For Quick Alerts
ALLOW NOTIFICATIONS  
For Daily Alerts

ಹೊಸ ತಾಯಂದಿರು ಮಾಡುವ 6 ದೊಡ್ಡ ತಪ್ಪುಗಳು

By Vishwanath
|

ತಾಯಿತನವನ್ನು ಕಲಿಯುವುದು ಅಷ್ಟೇನೂ ಸುಲಭದ ಮಾತಲ್ಲ. ಆದರೂ ಹೊಸ ತಾಯಂದಿರು ಅನೇಕ ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ, ಆದರೆ ಅಂತಹ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಲು ಹೊಸ ತಾಯಿಯರು ಏನು ಮಾಡಬೇಕು? ಹಾಗೆ ನೋಡಿದರೆ ತಪ್ಪುಗಳನ್ನು ಮಾಡುವುದು ಹೊಸದೇನು ಆಗಿಲ್ಲದಿದ್ದರೂ ಅವುಗಳಿಂದ ವಾಸ್ತವವಾಗಿ ಕಲಿಯುವ ಅವಕಾಶಗಳಿರುತ್ತವೆ. ಆದರೂ ಸಹ ಅಂತಹ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿದರೇ ಒಳ್ಳೆಯದು.

ಇಲ್ಲಿ ಕೊಟ್ಟಿರುವ ದೊಡ್ಡ ತಪ್ಪುಗಳನ್ನು ಸಾಮಾನ್ಯವಾಗಿ ಮಾಡುವುದನ್ನು ಹೊಸ ತಾಯಂದಿರು ಗಮನಿಸಿ.

1. ತಾಯಿಯಾದನಂತರ ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಯತ್ನಿಸಿ:
ಅನೇಕ ತಾಯಂದಿರು ಹೆರಿಗೆಯ ನಂತರ ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ನನ್ನ ತಂಗಿಯೂ ಈ ತಪ್ಪನ್ನು ಮಾಡಿದಳು ಹಾಗೂ ನನ್ನ ಆಪ್ತ ಸ್ನೇಹಿತೆಯೂ ಕೂಡ ಇದೇ ತಪ್ಪು ಮಾಡಿದಳು ಮತ್ತು ದುರದೃಷ್ಟವಶಾತ್, ನಾನು ಸಹಾ ಈ ಸಾಮಾನ್ಯ ತಪ್ಪು ಮಾಡಿದೆ ಎಂದು ಕೆಲವೊಂದು ಮಹಿಳೆಯ ಅಭಿಪ್ರಾಯವಾಗಿರುತ್ತದೆ. ಇದಕ್ಕೆ ಕಾರಣವೇನೆಂದರೆ ಹೊಸ ತಾಯಿಯಾದವಳು ತಾನು ಆದಷ್ಟು ಬೇಗ ತನ್ನ ಕಾಲಿನ ಮೇಲೆ ನಿಂತು ತನ್ನ ದೈನಂದಿನ ಕೆಲಸಗಳನ್ನು ಹೊತ್ತುಕೊಳ್ಳಲು ಮುಂದಾಗಲು ಕಾತುರರಾಗಿರುತ್ತಾಳೆ. ನೀವು ಹೊಸ ತಾಯಿಯಾಗಿದ್ದರೆ ನಿಮ್ಮ ದೇಹವು ಚೇತರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲು ಅವಕಾಶಮಾಡಿಕೊಳ್ಳಿ.

6 Biggest Mistakes New Moms Make

2. ನಿಮ್ಮ ಮಗುವಿನ ಉಗುರುಗಳನ್ನು ಮಗು ಎಚ್ಚರವಿರುವಾಗ ಮಾತ್ರ ಕತ್ತರಿಸಿ:
ನನ್ನ ಮೊದಲ ಮಗುವಾಗಿದ್ದಾಗ ಹೀಗೆ ಮಾಡುವುದು ತಪ್ಪು ಎಂದು ಗೊತ್ತಿಲ್ಲದಿದ್ದರಿಂದ ಇಂತಹ ತಪ್ಪು ಮಾಡಿದೆ. ಮಗುವು ಮಲಗಿದ್ದಾಗ ಉಗುರುಗಳನ್ನು ಕತ್ತರಿಸುವುದು ಸುಲಭವೆಂದು ಅಂದುಕೊಂಡಿದ್ದೆ ಎಂದು ಕೆವು ಮಹಿಳೆಯರ ಅಭಿಪ್ರಾಯವಾಗಿರುತ್ತದೆ. ನಿಮಗೇ ಗೊತ್ತಿರುವ ಹಾಗೆ ಒಂದು ಮಗುವಿನ ಉಗುರುಗಳನ್ನು ಕತ್ತರಿಸಬೇಕಾದಾಗ ಆ ಸಣ್ಣ ಕೈಗಳನ್ನು ಅದೆಷ್ಟುಸಲ ತಿರುಗಿಸಿ ತಿರುಗಿಸಿ ಕತ್ತರಿಸುವುದು ಬಹಳ ಕಷ್ಟವೇ ಸರಿ ಎಂದು ಗೊತ್ತಿರಬೇಕು.

3. ನಿಮ್ಮ ಸಾಮರ್ಥ್ಯವನ್ನು ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ:
ದುರದೃಷ್ಟವೆಂದರೆ ಸಾಮಾನ್ಯವಾಗಿ ಹೊಸ ತಾಯಂದಿರಿಗೆ ತಮ್ಮ ಸಾಮರ್ಥ್ಯ ಮತ್ತು ಯೋಗ್ಯತೆ ತಮಗೇ ಗೊತ್ತಿರುವುದಿಲ್ಲ. ಮಗುವನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ಕಲಿಯುವುದು ಕಷ್ಟವಾಗಿದ್ದರೂ ಸಹ ನಿಮಗೇ ತಿಳಿದಿರುವ ಹಾಗೆ ತಾಯಿಯನ್ನು ಬಿಟ್ಟರೆ ಉತ್ತಮವಾಗಿ ಪಾಲನೆ ಮಾಡಲುಬೇರೆ ಯಾರಿಗೂ ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ನೀವು ತಪ್ಪು ಮಾಡಿದರೆ ನೀವು ಕೆಟ್ಟ ತಾಯಿಯೆಂದುಕೊಳ್ಳಬೇಡಿ. ನಿಮ್ಮ ಮಗುವಿಗೆ ನಿಮ್ಮ ಪ್ರೀತಿ ಮತ್ತು ಆರೈಕೆಗಳಿಂದ ನೀವು ಒಂದು ಮಹಾನ್ ತಾಯಿಯೇ ಸರಿ. ನಿಮ್ಮ ಮಗುವಿಗೆ ನಿಮ್ಮ ವಿಶ್ವಾಸ ಹಾಗೂ ನಿಮ್ಮ ಪತಿಯ ನೈತಿಕ ಬೆಂಬಲಗಳ ಅಗತ್ಯವಿರುತ್ತದೆ.

4. ನಿಮ್ಮ ಮಗುವಿಗೆ ಒಂದೇ ಉಪಶಾಮಕ (Baby Pacifier) ಅಭ್ಯಾಸ ಮಾಡಬೇಡಿ:
ಹೊಸ ತಾಯಂದಿರು ತಮ್ಮ ಮಗುವಿಗೆ ಒಂದೇ ಉಪಶಾಮಕ (Baby Pacifier) ವನ್ನೇ ಬಳಸಿ ಅಭ್ಯಾಸಮಾಡಬೇಡಿ. ಪ್ರತಿ ವಾರವು ಬೇರೆ ಬೇರೆ ಉಪಶಾಮಕವನ್ನು ಬದಲಾಯಿಸಿ ಅಭ್ಯಾಸಮಾಡಿ. ಹಾಗೆ ಮಾಡದಿದ್ದರೆ ನಿಮ್ಮ ಮಗುವು ಮೊದಲನೇ ಉಪಶಾಮಕಕ್ಕೇ ಹೊಂದಿಕೊಂಡಿದ್ದು ಬೇರೆ ಉಪಶಾಮಕವನ್ನು ತಿರಸ್ಕರಿಸುತ್ತದೆ.

5 ಹೊಸ ತಾಯಂದಿರು ಸಾಮಾನ್ಯವಾಗಿ ಪಶ್ನೆಗಳನ್ನು ಕೇಳುವುದಕ್ಕೆ ಹಿಂಜರಿಯುತ್ತಾರೆ:
ಸಾಮಾನ್ಯವಾಗಿ ಹೊಸ ತಾಯಂದಿರು ತಮ್ಮಲ್ಲಿ ಹಲವು ಪ್ರಶ್ನೆಗಳಿದ್ದರೂ ಸಹ ಅವುಗಳನ್ನು ತಾವು ದಡ್ಡರೆಂದು ಭಾವಿಸುತ್ತಾರೆಂದು ಕೇಳಲು ಹಿಂಜರಿಯುತ್ತಾರೆ. ಆದರೆ ವಾಸ್ತವವಾಗಿ ಇಲ್ಲಿ ಮೂರ್ಖತನದ ಪ್ರಶ್ನೆಯೇ ಇರುವುದಿಲ್ಲ. ಇಂತಹ ಪ್ರಶ್ನೆಗಳನ್ನು ಕೇಳಲೆಂದೇ ನಿಮಗೆ ಮಗುವಿನ ವೈದ್ಯರುಗಳು ಇರುವುದು. ನಿಮಗೆ ಅವರು ಖಚಿತವಾಗಿ ನಿಮ್ಮ ನವಜಾತ ಮಗು ಮತ್ತು ನಿಮ್ಮ ಚೇತರಿಕೆ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾರೆ.

ಹೆರಿಗೆಯ ನಂತರ ಹೆಚ್ಚಿದ ಮೈ ತೂಕ ಕಮ್ಮಿಮಾಡಬೇಕೆ?

6 ಹೊಸ ತಾಯಂದಿರು ಇತರರ ಸಹಾಯಪಡೆಯಲು ಹೆದರುತ್ತಾರೆ:
ನೀವು ಸ್ತನಪಾನ ಮಾಡಿಸಲು ಯೋಚನೆಮಾಡುತ್ತಿದ್ದರೆ ನೀವು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಹೊಸ ತಾಯಂದಿರು ಮತ್ತು ನೀವೂ ಸಹ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಮತ್ತು ಇದರಲ್ಲಿ ತಲೆತಗ್ಗಿಸುವ ಯಾವ ಭಾವನೆಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ನಿಮಗೆ ಸ್ತನಪಾನ ಮಾಡಿಸಲು ಇಷ್ಟವಾಗಿದ್ದು ಹಾಗೆ ಮಾಡುವಾಗ ಏನಾದರೂ ತಪ್ಪಾಗಿ ಕಾಣಿಸಬಹುದು. ಎಲ್ಲ ಹೊಸ ತಾಯಂದಿರು ಆರಂಭದಿಂದ ಸುಲಭವಾಗಿ ಸ್ತನಪಾನ ಮಾಡಿಸಲು ಸುಲಭವಾಗಿರದೇ ಇರಬಹುದು. ಹಾಗಾಗಿದ್ದಲ್ಲಿ ನೀವು ನಿಮ್ಮ ವೈದ್ಯರಲ್ಲಿ ಧೈರ್ಯವಾಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಅಗತ್ಯವಾಗಿ ಕೇಳಲೇಬೇಕು.

ಯಾವ ತಾಯಿಯೂ ಸಹ ಪರಿಪೂರ್ಣ ತಾಯಿಯಾಗಲು ಸಾಧ್ಯವಿಲ್ಲ. ಆದರೂ ನೀವು ಉತ್ತಮ ತಾಯಿಯಾಗಲು ನಿಮ್ಮ ಪ್ರಯತ್ನಗಳನ್ನು ಮಾಡಲೇಬೇಕು. ಇಲ್ಲಿ ಹೇಳಿರುವ ಕೆಲವು ತಪ್ಪುಗಳನ್ನು ಹೊಸ ತಾಯಂದಿರು ಸಾಮನ್ಯವಾಗಿ ಮಾಡಬಹುದು ಹಾಗೂ ನೀವೂ ಸಹ ಹಲವಾರು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. ನೀವು ಹೊಸ ತಾಯಿಯಾಗಿದ್ದಾಗ ಏನೇನು ತಪ್ಪುಗಳನ್ನು ಮಾಡಿದ್ದೀರಿ. ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

6 Biggest Mistakes New Moms Make

Learning to be a mom isn’t an easy thing and there are many common mistakes almost every new mom makes that you should be aware of and that you should avoid making.
X
Desktop Bottom Promotion