For Quick Alerts
ALLOW NOTIFICATIONS  
For Daily Alerts

ಗಮನಿಸಿ ಪೋಷಕರೇ..! ನಿಮ್ಮ ಈ ತಪ್ಪುಗಳು ಮಕ್ಕಳ ಭವಿಷ್ಯವನ್ನೇ ಹಾಳುಮಾಡುತ್ತದೆ

|

ಮಕ್ಕಳು ಭವಿಷ್ಯವನ್ನು ರೂಪಿಸುವವರು ಅಂತ ಆಗಾಗೇ ಹೇಳುತ್ತಿರುತ್ತಾರೆ. ಮಕ್ಕಳು ಒಳ್ಳೆ ದಾರಿಯಲ್ಲಿ ಬೆಳದರೆ ಅವರ ಜೀವನ ಬೆಳಗಲಿದೆ. ಅವರು ಕೆಟ್ಟ ದಾರಿಯಲ್ಲಿ ಹೆಜ್ಜೆ ಹಾಕಿದರೆ ಜೀವನದಲ್ಲಿ ಕತ್ತಲು ಆವರಿಸುತ್ತದೆ. ಕತ್ತಲು ಹಾಗೂ ಬೆಳಕನ್ನು ಸೃಷ್ಟಿಸುವವರು ಪೋಷಕರು ಮಾತ್ರ. ಹೌದು, ಮಕ್ಕಳು ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಮತ್ತು ಅವರಿಂದ ಹೆಚ್ಚಿನ ವಿಷಯಗಳನ್ನು ಕಲಿಯುತ್ತಾರೆ.

123

ಒಳ್ಳೆಯ ಅಥವಾ ಕೆಟ್ಟ ಪೋಷಕರು ಅವರಿಗೆ ಎಲ್ಲದಕ್ಕೂ ಉದಾಹರಣೆಗಳಾಗುತ್ತಾರೆ. ಪೋಷಕರು ಮಕ್ಕಳಿಗೆ ಸರಿಯಾದ ವಿಷಯಗಳನ್ನು ಕಲಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ, ಆದರೆ ತಿಳಿಯದೆ ಮಕ್ಕಳ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುವ ಕೆಲವು ಕೆಟ್ಟ ವಿಷಯಗಳನ್ನು ಸಹ ಕಲಿಸುತ್ತಾರೆ.

ಹೀಗಾಗಿ ಪೋಷಕರು ಮಾಡುವ ಕೆಲವೊಂದು ಪ್ರಮಾದಗಳು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅವರು ಆತ್ಮವಿಶ್ವಾಸ, ಧೈರ್ಯ, ಕೀಳರಿಮೆ ಎಲ್ಲದಕ್ಕೂ ಕಾರಣ ಅವರು ಬೆಳೆಯುವ ರೀತಿ. ಹೀಗಾಗಿ ಮಕ್ಕಳು ಭವಿಷ್ಯದಲ್ಲಿ ಏನಾಗಬೇಕು ಎನ್ನುವುದು ಪೋಷಕರ ಕೈಯಲ್ಲಿದೆ. ಹೀಗಾಗಿ ಈ ಕೆಳಗಿನ ತಪ್ಪುಗಳ್ನ್ನು ಯಾವತ್ತು ಮಾಡಲು ಹೋಗಬೇಡಿ. ಯಾವುದು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ತಪ್ಪುಗಳಿಂದ ಕಲಿಸಲು ಪ್ರಯತ್ನಿಸಿ!

ತಪ್ಪುಗಳಿಂದ ಕಲಿಸಲು ಪ್ರಯತ್ನಿಸಿ!

ಮನುಷ್ಯರೆಂದ ಮೇಲೆ ತಪ್ಪುಗಳು ಮಾಡುವುದು ಸಹಜ. ಅದರಲ್ಲೂ ಮಕ್ಕಳು ತಪ್ಪು ಮಾಡದೆ ಏನು ಕಲಿಯಯಲು ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ತಪ್ಪು ಮಾಡಿದರೆ ಪೋಷಕರಾದ ನಾವು ಅವರನ್ನು ಬೈಯಲು ಹೋಗಬಾರದು. ನಿನ್ನ ತಪ್ಪಿನಿಂದ ಆ ಸಾಧನೆ ಮಾಡಲು ಆಗಿಲ್ಲ ಎಂದು ಅವರನ್ನು ನಿರುತ್ಸಾಹಗೊಳಿಸಬಾರದು. ಇದು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೇ ಅವರು ಯಾವುದೇ ಕೆಲಸ ಮಾಡಲು, ಸೃಜನಶೀಲವಾಗಿ ಯೋಚಿಸಲು ಅವರು ಮುಂದಾಗುವುದಿಲ್ಲ. ಯಾವುದೇ ವಲಯದಲ್ಲೂ ಸಾಧನೆ ಮಾಡಲು ಮಕ್ಕಳಿಗೆ ಆತ್ಮ ವಿಶ್ವಾಸ ಬೇಕಾಗುತ್ತದೆ. ಅವರನ್ನು ನೈತಿಕವಾಗಿ ಪೋಷಕರು ಬೆಂಬಲಿಸಿದರೆ ಮಾತ್ರ ಅವರ ಉತ್ಸಾಹ ಹೆಚ್ಚಾಗುತ್ತದೆ, ಸೃಜನಶೀಲ ಕೆಲಸವನ್ನು ಮಾಡಲು ಅವರು ಮುಂದಾಗುತ್ತಾರೆ. ಹೀಗಾಗಿ ತಪ್ಪು ಮಾಡಿದರೆ ತಪ್ಪಿನಿಂದ ಅವರನ್ನು ಕಲಿಯುವಂತೆ ಮಾಡಿ.

ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡಿ!

ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡಿ!

ಮಕ್ಕಳಿಗೆ 20 ರಿಂದ 30 ವರ್ಷವಾದರೂ ನಮ್ಮ ಮಕ್ಕಳಿಗೆ ಜವಾಬ್ದಾರಿ ತೆಗೆದುಕೊಳ್ಳಲು ಗೊತ್ತಿಲ್ಲ ಅಂತಲೇ ಪೋಷಕರು ಹೇಳುತ್ತಾರೆ. ಅದಕ್ಕೆ ಕಾರಣ, ತಮ್ಮ ಮಕ್ಕಳು ಸವಾಲುಗಳನ್ನು ಎದುರಿಸಲು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಲು ತಯಾರಾಗಿದ್ದರು.

ಈ ರೀತಿಯ ಕೆಲಸಗಳಿಗೆ ಮಕ್ಕಳು ಇನ್ನು ಪ್ರಬುದ್ಧರಾಗಿಲ್ಲ ಎಂದು ಪೋಷಕರು ಭಾವಿಸುವುದೇ ದೊಡ್ಡ ತಪ್ಪು. ಉದಾಹರಣೆಗೆ ಅಪ್ಪ-ಅಮ್ಮ ನಾನು ಆ ಕೆಲಸ ಮಾಡುತ್ತೇನೆ ಎಂದು ಮಕ್ಕಳು ಕೇಳಿಕೊಂಡರೆ, ಮಾಡು ಎಂದು ಧೈರ್ಯ ಹೇಳಿ ಕಳುಹಿಸಬೇಕು. ಹೀಗಾದಾಗ ಅವರು ಆ ವಿಚಾರವನ್ನು ಕಲಿಯುತ್ತಾರೆ. ಆ ಕೆಲಸದಲ್ಲಿ ಸೋತರು ಅವರ ಆತ್ಮವಿಶ್ವಾಸ ಕುಂದುವುದಿಲ್ಲ.

ಅದಕ್ಕೆ ಕಾರಣ ನಮಗೆ ನಮ್ಮ ಪೋಷಕರ ಬೆಂಬಲವಿದೆ ಎನ್ನುವುದು ಅವರ ಮನಸ್ಸಿನಲ್ಲಿ ಊರಿರುತ್ತದೆ. ಅಲ್ಲದೇ ಅವರು ತಮ್ಮ ಟ್ಯಾಲೆಂಟ್ ಏನು? ಏನು ಮಾಡಬೇಕು? ಸೋತಾಗ ಯಾವ ರೀತಿ ಇರಬೇಕು? ಎನ್ನುವುದನ್ನು ಸಂಪೂರ್ಣವಾಗಿ ಕಲಿತಿರುತ್ತಾರೆ. ಜವಾಬ್ದಾರಿ ಅವರಿಗೆ ದೀರ್ಘವಾದ ಅನುಭವ ನೀಡುತ್ತದೆ. ಮನೆಯ ಕೆಲಸವನ್ನು ಮಕ್ಕಳು ಮಾಡುತ್ತಿದ್ದರೆ ನೀವು ವೆರಿ ಗುಡ್ ಅಂದು ಮಾಡಲು ಬೆಂಬಲ ನೀಡಿದರೆ ಮನೆಯಿಂದಲೇ ಅವರು ಜವಾಬ್ದಾರಿ ಕಲಿತುಕೊಂಡು ಬರುತ್ತಾರೆ. ಮಾಡಬೇಡ ಎಂದರೆ ಮನೆಯಲ್ಲೇ ಜವಾಬ್ದಾರಿ ತೆಗೆದುಕೊಳ್ಳಲು ಆಗೋದಿಲ್ಲ. ಹೊರಗೂ ಸಮಸ್ಯೆಯಲ್ಲೇ ಇರುತ್ತಾರೆ.

ಭಾವನಾತ್ಮಕವಾಗಿ ಪ್ರಬುದ್ಧರಾಗಲಿ ನಿಮ್ಮ ಮಕ್ಕಳು!

ಭಾವನಾತ್ಮಕವಾಗಿ ಪ್ರಬುದ್ಧರಾಗಲಿ ನಿಮ್ಮ ಮಕ್ಕಳು!

ನಿಮ್ಮ ಮಕ್ಕಳು ಭಾವನಾತ್ಮಕವಾಗಿ ಪ್ರಬುದ್ಧರಾಗಲು ಯಾವ ರೀತಿಯಲ್ಲಿ ಸಹಾಯ ಮಾಡಲು ಆಗುತ್ತದೆ ಎನ್ನುವುದನು ನೀವು ನೋಡಬೇಕು. ಉದಾಹರಣೆಗೆ ಎಲ್ಲ ವಿಷಯಕ್ಕೂ ಬೇಸರ ಪಟ್ಟುಕೊಳ್ಳುವುದು, ಯಾವುದೇ ಕೆಟ್ಟ ಘಟನೆ ನಡೆದರೆ ತೀವ್ರ ನೋವು ಪಟ್ಟುಕೊಳ್ಳುವುದು. ಇಂತಹ ಘಟನೆಗಳಿಂದ ಅವರಿಗೆ ಧೈರ್ಯ ಹೇಳಿ ಅವರನ್ನು ಸ್ಟ್ರಾಂಗ್ ವ್ಯಕ್ತಿಗಳಾಗಿ ಬದಲಿಸಬೇಕು. ಹೀಗಾದಲ್ಲಿ ಅವರು ಮುಂದಿನ ದಿನಗಳಲ್ಲಿ ಇಂತಹ ಯಾವುದಕ್ಕೂ ಎದೆಗುಂದದೆ ಮುಂದುವರೆಯುತ್ತಾರೆ. ಅಲ್ಲದೇ ಅವರು ಯಾವಾಗಲು ತಮಗೆ ತಾವು ನಿಷ್ಟರಾಗಿರಲಿ. ಸುಳ್ಳು, ವಂಚನೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು. ಇನ್ನು ಅವರು ತಮ್ಮ ಭಾವನೆಯನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತ ಪಡಿಸಲು ಕಲಿಸಿ.

ಏನು ಕೇಳಿದರೂ ಇಲ್ಲ ಎನ್ನಬೇಡಿ!

ಏನು ಕೇಳಿದರೂ ಇಲ್ಲ ಎನ್ನಬೇಡಿ!

"ನಾವು ಬಡವರು ನಾವು ಅಂತಹದಕ್ಕೆ ಸೇರಬಾರದು". " ನಾವು ಬಡವರಾಗಿದ್ದರಿಂದ ನಮಗೆ ಆ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ". ಇಂತಹ ಹೇಳಿಕೆ ಮಕ್ಕಳ ಮುಂದೆ ಹೇಳಲೇಬೇಡಿ. ಯಾಕೆಂದರೆ ಮಕ್ಕಳಲ್ಲಿ ಇದು ಅಸಹಾಯಕತೆ ಮನೋಭಾವ ಸೃಷ್ಟಿಸುತ್ತದೆ. ಮಗು ಒಂದು ಡ್ಯಾನ್ಸ್ ಕ್ಲಾಸಿಗೆ ಸೇರಲು ಇಚ್ಚಿಸಿದರೆ ಯಾವ ರೀತಿಯಲ್ಲಿ ಸೇರಿಸಬಹುದು ಎಂದು ಯೋಜನೆ ಹಾಕಿ ಸೇರಿಸಿ. ಈ ರೀತಿ ಮಾಡಿದರೆ ಅವರು ನೈತಿಕವಾಗಿ ಬೆಳೆಯುತ್ತಾರೆ. ಇನ್ನು ದುಡ್ಡು ಇಲ್ಲ, ಬಡವರು, ಅದೆಲ್ಲ ಬೇಡ ಎಂದರೆ ಮಕ್ಕಳ ಯೋಚನೆ ಬದಲಾಗುತ್ತದೆ. ಮಕ್ಕಳಲ್ಲೂ ನಾವು ಅದು ಮಾಡಬಾರದು, ಇದು ಮಾಡಬಾರದು ಎನ್ನುವ ಯೋಚನೆ ಬರುತ್ತದೆ. ಇದರಿಂದ ಕೀಳರಿಮೆ ಉಂಟಾಗುತ್ತದೆ.

ಮಕ್ಕಳ ಸಮಸ್ಯೆಯನ್ನು ಮಕ್ಕಳೇ ಎದುರಿಸಲಿ!

ಮಕ್ಕಳ ಸಮಸ್ಯೆಯನ್ನು ಮಕ್ಕಳೇ ಎದುರಿಸಲಿ!

ಮಕ್ಕಳಿಗೆ ಪೋಷಕರು ಮಾಡಬೇಕಾದ ಮುಖ್ಯವಾದ ಕೆಲಸ ಎಂದರೆ ಸಮಸ್ತ್ಯೆಗಳನ್ನು ಎದುರಿಸುವುದು ಮತ್ತು ಸೋಲನ್ನು ಗೆಲುವಿನ ಮೊದಲ ಮೆಟ್ಟಿಲು ಎಂದು ತೋರಿಸುವುದು. ಅನೇಕ ಕಡೆ ಏನಾಗುತ್ತಿದೆ ಎಂದರೆ ಪೋಷಕರು ತಮ್ಮ ಮಕ್ಕಳನ್ನು ತೀವ್ರವಾಗಿ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಯಾವುದೇ ನಿರ್ಧಾರಗಳನ್ನು ಅವರಾಗೇ ತೆಗೆದುಕೊಳ್ಳಲು ಬಿಡುವುದಿಲ್ಲ. ಅಲ್ಲದೇ ಯಾವುದೇ ಸಮಸ್ಯೆಯನ್ನು ಎದುರಿಸಿದರು ಅದನ್ನು ಪೋಷಕರು ಬಂದು ಸ್ವಾಲ್ವ್ ಮಾಡುತ್ತಾರೆ. ಇದರಿಂದಾಗಿ ಮಕ್ಕಳು ಮುಂದಿನ ದಿನದಲ್ಲಿ ಸವಾಲು ಅಥವಾ ಸಮಸ್ಯೆ ಎದುರಾದರೆ ಅದರಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಅಥವಾ ಇದರಿಂದ ಒತ್ತಡಕ್ಕೆ ಸಿಲುಕುತ್ತಾರೆ. ಉದಾಹರಣೆಗೆ ಮಕ್ಕಳು ಪರೀಕ್ಷೆಯಲ್ಲಿ ಫೈಲ್ ಆದರೂ ಅಂದುಕೊಳ್ಳಿ ಅವರಿಗೆ ಆ ಸಮಸ್ಯೆಯಿಂದ ಹೊರಬರಲು ಕಲಿಸಬೇಕು. ಆಗ ಅವರು ಮತ್ತೊಂದು ಬಾರಿ ಫೈಲ್ ಆಗಲ್ಲ. ಆ ಸಮಸ್ಯೆಯನ್ನು ಎದುರಿಸಲು ಆ ವೇಳೆ ಅವರು ಕಲಿತಿರುತ್ತಾರೆ. ಎಲ್ಲದರೂ ಈ ವಿಚಾರದಲ್ಲಿ ಪೋಷಕರು ಇಂಟರ್ ಫಿಯರ್ ಆದರೆ ಮಕ್ಕಳು ಮತ್ತೆ ಯಾವುತ್ತೂ ಪಾಸ್ ಆಗೋದೆ ಇಲ್ಲ. ಅಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಶಿಕ್ಷೆ ಕೊಡುವುದು ಉತ್ತಮ ಐಡಿಯಾ ಅಲ್ಲ!

ಶಿಕ್ಷೆ ಕೊಡುವುದು ಉತ್ತಮ ಐಡಿಯಾ ಅಲ್ಲ!

ಮಕ್ಕಳು ತಪ್ಪು ಮಾಡಿದರೆ ಪೋಷಕರು ಅವರಿಗೆ ಹೊಡೆಯುವುದುಂಟು. ಆದರೆ ಇದು ನಿಜಕ್ಕೂ ತಪ್ಪು ನಿರ್ಧಾರ. ಯಾಕೆಂದರೆ ಹೊಡೆದು-ಬಡಿದು ಮಕ್ಕಳನ್ನು ಬದಲಿಸಲು ಸಾಧ್ಯವಿಲ್ಲ. ಈ ರೀತಿ ಮಾಡುವುದರಿಂದ ಮಕ್ಕಳು ಖಿನ್ನತೆಗೆ ಒಳಪಡುತ್ತಾರೆ. ಅವರ ಮನಸ್ಸಲ್ಲಿ ಭಯ ಉಂಟಾಗುತ್ತದೆ. ಇನ್ನು ಕೆಲ ಮಕ್ಕಳು ಇದನ್ನು ರಿವೇಂಜ್ ಆಗಿ ತೆಗೆದುಕೊಂಡು ಮತ್ತೆ ಆದೇ ತಪ್ಪುಗಳನ್ನು ಮಾಡುವುದುಂಟು. ಹೀಗಾಗಿ ಮಕ್ಕಳನ್ನು ಪ್ರೀತಿ ಮಾತಿನಲ್ಲಿ ಅರ್ಥ ಮಾಡಿಸಬೇಕು. ಮಕ್ಕಳಿಗೆ ಸಣ್ಣದಿರಿಂದಲೇ ಒಳ್ಳೆ ದಾರಿ ತೋರಿಸಬೇಕು. ಒಳ್ಳೆ ದಾರಿ ತೋರಿಸದರೆ ಒಳ್ಳೆಯ ರೀತಿಯಲ್ಲಿರುತ್ತಾರೆ. ತಪ್ಪು ಮಾಡುವುದಿಲ್ಲ.

ಹೋಲಿಕೆ ಮಾಡಲು ಹೋಗಬೇಡಿ!

ಹೋಲಿಕೆ ಮಾಡಲು ಹೋಗಬೇಡಿ!

ಅನೇಕ ಪೋಷಕರು ಮಾಡುವ ದೊಡ್ಡ ತಪ್ಪು ಎಂದರೆ ಹೋಲಿಕೆ ಮಾಡುವುದು. ಹೌದು, ಯಾವತ್ತೂ ಮಕ್ಕಳನ್ನು ಇನ್ನೊಂದು ಮಕ್ಕಳ ಜೊತೆ ಹೋಲಿಕೆ ಮಾಡಲು ಹೋಗಬೇಡಿ. ಇದರಿಂದ ಮಕ್ಕಳಲ್ಲಿ ಕೀಳರಿಮೆ ಉಂಟಾಗುತ್ತದೆ. ಅಲ್ಲದೇ ಅವರ ಯೋಚನೆ ಬದಲಾಗುತ್ತದೆ. ನಾನು ವೇಸ್ಟ್, ನನ್ನಿಂದ ಏನು ಸಾಧ್ಯವಿಲ್ಲ ಎನ್ನುವ ಮನೋಭಾವ ಮೂಡುತ್ತದೆ. ಹೀಗಾಗಿ ಮಕ್ಕಳನ್ನು ಕಂಪೇರ್ ಮಾಡಬೇಡಿ. ಅವರಿಗೆ ಪ್ರೀತಿ ಹಾಗೂ ಸಂಯಮದಿಂದ ಹೇಳಿದರೆ ಅವರು ಅರ್ಥ ಮಾಡಿಕೊಳ್ಳುತ್ರ್ತಾರೆ.

ಅವರು ನಿರ್ಧಾರ ತೆಗೆದುಕೊಳ್ಳಲಿ!

ಅವರು ನಿರ್ಧಾರ ತೆಗೆದುಕೊಳ್ಳಲಿ!

ಅನೇಕ ಕಡೆ ಮಕ್ಕಳನ್ನು ಪೋಷಕರು ನಿಯಂತ್ರಿಸುತ್ತಾರೆ. ಮಕ್ಕಳನ್ನು ನಿರ್ಧಾರ ತೆಗೆದುಕೊಳ್ಳಲು ಬಿಡುವುದಿಲ್ಲ. ಪೋಷಕರ ಆಸೆ, ಇಷ್ಟವನ್ನು ಮಕ್ಕಳ ಮೇಲೆ ಹೇರುತ್ತಾರೆ. ಇದು ಮಕ್ಕಳನ್ನು ಒತ್ತಡದಲ್ಲಿ ಸಿಲುಕಿಸುತ್ತದೆ. ಉದಾಹರಣೆಗೆ ಮಕ್ಕಳು ವೈದ್ಯರಾಗಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಅವರನ್ನು ಪೋಷಕರು ತಮ್ಮ ಇಚ್ಚೆಯಿಂದ ಇಂಜಿನಿಯರಿಂಗ್ ಓದಿಸುತ್ತಾರೆ. ಈ ವೇಳೆ ಏನಾನಾಗುತ್ತದೆ ಎಂದರೆ ಮಕ್ಕಳು ತಾವು ಇಷ್ಟವಿಲ್ಲದ ವಿಷಯ ಕಲಿಯಲು ಮನಸ್ಸು ಒಪ್ಪುವುದಿಲ್ಲ ಇದರಿಂದ ಅವರು ಜೀವನದಲ್ಲಿ ವಿಫಲರಾಗುತ್ತಾರೆ.

English summary

Parenting blunders that can have an adverse impact on your child’s morale in kannada

Parenting blunders that can have an adverse impact on your child’s morale in kannada , Read on
X
Desktop Bottom Promotion