For Quick Alerts
ALLOW NOTIFICATIONS  
For Daily Alerts

ಹೆರಿಗೆಯ ಬಳಿಕ ಹೆಚ್ಚಿದ ತೂಕ ಕಮ್ಮಿ ಮಾಡಲು ಟಿಪ್ಸ್

|

ಹೆರಿಗೆಯ ಬಳಿಕ ಮಹಿಳೆಯರು ದಪ್ಪಗಾಗುವುದು ಸಹಜ. ದೇಹದಲ್ಲಾಗುವ ಹಾರ್ಮೋನ್ ಗಳ ಬದಲಾವಣೆಯಿಂದ, ಹಾಗೂ ಬಾಣಂತನದಲ್ಲಿ ಮಾಡಿದ ಆರೈಕೆಯಿಂದಾಗಿ ಮೈ ತೂಕವೂ ಹೆಚ್ಚಾಗುತ್ತದೆ. ಮೈ ತೂಕ ಹೆಚ್ಚಾಗುತ್ತಿದೆಯೆಂದು ಡಯಟ್ ಮಾಡುವುದಾಗಲಿ, ವ್ಯಾಯಾಮ ಮಾಡುವುದಾಗಲಿ ಮಾಡಬೇಡಿ. ಒಂದು 6 ತಿಂಗಳ ಕಾಲ ಚೆನ್ನಾಗಿ ತಿನ್ನುತ್ತಾ ಆರಾಮವಾಗಿರಿ.

ಮೊದಲೇ ಡಯಟ್ ಮಾಡುವುದು, ವ್ಯಾಯಾಮ ಮಾಡುವುದು ಮಾಡಿದರೆ ಆರೋಗ್ಯ ಹಾಳಾಗುವುದು. ನೀವು ಸಣ್ಣಗಾಗಲು ಪ್ರಯತ್ನವನ್ನು ಹೆರಿಗೆಯಾಗಿ 6 ತಿಂಗಳ ಬಳಿಕವಷ್ಟೇ ಪ್ರಯತ್ನಿಸಿ ಅನ್ನುವುದು ನಮ್ಮ ಸಲಹೆ. ಹೆರಿಗೆಯಾಗಿ 6 ತಿಂಗಳ ನಂತರ ಇಲ್ಲಿ ಹೇಳಿರುವ ಟಿಪ್ಸ್ ಪಾಲಿಸಿ, ಆಗ ಆರೋಗ್ಯಕರವಾಗಿ ಸಣ್ಣಗಾಗುವಿರಿ.

ಡಯಟ್ ಮಾಡಬೇಡಿ

ಡಯಟ್ ಮಾಡಬೇಡಿ

ಮಗುವಿಗೆ ಹಾಲು ಕುಡಿಸುವುದರಿಂದ ಡಯಟ್ ಮಾಡಬೇಡಿ, ಅಲ್ಲದೆ ಹೆರಿಗೆಯ ಬಳಿಕ ದೇಹಕ್ಕೆ ಪೋಷಕಾಂಶದ ಅವಶ್ಯಕತೆ ಸ್ವಲ್ಪ ಅಧಿಕವೇ ಇರುತ್ತದೆ. ಈ ಸಮಯದಲ್ಲಿ ಡಯಟ್ ಮಾಡಿದರೆ ದೇಹಕ್ಕೆ ಪೋಷಕಾಂಶದ ಕೊರತೆ ಉಂಟಾಗಿ ಅನಾರೋಗ್ಯ ಕಂಡು ಬರುವುದು.

 ಯೋಗ ಮಾಡಿ

ಯೋಗ ಮಾಡಿ

ಅಧಿಕ ದೈಹಿಕ ಶ್ರಮವಿರುವ ವ್ಯಾಯಾಮಕ್ಕಿಂತ ಈ ಸೂಕ್ಮ ಸಮಯದಲ್ಲಿ ಯೋಗ ಮಾಡಿ. ಯೋಗ ಹೊಟ್ಟೆ ಬಿಗಿಯಾಗುವಂತೆ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ತೂಕವನ್ನು ನಿಧಾನಕ್ಕೆ ಕಮ್ಮಿ ಮಾಡಿ

ತೂಕವನ್ನು ನಿಧಾನಕ್ಕೆ ಕಮ್ಮಿ ಮಾಡಿ

ಕೆಲವೇ ದಿನಗಳಲ್ಲಿ ತೂಕ ಕಮ್ಮಿಯಾಗಬೇಕೆಂದು ಬಯಸಬೇಡಿ. ನಿಧಾನಕ್ಕೆ ದೇಹದ ತೂಕವನ್ನು ಕಮ್ಮಿ ಮಾಡಿಕೊಳ್ಳಿ.

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಹೆರಿಗೆಯ ನಂತರ ಚೆನ್ನಾಗಿ ನೀರು ಕುಡಿಯಿರಿ. ನೀರು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಒಳ್ಳೆಯ ಕೊಬ್ಬಿನಂಶವಿರುವ ಆಹಾರ ತಿನ್ನಿ

ಒಳ್ಳೆಯ ಕೊಬ್ಬಿನಂಶವಿರುವ ಆಹಾರ ತಿನ್ನಿ

ಕೆಲವರು ದಪ್ಪಗಾಗುತ್ತಾರೆ ಎಂದು ಕೊಬ್ಬಿನಂಶವಿರುವ ಆಹಾರವನ್ನು ಮುಟ್ಟುವುದೇ ಇಲ್ಲ. ಹಾಗೆ ಮಾಡಬೇಡಿ, ಆರೋಗ್ಯಕರ ಕೊಬ್ಬಿನಂಶವಿರುವ ಆಹಾರಗಳು ದೇಹಕ್ಕೆ ಅವಶ್ಯಕವಾಗಿರುವುದರಿಂದ ಅವುಗಳನ್ನು ತಿನ್ನಿ.

ಸೊಪ್ಪು

ಸೊಪ್ಪು

ಸೊಪ್ಪಿನಂಶವನ್ನು ಅಧಿಕವಾಗಿ ತಿನ್ನಿ. ಸೊಪ್ಪು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಖನಿಜಾಂಶ ಮತ್ತು ವಿಟಮಿನ್ ಅನ್ನು ಒದಗಿಸಬಹುದು.

 ಹಾಲು

ಹಾಲು

ದಿನದಲ್ಲಿ ಎರಡು ಲೋಟ ಕೆನೆ ರಹಿತ ಹಾಲನ್ನು ಕುಡಿಯಿರಿ. ಇದು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಅನ್ನು ಪೂರೈಕೆ ಮಾಡುತ್ತದೆ.

ನಿಂಬೆ ರಸ ಮತ್ತು ಜೇನು

ನಿಂಬೆ ರಸ ಮತ್ತು ಜೇನು

ಬೆಳಗ್ಗೆ ಬಿಸಿ ನೀರಿಗೆ ನಿಂಬೆರಸ ಮತ್ತು ಜೇನು ಹಾಕಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಬೊಜ್ಜು ಬೆಳೆಯದಂತೆ ತಡೆದು ಮೈ ತೂಕವನ್ನು ಕಡಿಮೆ ಮಾಡುತ್ತದೆ.

ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ

ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ

ಹಣ್ಣುಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಈ ಟಿಪ್ಸ್ ಪಾಲಿಸಿದರೆ ಕೆಲವೇ ತಿಂಗಳಿನಲ್ಲಿ ಮೈ ತೂಕ ಕಮ್ಮಿಯಾಗಿ ಆಕರ್ಷಕವಾದ ಮೈ ಮಾಟ ನಿಮ್ಮದಾಗುವುದು.

English summary

Post-Pregnancy Weight Loss Tips

Women want to get back into their pre-pregnancy outfits after delivery.If you want to lose your post-pregnancy weight like Kim Kardashian, here are some diet tips to follow.
X
Desktop Bottom Promotion