For Quick Alerts
ALLOW NOTIFICATIONS  
For Daily Alerts

ಮಕ್ಕಳು ಸುಳ್ಳು ಹೇಳುತ್ತಿದ್ದರೆ ಏನು ಮಾಡಬೇಕು ಗೊತ್ತಾ?

|

ಮಕ್ಕಳು ಸುಳ್ಳು ಹೇಳಲ್ಲ ಅಂತಾರೆ, ಆದರೆ ಕೆಲವೊಮ್ಮೆ ಮಕ್ಕಳು ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ನಾವು ಹೇಳಿರದ ವಿಷಯಗಳನ್ನು ಹೇಳುತ್ತಾರೆ, ಮಕ್ಕಳು ಕೆಲವೊಂದು ಸುಳ್ಳುಗಳನ್ನು ಹೇಳುವಾಗ ನಾವು ನಕ್ಕು ಸುಮ್ಮನಾಗುತ್ತೇವೆ, ಆದರೆ ಅವರು ಸುಳ್ಳುವುದನ್ನು ನಿಲ್ಲಿಸದಿದ್ದರೆ ಮುಂದೆ ಅವರು ಮಹಾನ್‌ ಸುಳ್ಳುಗಾರನಾಗುತ್ತಾನೆ/ಳೆ.

ಮಕ್ಕಳು ಸುಳ್ಳು ಹೇಳುವಾಗ ಅದು ಸುಳ್ಳೆಂದು ಗೊತ್ತಾದರೆ ನಕ್ಕು ಸುಮ್ಮನಾಗಬೇಡಿ, ಅವರಿಗೆ ಸತ್ಯವನ್ನು ಹೇಳುವಂತೆ ಹೇಳಿ, ನೀವು ಸತ್ಯವನ್ನೇ ಹೇಳಬೇಕೆಂದು ಹೇಳಿದ ತಕ್ಷಣ ಅವರು ಸತ್ಯವನ್ನು ಹೇಳುವುದಿಲ್ಲ, ನಿಮ್ಮ ಮಕ್ಕಳು ಸತ್ಯವನ್ನು ಹೇಳಬೇಕೆಂದರೆ ಅವರೊಂದಿಗೆ ನೀವು ಹೀಗೆ ವರ್ತಿಸಿ.....

ನಿಮ್ಮ ಮೇಲಿನ ಭಯದಿಂದ ಸುಳ್ಳು ಹೇಳುವಂತಾಗಬಾರದು

ನಿಮ್ಮ ಮೇಲಿನ ಭಯದಿಂದ ಸುಳ್ಳು ಹೇಳುವಂತಾಗಬಾರದು

ಮಕ್ಕಳು ಏನಾದರೂ ತಪ್ಪು ಮಾಡಿದಾಗ ಗದರಿಸುವುದು ಸಹಜ, ಆದರೆ ಕೆಲವರು ಮಕ್ಕಳಿಗೆ ಚಿಕ್ಕ ವಿಷಯಕ್ಕೆ ಹೊಡೆಯುತ್ತಾರೆ, ಹಾಗೇ ಮಾಡಬೇಡಿ, ಎಲ್ಲಿ ಹೊಡಿತಾರೆ, ಬೈಯುತ್ತಾರೆ ಎಂಬ ಭಯದಲ್ಲಿ ಸುಳ್ಳು ಹೇಳುತ್ತಾರೆ. ಆದ್ದರಿಂದ ಯಾವ ವಿಷಯವನ್ನು ಹೇಗೆ ಡೀಲ್ ಮಾಡಬೇಕು ಎಂಬುವುದು ತಿಳಿಯಬೇಕು. ಅವರು ಹೇಳುತ್ತಿರುವುದು ಸುಳ್ಳು ಅಂತ ಗೊತ್ತಾದರೆ ಅವರನ್ನು ಕರಿದು ಏಕೆ ಹಾಗೇ ಹೇಳ್ತಾ ಇದ್ದೀಯಾ ಎಂದು ಸಮಧಾನದಿಂದ ಕೇಳಿದರೆ ಅವರು ಖಂಡಿತ ತಪ್ಪು ಒಪ್ಪಿಕೊಂಡು ಮುಂದೆ ಅವರು ಸುಳ್ಳು ಹೇಳುವುದಿಲ್ಲ.

ಸುಳ್ಳು ಏಕೆ ಹೇಳಬಾರದು ಎಂಬುವುದನ್ನು ತಿಳಿ ಹೇಳಿ

ಸುಳ್ಳು ಏಕೆ ಹೇಳಬಾರದು ಎಂಬುವುದನ್ನು ತಿಳಿ ಹೇಳಿ

ಸುಳ್ಳು ಹೇಳಿದರೆ ಆ ಸುಳ್ಳಿಗಾಗಿ ಇನ್ನೂ ತುಂಬಾ ಸುಳ್ಳು ಹೇಳಬೇಕಾಗುತ್ತದೆ., ಆದ್ದರಿಂದ ನಿಮಗೆ ಅನಗ್ಯತ ಟೆನ್ಷನ್‌, ಅಲ್ಲದೆ ಸುಳ್ಳು ಹೇಳಿ ಸಿಕ್ಕಿ ಬಿದ್ದರೆ ನಿಮ್ಮ ಮೇಲೆ ನಮಗಿರುವ ನಂಬಿಕೆ ಕೂಡ ಕಡಿಮೆಯಾಗುವುದು. ಆದ್ದರಿಂದ ಸುಳ್ಳು ಹೇಳಬೇಡಿ. ಸತ್ಯ ಹೇಳಿದರೆ ನಮಗೆ ಕೋಪ ಬರಬಹುದು ಆದರೆ ಹಾಗಂತ ಸುಳ್ಳು ಹೇಳಬೇಡಿ ಎಂಬುವುದಾಗಿ ನಿಧಾನಕ್ಕೆ ತಿಳಿ, ಮಕ್ಕಳು ಖಂಡಿತ ಅರ್ಥ ಮಾಡಿಕೊಳ್ಳುತ್ತಾರೆ.

ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗಿಯೂ ಸುಮ್ಮನಾಗಬೇಡಿ

ಮಕ್ಕಳು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾಗಿಯೂ ಸುಮ್ಮನಾಗಬೇಡಿ

ಕೆಲವೊಮ್ಮೆ ಅವರು ಹೇಳುತ್ತಿರುವುದು ಸುಳ್ಳು ಎಂಬುವುದು ಗೊತ್ತಿರುತ್ತದೆ, ಆದರೆ ನಾವು ಸುಮ್ಮನಾಗಿ ಬಿಡುತ್ತೇವೆ, ಆ ತಪ್ಪು ಮಾಡಬೇಡಿ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದನಿಸಿದ ತಕ್ಷಣ ಅವರ ಮಾತುಗಳನ್ನು ಅಲ್ಲಿಗೆ ನಿಲ್ಲಿಸಿ ಅಥವಾ ಅವರ ಮಾತು ಕೇಳಲು ಆಸಕ್ತಿ ತೋರಿಸಬೇಡಿ.

ಮಕ್ಕಳಿಗೆ ಸತ್ಯ ಹೇಳಲು ಹುರಿದುಂಬಿಸಿ

ಅವರಿಗೆ ಸತ್ಯವನ್ನು ಹೇಳಲು ಹುರಿದುಬಿಸಿ, ನೀವು ಅವರನ್ನು ಸಾಕಷಟು ನಂಬುತ್ತೀರಿ ಎಂದು ಅವರಿಗೆ ತಿಳಿದಾಗ ಅವರಿಗೆ ನಿಮ್ಮನ್ನು ಮೋಸ ಮಾಡಲು ಮನಸ್ಸಾಗಲ್ಲ. ಅವರು ಸತ್ಯ ಹೇಳಿದಾಗ ಖುಷಿ, ಇದರಿಂದ ಅವರಿಗೂ ಖುಷಿಯಾಗುತ್ತೆ, ಮಕ್ಕಳು ನಿಮಗೆ ಸುಳ್ಳು ಹೇಳುವುದು ನಿಲ್ಲಿಸುತ್ತಾರೆ.

English summary

Ways To Get Your Kids to Stop Lying in Kannada

If you feel your kids are lying how to stop to that, read on....
Story first published: Saturday, October 29, 2022, 15:36 [IST]
X
Desktop Bottom Promotion