For Quick Alerts
ALLOW NOTIFICATIONS  
For Daily Alerts

ಪೋಷಕರೇ ಮಕ್ಕಳಿಗೆ ಬುಕ್‌ ಖರೀದಿಸುವಾಗ ಅವರ ವಯಸ್ಸು ಕೂಡ ಮುಖ್ಯ ಗೊತ್ತೇ?

|

ನೀವು ಮಕ್ಕಳಿಗೆ ಯಾವ ಬಗೆಯ ಬುಕ್‌ ತಂದು ಕೊಡ್ತಾ ಇದ್ದೀರಾ? 10 ವರ್ಷದ ಕೆಳಗಿನ ಮಕ್ಕಳಾದರೆ ಹೆಚ್ಚಾಗಿ ಡ್ರಾಯಿಂಗ್, ಮಗ್ಗಿ ಪುಸ್ತಕ, ಎಬಿಸಿಡಿ, ಅ ಆ ಇ ಈ, ಪದ್ಯಗಳಿರುವ ಪುಸ್ತಕ ತಂದು ಕೊಡ್ತಾ ಇದ್ದೀರಾ? ಹಾಗಾದರೆ ಕಲಿಕೆಯ ಪುಸ್ತಕಗಳನ್ನು ಖರೀದಿಸುವಾಗ ಮಕ್ಕಳ ವಯಸ್ಸು ತಂಬಾನೇ ಮುಖ್ಯ ಏಕೆ? ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

Parenting Tips

ಮಕ್ಕಳಿಗೆ ಪುಸ್ತಕ ಖರೀದಿಸುವಾಗ ಅವರ ವಯಸ್ಸು ತುಂಬಾನೇ ಮುಖ್ಯ

ಹೌದು ನೀವು ಡ್ರಾಯಿಂಗ್ ಆಗಿರಲಿ, ಮಗ್ಗಿ ಆಗಿರಲಿ, ಲೆಟರ್ಸ್, ನಂಬರ್ ಹೀಗೆ ಯಾವುದೇ ಬಗೆಯ ಪುಸ್ತಕ ಆಗಿರಲಿ ಅವರ ವಯಸ್ಸಿಗೆ ತಕ್ಕ ಪುಸ್ತಕ ಖರೀದಿಸಬೇಕು, ಇಲ್ಲದಿದ್ದರೆ ಆ ಪುಸ್ತಕಗಳಿಂದ ಕಲಿಯಲು ಸಾಧ್ಯವಿಲ್ಲ.

ಉದಾಹರಣೆಗೆ ನಿಮ್ಮ ಮಗು ಇನ್ನೂ ಸ್ಕೂಲ್‌ ಹೋಗುತ್ತಿಲ್ಲ ಎಂದಾದರೆ ಆ ಮಗುವಿಗೆ ಎಬಿಸಿಡಿ ಬುಕ್‌ ತರುವುದಕ್ಕಿಂತ ದೊಡ್ಡ-ದೊಡ್ಡ ಚಿತ್ರಗಳಿರುವ ಬುಕ್‌ ತರಬೇಕು, ಆ ವಯಸ್ಸಿನಲ್ಲಿ ಮಗು ಚಿತ್ರಗಳನ್ನು ಗುರುತಿಸಲಾರಂಭಿಸುತ್ತದೆ.
ಇನ್ನು ನಿಮ್ಮ ಮಗು ಪ್ರೀ ಸ್ಕೂಲ್‌ನಲ್ಲಿದೆ ಎಂದಾದರೆ ಸ್ಮಾಲ್‌ಲೆಟರ್‌ ಇರುವ ಬುಕ್‌ಗಿಂತ ಕ್ಯಾಪಿಟಲ್‌ ಲೆಟರ್ ಇರುವ ಬುಕ್‌ ಕೊಡಿಸಬೇಕು, ಏಕೆಂದರೆ ಆ ಪ್ರಾಯದಲ್ಲಿ ಮಗು
ಸ್ಮಾಲ್‌ ಲೆಟರ್ ಗುರುತಿಸುವುದಿಲ್ಲ, ಆದ್ದರಿಂದ ನೀವು ಅಂಥ ಬುಕ್‌ ಕೊಡಿಸಿದರೂ ಪ್ರಯೋಜನವಾಗಲ್ಲ.

ಯಾವಾಗಲೂ ಬುಕ್‌ ತರುವಾಗ ಮಗುವಿನ ಪ್ರಾಯಕ್ಕೆ ತಕ್ಕ ಬುಕ್ ತನ್ನಿ
ಬುಕ್‌ ಮೇಲೆ ಎಷ್ಟು ವರ್ಷದಿಂದ ಎಷ್ಟು ವರ್ಷದವರೆಗೆ ಎಂದು ಬರೆದಿರುತ್ತದೆ, ಅದಕ್ಕೆ ತಕ್ಕಂತೆ ಖರೀದಿಸಬೇಕು.

ಯಾವ ಪ್ರಾಯದ ಮಕ್ಕಳಿಗೆ ಎಂಥ ಬುಕ್‌ ಸೂಕ್ತ
4 ವರ್ಷದೊಳಗಿನ ಮಕ್ಕಳಿಗೆ: ದೊಡ ಚಿತ್ರಗಳಿರುವ ಬುಕ್ ಖರೀದಿಸಬೇಕು , ಬೋರ್ಡ್‌ನಲ್ಲಿರುವ ಚಿತ್ರಗಳು ಸೂಕ್ತ.
2-5 ವರ್ಷದ ಮಕ್ಕಳಿಗೆ: ಕಲರ್ ಮಾಡುವುದು, ಚಿತ್ರಗಳಿರುವ ಬುಕ್, ಚಿತ್ರದ ಮೂಲಕ ಕತೆ ಹೇಳುವುದು ಈ ಬಗೆಯ ಬುಕ್‌ಗಳನ್ನು ಖರೀದಿಸಬೇಕು.
5-8 ವರ್ಷದ ಮಕ್ಕಳಿಗೆ: ಕಲರ್ ಆಕ್ಟಿವಿಟಿ, ಕತೆಗಳು, ಚಿತ್ರಗಳಿರುವ ಬುff
4-8 ವರ್ಷದ ಮಕ್ಕಳಿಗೆ ಓದುವ ಬುಕ್‌ಗಳು
6-9 ವರ್ಷದ ಮಕ್ಕಳಿಗೆ: ಗ್ರಾಫಿಕ್ಸ್ ಇರುವ ನಾವೆಲ್ ಅಥವಾ ಫಸ್ಟ್‌ ಚಾಪ್ಟರ್ ಬುಕ್‌
8-12 ವರ್ಷದ ಮಕ್ಕಳಿಗೆ : ಗ್ರಾಫಿಕ್ ನಾವೆಲ್ಸ್, ಚಿಕ್ಕ ಕತೆಗಳ ಬುಕ್
12-18 ವರ್ಷದ ಮಕ್ಕಳಿಗೆ: ಕತೆ ಪುಸ್ತಗಳು, ಗ್ರಾಫಿಕ್ಸ್ ಕತೆ ಪುಸ್ತಕಗಳು

ಮಕ್ಕಳಿಗೆ ಕತೆ ಬುಕ್‌ ಓದಿಸಬೇಕು ಏಕೆ?
ಮೊಬೈಲ್‌ ಬಂದ ಮೇಲೆ ಕತೆ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಮೊಬೈಲ್‌ನಲ್ಲೇ ಓದುತ್ತಾರೆ, ಆದರೆ ಪೋಷಕರೇ ನಿಮ್ಮ ಮಕ್ಕಳಿಗೆ ಓದುವ ಅಭ್ಯಾಸ ಕಲಿಸುವುದು ಅವಶ್ಯಕ, ಅದು ಮಕ್ಕಳಲ್ಲಿ ಕಲ್ಪನಾ ಹಾಗೂ ಯೋಚನಾ ಸಾಮರ್ಥ್ಯ ಹೆಚ್ಚಿಸುತ್ತದೆ. ಆದ್ದರಿಂದ ನೀವು ಮಕ್ಕಳಿಗೆ ಪುಸ್ತಕ ಓದಿಸುವ ಅಭ್ಯಾಸ ಮಾಡಿಸಬೇಕು.

ಮಕ್ಕಳಿಗೆ ಮಾತ್ರ ಬುಕ್ ತಂದುಕೊಟ್ಟರೆ ಅವರು ಓದಲ್ಲ
ನೀವು ಅವರಿಗೆ ಡ್ರಾಯಿಂಗ್ ಮಾಡು, ಕಲರ್ ಮಾಡು ಅಂತ ತಂದುಕೊಟ್ಟು ನೀವು ಮೊಬೈಲ್ ನೋಡುತ್ತಾ ಕೂತರೆ ಅವರು ಬುಕ್‌ ಕಡೆ ಆಸಕ್ತಿ ತೋರಿಸಲ್ಲ, ಅವರ ಜೊತೆ ನೀವೂ ಸೇರಿ ಡ್ರಾಯಿಂಗ್ ಎಲ್ಲಾ ಮಾಡಿ, ನೀವೂ ಒಳ್ಳೆಯ ಪುಸ್ತಕಗಳನ್ನು ತಂದು ಓದಲು ಆರಂಭಿಸಿ, ನಿಮ್ಮನ್ನು ನೋಡಿ ಅವರು ಓದಲು ಪ್ರಾರಂಭಿಸುತ್ತಾರೆ, ಹೀಗೆ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಬಹುದು.

ಮಕ್ಕಳಿಗೆ ಕತೆ ಪುಸ್ತಕ ಓದಿಸಬೇಕು, ಏಕೆ?
* ನೆನಪಿನ ಶಕ್ತಿ ಹೆಚ್ಚುತ್ತದೆ
* ಏಕಾಗ್ರತೆ ಹೆಚ್ಚುವುದು
* ಬೇರೆ ಲೋಕದ ಬಗೆಯೂ ಜ್ಞಾನ ಬೆಳೆಯುವುದು
* ಅವರ ಕಲ್ಪನಾ ಶಕ್ತಿ ಉತ್ತಮವಾಗುವುದು
* ಮೆದುಳಿಗೆ ಅತ್ಯುತ್ತಮವಾದ ವ್ಯಾಯಾಮ'
* ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಾಮರ್ಥ್ಯ ಹೆಚ್ಚುವುದು
* ಭಾಷೆ ಮೇಲೆ ಹಿಡಿತ ಹೆಚ್ಚುವುದು
* ಊಹಿಸುವ ಸಾಮರ್ಥ್ಯ ಹೆಚ್ಚುವುದು
* ಅವರ ಶಬ್ದಭಂಡಾರ ಹೆಚ್ಚುವುದು
* ಶಾಲೆಯಲ್ಲಿ ಉತ್ತಮವಾಗಿ ಓದುತ್ತಾರೆ
* ಅವರಿಗೆ ಮನರಂಜನೆ ಸಿಗುವುದು
* ಒಳ್ಳೆಯ ಸಂದೇಶಗಳು ಸಿಗುವುದು
* ಬದುಕಿಗೆ ನೀತಿ ಕತೆಗಳು ಉತ್ತಮ ತಿಳುವಳಿಕೆ ನೀಡುತ್ತದೆ.

English summary

When You Buy Books For Kids Their Age Group Also Matter Why?

Parenting Tips: When You Buy Books For Kids Their Age Group Also Matter, Here are the reason,
X
Desktop Bottom Promotion