For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಮಾಡುವ ಈ ತಪ್ಪಿನಿಂದ ಮುಂದೆ ಮಗುವಿಗೆ ಓದಲು, ಬರೆಯಲು ಕಷ್ಟವಾಗುವುದು!

|

ನೀವು ತಾಯಿಯಾಗುತ್ತಿದ್ದೀರಾ? ಹಾಗಾದರೆ ನೀವು ಸಾಕಷ್ಟು ವಿಟಮಿನ್‌ ಡಿ ಪಡೆದುಕೊಳ್ಳುತ್ತಿದ್ದೀರಾ? ವಿಟಮಿನ್‌ ಡಿ ಅಂದರೆ ಸಪ್ಲಿಮೆಂಟ್‌ ಬಗ್ಗೆ ಹೇಳುತ್ತಿಲ್ಲ, ಸೂರ್ಯನ ಬಿಸಿಲಿಗೆ ನಿಲ್ಲುತ್ತಿದ್ದೀರಾ? ಇಲ್ಲ ಅಂದರೆ ಹುಟ್ಟುವ ಮಕ್ಕಳಿಗೆ ಲರ್ನಿಂಗ್‌ ಡಿಸಾಬಿಲಿಟಿ (Learning Disability) ಸಮಸ್ಯೆ ಬರಬಹುದು ಹುಷಾರ್!

ಏನಿದು ಲರ್ನಿಂಗ್‌ ಡಿಸಾಬಿಲಿಟಿ (ಕಲಿಕೆಯಲ್ಲಿ ತೊಂದರೆ), ಸೂರ್ಯನ ಬಿಸಿಲಿಗೆ ಸ್ವಲ್ಪ ಹೊತ್ತು ನಿಲ್ಲದಿದ್ದರೆ ಎದುರಾಗಬಹುದಾದ ತೊಂದರೆಗಳೇನು ಎಂದು ನೋಡೋಣ:

Learning Disability In Children

ಲರ್ನಿಂಗ್ ಡಿಸಾಬಿಲಿಟಿ ಎಂದರೇನು?
ಲರ್ನಿಂಗ್‌ ಡಿಸಾಬಿಲಿಟಿ ಎಂಬುವುದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ, ಈ ಸಮಸ್ಯೆ ಇರುವ ಮಕ್ಕಳ ಮೆದುಳು ಬೇಗನೆ ಮಾಹಿತಿ ಕಳುಹಿಸುವುದು, ಸ್ವೀಕರಿಸುವುದು ಮಾಡುವುದಿಲ್ಲ. ನಾವು ಏನಾದರೂ ಮಾಡುವಾಗ ಆ ಅಂಗಕ್ಕೆ ನಮ್ಮ ಮೆದುಳು ಸಂದೇಶ ಕಳುಹಿಸುತ್ತದೆ, ಇಂಥ ಸಮಸ್ಯೆ ಇರುವ ಮಕ್ಕಳಿಗೆ ಈ ರೀತಿ ಸಂದೇಶ ಕಳುಹಿಸುವ ಮೆದುಳಿನ ಕಾರ್ಯಕ್ಕೆ ಅಡಚಣೆ ಉಂಟು ಮಾಡುವುದು.

ಲರ್ನಿಂಗ್‌ ಡಿಸಾಬಿಲಿಟಿ ಲಕ್ಷಣಗಳೇನು?
* ಬಲದಿಂದ ಎಡಕ್ಕೆ ಹೇಳಲು , ಓದಲು ಕಷ್ಟವಾಗುವುದು
* ಶೇಪ್‌ ಅಥವಾ ಪ್ಯಾಟ್ರನ್ ಗುರುತಿಸಲು ಕಷ್ಟವಾಗುವುದು
* ಮಕ್ಕಳಿಗೆ ಏನಾದರೂ ಕಲಿಸಿದರೆ ನೆನಪಿನಲ್ಲಿಡುವುದು ಕಷ್ಟವಾಗುವುದು
* ಬರೆಯಲು, ಓದಲು, ಪೇಪರ್‌ ಕತ್ತರಿಸಲು, ಡ್ರಾಯಿಂಗ್ ಮಾಡಲು ಕಷ್ಟವಾಗುವುದು.
* ಸರಿಯಾದ ಸಮಯ ಹೇಳಲು ಕೂಡ ಗೊತ್ತಾಗುವುದಿಲ್ಲ.

ಲರ್ನಿಂಗ್‌ ಡಿಸಾಬಿಲಿಟಿಯನ್ನು ಈ ರೀತಿ ವಿಂಗಡಿಸಲಾಗಿದೆ

ಲರ್ನಿಂಗ್‌ ಡಿಸಾಬಿಲಿಟಿಯನ್ನು ಈ ರೀತಿ ವಿಂಗಡಿಸಲಾಗಿದೆ

ಆಡಿಟರಿ ಪ್ರೊಸೆಸಿಂಗ್ ಡಿಸಾರ್ಡರ್

ಇದು ಕೇಳಿಸಿಕೊಳ್ಳುವ ಸಮಸ್ಯೆಯಾಗಿದೆ, ಮಗುವಿಗೆ ಕೇಳಿಸದೆ ಹೋದಾಗ ಮಗುವಿನ ಮೆದುಳಿಗೆ ಸರಿಯಾದ ಸಂದೇಶ ರವಾನೆ ಕಳುಹಿಸಲು ಸಾಧ್ಯವಾಗಲ್ಲ.

Dyslexia (ಡಿಸ್ಲೆಕ್ಸಿಯಾ): ಇದರಲ್ಲಿ ಮಕ್ಕಳಿಗೆ ಓದಲು ತೊಂದರೆಯಾಗುವುದು

Dyscalculia (ಡಿಸ್ಕಾಲ್ಕುಲಿಯಾ): ಇದರಲ್ಲಿ ಮಗುವಿಗೆ ಲೆಕ್ಕಗಳನ್ನು ಮಾಡಲು ತೊಂದರೆಯಾಗುವುದು

Dysgraphia(ಡಿಸ್ಗ್ರಾಫಿಯಾ): ಈ ಮಕ್ಕಳಿಗೆ ಬರೆಯಲು ತೊಂದರೆಯಾಗುವುದು.

ಈ ಸಮಸ್ಯೆ ಇರುವ ಮಕ್ಕಳಿಗೆ ಎಷ್ಟೇ ಕಷ್ಟಪಟ್ಟರೂ ಓದಲು ಕಷ್ಟವಾಗುವುದು, ಬರೆಯುವುದು, ಲೆಕ್ಕ ಮಾಡಲು ಕಷ್ಟವಾಗುವುದು. ಇಂಥ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ವಿಷಯದಲ್ಲೊ ಉತ್ತಮ ಸಾಧನೆ ಮಾಡಲು ಕಷ್ಟವಾಗುವುದು.

ಈ ಸಮಸ್ಯೆಗೆ ಚಿಕಿತ್ಸೆ ಇದೆಯೇ?

ಈ ಸಮಸ್ಯೆಗೆ ಚಿಕಿತ್ಸೆ ಇದೆಯೇ?

ಈ ರೀತಿಯ ಸಮಸ್ಯೆ ಇರುವ ಮಕ್ಕಳಿಗೆ ಅಧಿಕ ಗಮನ ನೀಡಬೇಕಾಗುತ್ತದೆ, ಮಕ್ಕಳಿಗೆ ಓದಲು ಕಷ್ಟವಾಗುತ್ತಿದೆ, ಎಷ್ಟೇ ಕಲಿಸಿದರೂ ಬರೆಯುತ್ತಿಲ್ಲ, ಓದಿದ ವಿಷಯ ನೆನಪಿನಲ್ಲಿಟ್ಟುಕೊಳ್ಳಲ್ಲ ಎಂದಾದರೆ ನೀವು ನನ್ನ ಮಗು ಏಕೆ ಓದುತ್ತಿಲ್ಲ ಎಂದು ತುಂಬಾ ಟೆನ್ಷನ್ ಮಾಡದೆ ಒಂದೊಳ್ಳೆಯ ತಜ್ಞರಿಗೆ ತೋರಿಸಿ ಅವರಿಂದ ಸಲಹೆ-ಸೂಚನೆ, ಚಿಕಿತ್ಸೆ ಪಡೆದರೆ ಒಳ್ಳೆಯದು.

ಪೋಷಕರು ಏನು ಮಾಡಬೇಕು?

* ತಮ್ಮ ಮಗು ಇತರ ಮಕ್ಕಳಂತೆ ಓದುತ್ತಿಲ್ಲ, ಬರೆಯುತ್ತಿಲ್ಲ, ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಅವರನ್ನು ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಕೊರಗಬೇಡಿ, ಬದಲಿಗೆ ಅವರಿಗೆ ಏನು ಸಮಸ್ಯೆ ಎಂದು ತಿಳಿದು ಒಳ್ಳೆಯ ತಜ್ಞರಿಂದ ಚಿಕಿತ್ಸೆ ಪ್ರಾರಂಭಿಸಿ.

ಮಗುವಿನಲ್ಲಿ ಲರ್ನಿಂಗ್‌ ಡಿಸಾಬಿಲಿಟಿ ಇದೆ ಎಂದು ತಿಳಿಯುವುದು ಹೇಗೆ?

ಮಗುವಿನಲ್ಲಿ ಲರ್ನಿಂಗ್‌ ಡಿಸಾಬಿಲಿಟಿ ಇದೆ ಎಂದು ತಿಳಿಯುವುದು ಹೇಗೆ?

ಪ್ರೀ ಸ್ಕೂಲ್‌ ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬರುತ್ತದೆ:

* ಮಾತು ನಿಧಾನವಾಗುವುದು. ಮಕ್ಕಳು 21/2 ವರ್ಷಕ್ಕೆ ಮಾತನಾಡಲು ಪ್ರಾರಂಭಿಸುತ್ತಾರೆ, ಅದಾಗುತ್ತಿಲ್ಲ ಎಂದಾದರೆ ಲರ್ನಿಂಗ್ ಡಿಸಾಬಿಲಿಟಿ ಸಮಸ್ಯೆ ಇರಬಹುದು.

* ಬಣ್ಣ, ಶೇಪ್, ಅಕ್ಷರ, ನಂಬರ್ ಗುರುತಿಸದೇ ಇರುವುದು.

* 5 ವರ್ಷದ ಮಕ್ಕಳಿಗೆ ಕತ್ತರಿ ಸಿಕ್ಕರೆ ಬಟ್ಟೆ ಅಥವಾ ಪೇಪರ್ ಮುಂತಾದ ವಸ್ತುಗಳನ್ನು ಕತ್ತರಿಸುವುದು ಗೊತ್ತಿರುತ್ತದೆ. ಕತ್ತರಿ ಹಿಡಿದು ಕತ್ತರಿಸಲು ಪ್ರಾರಂಭಿಸುತ್ತಾರೆ, ಆದರೆ ಇಂಥ ಮಕ್ಕಳಿಗೆ ಈ ಎಲ್ಲಾ ಕಾರ್ಯ ಮಾಡಲು ಕಷ್ಟವಾಗುವುದು.

* ರೈಮ್ಸ್ ಹಾಡಲ್ಲ

* ಪದಗಳ ಬಳಕೆಗೆ, ವಾಕ್ಯ ಮಾಡಲು ಕಷ್ಟಪಡುತ್ತಾತೆ.

ಸ್ಕೂಲ್ ಹೋಗುವ ಮಕ್ಕಳಾದರೆ

*ಮನೆ ಮತ್ತು ಶಾಲೆಯಲ್ಲಿ ಅವರ ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳುವುದಿಲ್ಲ

* ಏನಾದರೂ ಹೇಳಿದರೆ ಪಾಲಿಸಲು ಕಷ್ಟಪಡುತ್ತಾರೆ

* ಕಲಿತ ವಿಷಯಗಳು ನೆನಪಿನಲ್ಲಿ ಉಳಿಯಲ್ಲ

* ಓದಲು, ಬರೆಯಲು, ಉಚ್ಛಾರಣೆ ಮಾಡಲು ಕಷ್ಟವಾಗುವುದು

* ಕೈಬರಹ ಆಕರ್ಷಕವಾಗಿ ಇರುವುದಿಲ್ಲ

* ಶಾಲೆಯಲ್ಲಿ ನೀಡಿದ ಹೋಂವರ್ಕ್ ಮುಗಿಸಲು ಕಷ್ಟಪಡುತ್ತಾರೆ

ಲರ್ನಿಂಗ್ ಡಿಸಾಬಿಲಿಟಿ ಗುಣಪಡಿಸಬಹುದೇ?

ಲರ್ನಿಂಗ್ ಡಿಸಾಬಿಲಿಟಿ ಗುಣಪಡಿಸಬಹುದೇ?

ನಿಮ್ಮ ಮಕ್ಕಳ ಟೀಚರ್ ಜೊತೆ ಮಾತನಾಡಿ, ನಂತರ ಸೂಕ್ತ ವೈದ್ಯರಿಗೆ ತೋರಿಸಿ ಅವರ ಸಲಹೆ-ಸೂಚನೆಗಳನ್ನು ಪಡೆಯಿರಿ. ಅವರು ನೀಡುವ ಸಲಹೆ-ಸೂಚನೆಗಳು ಮಕ್ಕಳಲ್ಲಿ ಈ ಬಗೆಯ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುವುದು.

* ಇಂಥ ಮಕ್ಕಳಿರುವ ಪೋಷಕರು ತುಂಬಾನೇ ತಾಳ್ಮೆಯಿಂದ ವರ್ತಿಸಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪೋಷಿಸಲು ಪ್ರಯತ್ನಿಸಬೇಕು.

* ಇಂಥ ಮಕ್ಕಳಿರುವ ಪೋಷಕರ ಸಂಪರ್ಕ ಮಾಡಿ ಅವರಿಂದ ಸಲಹೆ ಸೂಚನೆ ಪಡೆಯಿರಿ.

* ಮಕ್ಕಳ ಭವಿಷ್ಯ ರೂಪಿಸಲು ಯೋಚಿಸಬೇಕು, ಅವರಿಂದ ಏನು ಮಾಡಲು ಸಾಧ್ಯವೋ ಅದರತ್ತ ಗಮನ ಹರಿಸಿ, ಆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ.

ಒಂದು ವಿಷಯ ನೆನಪಿರಲಿ, ಈ ಬಗೆಯ ಸಮಸ್ಯೆ ಇರುವ ಮಕ್ಕಳಿಗೆ ಸರಿಯಾದ ಸಪೋರ್ಟ್ ಅಥವಾ ಬೆಂಬಲ ಸಿಕ್ಕರೆ ಆ ಮಕ್ಕಳೂ ಒಂದು ಅದ್ಭುತ ಭವಿಷ್ಯ ರೂಪಿಸುತ್ತಾರೆ. ಅದಕ್ಕಾಗಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ತುಂಬಾನೇ ಮುಖ್ಯವಾಗಿರುತ್ತೆ.

English summary

Learning Disability In Children: Causes, Signs & Treatment in Kannada

Learning Disability In Children: What are the causes, symptoms and treatment read on...
Story first published: Thursday, December 15, 2022, 17:08 [IST]
X
Desktop Bottom Promotion