊಳಗೆ ಇಟ್ಟುಕೊಳ್ಳೋದು, ಅಥ್ವಾ ಪರಿಮಳಯುಕ್ತ ಮಲ್ಲಿಗೆ ಹೂವುಗಳನ್ನೇ ಇಟ್ಟುಕೊಳ್ಳೋದ್ರಿಂದ ಕೆಲವೇ ದಿನಗಳಲ್ಲಿ ಹಾಲು ಒಣಗಲು ಇವು ಕಾರಣವಾಗುತ್ತೆ. ಇನ್ನು ಮಗು ನಿಮ್ಮ ಎದೆಹಾಲನ್ನು ಕುಡಿಯೋದನ್ನು ನಿಲ್ಲಿಸಬೇಕು ಅಂದ್ರೂ ನೀವು ಯಾವ್ಯಾವುದೋ ಇಂಜೆಕ್ಷನ್ ಅಥ್ವಾ ಮಾತ್ರೆಗಳ ಮೊರೆ ಹೋಗುವ ಅಗತ್ಯವಿಲ್ಲ. ನೈಸರ್ಗಿಕ ವಿಧಾನದಲ್ಲಿಯೇ ಬಿಡಿಸಬಹುದು. ಅದಕ್ಕಾಗಿ ಬಳಕೆ ಮಾಡಬಹುದಾದ ವಸ್ತುಗಳು ಹೀಗಿವೆ ನೋಡಿ..

ಕಹಿಬೇವು
ಕಹಿ ಯಾವಾಗ್ಲೂ ಕೂಡ ಸಹಿಸೋಕೊಳ್ಳೋಕೆ ಆಗೋದಿಲ್ಲ. ಕವಿಬೇವಿನ ಎಣ್ಣೆ, ಕಹಿಬೇವಿನ ಸೊಪ್ಪು ಯಾವುದನ್ನು ಬೇಕಾದ್ರೂ ನೀವು ಮಗು ಹಾಲು ಕುಡಿಯೋದನ್ನು ನಿಲ್ಲಿಸೋಕೆ ಬಳಸ್ಬಹುದು. ನಿಮ್ಮ ಎದೆಗೆ ಈ ಎಣ್ಣೆ ಅಥವಾ ಸೊಪ್ಪುನ್ನು ಹಚ್ಚಿಕೊಂಡು ಮಗುವಿಗೆ ಹಾಲುಣಿಸಲು ಮುಂದಾಗಿ, ಆಗ ಮಗು ಅದನ್ನು ತಿಂದು ಅಮ್ಮನ ಎದೆ ಹಾಲು ಕಹಿಯದೆ. ರುಚಿಯಾಗಿಲ್ಲ ಎಂದು ಭಾವಿಸಿ ಎದೆ ಹಾಲು ಕುಡಿಯಲು ಹಾತೊರೆಯುವುದನ್ನ ನಿಲ್ಲಿಸುತ್ತೆ

ಹಾಗಲಕಾಯಿ
ಹಾಗಲಕಾಯಿ ಕೂಡ ಕಹಿ ಇರುತ್ತೆ. ಕಹಿ ಅಂದಾಗ ಮಗುವಿಗೆ ಹಾಲಿನ ಬಗ್ಗೆ ಜಿಗುಪ್ಸೆ ಬರತ್ತೆ. ಹಾಗಲಕಾಯಿ ರಸವನ್ನು ತೆಗೆದುಕೊಳ್ಳಿ. ಅದನ್ನು ಎದೆಗೆ ಹಚ್ಚಿಕೊಂಡು ಮಗುವಿಗೆ ಹಾಲುಣಿಸಲು ಮುಂದಾಗಿ. ಕಹಿಬೇವಿನಂತೆ ಹಾಗಲಕಾಯಿ ರಸವೂ ಕೂಡ ಮಗು ಅಮ್ಮನ ಹಾಲು ಬೇಡ ಅಂತ ಹೇಳಲು ಕಾರಣವಾಗುತ್ತೆ.

ಇಂಗು
ಇಂಗು ಘಾಟಿರುವ ಸಂಬಾರ ಪದಾರ್ಥ. ಇಂಗು ಬರೀಬಾಯಿಗೆ ತಿನ್ನೋಕೆ ಅಸಾಧ್ಯವೇ ಸರಿ. ಹಾಗಾಗಿ ಇಂಗಿನ ಸ್ಮೆಲ್ ಮಗುವಿಗೂ ಅಸಹ್ಯ ಹುಟ್ಟಿಸುತ್ತೆ. ಇಂಗಿನ ಪೌಡರ್‌ ಇಲ್ಲವೇ ಗಟ್ಟಿಯಾದ ಇಂಗನ್ನು ನೀರಿನಲ್ಲಿ ಕರಗಿಸಿ ಅದನ್ನು ಎದೆಗೆ ಹಚ್ಚಿಕೊಳ್ಳಿ.. ಕೂಡಲೇ ಮಗುವಿಗೆ ಎದೆಹಾಲು ಉಣಿಸಲು ಮುಂದಾಗಿ. ಇಂಗಿನ ಒಗರು ಮಿಶ್ರಿತ ಘಾಟು ವಾಸನೆ ಮಗುವಿಗೆ ಇರಿಟೇಟ್ ಮಾಡುತ್ತೆ. ಮತ್ತು ಅಮ್ಮನ ಹಾಲೇ ಹೀಗಿದೆ ಅಂತ ಭಾವಿಸಲು ಕಾರಣವಾಗುತ್ತೆ. ಹಾಗಾಗಿ ಒಂದೆರಡು ದಿನ ಹೀಗೆ ಮಾಡಿದ್ರೆ ಮಗು ತನ್ನಿಂದ ತಾನೇ ಅಮ್ಮನ ಹಾಲು ಬೇಡ ಅಂತ ನಿರ್ಧರಿಸುತ್ತೆ.

English summary

Tips to Dry Up Your Breast Milk Supply

Whether you choose to breastfeed for one month or one year, you will eventually want to stop. Some women may have their breast milk supply dry up naturally, but most do not. Read on to learn some tricks to help speed up this process.
X
Desktop Bottom Promotion