For Quick Alerts
ALLOW NOTIFICATIONS  
For Daily Alerts

ಅಮ್ಮ ಮಾತ್ರೆ ತಿಂದರೆ ಕಂದನಿಗೆ ಅಪಾಯ

|
Affect Of Painkiller On Breastfeeding Mother
ತಾಯ್ತನದ ಸಂದರ್ಭದಲ್ಲಿ ಮಹುವಿಗೆ ಹಾಲೂಣಿಸುವುದರಿಂದ ತಾಯಿ ಆರೋಗ್ಯದಲ್ಲಿ ಏರುಪೇರಾದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ತಿನ್ನುವ ಆಹಾರದಲ್ಲಿ ತಾಯಿ ಸಾಕಷ್ಟು ಎಚ್ಚರವಹಿಸಬೇಕಾಗುತ್ತದೆ.

ಉದಾಹರಣೆಗೆ: ಕೆಲವೊಮ್ಮೆ ತಾಯಿ ತಿನ್ನುವ ಆಹಾರದಿಂದಾಗಿ ಮಗುವಿಗೆ ಎದೆ ಹಾಲು ಕುಡಿದ ನಂತರ ತೊಂದರೆ ಕಾಣಿಸಿಕೊಳ್ಳುವುದು. ಹೀಗೆ ಉಂಟಾದರೆ ತಾಯಿ ಅಂತಹ ಆಹಾರ ಸೇವಿಸುವುದನ್ನು ನಿಲ್ಲಿಸಬೇಕು.

ಇದು ಕೇವಲ ಅಹಾರ ಸೇವಿಸಿದರೆ ಮಾತ್ರ ಅಲ್ಲ ಮಾತ್ರೆ ಸೇವಿಸಿದಾಗ ಕೂಡ ಈ ರೀತಿಯ ತೊಂದರೆ ಕಾಣಿಸುತ್ತದೆ. ಆದ್ದರಿಂದ ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವಿಸಬಾರದು. ಅದರಲ್ಲೂ ನೋವು ನಿವಾರಕ ಮಾತ್ರೆ ಸೇವಿಸಿದಾಗ ಅದು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಅದರಲ್ಲಿರುವ ಕೊಡೈನ್ ಅಂಶ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಿಸೇರಿಯನ್ ಹೆರಿಗೆಯಾದರೆ ಹೆರಿಗೆ ನಂತರ ನೋವು ಕಡಿಮೆಯಾಗಲು ನೋವು ನಿವಾರಕ ಮಾತ್ರೆ ಸೇವಿಸುತ್ತಾರೆ. ಆ ರೀತಿ ಮಾತ್ರೆ ಸೇವನೆಯನ್ನು ಹೆರಿಗೆಯಾದ ದಿನದಿಂದ ನಾಲ್ಕು ದಿನದವರೆಗೆ ಮಾತ್ರ ಸೇವಿಸಬಹುದು. ಈ ರೀತಿ ಮಾತ್ರೆ ಸೇವಿಸಿದಾಗ ಮಂಪರು ಬರುವುದಾದರೆ, ಕೂಡಲೇ ನಿಲ್ಲಿಸಿ ಏಕೆಂದರೆ ಅದು ಮಗುವಿನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.


ಈ ರೀತಿ ನೋವು ನಿವಾರಕ ಮಾತ್ರೆ ಸೇವಿಸದಾಗ ಜಠರದಲ್ಲಿ ಮೋರ್ಫೈನ್ ಎಂಬ ಅಂಶ ಉಂಟಾಗುತ್ತದೆ. ಈ ಅಂಶ ಎಲ್ಲಾ ವ್ಯಕ್ತಿಗಳಲ್ಲಿ ಒಂದೇ ರೀತಿ ಇರುವುದಿಲ್ಲ. ಕೆಲವರಿಗೆ ಜಾಸ್ತಿ ಉತ್ಪತ್ತಿಯಾದರೆ ಇನ್ನು ಕೆಲವರಿಗೆ ಉತ್ಪತ್ತಿಯಾಗುವುದೇ ಇಲ್ಲ. ಇದು ಜಾಸ್ತಿ ಉತ್ಪತ್ತಿಯಾದಾಗ ಮಂಪರು ಬರುತ್ತದೆ.

ಮಗುವಿಗೆ ಎದೆ ಹಾಲು ಕುಡಿಸುವುದರಿಂದ ಹಾಲಿನ ಮುಖಾಂತರ ಮೋರ್ಫೈನ್ ಮಗುವಿನ ದೇಹಕ್ಕೆ ಸೇರಿ ಡೋಸ್ ಜಾಸ್ತಿಯಗಿ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ನೋವು ನಿವಾರಕ ಮಾತ್ರೆ ಸೇವಿಸುವಾಗ ಎಚ್ಚರವಹಿಸಿ.

English summary

Affect Of Painkiller On Breastfeeding Mother | Baby Health | ಎದೆ ಹಾಲೂಣಿಸುವವರಲ್ಲಿ ನೋವು ನಿವಾರಕ ಔಷಧಿಯ ಪರಿಣಾಮ, ಮಗುವಿನ ಆರೋಗ್ಯ

Breastfeeding mothers should limit their use of codeine-containing painkillers to no more than four days. If they feel drowsy while taking this medication, cease its use and see a doctor if their baby gets sleepy while taking the painkillers.
Story first published: Wednesday, February 1, 2012, 12:29 [IST]
X
Desktop Bottom Promotion