Just In
Don't Miss
- Sports
ವಿಜಯ್ ಹಜಾರೆ: ಸ್ಫೋಟಕ ಬ್ಯಾಟಿಂಗ್ಗಾಗಿ ಇತಿಹಾಸ ಬರೆ ಪೃಥ್ವಿ ಶಾ!
- Movies
'ಪೊಗರು' ಸಿನಿಮಾದ ವಿವಾದ: ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ
- News
ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್ ಎಚ್ಚರಿಕೆ
- Education
Belagavi District Court Recruitment 2021: 31 ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಹೊಸ ಸಫಾರಿ ಕಾರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Finance
ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮತ್ತೆ ಹೆಚ್ಚಳ: ತಿಂಗಳಲ್ಲಿ 3ನೇ ಬಾರಿ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳ ಒತ್ತಡಕ್ಕೆ ಇದೇ ನೋಡಿ ಪ್ರಮುಖ ಕಾರಣಗಳು
ಒತ್ತಡ ಎನ್ನುವುದು ಕೇವಲ ಜವಾಬ್ದಾರಿ ಇರುವಂತಹ, ವೃತ್ತಿ ಮಾಡುವಂತಹ ಜನರಲ್ಲಿ ಮಾತ್ರ ಕಾಣಿಸುವುದು ಎಂದು ಭಾವಿಸುವವರು ಇದ್ದಾರೆ, ಆದರೆ ಇದು ತಪ್ಪು. ಯಾಕೆಂದರೆ ಮಕ್ಕಳಲ್ಲಿ ಕೂಡ ಒತ್ತಡವು ಕಾಣಿಸಿಕೊಳ್ಳುವುದು.
ಹೌದು, ಮಕ್ಕಳು ಕೂಡ ಒತ್ತಡಕ್ಕೆ ಒಳಗಾಗುವುದು ಇದೆ. ಅದು ಕೂಡ ದೊಡ್ಡವರಿಗಿಂತಲೂ ಹೆಚ್ಚು ಎನ್ನಬಹುದು. ಈ ಒತ್ತಡದಿಂದಾಗಿ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡುಬರುವುದು.
ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ, ವೈಯಕ್ತಿಕ ವ್ಯಕ್ತಿತ್ವ ಮತ್ತು ಒತ್ತಡ ನಿಭಾಯಿಸುವಂತಹ ಕೌಶಲ್ಯದೊಂದಿಗೆ ಇದಕ್ಕೆ ಪ್ರತಿಕ್ರಿಯಿಸುವರು. ಮಕ್ಕಳಲ್ಲಿ ಒತ್ತಡ ಕಂಡುಬಂದರೆ ಅದರಿಂದ ಹೆಚ್ಚು ಸಮಸ್ಯೆಗೆ ಒಳಗಾಗುವುದು ಪೋಷಕರು. ಯಾಕೆಂದರೆ ಮಕ್ಕಳಲ್ಲಿ ಕಂಡುಬರುವ ಕೆಲವು ಬದಲಾವಣೆಗಳನ್ನು ಅವರು ಅರಿಯಲು ತುಂಬಾ ಕಷ್ಟಪಡಬೇಕಾಗುತ್ತದೆ.
ಮಕ್ಕಳಲ್ಲಿ ಒತ್ತಡ ಕಂಡುಬರಲು ಶಾಲೆ, ಕುಟುಂಬದಲ್ಲಿ ಬದಲಾವಣೆ ಅಥವಾ ಸ್ನೇಹಿತರೊಂದಿಗೆ ಕಲಹ ಕಾರಣವಾಗಿರಬಹುದು. ಆತಂಕದಿಂದಾಗಿ ಮಗುವಿನ ಆಂತರಿಕ ಭಾವನೆ ಮತ್ತು ಒತ್ತಡದ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ ಶೈಕ್ಷಣಿಕವಾಗಿ ಉತ್ತಮ ಪ್ರದರ್ಶನ ನೀಡಬೇಕಾಗುವುದು ಮಕ್ಕಳಲ್ಲಿ ಕಂಡುಬರುವಂತಹ ಅತೀ ಸಾಮಾನ್ಯ ಒತ್ತಡವಾಗಿದೆ. ಮಕ್ಕಳಲ್ಲಿ ಕಂಡುಬರುವಂತಹ ಒತ್ತಡಕ್ಕೆ ಕಾರಣ ತಿಳಿಯಿರಿ.

ಕುಟುಂಬದಲ್ಲಿ ದೊಡ್ಡ ಬದಲಾವಣೆ
ಕೌಟುಂಬಿಕವಾಗಿ ದೊಡ್ಡ ಬದಲಾವಣೆಗಳಾಗಿರುವಂತಹ ವಿಚ್ಛೇದನ, ಕುಟುಂಬ ಸದಸ್ಯರ ಸಾವು, ದೂರ ಪ್ರಯಾಣ ಅಥವಾ ಹೊಸ ಸೋದರ, ಸೋದರಿ ಪ್ರವೇಶವು ಮಕ್ಕಳಲ್ಲಿ ಒತ್ತಡ ಉಂಟು ಮಾಡಬಹುದು. ಜೀವನದಲ್ಲಿ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಭದ್ರತೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಗೊಂದಲ ಹಾಗೂ ಆತಂಕ ಕಾಡಬಹುದು. ಉದಾಹರಣೆಗೆ ಸೋದರ/ಸೋದರಿಗೆ ಬಂದರೆ ಆಗ ಮಕ್ಕಳಲ್ಲಿ ಅಸೂಯೆ ಮೂಡಬಹುದು. ಕುಟುಂಬ ಸದಸ್ಯರಲ್ಲಿನ ಸಾವು ಮಕ್ಕಳ ಮೇಲೆ ಗಾಢ ಪರಿಣಾಮ ಬೀರಬಹುದು. ಇದರಿಂದ ಸಾಯುವ ಭೀತಿ ಅವರಲ್ಲಿ ಕಾಡಬಹುದು.

ಪೋಷಕರ ಅಸ್ಥಿರತೆ
ಕುಟುಂಬದಲ್ಲಿನ ಸಮಸ್ಯೆ ಮತ್ತು ಪೋಷಕರ ಜಗಳವು ಮಕ್ಕಳು ಯಾವಾಗಲೂ ಅಧಿಕವಾಗಿ ನಿಸ್ಸಾಹಯಕರಾಗುವರು ಮತ್ತು ಇದರಿಂದ ಅವರಿಗೆ ಒತ್ತಡ ಕಾಡಬಹುದು.

ಅತಿಯಾದ ವೇಳಾಪಟ್ಟಿ
ಒಂದು ಚಟುವಟಿಕೆಯಿಂದ ಮತ್ತೊಂದು ಚಟುವಟಿಕೆಗೆ ಜಿಗಿಯುತ್ತಾ ಇರುವುದು ಮಕ್ಕಳ ಮೇಲೆ ದೊಡ್ಡ ಮಟ್ಟದಲ್ಲಿ ಒತ್ತಡ ಉಂಟಾಗುವುದು.

ಶೈಕ್ಷಣಿಕ ಒತ್ತಡ
ಶಾಲೆಯಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಪೋಷಕರ ಒತ್ತಡವು ಇದ್ದೇ ಇರುತ್ತದೆ. ಇದರಿಂದಾಗಿ ಮಕ್ಕಳು ಯಾವುದೇ ಸಣ್ಣ ತಪ್ಪು ಮಾಡಿದರೂ ತುಂಬಾ ಹೆದರುವರು ಮತ್ತು ಇದರಿಂದಾಗಿ ಅವರ ಮೇಲೆ ಒತ್ತಡ ಅತಿಯಾಗುವುದು.

ಜನಪ್ರಿಯತೆ
ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಇನ್ನೊಬ್ಬ ಮಕ್ಕಳೊಂದಿಗೆ ಸ್ಪರ್ಧಿಸುವ ಮತ್ತು ಅವರಿಂದ ಹೆಚ್ಚಿನ ಜನಪ್ರಿಯತೆ ಪಡೆಯಬೇಕೆನ್ನುವಂತಹ ಒತ್ತಡವು ಮಕ್ಕಳಲ್ಲಿ ಕಾನಿಸುವುದು. ದೊಡ್ಡ ತರಗತಿಗಳಿಗೆ ಹೋದ ಹಾಗೆ ಇದು ಹೆಚ್ಚಾಗುವುದು.