For Quick Alerts
ALLOW NOTIFICATIONS  
For Daily Alerts

ಪೋಷಕರು ಮಕ್ಕಳೊಂದಿಗೆ ಹೆಚ್ಚು ಪ್ರಯಾಣಿಸಬೇಕಂತೆ ಏಕೆ ಗೊತ್ತಾ? ತಜ್ಞರು ಹೇಳುವುದೇನು?

|

ವಿವಿಧ ಸ್ಥಳಗಳ ಭೇಟಿಗೆ ಪ್ರಯಾಣ ಮಾಡುವುದು ಅತ್ಯಂತ ಮನರಂಜನೆ ನೀಡುವ ಒಂದು ಕಾರ್ಯ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ಸ್ಥಳದ ವಿಷಯಗಳ ಬಗ್ಗೆ ನಾವು ಹೆಚ್ಚಾಗಿ ತಿಳಿದುಕೊಳ್ಳುತ್ತೇವೆ. ಅದರಲ್ಲೂ ಮಕ್ಕಳ ಜೊತೆ ಅಥವಾ ಮಕ್ಕಳು ಪ್ರಯಾಣ ಮಾಡುವುದರಿಂದ ಅನೇಕ ಪ್ರಯೋಜನಗಳು ಇದೆ. ನಮ್ಮ ಮಕ್ಕಳು ಹೆಚ್ಚು ಮುಕ್ತ ಮತ್ತು ಪ್ರವೇಶಿಸಬಹುದಾದ ಜಗತ್ತಿನಲ್ಲಿ ಈಗ ವಾಸಿಸುತ್ತಿದ್ದಾರೆ. ಪ್ರಯಾಣದ ಸುಲಭತೆಯಿಂದಾಗಿ ಹಿಂದೆ ಸಾಧಿಸಲಾಗದ ಅವಕಾಶಗಳಿಗೆ ಈಗ ಅವರು ಪ್ರವೇಶವನ್ನು ಹೊಂದಿದ್ದಾರೆ.

ಪ್ರಯಾಣದಿಂದ ಮಕ್ಕಳ ದೃಷ್ಟಿಕೋನ ಬದಲಾಗುತ್ತದೆ. ಇದಲ್ಲದೆ ಪ್ರಯಾಣ, ಇತರ ಸಂಸ್ಕೃತಿಗಳ ಕಡೆಗೆ ಹೆಚ್ಚು ಹೊಂದಿಕೊಳ್ಳುವ ಮತ್ತು ಸಹಾನುಭೂತಿ ಹೊಂದಲು ಸಹಾಯ ಮಾಡುತ್ತದೆ. ನೀವು ಗಮನಿಸರಬಹುದು ಮಕ್ಕಳು ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಚಿಕ್ಕದರಲ್ಲೇ ಅವರು ಪ್ರಯಾಣ ಮಾಡಿದರೆ ಅವರು ದೊಡ್ಡದಾಗುತ್ತಲೇ ಹೆಚ್ಚು ಧೈರ್ಯವಂತರಾಗುತ್ತಾರೆ. ಸಣ್ಣದರಲ್ಲೇ ಅವರ ಜ್ಞಾನವು ವೃದ್ದಿಯಾಗುತ್ತದೆ. ದೀರ್ಘಾವಧಿಯ ಅನೇಕ ಪ್ರಯೋಜನಗಳು ಮಕ್ಕಳಿಗೆ ಸಿಗುತ್ತದೆ.

ಪ್ರಯಾಣದಿಂದ ಮಕ್ಕಳಿಗೆ ಸಿಗುವ ಲಾಭವೇನು?

ಪ್ರಯಾಣದಿಂದ ಮಕ್ಕಳಿಗೆ ಸಿಗುವ ಲಾಭವೇನು?

ನಿಮಗೊಂದು ಗೊತ್ತಾ ಪ್ರಯಾಣದಿಂದ ಸಿಗುವ ಅನುಭವ ಯಾವುದೇ ತರಗತಿಯು ನಮಗೆ ಕಲಿಸಲು ಸಾಧ್ಯವಿಲ್ಲ. ಪ್ರಯಾಣವು ಜೀವನ ಪಾಠವನ್ನು ಕಲಿಸುತ್ತದೆ. ಹೀಗಾಗಿ ಮಕ್ಕಳೊಂದಿಗೆ ಹೆಚ್ಚೆಚ್ಚು ಪ್ರಯಾಣವನ್ನು ಮಾಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ. ಹಾಗಾದರೆ ಪ್ರಯಾಣದಿಂದ ಮಕ್ಕಳಿಗೆ ಸಿಗುವ ಲಾಭವೇನು..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಹೊಸ ವಿಷಯಗಳನ್ನು, ಹೊಸ ಸಂಸ್ಕೃತಿಯನ್ನು ಆರಂಭದಲ್ಲೇ ಕಲಿಯುತ್ತಾರೆ!

ಹೊಸ ವಿಷಯಗಳನ್ನು, ಹೊಸ ಸಂಸ್ಕೃತಿಯನ್ನು ಆರಂಭದಲ್ಲೇ ಕಲಿಯುತ್ತಾರೆ!

ನೀವು ಗಮನಿಸಿರಬಹುದು ಹಿಮಾಲಯದ ಬಗ್ಗೆ ಪುಸ್ತಕದಲ್ಲಿ ಇದ್ದರೆ ಮಕ್ಕಳು ಕೇವಲ ಪುಸ್ತಕದಲ್ಲಿ ಓದಿ ಸುಮ್ಮನಿರುತ್ತಾರೆ. ಅದನ್ನು ಅನುಭವ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇನ್ನ್ದು ಯೂಟ್ಯೂಬ್ ವಿಡಿಯೋದಲ್ಲಿ ನೋಡಿದರು ಹಿಮಾಲಯದಲ್ಲಿರುವ ಸೌಂದರ್ಯಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಹೀಗಾಗಿ ಕೆಲವೊಂದು ವಿಷವನ್ನು ನೋಡಿಯೇ ತೀರಬೇಕು. ನೋಡಿದರೆ ಉತ್ತಮವಾದ ಅನುಭವ ಸಿಗುತ್ತದೆ. ಅಲ್ಲಿನ ಜನರು, ಆಹಾರದ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು. ಅವರ ಭಿನ್ನತೆಗಳ ಬಗ್ಗೆ ಮಾಹಿತಿಯು ಸಿಗುತ್ತದೆ. ಈ ವೇಳೆ ಅದನ್ನೆಲ್ಲ ಮಕ್ಕಳು ತಿಳಿದುಕೊಳ್ಳುತ್ತಾರೆ. ನೋಡಿ ಅನುಭವಿಸುತ್ತಾರೆ. ಅವರ ಸಂಸ್ಕೃತಿಯನ್ನು ಸ್ವೀಕರಿಸುತ್ತಾರೆ. ಎಲ್ಲವೂ ಒಂದೇ ಅಲ್ಲ ಎಂದು ಅವರು ತಿಳಿದುಕೊಳ್ಳುತ್ತಾರೆ.

ಅಗತ್ಯ ಮೌಲ್ಯಗಳನ್ನು ಕಲಿಯುತ್ತಾರೆ!

ಅಗತ್ಯ ಮೌಲ್ಯಗಳನ್ನು ಕಲಿಯುತ್ತಾರೆ!

ಮಕ್ಕಳು ಹೆಚ್ಚು ಪ್ರಯಾಣಿಸಿದರೆ, ಅವರು ತಮ್ಮ ಸುತ್ತಲಿನ ಪ್ರಪಂಚವನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಾರೆ. ತಮ್ಮ ಮನೆಯ ಆರಾಮದಾಯಕ 4 ಗೋಡೆಗಳಿಗಿಂತ ಜೀವನವು ಬಹಳಷ್ಟು ಭಿನ್ನವಾಗಿದೆ ಎಂದು ಅವರು ಅರಿತುಕೊಳ್ಳುತ್ತಾರೆ. ಅವರು ನೈಜ ಸಂಗತಿಗಳಿಗೆ ಸಾಕ್ಷಿಯಾದಾಗ ಸಹಾನುಭೂತಿ, ದಯೆ ಮತ್ತು ಕೃತಜ್ಞತೆಯ ಭಾವನೆ ಅವರಲ್ಲಿ ಉಂಟಾಗುತ್ತದೆ. ಇನ್ನು ಒಂದು ಸ್ಥಳಕ್ಕೆ ಹೋದಾಗ ಅಲ್ಲಿನ ಕೆರೆಯಲ್ಲಿ ಕಾರೊಂದು ಸಿಕ್ಕಿಬಿದ್ದಿದೆ ಎಂದು ಅಂದುಕೊಳ್ಳಿ. ಈ ವೇಳೆ ಅಲ್ಲಿನ ಜನ ಅವರಿಗೆ ಸಹಾಯ ಮಾಡಲು ಹೋಗುತ್ತಾರೆ ಎಂದು ಅಂದುಕೊಳ್ಳಿ. ಇದು ನಿಮ್ಮ ಮಕ್ಕಳ ಯೋಚನಾಲಹರಿ ಬದಲಿಸುತ್ತದೆ. ಅವರನ್ನು ಮುಂದಿನ ದಿನಗಳಲ್ಲಿ ಜನರಿಗೆ ಸಹಾಯ ಮಾಡಲು ಮನಸ್ಸು ಉಂಟಾಗುತ್ತದೆ.

ಉಪಯುಕ್ತ ಜೀವನ ಕೌಶಲ್ಯಗಳನ್ನು ಕಲಿಯುತ್ತಾರೆ

ಉಪಯುಕ್ತ ಜೀವನ ಕೌಶಲ್ಯಗಳನ್ನು ಕಲಿಯುತ್ತಾರೆ

ಮಕ್ಕಳು ಚಿಕ್ಕದಿನಿಂದ ಹಿಡಿದು ದೊಡ್ದದರವರೆಗೆ ಅಲಸ್ಯದಿಂದ ಇರುತ್ತಾರೆ. ವಾರಾಂತ್ಯದಲ್ಲಿ ಬೆಳಗ್ಗ್ಗೆ ಹಾಸಿಗೆಯಿಂದ ಏಳುವುದು ಸೂರ್ಯ ನೆತ್ತಿ ಮೇಲೆ ಬಂದಾಗ. ಹೀಗಾದಾಗ ಮಕ್ಕಳು ಅಲಸ್ಯದಿಂದ ಜೀವನ ನಡೆಸುತ್ತಾರೆ. ಒಂದು ವೇಳೆ ನೀವು ವಿಕೇಂಡ್ ನಲ್ಲಿ ಪ್ರಯಾಣ ಮಾಡುವುದನ್ನು ಮಕ್ಕಳಿಗೆ ಕಲಿಸಿದರೆ ಅವರು ಮತ್ತೆ ಜೀವನದಲ್ಲಿ ಯಾವುದಕ್ಕೂ ನಿರ್ಲಕ್ಷ್ಯ ತೋರಿಸುವುದಿಲ್ಲ. ಅವಕಾಶ ಸಿಕ್ಕಾಗ ಮಕ್ಕಳು ತಮ್ಮ ಅವಕಾಶಗಳನ್ನು ಪಡೆದುಕೊಳ್ಳಲು ಕಲಿಯುತ್ತಾರೆ. ಪ್ರತೀ ವಾರ ಈ ರೀತಿ ಮಾಡುತ್ತಿದ್ದರೆ ಅವರಿಗೆ ಅದೊಂದು ಹವ್ಯಾಸವಾಗಿ ಬಿಡುತ್ತದೆ. ಬೆಳಗ್ಗೆ ಬೇಗ ಏಳುವುದು, ತಯಾರಾಗಿ ಹೋಗುವುದು ರೂಢಿಯಾಗುತ್ತದೆ.

ಸ್ಥಳೀಯರೊಂದಿಗೆ ಬೆರೆಯಲು ಕಲಿಯುತ್ತಾರೆ!

ಸ್ಥಳೀಯರೊಂದಿಗೆ ಬೆರೆಯಲು ಕಲಿಯುತ್ತಾರೆ!

ಪ್ರಯಾಣದ ವೇಳೆ ಯಾವತ್ತೂ ನೀವು ಆಹಾರವನ್ನು ಮನೆಯಿಂದ ಒಯ್ಯಬೇಡಿ. ಯಾಕೆಂದರೆ ಮಕ್ಕಳಿಗೆ ಸ್ಥಳೀಯ ಪಾಕಪದ್ಧತಿಯನ್ನು ಕಲಿಸಬೇಕು. ಇದರಿಂದಾಗಿ ಮಕ್ಕಳು ಸ್ಥಳೀಯರೊಂದಿಗೆ ಬೆರೆಯಲು ಕಲಿಯುತ್ತಾರೆ. ಒಂದು ಅವರ ಆಹಾರದ ಪದ್ದತಿಯನ್ನು ಕಲಿಯುತ್ತಾರೆ. ಜೊತೆಗೆ ಆಹಾರ ಸೇವಿಸುವ ವೇಳೆ ಅಲ್ಲಿನ ಸ್ಥಳೀಯರೊಂದಿಗೆ ಬೆರೆಯಲು ಅವಕಾಶ ಸಿಗುತ್ತದೆ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಭಯವಿಲ್ಲದ ಸಂವಹನ ಶಕ್ತಿ ಉಂಟಾಗುತ್ತದೆ.

ಜೀವಿತಾವಧಿಗೆ ಬೇಕಾದ ನೆನಪುಗಳ ಗುಚ್ಚ ರಚಿಸಬಹುದು!

ಜೀವಿತಾವಧಿಗೆ ಬೇಕಾದ ನೆನಪುಗಳ ಗುಚ್ಚ ರಚಿಸಬಹುದು!

ಬಾಲ್ಯದಲ್ಲಿ ಒಂದು ಸ್ಥಳಕ್ಕೆ ಹೋದರೆ ಸಾಕು ನೆನಪುಗಳು ಅದು ಮರುಸೃಷ್ಟಿಯಾಗುತ್ತಲೇ ಇರುತ್ತದೆ. ಇಂತಹ ನೆನಪುಗಳು ಬಾಲ್ಯದ ಪ್ರಯಾಣದಲ್ಲಿ ಮಾತ್ರ ಉಂಟಾಗುತ್ತದೆ. ಅದರಲ್ಲೂ ವಯಸ್ಸಾದ ನಂತರ ಇಂತಹ ನೆನಪುಗಳು ಕಣ್ಣ ಮುಂದೆ ಬರುತ್ತದೆ. ಕಾಶ್ಮೀರದ ತೋಟದಲ್ಲಿ ಆಪಲ್ ಕೊಯ್ದ ನೆನಪು, ಮಂಜಿನಲ್ಲಿ ಆಟ ಆಡಿದ ನೆನಪು, ನೀರಿನಲ್ಲಿ ಸ್ನಾನ ಮಾಡಿದ ನೆನಪು. ಈ ನೆನಪುಗಳು ರತ್ನದಿಂದ ಪೋಣಿಸಿದ ಮಾಲೆಯಂತೆ ನಮ್ಮ ದೀರ್ಘಾವದಿಯ ಜೀವನದಲ್ಲಿ ನಮ್ಮ ಜೊತೆ ಸಾಗುತ್ತದೆ. ಇನ್ನು ಈಗ ಡಿಜಿಟಲ್ ಯುಗವಾಗಿರುವುದರಿಂದ ಫೋನ್ ಮೂಲಕ ನೆನಪುಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.

English summary

Reasons Why You Should Travel with Kids; Expert Shares Insights in Kannada

Here we are discussing about Reasons Why You Should Travel with Kids; Expert Shares Insights in Kannada. Read more.
Story first published: Sunday, November 27, 2022, 16:00 [IST]
X
Desktop Bottom Promotion