For Quick Alerts
ALLOW NOTIFICATIONS  
For Daily Alerts

ಮಕ್ಕಳು ಎತ್ತರವಾಗಿ ಬೆಳೆಯಬೇಕೆ? ಈ ವಿಟಮಿನ್ಸ್ ಆಹಾರ ನೀಡಲೇಬೇಕು

|

ತುಂಬಾ ಜನ ಪೋಷಕರಿಗೆ ಮಕ್ಕಳು ಸರಿಯಾಗಿ ಆಹಾರ ಸೇವಿಸುತ್ತಿಲ್ಲ ಎನ್ನುವುದೇ ಚಿಂತೆಯಾಗಿರುತ್ತೆ. ಬೆಳೆಯುವ ಪ್ರಾಯದಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಅದು ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಪೋಷಕಾಂಶವಿರುವ ಆಹಾರ ಸೇವನೆ ಅವಶ್ಯಕ.

6 Top Vitamin Foods To Help Want Your Child Grow Taller | Boldsky Kannada
vitamins help with height growth

ಇನ್ನು ಮಕ್ಕಳು ಎತ್ತರ ಬೆಳೆಯಬೇಕು, ಅವರ ವಯಸ್ಸಿನ ಇತರ ಮಕ್ಕಳಂತೆಯೇ ಇವರ ಎತ್ತರ ಇರಬೇಕು ಎಂದು ಪೋಷಕರು ಹಾಗೂ ಮಕ್ಕಳು ಬಯಸುತ್ತಾರೆ. ಮಕ್ಕಳ ಬೆಳವಣಿಗೆ ಸರಿಯಾಗಿರಬೇಕೆಂದರೆ ಮೂಳೆಗಳು, ಮೂಳೆ ಸಂಧಿಗಳು ಹಾಗೂ ದೇಹ ಆರೋಗ್ಯವಾಗಿರಬೇಕು. ಇದಕ್ಕೆ ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡಬೇಕು.

ಮಕ್ಕಳ ಬೆಳವಣಿಗೆಯಲ್ಲಿ ವಿಟಮಿನ್ ಡಿ, ಮೆಗ್ನಿಷ್ಯಿಯಂ, ರಂಜಕ ಪ್ರಮುಖವಾಗಿರುತ್ತದೆ. ಅಂಥ ಆಹಾರವನ್ನು ನಿಮ್ಮ ಮಕ್ಕಳ ಆಹಾರಕ್ರಮದಲ್ಲಿ ಸೇರಿಸಿದರೆ ಅದರಲ್ಲಿರುವ ವಿಟಮಿನ್ಸ್ ಹಾಗೂ ಪೋಷಕಾಂಶ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇಲ್ಲಿ ಮಕ್ಕಳ ಬೆಳವಣಿಗೆಗೆ ಅವಶ್ಯಕವಾದ ಟಾಪ್‌ 10 ವಿಟಮಿನ್ಸ್ ಪಟ್ಟಿ ನೀಡಿದ್ದೇವೆ ನೋಡಿ:

1. ವಿಟಮಿನ್ ಎ

1. ವಿಟಮಿನ್ ಎ

ಮಕ್ಕಳು ಎತ್ತರವಾಗಿ ಬೆಳೆಯಲು ಈ ವಿಟಮಿನ್ಸ್ ತುಂಬಾ ಅವಶ್ಯಕ. ಬ್ರೊಕೋಲಿ, ಪೀಚ್, ಹಾಲು ಹಾಗೂ ಹಣ್ಣುಗಳಲ್ಲಿ ವಿಟಮಿನ್ ಎ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಅಧಿಕ ಹಣ್ಣುಗಳನ್ನು ನೀಡಿ.

2. ವಿಟಮಿನ್ ಡಿ

2. ವಿಟಮಿನ್ ಡಿ

ಕೆಲ ಮಕ್ಕಳಿಗೆ ಎತ್ತರವಾಗಿ ಬೆಳೆಯಲು ವಂಶಪಾರಂಪರ್ಯವಾದ ಸಮಸ್ಯೆ ಇರುತ್ತದೆ. ಪೋಷಕರು ಎತ್ತರವಾಗಿ ಇರದಿದ್ದರೂ ಮಕ್ಕಳ ಆಹಾರಕ್ರಮದ ಕಡೆ ಸ್ವಲ್ಪ ಗಮನ ನೀಡಿದರೆ ಅವರು ಎತ್ತರವಾಗಿ ಬೆಳೆಯುವಲ್ಲಿ ಸಹಕಾರಿ. ವಿಟಮಿನ್‌ ಡಿ ಮಕ್ಕಳು ಎತ್ತರ ಬೆಳೆಯುವಂತೆ ಮಾಡುತ್ತದೆ. ವಿಟಮಿನ್‌ ಡಿ ನೈಸರ್ಗಿಕವಾಗಿ ಸೂರ್ಯನ ಬೆಳಕಿನಲ್ಲಿ ಇರುತ್ತದೆ. ಅಣಬೆ, ಮೀನು ಇದರಲ್ಲಿ ಕೂಡ ವಿಟಮಿನ್ ಡಿ ಅಂಶವಿರುತ್ತದೆ. ವಿಟಮಿನ್ ಡಿ ಮಕ್ಕಳ ಮೂಳೆಯನ್ನು ಬಲವಾಗಿಸುತ್ತದೆ.

3. ವಿಟಮಿನ್ ಬಿ ಕಾಂಪ್ಲೆಕ್ಸ್

3. ವಿಟಮಿನ್ ಬಿ ಕಾಂಪ್ಲೆಕ್ಸ್

ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ವಿಟಮಿನ್ ಬಿ12 ಮಕ್ಕಳ ಸ್ನಾಯುಗಳು ಹಾಗೂ ನರಗಳು ಹಾನಿಯುಂಟಾಗುವುದನ್ನು ತಡೆದು ಬೆಳವಣಿಗೆಗೆ ಸಹಕಾರಿ. ಮಕ್ಕಳ ತಜ್ಞರ ಸಲಹೆ ಪಡೆದು ವಿಟಮಿನ್ ಬಿ ಕಾಂಪ್ಲೆಕ್ಸ್ ಸಪ್ಲಿಮೆಂಟ್ ನೀಡುವುದರಿಮದ ಅವರು ಎತ್ತರವಾಗಿ ಬೆಳೆಯುವರು.

4. ವಿಟಮಿನ್ ಸಿ

4. ವಿಟಮಿನ್ ಸಿ

ವಿಟಮಿನ್ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಅಲ್ಲದೆ ಅವರು ಬೇಗನೆ ಎತ್ತರ ಬೆಳೆಯುವಲ್ಲಿ ಸಹಕಾರಿ. ಬಾಳೆಹಣ್ಣು, ಬೆಣ್ಣೆ ಹಣ್ಣು, ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ಕಿವಿ ಹಣ್ಣು , ಸ್ಟ್ರಾಬೆರ್ರಿ ಇವುಗಳಲ್ಲಿ ವಿಟಮಿನ್‌ ಸಿ ಅಧಿಕವಿರುತ್ತದೆ.

5. ವಿಟಮಿನ್ ಇ

5. ವಿಟಮಿನ್ ಇ

ವಿಟಮಿನ್ ಇ ಇದರಲ್ಲಿ ಪಾಲಿ ಅನ್‌ಸ್ಯಾಚುರೇಟಡ್ ಕೊಬ್ಬು ಹಾಗೂ ದೇಹದವನ್ನು ಗಟ್ಟಿ ಮುಟ್ಟಾಗಿಸುವ ಇತರ ಅಂಶಗಳಿರುತ್ತದೆ. ಮಕ್ಕಳಿಗೆ ಸಮುದ್ರಾಹಾರ ನೀಡಿ. ಭೂತಾಯಿ, ಬಂಗುಡೆ, ಸಾಲಮೋನ್ ಮುಂತಾದ ಮೀನುಗಳನ್ನು ತಿನಿಸುವುದು ಒಳ್ಳೆಯದು.

6. ವಿಟಮಿನ್ ಕೆ

6. ವಿಟಮಿನ್ ಕೆ

ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಕೆ ಅವಶ್ಯಕ. ಮೂಳೆಗಳು ಬಲವಾಗಲು ಪೋಷಕಾಂಶದ ಆಹಾರ ಸೇವನೆ ಅವಶ್ಯಕ. ವಿಟಮಿನ್ ಕೆ ಮೂಳೆ ಸವೆತ ತಡೆಗಟ್ಟುತ್ತದೆ. ಆದ್ದರಿಂದ ಮಕ್ಕಳು ಪೋಷಕಾಂಶವಿರುವ ಆಹಾರ ಸೇವನೆ ಮಾಡಬೇಕು. ಮೂಲಂಗಿ, ಸೊಪ್ಪು, ಲಿವರ್‌, ಮೊಟ್ಟೆ, ಧಾನ್ಯಗಳಲ್ಲಿ ವಿಟಮಿನ್ ಕೆ ಇರುತ್ತದೆ.

English summary

Best Vitamins That Promote Height Growth

There are certain vitamins and minerals which can play a vital role in the growth of your child. Want to know what they are? Here are list...
X
Desktop Bottom Promotion