For Quick Alerts
ALLOW NOTIFICATIONS  
For Daily Alerts

ತಾಯಂದಿರ ದಿನದ ವಿಶೇಷ: ವರ್ಕ್ ಫ್ರಮ್ ಹೋಮ್ ಮಾಡುವ ಅಮ್ಮಂದಿರಿಗೆ ಸಲಹೆಗಳು ಇಲ್ಲಿವೆ

|

ಕೊರೋನಾ ನಮ್ಮ ಜೀವನಶೈಲಿಯನ್ನೇ ಬದಲಾವಣೆ ಮಾಡಿದೆ. ಅದರಲ್ಲಿ ಮುಖ್ಯವಾದುದೆಂದರೆ ವರ್ಕ್ ಫ್ರಮ್ ಹೋಮ್. ಇದರಿಂದ ನಮ್ಮ ಕೆಲಸದ ಜಾಗ, ಆಫೀಸ್ ನಿಂದ ಮನೆಗೆ ಸ್ಥಳಾಂತರ ಆಗಿದೆ. ಇದು ಮನೆಯವರೊಂದಿಗೆ ಸಮಯ ಕಳೆಯಲು ಅವಕಾಶ ಕಲ್ಪಿಸಿದೆ ನಿಜ. ಆದರೆ, ಹೊರಗೆ ಕೆಲಸಕ್ಕೆ ಹೋಗುವ ಅಮ್ಮಂದಿರಿಗೆ ಸವಾಲಾಗಿ ಎದುರಾಗಿದೆ.

ಅಮ್ಮ ಆದವಳು ತನ್ನ ಮಕ್ಕಳು-ಕುಟುಂಬವನ್ನು ನೋಡಿಕೊಳ್ಳುವುದ ಜೊತೆಗೆ, ತನ್ನ ಕಚೇರಿಯ ಕೆಲಸವನ್ನೂ ನಿರ್ವಹಿಸಬೇಕು. ಆಗ ಆಕೆಗೊಂದು ಸರಿಯಾದ ದಿನಚರಿ ಬೇಕಾಗುತ್ತದೆ. ಆದ್ದರಿಂದ ಇಲ್ಲಿ ನಾವು ವರ್ಕ್ ಫ್ರಮ್ ಹೋಮ್ ಮಾಡುವ ಅಮ್ಮನಿಗೆ ಕೆಲವೊಂದು ಸಲಹೆಗಳನ್ನ ನೀಡಿದ್ದೇವೆ.

ವರ್ಕ್ ಫ್ರಮ್ ಹೋಮ್ ಮಾಡುವ ಅಮ್ಮಂದಿರಿಗೆ ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

1. ನಿಮ್ಮ ಬಾಸ್ ಗೆ ಪರಿಸ್ಥಿತಿಯ ಬಗ್ಗೆ ಮೊದಲೇ ಹೇಳಿ:

1. ನಿಮ್ಮ ಬಾಸ್ ಗೆ ಪರಿಸ್ಥಿತಿಯ ಬಗ್ಗೆ ಮೊದಲೇ ಹೇಳಿ:

ಹೌದು, ಮನೆಯಲ್ಲಿ ಮಕ್ಕಳಿರುವ ವಿಚಾರವನ್ನು, ಅದರಿಂದಾಗುವ ತೊಂದರೆಗಳನ್ನು ನಿಮ್ಮ ಬಾಸ್ ಗೆ ಅಥವಾ ನಿಮ್ಮ ಸಹೋದ್ಯೋಗಿಗಳಿಗೆ ಮೊದಲೇ ತಿಳಿಸಿ. ಇದರಿಂದ ನಿಮಗೆ ಅವರಿಂದ ಕರೆಬಂದಾಗ ಏನಾದರೂ ಅಡೆತಡೆ ಸಂಭವಿಸಿದರೂ ಸಹ ಅವರಿಗೆ ಸನ್ನಿವೇಶದ ಅರಿವಾಗುತ್ತದೆ. ಅದೇ ರೀತಿ ನಿಮ್ಮ ಮಕ್ಕಳೊಂದಿಗೂ ಮಾತನಾಡಿ. ನಿಮ್ಮ ಮಾಡುವ ಕೆಲಸ ಹಾಗೂ ನಿಮ್ಮ ಸನ್ನಿವೇಶಗಳನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿ.

2. ಕನಿಷ್ಠ ಮೇಲ್ವಿಚಾರಣೆಯ ಅಗತ್ಯವಿರುವ ಚಟುವಟಿಕೆಗಳನ್ನು ನೀಡಿ:

2. ಕನಿಷ್ಠ ಮೇಲ್ವಿಚಾರಣೆಯ ಅಗತ್ಯವಿರುವ ಚಟುವಟಿಕೆಗಳನ್ನು ನೀಡಿ:

ನಿಮ್ಮ ಕೆಲಸದ ವೇಳಾಪಟ್ಟಿ ಮತ್ತು ನಿಮ್ಮ ಮಗುವಿನ ವಯಸ್ಸನ್ನು ಅವಲಂಬಿಸಿದೆ. ಆದ್ದರಿಂದ ಕಡಿಮೆ ಮೇಲ್ವಿಚಾರಣೆಯ ಅಗತ್ಯವಿರುವ ಆಟಗಳು, ಒಗಟುಗಳು, ಪಜಲ್ಸ್ ಮುಂತಾದ ವಿಭಿನ್ನ ಚಟುವಟಿಕೆಗಳನ್ನು ನಿಮ್ಮ ಮಗುವಿಗೆ ನೀಡಿ. ಜೊತೆಗೆ ಕೆಲವು ಗೇಮ್ ಗಳನ್ನ, ಕಾರ್ಟೂನ್ ಗಳನ್ನು ನೋಡಲು ಬಿಡಬಹುದು. ಇದರಿಂದ ನಿಮ್ಮ ಮಗುವು ಕಾರ್ಯನಿರತವಾಗಿರುತದತದೆ, ನೀವು ನಿಮ್ಮ ಕೆಲಸವನ್ನು ಬಹಳ ಆರಾಮವಾಗಿ ಮಾಡಿ ಮುಗಿಸಬಹುದು.

3. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ:

3. ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ:

ನಿಮ್ಮ ಮಗುವಿನ ಆಟದಿಂದ ಅಥವಾ ಚಟುವಟಿಕೆಯಿಂದ ನಿಮ್ಮ ಕಾರ್ಯಕ್ಕೆ ತೊಂದರೆಯಾಗಬಾರದು. ಆದ್ದರಿಂದ ನಿಮ್ಮ ಮಗುವಿಗೆ ಹೆಚ್ಚು ಆಕರ್ಷಕವಾಗಿರುವ ಚಟುವಟಿಕೆಯನ್ನು ನೀಡಿ. ಆಗ ಮಗು ಅದರಲ್ಲೇ ನಿರತವಾಗಿರುತ್ತದೆ. ನೀವು ನಿಮಗೆ ವಹಿಸಿರುವ ಕೆಲಸವನ್ನು ಬಹಳ ಅಚ್ಚುಕಟ್ಟಿನಿಂದ ಮಾಡಿ ಮುಗಿಸಿ.

4. ಊಟಕ್ಕೆ ಅಗತ್ಯವಾದುದನ್ನು ಹಿಂದಿನ ರಾತ್ರಿಯೇ ಸಿದ್ಧಪಡಿಸಿ:

4. ಊಟಕ್ಕೆ ಅಗತ್ಯವಾದುದನ್ನು ಹಿಂದಿನ ರಾತ್ರಿಯೇ ಸಿದ್ಧಪಡಿಸಿ:

ನಿಮ್ಮ ಇಡೀ ಕುಟುಂಬ ಮನೆಯಲ್ಲಿದ್ದಾಗ, ಪ್ರತಿಯೊಬ್ಬರಿಗೂ ಉತ್ತಮವಾದ ಆಹಾರ ನೀಡಬೇಕಾಗುತ್ತದೆ. ಹಾಗಂತ ತಮ್ಮ ಇಡೀ ದಿನವನ್ನು ಅದಕ್ಕಾಗಿ ಬಳಸಬೇಡಿ. ಆಗ ನೀವು ಹಿಂದಿನ ರಾತ್ರಿಯೇ ಮರುದಿನಕ್ಕೆ ಬೇಕಾದ ಊಟದ ಮೆನು, ಅದಕ್ಕೆ ಬೇಕಾದ ಪೂರ್ವತಯಾರಿ ಅಂದರೆ, ತರಕಾರಿ ಕತ್ತರಿಸುವುದು ಇಂತಹ ಕೆಲಸಗಳನ್ನೆಲ್ಲಾ ಮಾಡಿ ಮುಗಿಸಿಡಿ. ಆಗ ಮರುದಿನ ನಿಮ್ಮ ಆಫೀಸ್ ಕೆಲಸ ಮಾಡಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ.

5. ನಿಮ್ಮ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಿ:

5. ನಿಮ್ಮ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳಿ:

ನಿಮ್ಮ ಮನೆಯ ಜವಾಬ್ದಾರಿಗಳನ್ನು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಜೊತೆಗೆ ಮಕ್ಕಳನ್ನು ನೋಡಿಕೊಳ್ಳುವದರಲ್ಲಿಯೂ ಬದಲಾವಣೆ ಮಾಡಬಹುದು. ಯಾವಾಗಲೂ ನೀವೇ ಆರೈಕೆ ಮಾಡಬೇಕೇಂದಿನಿಲ್ಲ, ನಿಮ್ಮ ಗಂಡನಿಗೆ ಬಿಡುವಿದ್ದಾಗ ಅವರಿಗೂ ಮಗುವಿನ ಜವಾಬ್ದಾರಿ ವಹಿಸಿ.

ಉದಾಹರಣೆಗೆ, ನಿಮ್ಮ ಸಂಗಾತಿಯು ಕೆಲಸ ಮಾಡುವಾಗ ನೀವು ಬೆಳಿಗ್ಗೆ ಮನೆ ಮತ್ತು ಮಕ್ಕಳ ಜವಾಬ್ದಾರಿಗಳನ್ನು ನೋಡಿಕೊಳ್ಳಬಹುದು. ನಂತರ ಆ ಜವಾಬ್ದಾರಿಯನ್ನು ನಿಮ್ಮ ಪತಿಗೆ ವರ್ಗಾಯಿಸಿ, ನೀವು ಕೆಲಸ ಮಾಡಿ.

6. ಕೆಲಸಕ್ಕಾಗಿ ನಿರ್ದಿಷ್ಠ ಸ್ಥಳವನ್ನು ರಚಿಸಿ:

6. ಕೆಲಸಕ್ಕಾಗಿ ನಿರ್ದಿಷ್ಠ ಸ್ಥಳವನ್ನು ರಚಿಸಿ:

ನಿಮ್ಮ ಮನೆಯಲ್ಲಿ ಬಾಗಿಲು ಹೊಂದಿರುವ ಜಾಗವನ್ನು ಹುಡುಕಲು ಪ್ರಯತ್ನಿಸಿ. ಏಕೆಂದರೆ ನಿಮ್ಮ ಕೆಲಸ ಆದ ಬಳಿಕ ಆ ರೂಮ್ ಅನ್ನು ಮುಚ್ಚಬಹುದು. ಅಥವಾ ನಿಮ್ಮ ಮಗು ನಿಮ್ಮ ಕೆಲಸಕ್ಕೆ ಅಡ್ಡಿಯಾಗದಂತೆ ಇರಬಹುದು. ನೀವು ಕೆಲಸ ಮಾಡಬೇಕಾದರೆ ಮಗು ಯಾವುದೇ ತೊಂದರೆಗೆ ಸಿಲುಕಿಕೊಳ್ಳಬಾರದೆಂದರೆ ನಿಮ್ಮ ಮಗುವಿಗೆ ಗಡಿಯನ್ನು ನಿರ್ಮಿಸಿ. ಅಂದ್ರೆ ನಿರ್ದಿಷ್ಠ ಜಾಗ ಬಿಟ್ಟು ಮಗು ಆಚೆ ಹೋಗ ಕೂಡದು ಎಂದು. ಮಗು ನಿಮ್ಮ ಕಣ್ಣಳತೆಯ ದೂರದಲ್ಲಿದ್ದರೆ ಒಳ್ಳೆಯದು.

7. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ:

7. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ:

ನೆನಪಿಡಿ, ಮಕ್ಕಳಿಗೆ ಪದೇ ಪದೇ ಗಮನ ನೀಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಕೆಲಸದ ಮಧ್ಯೆ ಸಣ್ಣ-ಸಣ್ಣ ವಿರಾಮಗಳನ್ನು ತೆಗೆದುಕೊಂಡು ಮಕ್ಕಳನ್ನು ಮಾತನಾಡಿಸಿ. ಅವರ ಜೊತೆ ಸಮಯ ಕಳೆಯಿರಿ ಅಥವಾ ಆಟವಾಡಿ. ಇದು ಮಗುವಿಗೂ ಹಾಗೂ ನಿಮಗೂ ಸಂತೋಷದ ಜೊತೆಗೆ ಕೆಲಸದ ಒತ್ತಡದಿಂದ ಆಚೆ ಬರಲು ನಿಮಗೆ ಸಹಾಯ ಮಾಡುತ್ತದೆ.

8. ಉತ್ತಮ ನಡವಳಿಕೆಯನ್ನು ಪುರಸ್ಕರಿಸಿ :

8. ಉತ್ತಮ ನಡವಳಿಕೆಯನ್ನು ಪುರಸ್ಕರಿಸಿ :

ಈ ರೀತಿಯ ತುರ್ತು ಪರಿಸ್ಥಿತಿಯಲ್ಲಿ, ಮಕ್ಕಳ ಜೊತೆಯೇ ಕೆಲಸ ಮಾಡುವುದರಿಂದ, ನೀವು ಸಾಧ್ಯವಾದಷ್ಟು ಹೊಂದಾಣಿಕೆ ಕಾಪಾಡಿಕೊಳ್ಳಬೇಕು. ನಿಮ್ಮ ಮಕ್ಕಳು ಹೇಳಿದ ಮಾತನ್ನು ಕೇಳುವಾಗ, ಉತ್ತಮ ನಡವಳಿಕೆಯನ್ನು ಪ್ರದರ್ಶಿಸುವಾಗ ಮತ್ತು ನಿಮ್ಮ ಸೂಚನೆಗಳನ್ನು ಅನುಸರಿಸುವಾಗ ಅವರಿಗೆ ಏನಾದರೂ ಗಿಫ್ಟ್ ರೂಪದಲ್ಲಿ ಏನನ್ನಾದರೂ ನೀಡಬಹುದು.

English summary

Mother's Day Special : Work From Home Tips For Mothers in Kannada

Here we talking about Mother's Day Special : Work From Home Tips For Mothers in Kannada, read on
Story first published: Wednesday, May 5, 2021, 17:31 [IST]
X
Desktop Bottom Promotion