For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಕಂಡುಬರುತ್ತಿದೆ ದಂತ ಆರೋಗ್ಯದ ಅಸಮಾನತೆಗಳು

|

ಇತ್ತೀಚೆಗೆ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ಸ್ಥಳೀಯ ಹಾಗೂ ಸ್ಥಳೀಯವಲ್ಲದ ಮಕ್ಕಳ ಬಾಯಿಯ ಸ್ವಚ್ಛತೆ ವಿಚಾರದಲ್ಲಿ ತುಂಬಾ ಅಸಮಾನತೆ ಇದೆ ಎಂದು ಹೇಳಿದೆ. ಕೆನಡಾದ ವ್ಯಾಂಕೋವರ್ ನಲ್ಲಿನ ವ್ಯಾಂಕೋವರ್ ಕನ್ವೆನ್ಶನ್ ಸೆಂಟರ್ ವೆಸ್ಟ್ ಬಿಲ್ಡಿಂಗ್ ನಲ್ಲಿ ಜೂನ್ 22ರಂದು 'ಜರ್ನಲ್ ಆಫ್ ಡೆಂಟಲ್ ರಿಸರ್ಚ್'ನಲ್ಲಿ ಇದು ಪ್ರಕಟವಾಗಿದೆ.

oral health inequalities among kids

ಬ್ರೆಜಿಲ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇತರ ಹಲವಾರು ರಾಷ್ಟ್ರಗಳಲ್ಲಿ ಸ್ಥಳೀಯ ಮತ್ತು ಸ್ಥಳೀಯವಲ್ಲದೆ ಇರುವ ಮಕ್ಕಳ ದಂತ ಸ್ವಚ್ಛತೆಯಲ್ಲಿ ಭಾರೀ ಅಸಮಾನತೆ ಕಂಡುಬಂದಿದೆ. ದೇಶದಲ್ಲಿ ಸಮೀಕ್ಷೆ ನಡೆಸುವಂತಹ ದಂತ ಆರೋಗ್ಯ ಪ್ರತಿನಿಧಿಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಿಕೊಂಡು ಈ ವರದಿಯನ್ನು ತಯಾರಿಸಿಕೊಳ್ಳಲಾಗಿದೆ. ಒಸಡಿನ ಉರಿಯೂತ, ದಂತಕುಳಿಗೆ ಚಿಕಿತ್ಸೆ ನೀಡದೆ ಇರುವುದು ಮತ್ತು ದಂತಕುಳಿಗೆ ಸರಿಯಾದ ತಜ್ಞ ವೈದ್ಯರಲ್ಲದೆ ಇರುವಂತಹವರು ಅದನ್ನು ತುಂಬಿಸುವುದು ಇತ್ಯಾದಿಗಳು ಸಮಸ್ಯೆಯಾಗಿದೆ. ಮಗುವಿನ ದಂತ ಆರೋಗ್ಯದ ಮೌಲ್ಯಮಾಪನ ಮಾಡಲಿದೆ ಎಂದು ಪೋಷಕರು ಹೇಳಿದ್ದಾರೆ.

ಈ ಸಮೀಕ್ಷಾ ವರದಿಯ ಲೇಖಕರ ಪ್ರಕಾರ ಪ್ರತಿಯೊಂದು ರಾಷ್ಟ್ರಗಳಲ್ಲೂ ಸ್ಥಳೀಯ ಮಕ್ಕಳ ದಂತ ಆರೋಗ್ಯವು ತುಂಬಾ ಕೆಟ್ಟದಾಗಿದೆ. ಆದರೆ ಸ್ಥಳೀಯವಲ್ಲದೆ ಇರುವ ಮಕ್ಕಳ ದಂತ ಆರೋಗ್ಯವು ಇದಕ್ಕಿಂತ ಚೆನ್ನಾಗಿದೆ. ಇದರ ಪ್ರಮಾಣವು ಆಸ್ಟ್ರೇಲಿಯಾದಲ್ಲಿ ತುಂಬಾ ಹೆಚ್ಚಾಗಿದೆ. ಒಸಡಿನ ಉರಿಯೂತ, ದಂತಕುಳಿಗೆ ಚಿಕಿತ್ಸೆ ನೀಡಿದೆ ಇರುವುದು ಮತ್ತು ದಂತ ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ.

ಹಲ್ಲುಗಳು ಇಲ್ಲದೆ ಇರುವುದು, ಹಲ್ಲುಗಳನ್ನು ತುಂಬಿಸಿರುವುದು ಮತ್ತು ಕೆಲವು ಮಕ್ಕಳ ದಂತ ಆರೋಗ್ಯವು ಕೆಟ್ಟದಾಗಿದೆ ಎಂದು ಪೋಷಕರು ವರದಿ ಮಾಡಿದ್ದಾರೆ. ಇದು ಬ್ರೆಜಿಲಿನ ಮಕ್ಕಳಲ್ಲಿ ತುಂಬಾ ಅಸಮಾನತೆಯನ್ನು ಉಂಟು ಮಾಡಿದೆ. ಸ್ಥಳೀಯ ಮತ್ತು ಸ್ಥಳೀಯವಲ್ಲದ ಮಕ್ಕಳಲ್ಲಿ ದಂತ ಅಸಮಾನತೆಯು ಬಾಲ್ಯದಿಂದಲೇ ಕಾಣಿಸುವುದು ಎಂದು ವರದಿಗಳು ಹೇಳಿವೆ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯು ಇಲ್ಲಿ ಬೇಕಾಗಿದೆ. ಅದರೊಂದಿಗೆ ಸಾಂಸ್ಕೃತಿಕ ಮತ್ತು ಬೇಗನೆ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕಾದ ಕೆಲಸ ನಡೆಯಬೇಕಾಗಿದೆ.

English summary

oral health inequalities among kids

A recent study highlights the oral health inequality between indigenous and non-indigenous children across the country. The study was published in the journal ‘Journal of Dental Research’ on June 22 at Vancouver Convention Centre West Building, Vancouver, BC, Canada. This study compared relative oral health inequalities between Indigenous and non-Indigenous children and adolescents ages 5 to 15 years old from Brazil, New Zealand, Australia and many more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more