For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕಂಡುಬರುವ ಈ ಸಾಮಾನ್ಯ ಸಮಸ್ಯೆಗಳಿಗೆ ಇವೇ ಪರಿಹಾರ

|

ಮಕ್ಕಳ ಲಾಲನೆ ಪಾಲನೆ ಎಂದರೆ ಅದು ಖಂಡಿತವಾಗಿಯೂ ತುಂಬಾ ಕಠಿಣ ಕೆಲಸವಾಗಿರುವುದು. ಅದರಲ್ಲೂ ಕೆಲವು ಮಕ್ಕಳ ನಡವಳಿಕೆ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಕಠಿಣ ವಿಚಾರವಾಗಿರುವುದು. ಹೀಗಾಗಿ ಪೋಷಕರು ಏನಾದರೂ ಹೇಳಿದರೆ ಅದರಿಂದ ಮನ ನೊಂದುಕೊಳ್ಳುವರು ಮತ್ತು ಇನ್ನು ಕೆಲವು ಮಕ್ಕಳು ಖಿನ್ನತೆಗೂ ಒಳಗಾಗುವರು. ಇಂತಹ ಸಮಯದಲ್ಲಿ ಮಕ್ಕಳು ಯಾವುದೇ ಆಘಾತಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಆದರೆ ಕೆಲವು ಮಕ್ಕಳಲ್ಲಿ ನಡವಳಿಕೆ ಸಮಸ್ಯೆಗಳು ಕಂಡುಬರುವುದು. ಆದರೆ ಇದನ್ನು ಪತ್ತೆ ಮಾಡಿಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಯಾಕೆಂದರೆ ಇದು ಸಾಮಾನ್ಯ ನಡವಳಿಕೆಯಿಂದ ಮುಂದೆ ದೊಡ್ಡ ಸಮಸ್ಯೆಯಾಗಬಹುದು.

Usual Child Behavior Problems And How to Deal With It

ಮಕ್ಕಳು ಯಾವಾಗಲೂ ನಾವು ಹಾಕುವಂತಹ ಲಕ್ಷ್ಮಣ ರೇಖೆ ದಾಟಿ ಹೋಗಿ ತಮ್ಮ ಅಧಿಕಾರ ತೋರಿಸುತ್ತವೆ. ಅವರ ನಡವಳಿಕೆ ಸರಿಯಾಗಿ ತಿಳಿದುಕೊಂಡು ಅದನ್ನು ಅರ್ಥೈಸಿಕೊಳ್ಳಬೇಕು. ಮಕ್ಕಳಲ್ಲಿ ಕಂಡುಬರುವಂತಹ ಕೆಲವೊಂದು ನಡವಳಿಕೆ ಬಗ್ಗೆ ತಿಳಿಯಿರಿ ಮತ್ತು ಅದನ್ನು ನಿವಾರಣೆ ಮಾಡುವುದು ಹೇಗೆ ಎನ್ನುವುದಕ್ಕೆ ಪರಿಹಾರ ಕಂಡುಕೊಳ್ಳಿ.

1. ಅಗೌರವ ಮತ್ತು ಎದುರುತ್ತರ ನೀಡುವುದು

1. ಅಗೌರವ ಮತ್ತು ಎದುರುತ್ತರ ನೀಡುವುದು

ಮೂರು ವರ್ಷದ ಮಗು ನೀವು ಏನಾದರೂ ಹೇಳಿದರೆ ಆಗ ನಿಮಗೆ ಇದು ತುಂಬಾ ತಮಾಷೆ ಎಂದು ಅನಿಸುವುದು. ಆದರೆ ಅದೇ ಏಳು ವರ್ಷದ ಮಗು ಹೀಗೆ ಮಾಡಿದರೆ ಆಗ ನಿಮ್ಮ ಕೋಪ ತಲೆಗೇರುತ್ತದೆ. ನೀವು ಇದನ್ನು ಸರಿಯಾಗಿ ನಿಭಾಯಿಸದೆ ಇದ್ದರೆ ಆಗ ಇದು ಮಕ್ಕಳು ಹಾಗೂ ಪೋಷಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಬಹುದು.

ಏನು ಮಾಡಬೇಕು?

  • ಮಗು ನಿಮಗೆ ಎದುರುತ್ತರ ನೀಡಿದರೆ ನೀವು ಹೇಳಿದಂತಹ ಮಾತನ್ನು ಪಾಲಿಸುತ್ತಿದ್ದರೆ ಆಗ ನೀವು ಅದನ್ನು ಕಡೆಗಣಿಸಿ. ಯಾವುದೇ ಎಚ್ಚರಿಕೆ ಅಥವಾ ಆಘಾತದ ಸಂಕೇತವಲ್ಲದೆ ಇದ್ದರೆ ಆ ನಿರ್ಲಕ್ಷ್ಯ ಮಾಡಿ.
  • ಮಗು ಎದುರುತ್ತರ ನೀಡಿದ ಬಳಿಕವೂ ನೀವು ಹೇಳಿದಂತಹ ಕೆಲಸ ಮಾಡಿದರೆ ಆಗ ನೀವು ಅವರನ್ನು ಪ್ರಶಂಸೆ ಮಾಡಿ. ಕೋಪ ಮಾಡುವುದು ಸರಿ, ಆದರೆ ದೊಡ್ಡವರಿಗೆ ಅಗೌರವ ತೋರಿಸುವುದು ಸರಿಯಲ್ಲ ಎಂದು ನೀವು ಅವರಿಗೆ ಹೇಳಿ.
  • ಆದರೆ ಮಕ್ಕಳ ವರ್ತನೆಯು ನಿಮಗೆ ಹಾಗೂ ಇತರರಿಗೆ ಬೆದರಿಕೆ ಆಗಿದ್ದರೆ ಆಗ ನೀವು ಇದನ್ನು ನಿಭಾಯಿಸುವ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇಂತಹ ಸಮಯದಲ್ಲಿ ನೀವು ತುಂಬಾ ಒರಟಾಗಿ ವರ್ತಿಸಬೇಕು. ಮಗು ಶಾಂತವಾಗಲಿದೆ ಮತ್ತು ಇದರ ಬಳಿಕ ಅವರಿಗೆ ತಿಳಿಹೇಳಿ. ಯಾವ ನಡತೆ ಸ್ವೀಕಾರಾರ್ಹ ಮತ್ತು ಯಾವುದು ಅಲ್ಲವೆಂದು ಅವರಿಗೆ ಹೇಳಿ.
  • ಅವರಿಗೆ ಕೆಲವೊಂದು ಮಿತಿಗಳನ್ನು ನಿಗದಿ ಮಾಡಿ, ಆದರೆ ಇದು ಬೆದರಿಕೆ ಆಗಿರಬಾರದು. ಎದುರುತ್ತರ ನೀಡಿದರೆ ಆಗ ನೀವು ಅವರಿಗೆ ಸಿನಿಮಾಗೆ ಕರೆದುಕೊಂಡು ಹೋಗಲ್ಲ, ಐಸ್ ಕ್ರೀಮ್ ಕೊಡಿಸಲ್ಲ ಇತ್ಯಾದಿಗಳನ್ನು ಹೇಳಿ. ಉದಾಹರಣೆಗೆ ಅವರು ನಿಮ್ಮ ಮೇಲೆ ರೇಗುತ್ತಲೇ ಇದ್ದರೆ ಆಗ ಅವರಿಗೆ ರಾತ್ರಿ ಊಟಕ್ಕೆ ಒಳ್ಳೆಯ ಅಡುಗೆ ಮಾಡಬೇಡಿ. ಅದೇ ನೀವು ಹೇಳಿದಂತೆ ಕೇಳಿದರೆ ಆಗ ನೀವು ಅವರಿಗೆ ಒಳ್ಳೆಯ ಅಡುಗೆ ಮಾಡಿ ಹಾಕಿ. ಇಂತಹ ಕ್ರಮದಿಂದ ಮಕ್ಕಳು ನಿಯಂತ್ರಣಕ್ಕೆ ಬರುವರು.
  • ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು. ಆದರೆ ಕೆಲವೊಂದು ವಿಚಾರಗಳು ಮಕ್ಕಳಿಗೆ ಸಂತೋಷ ನೀಡಿದರೆ ಆಗ ನಿಮ್ಮ ನಿರೀಕ್ಷೆಗಳನ್ನು ಸಡಿಲ ಮಾಡಿ.
  • ನೀವು ಮಕ್ಕಳೊಂದಿಗೆ ಮತ್ತು ಇತರರೊಂದಿಗೆ ಯಾವ ರೀತಿ ವರ್ತಿಸುತ್ತೀರಿ. ನೀವು ತುಂಬಾ ಒರಟು ಅಥವಾ ಅಗೌರವ ನೀಡುತ್ತೀರಾ? ಹಾಗಾದರೆ ನೀವು ಮೊದಲು ನಿಮ್ಮ ನಡವಳಿಕೆ ಬದಲಾಯಿಸಿಕೊಳ್ಳಿ.
  • 2. ನಿಂದನೀಯ ಭಾಷೆ

    2. ನಿಂದನೀಯ ಭಾಷೆ

    ಮಕ್ಕಳು ಕೋಪಗೊಂಡ ವೇಳೆ ರೇಗುವರು ಮತ್ತು ಬೊಬ್ಬೆ ಹಾಕುವರು. ಆದರೆ ಹತ್ತು ವರ್ಷದ ಮೊದಲೇ ಅವರು ಈ ರೀತಿ ಮಾಡುತ್ತಲಿದ್ದರೆ ಆಗ ನೀವು ಇದರ ಬಗ್ಗೆ ಚಿಂತೆ ಮಾಡಬೇಕು. ಅವರು ರೇಗುವುದು ಅಥವಾ ನಿಂದನೀಯ ಭಾಷೆ ಬಳಸುವುದರಿಂದ ವಾಗ್ವಾದ ನಡೆಸಲು ಇರಬಹುದು ಅಥವಾ ಅವರಷ್ಟಕ್ಕೆ ಇರಲು ಇರಬಹುದು.

    ನಿಂದನೀಯ ಭಾಷೆ ಮಕ್ಕಳು ಬಳಸುತ್ತಲಿದ್ದರೆ ಆಗ ನೀವು ಹೀಗೆ ಮಾಡಬೇಕು

    • ಮಕ್ಕಳ ಮುಂದೆ ನೀವು ಇಂತಹ ಭಾಷೆ ಬಳಸಬಾರದು.
    • ಮನೆಯಲ್ಲಿ ಯಾರಾದರೂ ನಿಂದನೀಯ ಭಾಷೆ ಬಳಸಿದರೆ ಆಗ ಅದನ್ನು ಖಂಡಿಸಿ. ಶಪಿಸುವುದಕ್ಕೆ ಯಾವುದೇ ಕ್ಷಮೆ ಇಲ್ಲ. ನೀವು ಇಂತಹ ಭಾಷೆ ಬಳಸಿದರೆ ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವುದು.
    • ನಿಂದನೀಯ ಭಾಷೆ ಬಳಸಿದರೆ ಎದುರಾಗುವ ಪರಿಣಾಮ ಸ್ಪಷ್ಟವಾಗಿ ತಿಳಿಸಿ ಮತ್ತು ಅದನ್ನು ಅಳವಡಿಸಿ. ನಿಮ್ಮ 9 ವರ್ಷದ ಮಗಳು ಇದರಿಂದಾಗಿ ಸಂಗೀತ ತರಗತಿ ಅಥವಾ ಕ್ರೀಡೆಯನ್ನು ಕಳಕೊಳ್ಳಬಹುದು. ಆದರೆ ಇದಕ್ಕೆ ಬೇರೆ ದಾರಿ ಇಲ್ಲ.
    • ಸಣ್ಣ ಮಕ್ಕಳು ಇಂತಹ ಭಾಷೆ ಬಳಸುತ್ತಲಿದ್ದರೆ ಆಗ ನೀವು ಇದನ್ನು ಸರಿಪಡಿಸಿ. ಇದು ಕೆಟ್ಟ ಪದ ಎಂದು ಅವರಿಗೆ ಹೇಳಿ ಮತ್ತು ಈ ಪದ ಬಳಸಬೇಡಿ ಮತ್ತು ಅದು ಮಕ್ಕಳು ಬಳಸುವ ಪದವಲ್ಲವೆಂದು ಹೇಳಿ.
    • ನೀವು ಅಂತಹ ಯಾವುದೇ ಪದವನ್ನು ಮಕ್ಕಳ ಮುಂದೆ ಬಳಸಿದರೆ ಆಗ ನೀವು ಕ್ಷಮೆ ಕೋರಿ. ಯಾವುದೇ ಕೆಟ್ಟ ಪದ ಬಳಕೆ ಮಾಡಿದರೆ ತಕ್ಷಣವೇ ಎಚ್ಚರಿಸುವಂತೆ ಮಕ್ಕಳಿಗೆ ತಿಳಿಸಿ.
    • 3. ಆಕ್ರಮಣ ಅಥವಾ ಹಿಂಸಾತ್ಮಕ ವರ್ತನೆ

      3. ಆಕ್ರಮಣ ಅಥವಾ ಹಿಂಸಾತ್ಮಕ ವರ್ತನೆ

      ಮಕ್ಕಳು ಕೋಪಗೊಳ್ಳುವುದು ಸಹಜ. ಆದರೆ ಅವರು ಕೋಪದಲ್ಲಿ ತುಂಬಾ ಆಕ್ರಮಣಕಾರಿ ಅಥವಾ ಹಿಂಸೆಗೆ ಇಳಿದರೆ ಅದು ಸಮಸ್ಯೆ. ಸಣ್ಣ ಮಕ್ಕಳಲ್ಲಿ ಆಕ್ರಮಣಕಾರಿ ವರ್ತನೆ ಕಂಡುಬರಲು ಮನಸ್ಥಿತಿ ಬದಲಾವಣೆ, ನಡವಳಿಕೆ ಸಮಸ್ಯೆ, ಆಘಾತ, ದುಡುಕುತನ ಮತ್ತು ಹತಾಶೆ ಇದಕ್ಕೆ ಕಾರಣವಾಗಿರಬಹುದು. ಕೆಲವೊಂದು ಸಲ ಮಕ್ಕಳು ತಮ್ಮ ರಕ್ಷಣೆ ಮಾಡಲು ಹೀಗೆ ಆಕ್ರಮಣಕಾರಿ ಪ್ರವೃತ್ತಿ ತೋರಿಸಬಹುದು.

      ಆಕ್ರಮಣಕಾರಿ ಪ್ರವೃತ್ತಿಯ ಇತರರಿಂದ ಕಲಿತುಕೊಂಡ ನಡವಳಿಕೆ ಆಗಿರುವುದು. ಮನೆಯಲ್ಲಿನ ವಾತಾವರಣ ಹೇಗಿ? ಅಥವಾ ಶಾಲೆಯಲ್ಲಿ ಮಗು ಆಕ್ರಮಣಕಾರಿ ಆಗಲು ಕಲಿಯುತ್ತಿದೆಯಾ? ಮಗು ಯಾವಾಗಲೂ ಹೊಡೆಯುವುದು, ಕಚ್ಚುವುದು ಅಥವಾ ತುಳಿಯುತ್ತಿದ್ದರೆ ಆಗ ನೀವು ಹೀಗೆ ಮಾಡಿ.

      • ಮಕ್ಕಳಲ್ಲಿನ ಆಕ್ರಮಣಕಾರಿ ಪ್ರವೃತ್ತಿ ಕಡಿಮೆ ಮಾಡಲು ನೀವು ಅವರಿಗೆ ಜೋರು ಮಾಡುವಿರಿ. ಆದರೆ ಹೀಗೆ ಮಾಡುವ ಪರಿಣಾಮ ಅವರಿಗೆ ಕೆಲವು ಕೆಟ್ಟ ವಿಚಾರಗಳನ್ನು ಕಲಿಸುತ್ತೀರಿ. ಮಕ್ಕಳು ತಮ್ಮ ಕ್ರೋಧ ಮತ್ತು ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎಂದು ಕಲಿಯುತ್ತಿರುವರು. ಇಂತಹ ಸಮಯದಲ್ಲಿ ನೀವು ಅವರಿಗೆ ದೊಡ್ಡ ಸ್ವರದಲ್ಲಿ ಜೋರು ಮಾಡುವ ಬದಲು ಶಾಂತರಾಗಿ, ಅವರನ್ನು ಶಾಂತಗೊಳಿಸಿ.
      • ಭಾವನೆಗಳನ್ನು ವ್ಯಕ್ತಪಡಿಸಬಹುದು, ಆದರೆ ಹೊಡೆಯುವುದು, ತುಳಿಯುವುದು ಅಥವಾ ಕಚ್ಚುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಹೇಳಿ. ನೀನು ಕೋಪಗೊಂಡಿರುವೆ ಎಂದು ನನಗೆ ತಿಳಿದಿದೆ. ಆದರೆ ಇದರರ್ಥ ನೀನು ಹೊಡೆಯುವುದು, ಕಚ್ಚುವುದು ಅಥವಾ ತುಳಿಯುವುದಲ್ಲ ಎಂದು ಹೇಳಿ.
      • ಹಿಂಸೆಗೆ ಒಳಗಾದರೆ ಆಗ ಪರಿಣಾಮ ಏನಾಗಲಿದೆ ಎಂದು ಹೇಳಿ. ಹದಿಹರೆಯದ ಮಕ್ಕಳಾದರೆ ಅವರಿಗೆ ಒಂದು ಆಯ್ಕೆ ನೀಡಿ. ಅವರಿಗೆ ಕೋಪಗೊಳ್ಳಬಾರದು ಎಂದು ಹಲವಾರು ಸಲ ಬರೆಯಲು ಹೇಳಿ. ನೀವು ಅವರಿಗೆ ದೈಹಿಕವಾಗಿ ಯಾವುದೇ ಹಿಂಸೆ ನೀಡಬೇಡಿ.
      • ನೀವು ಇಂತಹ ಸಮಯದಲ್ಲಿ ಅವರಿಗೆ ಮಾದರಿ ಆಗಬೇಕು. ದೈಹಿಕ ಶಿಕ್ಷೆ ನೀಡುವುದು ಸರಿಯಲ್ಲ. ಧನಾತ್ಮಕತೆ ಹುಡುಕಿ ಅವರ ಆಕ್ರಮಣಶೀಲತೆ ಕಡಿಮೆ ಮಾಡಿ.
      • 4. ಸುಳ್ಳು ಹೇಳುವುದು

        4. ಸುಳ್ಳು ಹೇಳುವುದು

        ಮಕ್ಕಳು ಸುಳ್ಳು ಹೇಳುವುದು ಸಾಮಾನ್ಯ. ಮಕ್ಕಳು ಸುಳ್ಳು ಹೇಳುತ್ತಿರುವುದು ಪತ್ತೆ ಮಾಡಿದರೆ ಪೋಷಕರಿಗೆ ಚಿಂತೆ ಆಗುವುದು ಕೂಡ ಸಾಮಾನ್ಯ ವಿಚಾರ. ಇದರಿಂದ ನಿಮಗೆ ವಿಶ್ವಾಸಘಾತವಾದಂತೆ ಮತ್ತು ಮಕ್ಕಳು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅನಿಸಬಹುದು. ಆದರೆ ಸುಳ್ಳು ಹೇಳುವುದರಿಂದ ಮಕ್ಕಳನ್ನು ತಡೆಯಬೇಕು.

        ನೀವು ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಮಗು ಯಾವ ದೃಷ್ಟಿಯಿಂದ ಸುಳ್ಳು ಹೇಳಿದೆ ಎಂದು ತಿಳಿದುಕೊಳ್ಳಿ.

        ಸತ್ಯವು ನಕಾರಾತ್ಮಕ ಪರಿಣಾಮ ಬೀರುವುದು ಎಂದು ತಿಳಿದು ಕೆಲವು ಮಕ್ಕಳು ಸುಳ್ಳು ಹೇಳುವರು. ಅವರ ಧನಾತ್ಮಕ ವಿಚಾರಗಳನ್ನು ನೀವು ಪ್ರಶಂಸೆ ಮಾಡಿ ಮತ್ತು ಯಾವುದೇ ನಕಾರಾತ್ಮಕ ವಿಚಾರಕ್ಕೆ ಶಿಕ್ಷೆ ನೀಡಬೇಡಿ. ಶಿಕ್ಷೆಗೆ ಹೆದರಿಕೊಂಡು ಮಕ್ಕಳು ಸುಳ್ಳು ಹೇಳಬಹುದು.

        ಪ್ರಾಮಾಣಿಕವಾಗಿ ಇರಲು ನೀವು ತಿಳಿಸಿ. ನೀವು ಅವರಿಗೆ ಈ ವಿಚಾರದಲ್ಲಿ ಮಾದರಿಯಾಗಿ.

        ಸುಳ್ಳು ಹೇಳಿದರೆ ಅದರ ಪರಿಣಾಮದ ಬಗ್ಗೆ ತಿಳಿಸಿ. ಮಕ್ಕಳು ಸುಳ್ಳು ಹೇಳಿದರೆ ಆಗ ಅವರು ಪರಿಣಾಮ ಎದರುರಿಸಲೇಬೇಕಾಗುತ್ತದೆ.

        5. ನಿಂದನೆ

        5. ನಿಂದನೆ

        ನಿಂದನೆ ಎನ್ನುವುದು ಒಂದು ಗಂಭೀರ ಸಮಸ್ಯೆ ಮತ್ತು ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಇರಬಹುದು. ಮಕ್ಕಳು ತಾವು ಪ್ರಬಲರು ಎಂದು ತೋರಿಸಲು ನಿಂದನೆ ಮಾಡುವರು. ನಿಂದನೆಯು ಅವರ ಸಾಮಾಜಿಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವುದು. ಯಾವುದೇ ಭಾವನೆಗಳೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟವಾದರೆ ಆಗ ಮಕ್ಕಳು ನಿಂದನೆ ಮಾಡುವರು. ಮಕ್ಕಳು ಬೇರೆಯವರನ್ನು ನಿಂದಿಸುತ್ತಿದ್ದರೆ ಆಗ ನೀವು ತಕ್ಷಣವೇ ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ.

        ಸಣ್ಣ ವಯಸ್ಸಿನಲ್ಲಿ ನಿಂದನೆ ಮಾಡುವುದು ಸರಿಯಲ್ಲ ಎಂದು ನೀವು ಮಕ್ಕಳಿಗೆ ತಿಳಿ ಹೇಳಿ. ಅವರಿಗೆ ಇದರ ಬಗ್ಗೆ ಸರಿಯಾದ ಜ್ಷಾನ ನೀಡಿ.

        ಕೆಲವೊಂದು ಸಲ ಬೇರೆಯವರನ್ನು ಅವರ ಅಡ್ಡ ಹೆಸರಿನಿಂದ ಕರೆಯುವುದು ನಿಂದನೆ ಆಗಿರುವುದು.

        ಮನೆಯಲ್ಲಿ ಇಂತಹ ನಿಂದನೆ ಮಾಡಲು ಬಿಡಬೇಡಿ. ಇಂತಹ ನಿಂದನೆ ಮಾಡಿದರೆ ಆಗ ತಕ್ಷಣವೇ ನೀವು ಇದರ ಪರಿಣಾಮವನ್ನು ಮಕ್ಕಳಿಗೆ ತಿಳಿಸಿಬಿಡಿ.

        6. ಕುಟಿಲತೆ

        6. ಕುಟಿಲತೆ

        ಕುಟಿಲತೆ ನಡವಳಿಕೆಯನ್ನು ನಿಭಾಯಿಸುವುದು ತುಂಬಾ ಕಷ್ಟದ ವಿಚಾರ. ಮಕ್ಕಳು ತಮಗೆ ಬೇಕಾಗಿರುವುದನ್ನು ಪಡೆಯಲು ಅಳುವರು ಮತ್ತು ಸುಳ್ಳು ಹೇಳಿ ಪಡೆಯುವರು. ಮಕ್ಕಳ ಇಂತಹ ವರ್ತನೆಗೆ ನೀವು ಸಹಮತ ವ್ಯಕ್ತಪಡಿಸಿದರೆ, ಆಗ ಮಕ್ಕಳು ಇದನ್ನು ನ್ಯಾಯ ಸಿಕ್ಕಿದೆ ಎಂದು ಅಂದುಕೊಳ್ಳುವರು. ನೀವು ಖರೀದಿಸಿ ನೀಡಿರುವಂತಹ ಐಸ್ ಕ್ರೀಮ್ ನ್ನು ಎಸೆದು, ಬೇರೆ ಕೇಳಿದರೆ ಆಗ ಮಗು ನಿಮ್ಮನ್ನು ಕುಟಿಲತೆಗೆ ಒಳಪಡಿಸಿದೆ ಎಂದು ಹೇಳಬಹುದು.

        ಇಂತಹ ಸಂದರ್ಭಗಳಲ್ಲಿ ಮಗು ನಿಮ್ಮ ಮೇಲೆ ಅಧಿಕಾರ ಸ್ಥಾಪಿಸುವುದು. ಇಂತಹ ಕುಟಿಲ ವ್ಯೂಹದಲ್ಲಿ ನೀವು ಯಾವಾಗಲೂ ಬೀಳುತ್ತಲಿರುತ್ತೀರಿ.

        ನೀವು ಯಾವಾಗಲೂ ಇಲ್ಲವೆಂದರೆ ಆಗ ಮಗು ಅದಕ್ಕೆ ಅತ್ತು, ರಂಪ ಮಾಡಿ ಪಡೆಯುತ್ತಿಲಿದ್ದರೆ ನೀವು ಕುಟಿಲತೆಗೆ ಒಳಗಾಗಿದ್ದೀರಿ ಎಂದು ಹೇಳಬಹುದು.

        ಇಲ್ಲ ಎಂದು ಹೇಳಿದರೆ ಅದು ಇಲ್ಲ ಎಂದು ಸ್ಪಷ್ಟವಾಗಿ ಹೇಳಿ. ನೀವು ಅವರಿಗೆ ಯಾಕೆ ಇಲ್ಲವೆನ್ನುತ್ತಿದ್ದೀರಿ ಎಂದು ಸ್ಪಷ್ಟವಾಗಿ ಹೇಳಿ. ಚರ್ಚೆ ಮಾಡಲು ಹೋಗಬೇಡಿ. ಇಲ್ಲವೆಂದ ಬಳಿಕ ನೀವು ಅದನ್ನು ಅಲ್ಲಿಗೆ ಬಿಟ್ಟುಬಿಡಿ. ಮಕ್ಕಳು ತುಂಬಾ ಒರಟಾಗಿ ವರ್ತಿಸದೆ ಇದ್ದರೆ ಆಗ ನೀವು ಮಕ್ಕಳ ವಾದ ಕೇಳಬುದು.

        7. ಪ್ರೇರಣೆ ಕೊರತೆ ಮತ್ತು ಉದಾಸೀನತೆ

        7. ಪ್ರೇರಣೆ ಕೊರತೆ ಮತ್ತು ಉದಾಸೀನತೆ

        ಕೆಲವು ಮಕ್ಕಳಿಗೆ ಯಾವುದೇ ವಿಚಾರದಲ್ಲೂ ಉತ್ಸಾಹವೇ ಇರಲ್ಲ. ಅದು ಶೈಕ್ಷಣಿಕ ವಿಚಾರ, ಪಠ್ಯೇತರ ಚಟುವಟಿಕೆ, ಸಂಗೀತ, ಆಟ ಹೀಗೆ ಏನೇ ಆದರೂ ಮಗುವಿಗೆ ಆಸಕ್ತಿಗೆ ಇಲ್ಲದಿರಬಹುದು. ಮಕ್ಕಳು ತುಂಬಾ ಉದಾಸೀನರಾಗಿದ್ದರೆ ಅವರನ್ನು ಪ್ರೇರೇಪಿಸುವುದು ತುಂಬಾ ಕಷ್ಟ. ಆದರೆ ನೀವು ಇದನ್ನೇ ಕಾರಣವಾಗಿಸಿಕೊಂಡು ಹಾಗೆ ಕುಳಿತುಕೊಳ್ಳಬೇಡಿ. ಮಕ್ಕಳಲ್ಲಿ ಪ್ರೇರಣೆ ಕೊರತೆ ಆದರೆ ಆಗ ನೀವು ಹೀಗೆ ಮಾಡಿ.

        ಮಕ್ಕಳ ನಡವಳಿಕೆ ಬಗ್ಗೆ ತುಂಬಾ ಆತಂಕಕ್ಕೆ ಒಳಗಾಗಬೇಡಿ. ಇದರಿಂದ ಅವರು ನಿಮ್ಮ ಮಾತಿಗೆ ವಿರೋಧ ವ್ಯಕ್ತಪಡಿಸಬಹುದು.

        ನಿಮ್ಮ ಬಾಲ್ಯದ ಕಥೆಗಳನ್ನು ಅವರಿಗೆ ಹೇಳಿ ಮತ್ತು ಅವರನ್ನು ಪ್ರೋತ್ಸಾಹಿಸುವ ಮತ್ತು ಪ್ರೇರೇಪಿಸುವಂತಹ ಪ್ರಯತ್ನ ಮಾಡಿ.

        ಯಾವುದೇ ಹವ್ಯಾಸ ರೂಪಿಸಲು ಮಕ್ಕಳಿಗೆ ಒತ್ತಡ ಹಾಕಬೇಡಿ. ಅವರಿಗೆ ಆಯ್ಕೆ ನೀಡಿ ಮತ್ತು ಅವರು ಆಯ್ಕೆ ಮಾಡಲಿ. ಅವರು ಆಯ್ಕೆ ಮಾಡುವ ವಿಚಾರದಲ್ಲಿ ಮಕ್ಕಳು ಹೆಚ್ಚು ಆಸಕ್ತಿ ಹೊಂದಿರುವರು.

        ನೀವು ಈ ರೀತಿ ಮಾಡುತ್ತಲಿದ್ದರೆ...

        ಮಕ್ಕಳಿಗೆ ಯಾವುದೇ ವಿಚಾರಕ್ಕೆ ಒತ್ತಡ ಹಾಕುತ್ತಲಿದ್ದೀರಾ? ಮಕ್ಕಳಿಗೆ ಏನು ಬೇಕು ಮತ್ತು ಅವರನ್ನು ಏನು ಪ್ರೇರೇಪಿಸುತ್ತದೆ ಎಂದು ಕೇಳಿ. ಅವರನ್ನು ಪ್ರತ್ಯೇಕವಾಗಿರಿಸಿಕೊಂಡು ನೀವು ಅವರನ್ನು ಪ್ರೇರೇಪಿಸುವಂತೆ ನೋಡಿಕೊಳ್ಳಿ.

        ಮಕ್ಕಳು ಅವರಾಗಿಯೇ ಪ್ರೇರಣೆಗೆ ಒಳಗಾಗುವಂತೆ ಮಾಡಿ. ಸ್ವಯಂ ಪ್ರೇರಣೆಯಿಂದ ಅವರಿಗೆ ಹೆಚ್ಚು ಬಲ ಬರುವುದು.

        ದೈನಂದಿನ ವಿಚಾರಗಳನ್ನು ಮನರಂಜನೆಯಾಗಿ ಸ್ವೀಕರಿಸಲು ಹೇಳಿ. ಮಕ್ಕಳಿಗೆ ನೀವೇ ಕೆಲವೊಂದು ಸ್ಪರ್ಧೆಗಳನ್ನು ಇಟ್ಟುಕೊಳ್ಳಿ. ದೊಡ್ಡ ಮಕ್ಕಳಿಗೆ ಅವರ ತಟ್ಟೆ ತೊಳೆಯುವುದು, ಟೇಬಲ್ ಕ್ಲೀನ್ ಮಾಡಲು ಹೇಳಿ. ನಿಮ್ಮ ನಿರೀಕ್ಷೆಗಳು ಸ್ಪಷ್ಟವಾಗಿ ಇರಲಿ. ಮಕ್ಕಳಿಗೆ ಸಿನಿಮಾ ನೋಡಲು ಕೂಡ ಸಮಯ ನಿಗದಿ ಮಾಡಿ.

        8. ಶಾಲೆಯಲ್ಲಿ ನಡವಳಿಕೆ ಸಮಸ್ಯೆ

        8. ಶಾಲೆಯಲ್ಲಿ ನಡವಳಿಕೆ ಸಮಸ್ಯೆ

        ಮಕ್ಕಳಿಗೆ ಯಾವತ್ತಿಗೂ ಶಾಲೆಗೆ ಹೋಗಲು ಇಷ್ಟವಾಗಲ್ಲ. ಆದರೆ ಅವರಿಗೆ ಇದನ್ನು ಸ್ಪಷ್ಟವಾಗಿ ತಿರಸ್ಕರಿಸಲು ಕೂಡ ಹಾಗಲ್ಲ ಮತ್ತು ಮನೆ ಕೆಲಸ ಕೂಡ ಮಾಡಬೇಕಾಗಿರುತ್ತದೆ. ಮಕ್ಕಳು ಶಾಲೆಗೆ ಹೋಗಲು ಹಲವಾರು ಕಾರಣಗಳಿಂದ ನಿರಾಕರಿಸಬಹುದು. ಇದರಲ್ಲಿ ಇತರ ಮಕ್ಕಳಿಂದ ನಿಂದನೆ, ಶೈಕ್ಷಣಿಕ ಸಮಸ್ಯೆ, ನಿಯಮ ಮತ್ತು ಅಧಿಕಾರಿಗಳ ದರ್ಪ ಅಥವಾ ಮಕ್ಕಳಿಂದ ದೂರವಾಗುವಂತಹ ಆತಂಕವು ಅವರನ್ನು ಕಾಡಬಹುದು.

        ಸಮಸ್ಯೆಯ ಮೂಲವನ್ನು ಹುಡುಕಿ

        • ಮಕ್ಕಳು ಶಾಲೆಗೆ ಹೋಗಲು ಯಾಕೆ ನಿರಾಕರಿಸುವರು ಅಥವಾ ಮನೆಗೆಲಸ ಮಾಡಲು ಯಾಕೆ ದ್ವೇಷಿಸುವರು ಎಂದು ತಿಳಿಯಲು ಪ್ರಯತ್ನಿಸಿ. ಮನೆಗೆಲಸ ಮಾಡಲು ಅವರಿಗೆ ನೀವು ನೆರವಾಗಿ.
        • ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಪ್ರದರ್ಶನ ನೀಡಲು ಸಮಯ ಬೇಕಾಗಬಹುದು ಮತ್ತು ಶಾಲೆಯಲ್ಲಿ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಒಂದೇ ದಿನದಲ್ಲಿ ಎಲ್ಲವೂ ಬದಲಾಗುವುದು ಎಂದು ತಿಳಿಯಬೇಡಿ.
        • ನೀವು ಮಕ್ಕಳಿಗೆ ಶೈಕ್ಷಣಿಕವಾಗಿ ಉತ್ತಮ ಪ್ರದರ್ಶನ ನೀಡಿದರೆ ಬಹುಮಾನ ನೀಡುವುದಾಗಿ ಹೇಳಿ ಮತ್ತು ಅವರಿಗೆ ಲಂಚ ನೀಡಬೇಡಿ. ಧನಾತ್ಮಕವಾಗಿ ಬೆಂಬಲಿಸಿ. ಅವರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಶಿಕ್ಷಕರ ಜತೆಗೆ ಮಾತನಾಡಬೇಕೇ ಎಂದು ನೀವು ಕೇಳಿ ನೋಡಿ. ಶಾಲೆಯಲ್ಲಿ ಏನು ಮಾಡಲು ಬಯಸಿದ್ದಾರೆ ಎನ್ನುವುದಕ್ಕೆ ನೀವು ಅವರನ್ನು ಬೆಂಬಲಿಸಿ. ಮನೆಗೆಲಸ ಮಾಡಲು ನೆರವಾಗಿ ಮತ್ತು ಇದನ್ನು ಆಸಕ್ತಿದಾಯಕವಾಗಿಸಿ.
        • ನಡವಳಿಕೆ ಸಮಸ್ಯೆಗಳನ್ನು ನಿಭಾಯಿಸುವುದು ಅಷ್ಟು ಸುಲಭದ ವಿಚಾರವಲ್ಲ. ಇದಕ್ಕೆ ನೀವು ಕೆಲವೊಂದು ಸಲ ವೃತ್ತಿಪರರ ನೆರವು ಕೂಡ ಪಡೆಯಬೇಕಾಗಬಹುದು.
English summary

Usual Child Behavior Problems And How to Deal With It

Here we are discussing about Usual Child Behavior Problems And Solutions. Sounds familiar to you? We are talking about the many behavior issues in children that parents have to deal with every day. Read more.
X
Desktop Bottom Promotion