For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನು 'ಅಮ್ಮ' (ದಡಾರ)ದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ

|

ಭಾರತದಲ್ಲಿ ದಡಾರ ಕಾಯಿಲೆಯನ್ನು 2023ರಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಅಭಿಯಾನ ಪ್ರಾರಂಭಿಸಿದೆ. ದಡಾರವನ್ನು ಮೀಸೆಲ್ಸ್‌ ಅಥವಾ ರುಬೆಲ್ಲಾ ಎಂದು ಕರೆಯಲಾಗುವುದು. ಮೀಸೆಲ್ಸ್ ಹಾಗೂ ರುಬೆಲ್ಲಾ ನಡುವೆ ಚಿಕ್ಕ ವ್ಯತ್ಯಸವೆಂದ ರುಬೆಲ್ಲಾ ಹೆಚ್ಚಿನ ಸಮಸ್ಯೆ ಉಂಟು ಮಾಡುವುದಿಲ್ಲ.

ಈ ಮೀಸೆಲ್ಸ್ ಅಥವಾ ರುಬೆಲ್ಲಾ ಎಂದರೇನು? ಇದು ಮಕ್ಕಳಿಗೆ ಹೆಚ್ಚಾಗಿ ಕಾಡುವುದೇಕೆ? ಲಸಿಕೆ ಪಡೆದರೆ ಈ ಕಾಯಿಲೆ ಸಂಪೂರ್ಣವಾಗಿ ತಡೆಗಟ್ಟಬಹುದೇ ಎಂಬೆಲ್ಲಾ ಮಾಹಿತಿ ತಿಳಿಯೋಣ ಬನ್ನಿ:

ದಡಾರ ಅಥವಾ ಮೀಸೆಲ್ಸ್

ದಡಾರ ಅಥವಾ ಮೀಸೆಲ್ಸ್

ಬೇಸಿಗೆ ಬಂತೆಂದರೆ ಮಕ್ಕಳಿಗೆ ಕಾಡುವ ಸಮಸ್ಯೆಗಳಲ್ಲಿ ಮೀಸೆಲ್ಸ್ ಅಥವಾ ದಡರಾ ಕೂಡ ಒಂದು ಇದನ್ನು ಸಾಮಾನ್ಯವಾಗಿ ಆಡುಭಾಷೆಯಲ್ಲ ಅಮ್ಮ ಬೀಳುವುದು ಎಂದು ಕರೆಯಲಾಗುವುದು. ಈ ಬಗೆಯ ಸೋಂಕು ಮಾರ್ಚ್‌ ಹಾಗೂ ಏಪ್ರಿಲ್‌ ತಿಂಗಳಿನಲ್ಲಿ ಹೆಚ್ಚಾಗಿ ಕಂಡು ಬರುವುದು, ದಡಾರ ಮಕ್ಕಳನ್ನು ಮಾತ್ರವಲ್ಲ ದೊಡ್ಡವರನ್ನೂ ಕಾಡುವುದು.

ರುಬೆಲ್ಲಾ

ಇದನ್ನು ಮೂರು ದಿನದ ದಡಾರ ಎಂದೂ ಕರೆಯುತ್ತಾರೆ. ಇದು ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ತೊಂದರೆಯನ್ನು ಉಂಟುಮಾಡುವುದಿಲ್ಲ. ಆದರೆ ವಯಸ್ಕರಲ್ಲಿ ತೊಂದರೆಗಳನ್ನು ಉಂಟುಮಾಡುವುದು. ರುಬೆಲ್ಲಾ ವೈರಾಣುವು ಮನುಷ್ಯನಲ್ಲಿ ಮಾತ್ರ ಜೀವಿಸಬಲ್ಲದು.

ರುಬೆಲ್ಲಾ ಲಸಿಕೆ ಕಂಡು ಹಿಡಿಯುವ ಮೊದಲು ರುಬೆಲ್ಲಾಗೆ ಅನೇಕ ಸಾವುಗಳಾಗಿವೆ . 1969ರಲ್ಲಿ ರುಬೆಲ್ಲಾ ಲಸಿಕೆಯನ್ನು ಕಂಡುಹಿಡಿಯಲಾಯಿತು. ಇದಾದ ಮೇಲೆ ರುಬೆಲ್ಲಾ ಕಾಯಿಲೆ ಕಡಿಮೆಯಾಗುತ್ತಾ ಹೋಯ್ತು, ಒಂದು ವೇಳೆ ಕಾಣಿಸಿದರೂ ಸಾವಿನ ಸಂಖ್ಯೆ ತಗ್ಗಿಸಿದೆ.

ಇದೇ ಮೊದಲ ಬಾರಿಗೆ MR(ಮೀಸೆಲ್ಸ್, ರುಬೆಲ್ಲಾ) ಲಸಿಕಾ ಅಭಿಯಾನ

ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ರುಬೆಲ್ಲಾ ಲಸಿಕೆಯನ್ನು ದಡಾರ ಲಸಿಕೆಯೊಂದಿಗೆ ಸೇರಿಸಿ MR ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ MR ಲಸಿಕೆ ನೀಡಲಾಗುವುದು.

ರುಬೆಲ್ಲಾ ಲಕ್ಷಣಗಳೇನು?

ರುಬೆಲ್ಲಾ ಲಕ್ಷಣಗಳೇನು?

ರುಬೆಲ್ಲಾ ವೈರಾಣುವಿನ ಸಂಪರ್ಕಕ್ಕೆ ಬಂದ 14ರಿಂದ 21 ದಿನಗಳಲ್ಲಿ ರೋಗದ ಲಕ್ಷಣಗಳು ಕಂಡು ಬರುವುದು.

ರುಬೆಲ್ಲಾ ರೋಗದ ಲಕ್ಷಣಗಳೆಂದರೆ

ಜ್ವರ

ಗಂಟಲು ಕೆರೆತ

ಕಣ್ಣುಗಳು ಕೆಂಪಾಗಿ ಕಾಣುವುದು

ತಲೆನೋವು

ಮೈ ಕೈ ನೋವು

ಹಸಿವು ಇಲ್ಲದಿರುವುದು

ದುಗ್ಧರಸಗ್ರಂಥಿಗಳಲ್ಲಿ ಊತ ಕಾಣಿಸಿಕೊಳ್ಳುವುದು.

ಮೈ ಮೇಲೆ ಸಣ್ಣ ಸಣ್ಣ ಕೆಂಪು ಬಣ್ಣದ ಗುಳ್ಳೆಗಳು ( ಮೊದಲು ಮುಖ ಹಾಗೂ ಕುತ್ತಿಗೆ ನಂತರ ಕೈ ಕಾಲುಗಳಲ್ಲಿ ಕಂಡು ಬರುವುದು)

* ಅದೇ ಸಮಯದಲ್ಲಿ ಬಾಯಿಯಲ್ಲಿಯೂ ಕೂಡ ಗುಳ್ಳೆಗಳು ಕಂಡು ಬರುವುದು.

ಸಾಮಾನ್ಯವಾಗಿ ಈ ರೀತಿಯ ಗುಳ್ಳೆಗಳು ಕಂಡು ಬಂದರೆ ಮೂರು ದಿನಗಳಲ್ಲಿ ಮಾಯವಾಗುತ್ತವೆ. ಶೇ. 25-40ರಷ್ಟು ಮಕ್ಕಳಲ್ಲಿ ಈ ರೀತಿಯ ಬೊಬ್ಬೆಗಳು ಕಂಡು ಬರುವುದಿಲ್ಲ. ಮೂರು ದಿನದಲ್ಲಿ ಗುಳ್ಳೆಗಳು ಒಣಗಲಾರಂಭಿಸುತ್ತದೆ.

ದಡಾರ

ದಡಾರ

* ಮೈ ಮೇಲೆಗಳು ಗುಳ್ಳೆಗಳು ಎದ್ದು ಮೂರು ದಿನವಾದರೂ ಕಡಿಮೆಯಾಗದಿದ್ದರೆ ಅದನ್ನು ಮೀಸೆಲ್ಸ್ ಅಥವಾ ದಡರಾ ಎಂದು ಕರೆಯಲಾಗುವುದು. ರುಬೆಲ್ಲಾ ಜ್ವರ ಫ್ಲೂ ಲಕ್ಷಣಗಳನ್ನು ಹೊಂದಿದೆ. ದಡರಾದಲ್ಲಿ ದದ್ದು ಅಥವಾ ಗುಳ್ಳೆಗಳು ದೇಹದ ಕೆಳಭಾಗಕ್ಕೆ ಬೆನ್ನು ಮತ್ತು ಇತರೆ ಅಂಗಗಳಿಗೆ ವ್ಯಾಪಿಸುತ್ತದೆ.

* ತಲೆಯ ಹಿಂದಿನ, ಕಿವಿಯ ಹಿಂದಿನ ಹಾಗು ಕುತ್ತಿಗೆಯ ಮುಂಭಾಗದಲ್ಲಿನ ದುಗ್ಧರಸಗ್ರಂಥಿಗಳು ಮುಖ್ಯವಾಗಿ ಊದುಕೊಂಡಿರುತ್ತವೆ. ಗರ್ಭಿಣಿಯರಿಗೆ ದಡಾರ ಬಂದರೆ ಭ್ರೂಣಕ್ಕೆ ತುಂಬಾನೇ ಅಪಾಯಕಾರಿ.

ಫೆಬ್ರುವರಿ 7ರಿಂದ 28ರ ವರೆಗೆ MR ಲಸಿಕೆ ಅಭಿಯಾನ

ನಿಯತವಾಗಿ ಲಸಿಕೆ ನೀಡಿದರೂ ಸಹ ರೋಗದ ಪ್ರಕರಣಗಳು ಹೆಚ್ಚಾಗುತ್ತಿದನ್ನು ಮನಗಂಡು ಭಾರತ 2023 ಫೆಬ್ರವರಿ 7ರಿಂದ 28ರ ವರೆಗೆ ದಡಾರ-ರುಬೆಲ್ಲಾ ಲಸಿಕಾ ಅಭಿಯಾನವನ್ನು ಕೈಗೊಂಡಿದೆ.

ಈ ಲಸಿಕೆಯ ಪ್ರಾಮುಖ್ಯತೆ

ಈ ಲಸಿಕೆಯ ಪ್ರಾಮುಖ್ಯತೆ

* ದಡಾರ-ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

* MR ಲಸಿಕೆಯನ್ನು ವಿಶೇಷ ಅಭಿಯಾನದ ಮೂಲಕ ರಾಜ್ಯದಲ್ಲಿ ಒಂಬತ್ತು ತಿಂಗಳಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ನೀಡಲಾಗುತ್ತದೆ.

* ಈ ಅಭಿಯಾನವು ರಾಜ್ಯದ ಎಲ್ಲಾ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.

* ಈ ಹಿಂದೆ ರುಬೆಲ್ಲಾ ಲಸಿಕೆ ಪಡೆದಿದ್ದರೂ ಅಭಿಯಾನದ ಸಂದರ್ಭದಲ್ಲಿ MR ಲಸಿಕೆಯನ್ನು ಪಡೆಯಬೇಕಯ.

* ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಮಕ್ಕಳಿಗೆ ಲಸಿಕೆ ಕೊಡಿಸಬಹುದು.

* ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದಡಾರ-ರುಬೆಲ್ಲಾ ಲಸಿಕೆಯನ್ನು ನೀಡಲಾಗುವುದು.

* ಅಡ್ಡಪರಿಣಾಮ

ಸಾಮಾನ್ಯವಾಗಿ ದಡಾರ-ರುಬೆಲ್ಲಾ ಲಸಿಕೆ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಯಾವುದೇ ಅಡ್ಡಿ ಪರಿಣಾಮ ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಇತರ ಪಾಲಕರಿಗೂ ಈ ಲಸಿಕೆ ಬಗ್ಗೆ ಮಾಹಿತಿ ನೀಡಿ.

ದಡಾರ ಯಾರಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ

* 6 ತಿಂಗಳಿನ ಮಕ್ಕಳಿಂದ 15 ವರ್ಷದವರಲ್ಲಿ ಕಂಡು ಬರುವುದು. ಅದರಲ್ಲಿ 10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದು.

* 40 ವರ್ಷ ಮೇಲ್ಪಟ್ಟವರಿಗೆ ಈ ಸೋಂಕು ಕಂಡು ಬರುವುದು ಕಡಿಮೆ

* 60 ವರ್ಷ ಮೇಲ್ಪಟ್ಟವರಿಗೆ ದಡರಾ ಸೋಂಕು ಉಂಟಾದರೆ ರೋಗ ಲಕ್ಷಣಗಳು ತೀವ್ರವಾಗಿರುತ್ತದೆ.

ಗರ್ಭಿಣಿಯರಿಗೆ ದಡಾರ ಬಂದರೆ ಭ್ರೂಣಕ್ಕೆ ಅಪಾಯ

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ರುಬೆಲ್ಲಾ ಬಂದರೆ, ಮಗುವಿಗೆ, ದೃಷ್ಟಿಹೀನತೆ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಗಂಭೀರವಾದ ಸಮಸ್ಯೆಗಳು ಎದುರಾಗಬಹುದು. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಬಂದರೆ ಅವಧಿಪೂರ್ವ ಹೆರಿಗೆಯಾಗಬಹದು.

ಕೊನೆಯದಾಗಿ: ದಡಾರ-ರುಬೆಲ್ಲಾ ಲಸಿಕೆ ಪಡೆಯುವ ಮೂಲಕ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು.

English summary

Measles Rubella Vaccination Drive Is Relaunching In India

MR Vaccination: Measles Rubella Vaccination Drive Is Relaunching In India, Why It is neccesary To Take this Vaccine, read on....
X
Desktop Bottom Promotion