Just In
- 5 min ago
ಚರ್ಮದ ಕ್ಯಾನ್ಸರ್ ಯೌವನ ಪ್ರಾಯದವರಲ್ಲಿ ಹೆಚ್ಚು ಯಾಕೆ . .? ತಡೆಗಟ್ಟುವುದು ಹೇಗೆ?
- 46 min ago
30 ದಿನ ಸಕ್ಕರೆ ಸೇವಿಸದಿದ್ದರೆ ಇಷ್ಟೆಲ್ಲಾ ಲಾಭವಾಗುತ್ತಾ..? ವೈಟ್ಲಾಸ್ಗೆ ಇದೇ ಬೆಸ್ಟ್..!
- 8 hrs ago
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- 13 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
Don't Miss
- Movies
ತಮಿಳು ನಿರ್ಮಾಪಕರ ನಿದ್ದೆ ಕೆಡಿಸಿದ ದಿಗ್ಗಜರು: ಅಜಿತ್ ₹100 ಕೋಟಿ.. ವಿಜಯ್ ಕೇಳಿದ್ದೆಷ್ಟು?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Sports
ಕ್ರಿಕೆಟ್ ಬದುಕೇ ಮುಗಿಯಬಹುದು ಎಂದು ಎಚ್ಚರಿಕೆ ನೀಡಿದರೂ ಒಂದೇ ಕೈನಲ್ಲಿ ಆಡಿದ್ದ ಹನುಮ ವಿಹಾರಿ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಕ್ಕಳಿಗೆ ಮೇಕಪ್ ಹಚ್ಚುವ ಮುನ್ನ ಪೋಷಕರು ಈ ಬಗ್ಗೆ ಗಮನಹರಿಸಿ
ಮಕ್ಕಳು ಹೇಗಿದ್ದರೂ ಚೆಂದ, ಸ್ವಲ್ಪ ಮೇಕಪ್ ಹಚ್ಚಿದರೆ ಇನ್ನೂ ಆಕರ್ಷಕವಾಗಿ ಕಾಣುತ್ತಾರೆ. ಮೇಕಪ್ ಮಕ್ಕಳ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ, ಆದರೆ ಚಿಕ್ಕ ಮಕ್ಕಳಿಗೆ ಮೇಕಪ್ ಅಗತ್ಯವೇ?, ಇದು ಮಕ್ಕಳ ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪೋಷಕರು ಅರಿತರಬೇಕು.
ಮೊದಲೆಲ್ಲ ಮಕ್ಕಳಿಗೆ ಮೇಕಪ್ ಎಂದರೇನು ಎಂಬುದೇ ಗೊತ್ತಿರಲಿಲ್ಲ, ಇಂದಿನ ಮಕ್ಕಳಿಗೆ ಹುಟ್ಟಿದ ಒಂದೆರಡು ವರ್ಷದಲ್ಲೇ ಮೇಕಪ್‌ನ ಅರ್ಥ, ಮೇಕಪ್ ಯಾವೆಲ್ಲಾ ಸಾಧನಗಳನ್ನು ಬಳಸಬೇಕು ಎಂಬುದೆಲ್ಲಾ ತಿಳಿದಿದೆ. ಇದಕ್ಕೆ ಪರೋಕ್ಷ ಕಾರಣ ಪೋಷಕರೇ ಎಂದರೆ ತಪ್ಪಾಗಲಾರದು. ನಾವು ಮಕ್ಕಳ ಮುಂದೆ ಏನನ್ನು ಮಾಡುತ್ತೇವೋ ಅವು ಅದನ್ನೇ ಅನುಸರಿಸುತ್ತದೆ, ಕೆಲವು ಬಾರಿ ನಾವೇ ಮಕ್ಕಳಿಗೆ ಮೇಕಪ್ ಹುಚ್ಚನ್ನು ಹಿಡಿಸಿರುತ್ತೇವೆ!.
ಆದರೆ ನಿಜವಾಗಿಯೂ ಸಾಕಷ್ಟು ರಾಸಾಯನಿಕಗಳನ್ನು ಬಳಸಿ ತಯಾರಿಸುವ ಮೇಕಪ್ ಮಕ್ಕಳಿಗೆ ಸಾಕಷ್ಟು ಹಾನಿ ಉಂಟುಮಾಡುತ್ತದೆ. ನಾವಿಂದು ಈ ಲೇಖನದಲ್ಲಿ, ಮಕ್ಕಳಿಗೆ ಮೇಕಪ್ ಏಕೆ ಹಾನಿಕರ, ಇದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿಸಲಿದ್ದೇವೆ:

ವಿಷಕಾರಿ ರಾಸಾಯನಿಕ ಜೀರ್ಣಕ್ರಿಯೆಗೆ ಹಾನಿ
ಮಕ್ಕಳಲ್ಲಿ ವೇಗವಾಗಿ ಚಯಾಪಚಯ ಕ್ರಿಯೆ ಆಗುತ್ತದೆ, ಇದರಿಂದಾಗಿ ಮಕ್ಕಳಲ್ಲಿ ಹೀರಿಕೊಳ್ಳುವಿಕೆಯ ಪ್ರಮಾಣವು ಶೇಕಡಾ 10ರಷ್ಟು ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತದೆ. ಆದ್ದರಿಂದ, ಮಕ್ಕಳು ಅಪಾಯಕಾರಿ ರಾಸಾಯನಿಕಗಳಿಂದ ತಯಾರಿಸಿದ ಲಿಪ್‌ಸ್ಟಿಕ್‌ಗಳನ್ನು ಅನ್ವಯಿಸಿದರೆ, ಅವರ ಚರ್ಮವು ತಕ್ಷಣ ಅದನ್ನು ಹೀರಿಕೊಳ್ಳುತ್ತದೆ. ಭವಿಷ್ಯದಲ್ಲಿ ಇದರ ಪರಿಣಾಮಗಳು ಗಂಭೀರವಾಗಿರುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮಕ್ಕಳ ಚರ್ಮದ ಮೇಲೆ ಮೇಕಪ್ ಉತ್ಪನ್ನಗಳನ್ನು ಅನ್ವಯಿಸುವುದರಿಂದ ಅವು ವಿಷಕಾರಿಯಾಗಿದ್ದು ಮಕ್ಕಳ ದೇಹವನ್ನು ಶೀಘ್ರವೇ ಹೊಕ್ಕುತ್ತದೆ.

ಚರ್ಮ ಹೆಚ್ಚು ಸೂಕ್ಷ್ಮವಾಗಿರುತ್ತದೆ
ವಯಸ್ಕರಿಗೆ ಹೋಲಿಸಿದರೆ ಮಕ್ಕಳು ತೆಳ್ಳನೆಯ ಚರ್ಮವನ್ನು ಹೊಂದಿರುತ್ತಾರೆ ಮತ್ತು ವಯಸ್ಕರಿಗಿಂತ ಮಕ್ಕಳ ಚರ್ಮ ಕಡಿಮೆ ತಡೆಗೋಡೆ ಕಾರ್ಯವನ್ನು ಹೊಂದಿರುತ್ತಾರೆ. ಚರ್ಮದ ತಡೆಗೋಡೆಯ ಕಾರ್ಯವೆಂದರೆ ತೇವಾಂಶವನ್ನು ಉಳಿಸಿಕೊಳ್ಳುವುದು ಮತ್ತು ಹಾನಿಕಾರಕ ವಸ್ತುಗಳನ್ನು ಹೊರಗಿಡುವುದನ್ನು "ತಡೆಗೋಡೆ ಕಾರ್ಯ" ಎಂದು ಕರೆಯಲಾಗುತ್ತದೆ. ಅಲ್ಲದೆ, ಚರ್ಮದ ಮೇಲೆ ಉಂಟಾಗುವ ಕಿರಿಕಿರಿಯ ವಿರುದ್ಧ ರಕ್ಷಿಸಿಕೊಳ್ಳಲು ಮಕ್ಕಳ ಚರ್ಮವು ಕಡಿಮೆ ಸಜ್ಜುಗೊಂಡಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಕೆಲವು ಮೇಕಪ್ ಉತ್ಪನ್ನಗಳು ಶುಷ್ಕತೆ ಮತ್ತು ತುರಿಕೆ ಹೆಚ್ಚಿಸುತ್ತದೆ
ಮೇಕಪ್ ಅನ್ನು ನಿರಂತರ ಬಳಸುವುದರಿಂದ ಮೇಕಪ್ ಉತ್ಪನ್ನಗಳು ಚರ್ಮಕ್ಕೆ ಶುಷ್ಕತೆ, ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಇದು ಚರ್ಮದ ತಡೆಗೋಡೆ ಮತ್ತು ಚರ್ಮದ ರಚನೆಯನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ, ಇದರಿಂದಾಗಿ ನಿಮ್ಮ ತ್ವಚೆಯ ಮೇಲಿನ ಅದು ನೀರಿನಂಶ ಕಡಿಮೆಯಾಗುವ ಸಾಧ್ಯತೆ ಇದೆ, ತ್ವಚೆ ಇನ್ನಷ್ಟು ಸೂಕ್ಷ್ಮವಾಗಿಸುತ್ತದೆ. ಅಷ್ಟೇ ಅಲ್ಲದೇ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಮೇಕಪ್ ಹಚ್ಚುವುದರಿಂದ ಹದಿಹರೆಯ ವಯಸ್ಸಿನಲ್ಲಿ ಮೊಡವೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಮೇಕಪ್‌ನ ರಾಸಾಯನಿಕಗಳ ಪರಿಣಾಮ ತ್ವಚೆಯ ರಂಧ್ರಗಳು ಮುಚ್ಚಿ ಬ್ಯಾಕ್ಟೀರಿಯಾ ಹರಡಬಹುದು.

ಮೇಕಪ್‌ನಿಂದ ಸೋಂಕನ್ನು ತಪ್ಪಿಸುವುದು ಹೇಗೆ?
ನೈಸರ್ಗಿಕ ಅಥವಾ ಸಾವಯವ ಎಂದು ಲೇಬಲ್ ಮಾಡಲಾದ ಕಾಸ್ಮೆಟಿಕ್ಗಳನ್ನು ವಿಶೇಷವಾಗಿ ಮಕ್ಕಳಿಗೆ ಖರೀದಿಸಿ. ಮಕ್ಕಳಿಗಾಗಿಯೇ ತಯಾರಾದ ಪ್ರಾಡಕ್ಸ್‌ಗಳನ್ನು ಹೆಚ್ಚು ಬಳಸಿ. ಅಲ್ಲದೇ ಮಕ್ಕಳಿಗಾಗಿ ಮೇಕಪ್ ಹೆಚ್ಚುವ ಮುನ್ನ ಪೋಷಕರು ಈ ಕೆಳಗಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ:
* ಮೇಕಪ್ ಉತ್ಪನ್ನಗಳನ್ನು ಖರೀದಿಸುವ ಮೊದಲು ಅದಕ್ಕೆ ಬಳಸಲಾದ ಪದಾರ್ಥಗಳ ಬಗ್ಗೆ ಎಚ್ಚರಿಕೆಯಿಂದ ತಿಳಿದುಕೊಳ್ಳಿ.
* ನಿಮ್ಮ ಮಗುವಿನ ಚರ್ಮಕ್ಕೆ ಮೇಕಪ್ ಹಚ್ಚುವ ಮುನ್ನ ಮೊದಲು ಸ್ವಲ್ಪ ಹಚ್ಚಿ ನೋಡಿ, ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಹಳೆಯ, ಹಾಳಾದ, ಕೆಟ್ಟ ವಾಸನೆ ಇರುವ ಮೇಕಪ್ ಪ್ರಾಡಕ್ಟ್‌ಗಳನ್ನು ಬಳಸಬೇಡಿ., ಇದು ತ್ವಚೆಯ ಮೇಲೆ ಇನ್ನಷ್ಟು ಹಾನಿ ಮಾಡಬಹುದು.
* ಮೇಕಪ್ ಪ್ರಾಡಕ್ಟ್‌ಗಳನ್ನು ಬಿಸಿಯಾದ ಅಥವಾ ಅತೀ ತೇವಾಂಶ ಇರುವ ಸ್ಥಳದಲ್ಲಿ ಸಂಗ್ರಹಿಸಬೇಡಿ.