For Quick Alerts
ALLOW NOTIFICATIONS  
For Daily Alerts

ಸಿಸೇರಿಯನ್ ನಂತರ ವಹಿಸಬೇಕಾದ ಎಚ್ಚರ

By Hemanth Amin
|

ಮಗುವಿನ ಆಗಮನ ಮನೆಯಲ್ಲಿ ಸಂಭ್ರಮದ ವಾತಾವರಣ ಉಂಟು ಮಾಡುತ್ತದೆ. ಕುಟುಂಬಕ್ಕೆ ಹೊಸ ಸದಸ್ಯರ ಆಗಮನದ ಸಂಭ್ರಮದಲ್ಲಿರುವಾಗ ತಾಯಿಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಹೆರಿಗೆಗೆ ಮೊದಲಿನ ಕೆಲವು ದಿನಗಳು ತುಂಬಾ ಪ್ರಾಮುಖ್ಯವಾದದ್ದು ಮತ್ತು ನೀವು ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದರೆ ಆಗ ಅದು ತುಂಬಾ ಸವಾಲಿನ ಸಮಯವಾಗಿರುತ್ತದೆ. ಹೆರಿಗೆ ಮೊದಲಿನ ಕೆಲವು ದಿನಗಳಲ್ಲಿ ತಾಯಿಗೆ ಹೆಚ್ಚಿನ ವಿಶ್ರಾಂತಿ ಮತ್ತು ಆರೈಕೆ ಬೇಕಾಗುತ್ತದೆ. ಈ ವೇಳೆ ನೀವು ಮನೆಯಲ್ಲಿ ಯಾವುದೇ ಕೆಲಸ ಮಾಡಬಾರದು.

ಪ್ರಸವಾನಂತರದ ತಾಯಂದಿರ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಇದರ ಬಗ್ಗೆ ನಿಮ್ಮ ಪೋಷಕರು ಮತ್ತು ಜತೆಗಾರರೊಂದಿಗೆ ಮಾತನಾಡಿ, ಈ ಸಮಯ ದೈಹಿಕ ಮತ್ತು ಭಾವನಾತ್ಮಕವಾಗಿ ತುಂಬಾ ಕಾಳಜಿವಹಿಸಬೇಕು. ಹೊಸದಾಗಿ ಗರ್ಭಧಾರಣೆ ಮಾಡಿದವರಿಗೆ ಕೆಲವೊಂದು ಮಿತಿಗಳಿರುತ್ತದೆ. ಇದನ್ನು ಅರ್ಥಮಾಡಿಕೊಂಡು ಹೊಸ ಜೀವನ ಸ್ವೀಕರಿಸಿ. ಈ ಸಮಯದಲ್ಲಿ ಬೇಕಾಗಿರುವ ಆರೈಕೆಗೆ ತಯಾರಾಗಿ. ಮೊದಲ ಸಲ ಗರ್ಭಧಾರಣೆ ಮಾಡುವವರು ದೈಹಿಕವಾಗಿ ತುಂಬಾ ದಣಿಯಬಹುದು, ಭಾವನಾತ್ಮಕವಾಗಿ ಕೆಲವೊಂದು ಸಮಸ್ಯೆಗಳಾಗಬಹುದು. ಮಹಿಳೆಯಾಗಿ ಇದನ್ನು ಸ್ವೀಕರಿಸಲೇಬೇಕು. ನಿಮ್ಮ ವೈದ್ಯರೊಂದಿಗೆ ಮುಕ್ತವಾಗಿ ಮಾತನಾಡಲು ಪ್ರಯತ್ನಿಸಿ, ಇದರಿಂದ ಕಠಿಣ ಸಮಯವನ್ನು ಹಾದು ಹೋಗಲು ನಿಮಗೆ ಒಳ್ಳೆಯ ಹಾದಿ ಸಿಗಬಹುದು. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಕಾರಣ ನೀವು ಕೆಲವೊಂದು ಆರೋಗ್ಯ ಸಂಬಂಧಿ ಕ್ರಮಗಳನ್ನು ತಿಳಿದು ಅದನ್ನು ಪಾಲಿಸಬೇಕು.

ಮೊದಲನೇ ಹಂತ

ಮಗುವಿನ ಜನನದ ಬಳಿಕ ನೀವು ಆಸ್ಪತ್ರೆ ಬಿಡುವ ಮೊದಲು ಕೆಲವೊಂದು ಅಂಶಗಳನ್ನು ಗಮನಿಸಬೇಕಾಗುತ್ತದೆ. ಇದು ಸಿಸೇರಿಯನ್ ನ ಮೊದಲಿನ ಭಾಗ.

* ಒಮ್ಮೆ ನೀವು ಸಿಸೇರಿಯನ್ ಗೆ ಒಳಗಾದರೆ, ಶಸ್ತ್ರಚಿಕಿತ್ಸೆಯಾದ ಕೆಲವೇ ಗಂಟೆಗಳಲ್ಲಿ ತುಂಬಾ ನಿಧಾನವಾಗಿ ನಡೆಯುವಂತೆ ವೈದ್ಯರು ಸೂಚಿಸುತ್ತಾರೆ. ಗುಣಪಡಿಸಲು ಇದು ಒಳ್ಳೆಯ ವಿಧಾನ. ಆದಾಗ್ಯೂ ನೀವು ನಿಧಾನವಾಗಿ ನಡೆದಾಡುವಾಗ ತುಂಬಾ ಎಚ್ಚರಿಕೆ ವಹಿಸಿ.

* ಸಿಸೇರಿಯನ್ ನಂತರದ ನೋವು ಶಮನ ಮಾಡಲು ನಿಮ್ಮ ವೈದ್ಯರ ಸಲಹೆ ಮತ್ತು ಟಿಪ್ಸ್ ಗಳನ್ನು ಪಡೆಯಿರಿ. ಔಷಧಿ ಬೇಕಿದ್ದರೆ ವೈದ್ಯರನ್ನು ಕೇಳಿರಿ. ಔಷಧಿಯಿಂದ ನಿಮಗೆ ಮತ್ತು ನಿಮ್ಮ ಮಗುವಿಗೆ ಆಗಬಹುದಾದ ಅಡ್ಡಪರಿಣಾಮಗಳ ಬಗ್ಗೆ ವಿವರ ಕೇಳಿ.

* ಆರು ವಾರಗಳ ತನಕ ಕಡು ರಕ್ತ ಹೊರಹೋಗುವ ಕಾರಣ ಹೆಚ್ಚುವರಿಯಾಗಿ ಹೀರಿಕೊಳ್ಳುವ ಮುಟ್ಟಿನ ಪ್ಯಾಡ್ ಗಳನ್ನು ಬಳಸಿ. ಆಸ್ಪತ್ರೆ ಇದನ್ನು ನಿಮಗೆ ಒದಗಿಸುತ್ತದೆ. ಒಂದು ವೇಳೆ ಕೊಡದಿದ್ದರೆ ನೀವು ಅದನ್ನು ಕೇಳಿ ಪಡೆಯಿರಿ.

* ಕುರ್ಚಿಯಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಾದರೆ ಹಾಗೆ ಮಾಡಿ. ಇದು ನಿಮ್ಮ ನೋವನ್ನು ಬೇಗನೆ ಕಡಿಮೆ ಮಾಡಿ ಸಿ ವಿಭಾಗದ ಗಾಯವನ್ನು ಬೇಗನೆ ಗುಣಪಡಿಸುತ್ತದೆ.

ಎರಡನೇ ಹಂತ

ನೀವು ಮನೆಗೆ ಬಂದ ಬಳಿಕ

ಸಿಸೇರಿಯನ್ ನಂತರ ಆರೈಕೆ ಅನಿವಾರ್ಯ ಮತ್ತು ಮನೆಗೆ ಬಂದ ಬಳಿಕವೂ ಇದನ್ನು ಮುಂದುವರಿಸಬೇಕು.

* ಈ ಸಮಯದಲ್ಲಿ ನಿಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಿ. ಆರು ವಾರಗಳ ತನಕ ಭಾರವಾಗಿರುವ ಯಾವುದೇ ವಸ್ತುಗಳನ್ನು ಎತ್ತಲು ಪ್ರಯತ್ನಿಸಬೇಡಿ. ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕವಷ್ಟೇ ನಿಮ್ಮ ಚಟುವಟಿಕೆಗಳನ್ನು ಹೆಚ್ಚಿಸಬಹುದು.

* ಸಾಕಷ್ಟು ನೀರು ಕುಡಿಯಿರಿ. ನಿಮ್ಮ ದೇಹದಲ್ಲಿ ಯಾವಾಗಲೂ ತೇವಾಂಶವಿರಲಿ. ಇದು ಮಲಬದ್ಧತೆ ತಡೆಯುತ್ತದೆ ಮತ್ತು ನೀವು ಹಿತಕರವಾಗಿರುವಂತೆ ಮಾಡುತ್ತದೆ.

* ಬಟ್ಟೆ ಬದಲಾಯಿಸಲು ಮತ್ತು ಮಗುವಿನ ಹಾಲುಣಿಸುವ ಸ್ಥಳ ತುಂಬಾ ಹತ್ತಿರವಾಗಿರುವಂತೆ ವ್ಯವಸ್ಥೆ ಮಾಡಿ. ಇದರಿಂದ ಹೆಚ್ಚಿಗೆ ನಡೆಯುವುದು ತಪ್ಪುತ್ತದೆ.

* ಮನೆಯ ಒಳಗೆ ಸ್ವಲ್ಪ ನಿಧಾನವಾಗಿ ಆಚೀಚೆ ನಡೆದಾಡಿ. ಇದರಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಗಾಯ ಬೇಗನೆ ಗುಣಮುಖವಾಗಲು ನೆರವಾಗುತ್ತದೆ.

* ಸಿಸೇರಿಯನ್ ಶಸ್ತ್ರಚಿಕಿತ್ಸೆ ಬಳಿಕ ಬರುವ ಜ್ವರ ಅಥವಾ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಇಂತಹ ಸಮಸ್ಯೆಗಳು ಬಂದಾಗ ತಕ್ಷಣ ವೈದ್ಯರನ್ನು ಭೇಟಿಯಾಗಿ. ಸಿಸೇರಿಯನ್ ಬಳಿಕ ಈ ಒಂದು ಅಂಶದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

* ಸ್ನಾನದ ವೇಳೆ ಛೇದನದ ಬಗ್ಗೆ ಜಾಗೃತೆ ವಹಿಸಿ. ಸ್ನಾನದ ವೇಳೆ ಇದನ್ನು ಪ್ಲಾಸ್ಟಿಕ್ ನಿಂದ ಮುಚ್ಚಿ. ಬಾತ್ ಟಬ್ ಅಥವಾ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ನಾನ ಮಾಡಬೇಡಿ.

* ನೀವು ವಾಹನ ಚಾಲನೆ ಇಷ್ಟಪಡುತ್ತಿದ್ದರೆ ಈ ವೇಳೆ ಅದನ್ನು ಬಿಡಬೇಕು. ಸಿಸೇರಿಯನ್ ಆದ ಬಳಿಕ ಸುಮಾರು ನಾಲ್ಕು ವಾರಗಳ ತನಕ ಚಾಲನೆ ಮಾಡಬೇಡಿ.

* ಸಿಸೇರಿಯನ್ ನಂತರ ಕೆಲವು ವಾರಗಳ ತನಕ ಲೈಂಗಿಕ ಕ್ರಿಯೆಯೆಲ್ಲಿ ಪಾಲ್ಗೊಳ್ಳಬೇಡಿ. ಶಿಶುವಿನೊಂದಿಗೆ ಹೆಚ್ಚಿನ ಸಮಯ ಕಳೆದು ಅದರೊಂದಿಗೆ ಭಾವನಾತ್ಮಕ ಬೆಸುಗೆ ಸೃಷ್ಟಿಸಿ. ಇದರಿಂದ ನಿಮಗೆ ಎಲ್ಲಾ ನೋವು ಮರೆತು ಹಿತಕರ ಭಾವನೆ ಉಂಟಾಗಬಹುದು.

English summary

Health Care For Post-C Section

Days that follow delivery are important and can be termed as one of the most challenging times, especially if you had undergone a c-section. The post delivery period is a period when a mother needs adequate rest and care for healing.
Story first published: Friday, November 29, 2013, 9:03 [IST]
X
Desktop Bottom Promotion