For Quick Alerts
ALLOW NOTIFICATIONS  
For Daily Alerts

ಪ್ರಸವದ ನಂತರದ ಒತ್ತಡ ಕಡಿಮೆ ಮಾಡುವ ಮಾರ್ಗಗಳು

By Poornima Heggade
|

ಗರ್ಭಾವಸ್ಥೆ ನಿಮ್ಮ ಮನಸ್ಸು ಮತ್ತು ದೇಹದಲ್ಲಿ ಅನೇಕ ಬದಲಾವಣೆಗಳನ್ನು ತರಬಹುದು. ಈ ಗರ್ಭಧಾರಣೆಯ ಅವಧಿಯಲ್ಲಿ ಒತ್ತಡ ಮತ್ತು ಆತಂಕ ಕೂಡ ಕಾಣಿಸಿಕೊಳ್ಳಬಹುದು. ಆದರೆ ಕೆಲವು ಸಂದರ್ಭಗಳಲ್ಲಿ , ಒತ್ತಡ ನಿಮ್ಮ ಪ್ರಸವದ ನಂತರವೂ ದೀರ್ಘಕಾಲ ಹಾಗೆಯೇ ಉಳಿಯಬಹುದು! ನಿಮ್ಮ ಮಗುವಿನ ಜೊತೆ ಸಮಯ ಅಳೆಯುವುದು ನಿಮ್ಮ ಜೀವನದ ಅತ್ಯಂತ ಸುಂದರ ಸಮಯ. ಆದರೆ ಈ ಹೊಸ ಸಂಬಂಧದೊಂದಿಗೆ ಬೆರೆಯುವಾಗ ಕೆಲವೊಮ್ಮೆ ನೀವು ದಣಿವು, ರೋಮಾಂಚನ, ಹತಾಶೆ ಮತ್ತು ಚಿಂತೆಗಳನ್ನು ಅನುಭವಿಸಬೇಕಾದೀತು. ಸಾಮಾನ್ಯವಾಗಿ ಇಂತಹ ಬದಲಾವಣೆಗಳು ನಿಮ್ಮ ಪ್ರಸವದ ಮೊದಲ ಕೆಲವು ತಿಂಗಳುಗಳಲ್ಲಿ ನಡೆಯುತ್ತದೆ. ಆದ್ದರಿಂದ ನೀವು ಪ್ರಸವಾನಂತರದ ಒತ್ತಡ ನಿಭಾಯಿಸಲು ಆರಂಭದಲ್ಲಿಯೇ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳಿತು.

ಮುಂದೆ ನಿಮಗೆ ಹುಟ್ಟುವ ಮಗುವಿನ ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆಗಳಿಂದ ದೂರವುಳಿಯಲು ನೀವು ಗರ್ಭಾವಸ್ಥೆಯಲ್ಲಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಅದೇ ರೀತಿ ಪ್ರಸವದ ನಂತರವೂ ಸಹ ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಇದರಿಂದ ನೀವು ಸಂಪೂರ್ಣ ಶಕ್ತಿಯಿಂದ ನಿಮ್ಮ ಮಗುವಿನ ಆರೈಕೆಯನ್ನು ಮಾಡಲು ಸಾಧ್ಯವಾಗುತ್ತದೆ. ಒತ್ತಡ ಹಾಗೆಯೇ ಮುಂದುವರೆದರೆ ಅದು ನಿಮ್ಮನ್ನು ಖಿನ್ನತೆಯ ಹಂತಕ್ಕೂ ಒಯ್ದು ಗಂಭೀರ ಸಮಸ್ಯೆಯಾಗಿ ಕಾಣಿಸಿಕೊಳ್ಳಬಹುದು. ಇಲ್ಲಿ ಪ್ರಸವದ ನಂತರವೂ ಕಾಣಿಸಿಕೊಳ್ಳುವ ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುವ ಕೆಲವು ಸುಲಭ ಸಲಹೆಗಳಿವೆ. ಈ ಸಲಹೆಗಳನ್ನು ಪ್ರಯತ್ನಿಸಿ ಮತ್ತು ನಿಮ್ಮ ತಾಯ್ತನದ ಸೌಂದರ್ಯವನ್ನು ಆನಂದಿಸಿ!

ಆರೋಗ್ಯಕರ ಆಹಾರ

ಆರೋಗ್ಯಕರ ಆಹಾರ

ನೀವು ಸಂಪೂರ್ಣವಾಗಿ ನಿಮ್ಮ ಮಗುವಿನ ಆರೈಕೆಯಲ್ಲಿ ತೊಡಗಿದ ನಂತರ ನೀವು ನಿಮ್ಮ ಆಹಾರದ ಕ್ರಮವನ್ನು ನಿರ್ಲಕ್ಷಿಸುವ ಅಥವಾ ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಆದರೆ, ನೆನಪಿಡಿ, ಆರೋಗ್ಯಕರ ಆಹಾರ ಸೇವಿಸುವುದು ನೀವು ಆರೋಗ್ಯಕರವಾಗಿರಲು ಬಹಳ ಮುಖ್ಯ. ನೀವು ಪ್ರಸವದದ ಒತ್ತಡವನ್ನು ನಿಭಾಯಿಸಲು ಸಹ ಸಹಾಯ ಮಾಡುತ್ತದೆ.

ಸಾಕಷ್ಟು ಆಟದ ಸಮಯ

ಸಾಕಷ್ಟು ಆಟದ ಸಮಯ

ನಿಮ್ಮ ಮಗುವಿನ ಜೊತೆ ಹೆಚ್ಚು ಸಮಯ ಕಳೆಯುವುದರಿಂದ ಪ್ರಸವಾನಂತರದ ಒತ್ತಡ ಕಡಿಮೆ ಮಾಡಲು ಸಾಧ್ಯ. ಇದರಿಂದ ನಿಮಗೆ ವಿಶ್ರಾಂತಿ ದೊರೆಯುತ್ತದೆ ಜೊತೆಗೆ ನಿಮ್ಮ ಮಗುವಿನ ಜೊತೆ ನಿಮ್ಮ ಬಂಧವೂ ಹೆಚ್ಚಾಗುತ್ತದೆ. ನಿಮ್ಮ ಪುಟ್ಟ ಮಗುವಿನ ಆ ಒಂದು ಮುಗ್ಧ ನಗು ಪ್ರಸವಾನಂತರದ ಒತ್ತಡ ನಿಭಾಯಿಸಲು ಈ ಜಗತ್ತಿನಲ್ಲಿರುವ ಅತ್ಯುತ್ತಮ ಔಷಧ.

ವಿಹಾರ

ವಿಹಾರ

ನೀವು ತುಂಬಾ ದಣಿದಂತೆ ಅನಿಸಿದರೆ ನಿಮ್ಮ ಸಂಗಾತಿ, ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಆಗಾಗ ವಿಹಾರಕ್ಕೆ ಹೋಗುವುದು ಒಳ್ಳೆಯದು . ನೀವು ನಿಮ್ಮ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಆ ಸಮಯದಲ್ಲಿ ಬೇರೆಯವರ ಸಹಾಯ ಪಡೆಯುವುದು ಒಳ್ಳೆಯದು. ಮಕ್ಕಳೊಂದಿಗಿನ ಪ್ರಯಾಣ ಖಂಡಿತವಾಗಿಯೂ ನಿಮ್ಮ ಒತ್ತಡವನ್ನು ನಿವಾರಿಸುವುದರಲ್ಲಿ ಸಂಶಯವಿಲ್ಲ!

ಫ್ಯಾಶನೇಬಲ್ ಆಗಿರುವುದನ್ನು ಬಿಡಬೇಡಿ

ಫ್ಯಾಶನೇಬಲ್ ಆಗಿರುವುದನ್ನು ಬಿಡಬೇಡಿ

ಗರ್ಭಧಾರಣೆ ದೈಹಿಕವಾಗಿ ಅನೇಕ ಬದಲಾವಣೆಗಳನ್ನು ತರಬಹುದು. ಆದ್ದರಿಂದ ನಿಮ್ಮ ಸೌಂದರ್ಯವನ್ನು ಉಳಿಸಿಕೊಳ್ಳಲು ಕೆಲವು ಟ್ರೇಂಡಿ ಮತ್ತು ಫ್ಯಾಶನ್ ಆಗಿರುವ ವೇಷಭೂಷಣಗಳನ್ನು ಧರಿಸಿ. ಬ್ಯೂಟಿ ಸಲೂನ್ ಗೂ ಆಗಾಗ ಭೇಟಿ ನೀಡಿ. ಇದು ಖಂಡಿತವಾಗಿಯೂ ನಿಮ್ಮ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಈ ಸಲಹೆ ಅನುಸರಿಸಿ ಪ್ರಸವಾನಂತರದ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿ.

ಸಂಗಾತಿಯ ಸಹಾಯ

ಸಂಗಾತಿಯ ಸಹಾಯ

ನಿಮ್ಮ ಕೆಲವು ಕೆಲಸಗಳನ್ನು ನಿಮ್ಮ ಸಂಗಾತಿಯ ಬಳಿ ಹಂಚಿಕೊಳ್ಳಲು ಹೇಳಿ. ನಿಮ್ಮ ಸಂಗಾತಿಯ ಬಳಿ ರಾತ್ರಿ ಶಿಫ್ಟ್ ಅಥವಾ ಕೆಲಸದ ಅವಧಿಯ ಬದಲಾವಣೆ ಮಾಡಿಕೊಳ್ಳಲು ತಿಳಿಸಿ. ನಿಮ್ಮ ಪತಿಯೊಂದಿಗೆ ಆನಂದವಾಗಿರುವುದ್ದರಿಂದ ನಿಮ್ಮ ಪ್ರಸವದ ನಂತರದ ಒತ್ತಡ ಬಹುಪಾಲು ಕಡಿಮೆಯಾಗುತ್ತದೆ.

ಪ್ರಸವನಂತರವೂ ಯೋಗ ಮಾಡಿ

ಪ್ರಸವನಂತರವೂ ಯೋಗ ಮಾಡಿ

ನಿಮ್ಮ ಪ್ರಸವದ ನಂತರ ದೈಹಿಕವಾಗಿ ಸಭಲರಾದ ನಂತರ ಯೋಗ ಅಥವಾ ಧ್ಯಾನದ ಮಾಡುಲು ಆರಂಭಿಸಬಹುದು. ಇದು ಪ್ರಸವಾನಂತರದ ಒತ್ತಡ ಕಡಿಮೆ ಮಡಲು ಉತ್ತಮ ಯೋಜನೆ. ಯೋಗ ಅಭ್ಯಾಸ ಮಾಡುವುದು ಪ್ರಸವಾನಂತರದ ಒತ್ತಡ ನಿಭಾಯಿಸಲು ಮಾತ್ರವಲ್ಲದೆ ನಿಮ್ಮ ಒಟ್ಟಾರೆ ದೈಹಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸಾಮಾಜಿಕ ಮುಖಾಮುಖಿ

ಸಾಮಾಜಿಕ ಮುಖಾಮುಖಿ

ನಿಮ್ಮ ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾತ್ಮಕವಾಗಿರಿ. ಇದು ನಿಮ್ಮನ್ನು ಉತ್ಸಾಹಭರಿತ ಮತ್ತು ಶಕ್ತಿಯುತರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ನೀವು ನಿಮ್ಮ ಸಾಮಾಜಿಕ ಕ್ಲಬ್ ಗಳಿಗೂ ಭೇಟಿ ಮಾಡಿ, ನಿಮ್ಮ ಸ್ನೇಹಿತರೊಂದಿಗೆ ಮಾತನಾಡಬಹುದು.ಅಥವಾ ಸಾಮಾಜಿಕ ಜಾಲತಾಣಗಳು/ ಇಂಟರ್ನೆಟ್ ಮೂಲಕ ನಿಮ್ಮ ಮಗುವಿನ ಹೊಸ ಫೋಟೋಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು . ಇದು ನಿಮ್ಮ ಪ್ರಸವದ ನಂತರದ ಒತ್ತಡ ಮತ್ತು ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇವೆಲ್ಲವುದರ ಜೊತೆಗೆ ನಿಮ್ಮ ಮಗುವಿನ ಮುದ್ದು ಮುಖ, ತುಂಟಾಟ ನಿಮ್ಮೆಲ್ಲಾ ಸಮಸ್ಯೆಗಳನ್ನೂ ಚಿಟಿಕೆಹೊಡೆಯುವುದರಲ್ಲಿ ಕಡಿಮೆ ಮಾಡಬಹುದು ಏನಂತೀರಿ?

English summary

Ways To Reduce Postpartum Stress

Pregnancy will bring many changes to your mind and body. This may lead to stress and anxiety during the pregnancy period. But, in some cases, the stress may stay for a long time even after your delivery.
Story first published: Saturday, January 4, 2014, 12:37 [IST]
X
Desktop Bottom Promotion