For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ನಿಗೂಢ ಜ್ವರ: ಏನಿದು, ಮಕ್ಕಳನ್ನು ರಕ್ಷಿಸುವುದು ಹೇಗೆ?

|

ಇತ್ತೀಚೆಗೆ ಬೆಂಗಳೂರಿನಲ್ಲಿ, ರಾಯಚೂರಿನಲ್ಲಿ ಮುಂತಾದ ಕಡೆ ಮಕ್ಕಳಲ್ಲಿ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ದೇಶದಲ್ಲಿಯೂ ಫಿರೋಜ್‌ಬಾದ್‌, ಉತ್ತರ ಪ್ರದೇಶದ ಮಥುರಾ ಮುಂತಾದ ಕಡೆ ತಿಂಗಳಿನಿಂದ ಮಕ್ಕಳಲ್ಲಿ ಒಂದು ರೀತಿಯ ಜ್ವರ ಕಂಡು ಬರುತ್ತಿದ್ದು ಈ ರೀತಿಯ ನಿಗೂಢ ರೋಗ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಒಂದು ತಿಂಗಳಿನಲ್ಲಿ 100ಕ್ಕೂ ಹೆಚ್ಚು ಮಕ್ಕಳು ಕಾರಣ ತಿಳಿಯದ ಜ್ವರಕ್ಕೆ ಬಲಿಯಾಗಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ, ಪ್ರಯಾಗ್‌ರಾಜ್‌ ಮತ್ತು ಘಾಜಿಯಾಬಾದ್, ದೆಹಲಿ, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಮುಂತಾದ ಕಡೆಗಳಲ್ಲಿ ಮಕ್ಕಳಲ್ಲಿ ಜ್ವರ ಕಂಡು ಬರುತ್ತಿದ್ದು ಅದಕ್ಕೆ ಕಾರಣವೇನು ಎಂಬುವುದು ಇದುವರೆಗೆ ತಿಳಿದು ಬಂದಿಲ್ಲ.

ಕೋವಿಡ್‌ 19 ನಿಯಮಗಳು ಸಡಿಲಿಕೆಯಾಗಿರುವುದು, ಅನಾರೋಗ್ಯಕರ ಆಹಾರ, ಶುದ್ಧವಿಲ್ಲದ ನೀರು ಇವೆಲ್ಲಾ ರೋಗ ಲಕ್ಷಣಗಳು ಹರಡಲು ಕಾರಣವಾಗಿರಬಹುದು ಎಮದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮಾನ್ಸೂನ್‌ನಿಂದ ಮಕ್ಕಳನ್ನು ಕಾಡುತ್ತಿದೆ ಡೆಂಗ್ಯೂ, ಚಿಕನ್‌ಗುನ್ಯಾ ಸಮಸ್ಯೆ

ಮಾನ್ಸೂನ್‌ನಿಂದ ಮಕ್ಕಳನ್ನು ಕಾಡುತ್ತಿದೆ ಡೆಂಗ್ಯೂ, ಚಿಕನ್‌ಗುನ್ಯಾ ಸಮಸ್ಯೆ

ಮಳೆಗಾಲ ಶುರುವಾದಾಗಿನಿಂದ ಚಿಕನ್‌ ಗುನ್ಯಾ, ಡೆಂಗ್ಯೂ ಮುಂತಾದ ಸಮಸ್ಯೆ ಕಂಡು ಬರುತ್ತಿದೆ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚುವುದು. ಡೆಂಗ್ಯೂ, ಚಿಕನ್‌ಗುನ್ಯಾ ಕಾಯಿಲೆಗೆ ಕಾರಣವಾಗುವ ಈಡಿಸ್ ಈಜಿಪ್ಟಿ ಸೊಳ್ಳೆಗಳು ಸ್ವಚ್ಛವಾಗಿರುವ ನಿಂತ ನೀರಿನಲ್ಲಿಯೂ ಮೊಟ್ಟೆ ಹಾಕುವುದು. ಮಲೇರಿಯಾ ತರುವ

ಅನಾಫಿಲಿಸ್ ಸೊಳ್ಳೆಗಳು ಶುದ್ಧ ಹಾಗೂ ಕೊಳಚೆ ಎರಡೂ ನೀರಿನಲ್ಲಿ ಮೊಟ್ಟೆ ಹಾಕುತ್ತವೆ.

ಈಗ ಕಂಡು ಬರುತ್ತಿರುವ ಜ್ವರಗಳಲ್ಲಿ ಒಂದೋ ಡೆಂಗ್ಯೂ ಆಗಿರುತ್ತದೆ, ಇಲ್ಲಾ ಇನ್‌ಫ್ಲುಯಂಜಾ ಆಗಿರುತ್ತೆ. ಜ್ವರ ಬಂದಾಗ ರೋಗಿ ತುಂಬಾ ನಿಶ್ಯಕ್ತನಾಗುತ್ತಾನೆ/ಳೆ. ಇಂಥ ಜ್ವರಕ್ಕೆ ಚಿಕಿತ್ಸೆ ನೀಡಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೀಡಿಕೊಂಡರೆ ಬೇಗನೆ ಚೇತರಿಸಿಕೊಳ್ಳಬಹುದು.

 ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಡೆಂಗ್ಯೂ

ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಡೆಂಗ್ಯೂ

ಇದೀಗ ಹೆಚ್ಚಿನ ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಂಡು ಬರುತ್ತಿದೆ. ಆದ್ದರಿಂದ ಜ್ವರ ಬಂದಾಗ ಡೆಂಗ್ಯೂ ಪರೀಕ್ಷೆ ಕೂಡ ಮಾಡಿಸುವುದು ಒಳ್ಳೆಯದು. ಜ್ವರದಿಂದ ಬಂದ 5ರಲ್ಲಿ 3 ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಂಡು ಬರುತ್ತಿದೆ. ಜ್ವರ, ಮೈಕೈ ನೋವು, ಹೊಟ್ಟೆ ನೋವು ಇವೆಲ್ಲಾ ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಜ್ವರದ ಲಕ್ಷಣಗಳು ಕಂಡು ಬಂದರೆ ಕೂಡಲೇ ಮಕ್ಕಳ ತಜ್ಞರಿಗೆ ತೋರಿಸಿ, ಚಿಕಿತ್ಸೆ ಪಡೆಯಿರಿ.

ಡೆಂಗ್ಯೂ ಬಂದಾಗ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುವುದು. ದೇಹದ ಯಾವುದಾದರೂ ಭಾಗದಲ್ಲಿ ರಕ್ತಸ್ರಾವ ಕಂಡು ಬಂದರೆ, ಪ್ಲೇಟ್‌ಲೆಟ್ಸ್‌ ತುಂಬಾ ಕಡಿಮೆಯಾದರೆ ಅವರಿಗೆ ಪ್ಲೇಟ್‌ಲೆಟ್‌ ಟ್ರಾನ್ಸ್‌ಫ್ಯೂಸನ್ ಮಾಡಿಸಬೇಕಾಗಿದೆ.

ಸ್ಕ್ರಬ್‌ ಟೈಫಸ್‌ ಕೂಡ ತುಂಬಾನೇ ಅಪಾಯಕಾರಿ

ಸ್ಕ್ರಬ್‌ ಟೈಫಸ್‌ ಕೂಡ ತುಂಬಾನೇ ಅಪಾಯಕಾರಿ

ಏನಾದರೂ ಕೀಟಗಳು ಕಚ್ಚಿದಾಗ ಕೂಡ ನಿರ್ಲಕ್ಷ್ಯ ಮಾಡಬಾರದು. ಕೆಲವೊಮ್ಮೆ ಏನಾದರೂ ಕೀಟಗಳು ಕಚ್ಚಿದಾಗ ಜ್ವರ ಬಂದರೆ ಅದಕ್ಕೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುವುದು. ಆದರೆ ಮಗುವಿಗೆ ಜ್ವರ ಕಡಿಮೆಯಾಗದದಿದ್ದರೆ ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಅಪಾಯ ತಪ್ಪಿದ್ದಲ್ಲ ಅಂತಾರೆ ತಜ್ಞರು. ಏನಾದರೂ ಕೀಟ ಕಚ್ಚಿದಾಗ ಚಿಕಿತ್ಸೆ ಮಾಡದೇ ಹಾಗೆಯೇ ಬಿಟ್ಟರೆ ಕ್ರಮೇಣ ಅದರಿಂದ ಲಿವರ್‌ಗೆ ಹಾನಿಯುಂಟಾಗುವುದು. ರಕ್ತ ಸಂಚಾರಕ್ಕೂ ತೊಂದರೆಯಾಗುವುದು. ಮಕ್ಕಳಲ್ಲಿ ತುರಿಗೆ, ತ್ವಚೆಯಲ್ಲಿ ಗುಳ್ಳೆಗಳು ಏಳುವುದು ಮುಂತಾದ ಸಮಸ್ಯೆ ಕಂಡು ಬರುವುದು. ಆದ್ದರಿಂದ ಏನಾದರೂ ಕೀಟ ಕಚ್ಚಿದಾಗ ಸರಿ ಹೋಗುತ್ತೆ ಅಂತ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

ನಿಮ್ಮ ಮಕ್ಕಳನ್ನು ರಕ್ಷಣೆ ಮಾಡುವುದು ಹೇಗೆ?

ನಿಮ್ಮ ಮಕ್ಕಳನ್ನು ರಕ್ಷಣೆ ಮಾಡುವುದು ಹೇಗೆ?

ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಲಿಕ್ಕೆ ಕೊಡಬೇಕು. ತುಂಬು ತೋಳಿನ ಬಟ್ಟೆ ಧರಿಸಬೇಕು. ಇದರಿಂದ ಸೊಳ್ಳೆ ಕಚ್ಚುವುದನ್ನು ತಡೆಗಟ್ಟಬಹುದು. ಮಕ್ಕಳು ನಿದ್ರಿಸುವಾಗ ಸೊಳ್ಳೆ ಪರದೆ ಅಥವಾ ಸೊಳ್ಳೆ ಓಡಿಸುವ ಕಾಯಿಲ್ ಮುಂತಾದವು ಬಳಸಿ ಸೊಳ್ಳೆ ಕಡಿತ ತಪ್ಪಿಸಿ.

ಯಾವಾಗ ವೈದ್ಯರನ್ನು ಕಾಣಬೇಕು?

ಯಾವಾಗ ವೈದ್ಯರನ್ನು ಕಾಣಬೇಕು?

* ಜ್ವರಕ್ಕಿರುವ ಮದ್ದು ಕೊಟ್ಟು 3-4 ದಿನವಾದರೂ ಜ್ವರ ಕಡಿಮೆಯಾಗದಿದ್ದರೆ ಕೂಡಲೇ ವೈದ್ಯರನ್ನು ಕಾಣಬೇಕು.

* ಜ್ವರದ ಪ್ರಮಾಣ 100-104 ಡಿಗ್ರಿ c ಇದ್ದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಬೇಕು.

* ಮಗು ಯಾವುದೇ ಆಹಾರ ಸೇವಿಸದಿದ್ದರೆ, ಹಾಲು, ನೀರು ಕುಡಿಯಲು ನಿರಾಕರಿಸಿದರೆ ಆಸ್ಪತ್ರೆಗೆ ಕೊಂಡೊಯ್ಯಬೇಕು.

* ಮೂತ್ರ ವಿಸರ್ಜನೆ ಕಡಿಮೆಯಾದರೆ, ಮೈಯಲ್ಲಿ ಬೊಬ್ಬೆಗಳು ಕಂಡು ಬಂದರೆ ಕೂಡಲೇ ಮಕ್ಕಳ ತಜ್ಞರಿಗೆ ತೋರಿಸಬೇಕು.

ಇಂಥ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಚಿಕಿತ್ಸೆ ಕೊಡಿಸಬೇಕು. ತಡಮಾಡಬಾರದು

English summary

Viral fever cases rise in children in India: What is it and how can kids be protected in kannada

Viral fever cases rise in children in India: What is it and how can kids be protected in kannada
X
Desktop Bottom Promotion