For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಹೊಟ್ಟೆಯ ಫ್ಲೂ: ಕಾರಣ, ಲಕ್ಷಣಗಳು, ಚಿಕಿತ್ಸೆ

|

ಹಲವು ತಿಂಗಳುಗಳ ಬಳಿಕ ಶಾಲೆಗಳು ಪ್ರಾರಂಭವಾಗಿವೆ. ಇಷ್ಟು ದಿನ ಮನೆಯೊಳಗೆ ಒಂದು ರೀತಿಯಲ್ಲಿ ಬಂಧಿಯಾಗಿದ್ದ ಮಕ್ಕಳು ನಿಧಾನಕ್ಕೆ ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಮಕ್ಕಳಿಗೆ ಶಾಲೆಯತ್ತ ಮುಖ ಮಾಡಲು ಸಾಧ್ಯವಾಗಿರಲಿಲ್ಲ. ಕೊರೊನಾ ಸ್ವಲ್ಪಕಡಿಮೆಯಾದ ಮೇಲೆ ಶಾಲೆಗಳು ಪ್ರಾರಂಭವಾದೆವು, ಪೋಷಕರೂ ಸ್ವಲ್ಪ ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾರೆ. ಶಾಲೆಗಳಲ್ಲೂ ಕೊರೊನಾ ನಿಯಮಗಳನ್ನು ಪಾಲಿಸಲಾಗುತ್ತಿದೆ.

ಇದೀಗ ಶಾಲೆ ಪ್ರಾರಂಭವಾದ ಮೇಲೆ ಮಕ್ಕಳಲ್ಲಿ ಹೊಟ್ಟೆ ಸಮಸ್ಯೆ ( Stomach Flu)ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ವೈದ್ಯರು ಹೇಳುತ್ತಿದ್ದಾರೆ. ದಿನದಲ್ಲಿ 10-12 ಕೇಸ್‌ಗಳು ಬರುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಏನಿದು ಹೊಟ್ಟೆಯ ಫ್ಲೂ?

ಏನಿದು ಹೊಟ್ಟೆಯ ಫ್ಲೂ?

ಹೊಟ್ಟೆಯ ಫ್ಲೂ ಎಂಬುವುದು ಹೊಟ್ಟೆ ಹಾಗೂ ಕರುಳಿಗನ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ಚಿಕ್ಕದಾಗಿರಬಹುದು, ಕೆಲವರಲ್ಲಿ ಗಂಭೀರ ಪರಿಣಾಮವನ್ನೇ ಬೀರಬಹುದು. ವಾಂತಿ ಮತ್ತು ಬೇಧಿ ಇದರ ಲಕ್ಷಣಗಳಾಗಿವೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.

ಹೊಟ್ಟೆಯ ಫ್ಲೂನ ಲಕ್ಷಣಗಳು

ಹೊಟ್ಟೆಯ ಫ್ಲೂನ ಲಕ್ಷಣಗಳು

* ಕೆಲವರಲ್ಲಿ ಜ್ವರ ಹಾಗೂ ವಾಂತಿ ಸಮಸ್ಯೆ ಕಂಡು ಬಂದರೆ

* ಇನ್ನು ಕೆಲವರಲ್ಲಿ ವಾಂತಿ-ಬೆಧಿಯ ಸಮಸ್ಯೆ ಕಂಡು ಬರುವುದು

* ಮಕ್ಕಳಲ್ಲಿ ಸೀತ ಹಾಗೂ ಕೆಮ್ಮು ಇರಬಹುದು, ಇಲ್ಲದಿರಬಹುದು

ಯಾವ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ?

ಯಾವ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ?

* 1-8 ವರ್ಷದ ಪ್ರಾಯದ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದು.

* 8 ವರ್ಷದ ಮೇಲ್ಪಟ್ಟ ಕೆಲವೇ ಕೆಲ ಮಕ್ಕಳಲ್ಲಿ ಮಾತ್ರ ಈ ಸಮಸ್ಯೆ ಕಂಡು ಬರುತ್ತಿದೆ.

ಹೊಟ್ಟೆಯ ಫ್ಲೂ/ಜ್ವರಕ್ಕೆ ಕಾರಣವೇನು?

ಹೊಟ್ಟೆಯ ಫ್ಲೂ/ಜ್ವರಕ್ಕೆ ಕಾರಣವೇನು?

* ಸಾಮಾನ್ಯವಾಗಿ ಈ ಸಮಸ್ಯೆ ಮಳೆಗಾಲದಲ್ಲಿ ಕಂಡು ಬರುವುದು. ಆದರೆ ಈಗ ಅಕಾಲಿಕ ಮಳೆ ಬರುತ್ತಿರುವುದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ.

* ಪೈಪ್‌ನಲ್ಲಿ ಬರುವ ನೀರಿನಲ್ಲಿ ಬರುವ ಶುದ್ಧ ನೀರಿನೊಂದಿಗೆ ಚರಂಡಿ ನೀರು ಮಿಕ್ಸ್ ಆದರೆ ಈ ಸಮಸ್ಯೆ ಕಂಡು ಬರುವುದು.

ಮಳೆಗಾಲದಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುವುದು ಸಾಮಾನ್ಯವಾಗಿದ್ದು ದಿನದಲ್ಲಿ 4-5 ಕೇಸ್‌ಗಳು ಕಂಡು ಬರುತ್ತವೆ.

* ಮಕ್ಕಳಿಗೆ ಬೇಗನೆ ಚಿಕಿತ್ಸೆ ನೀಡಿದರೆ 4-5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಕೆಲ ಮಕ್ಕಳಷ್ಟೇ ಆಸ್ಪತ್ರೆಗೆ ದಾಖಲಾಗುತ್ತಾರೆ, ಕೆಲವರಲ್ಲಿ ಮಲದಲ್ಲಿ ರಕ್ತ ಕೂಡ ಕಂಡು ಬರುವುದು.

ಹೊಟ್ಟೆಯ ಫ್ಲೂ ತಡೆಗಟ್ಟುವುದು ಹೇಗೆ?

ಹೊಟ್ಟೆಯ ಫ್ಲೂ ತಡೆಗಟ್ಟುವುದು ಹೇಗೆ?

* ಮಕ್ಕಳಿಗೆ ಕಾಯಿಸಿ ಆರಿಸಿದ ನೀರನ್ನೇ ಕೊಡಿ.

* ಬೀದಿ ಬದಿಯ ಆಹಾರಗಳನ್ನು, ಹೊರಗಿನ ಆಹಾರಗಳನ್ನು ನೀಡಬೇಡಿ.

* ಪೋಷಕಾಂಶದ ಆಹಾರ ಹೆಚ್ಚಾಗಿ ನೀಡಿ, ಚೆನ್ನಾಗಿ ನೀರು ಕುಡಿಸಿ.

English summary

Stomach Flu Cases On The Rise Among Bengaluru Kids; Know Symptoms, Causes, Treatments in Kannada

Stomach flu cases on the rise among Bengaluru kids; Know Symptoms, Causes, Treatments in Kannada, read on...
X
Desktop Bottom Promotion