For Quick Alerts
ALLOW NOTIFICATIONS  
For Daily Alerts

ಮಕ್ಕಳು ಪ್ರತ್ಯೇಕ ಮಲಗುವುದನ್ನು ಅಭ್ಯಾಸ ಮಾಡಿಸಲು ಈ ಟಿಪ್ಸ್ ಅನುಸರಿಸಿ

|

ನಿಮ್ಮ ಪುಟ್ಟ ಕಂದಮ್ಮನನ್ನು ನಿಮ್ಮ ಬಳಿಯೇ ಮಲಗಿಸಿಕೊಳ್ಳುವುದು ಸರ್ವೇಸಾಮಾನ್ಯ. ಮಗುವು ಎದೆಹಾಲು ಕುಡಿಯುವಾಗ ನಿಮ್ಮ ಜೊತೆಯೇ ಮಲಗಬೇಕಾಗುತ್ತದೆ. ಆದರೆ ದೊಡ್ಡವರಾಗುತ್ತಾ ಬಂದಂತೆ ನೀವೇನೋ ಅವರನ್ನು ಬೇರೆಯ ರೂಮಿಗೆ ಶಿಫ್ಟ್ ಮಾಡಬೇಕು ಎಂದು ಬಯಸಬಹುದು. ಆದರೆ ಮಕ್ಕಳು ಒಪ್ಪಬೇಕಲ್ಲ! ಅವರಿಗೆ ಅಮ್ಮನ ಅಪ್ಪುಗೆಯಲ್ಲಿ ಮಲಗುವುದು, ಅಪ್ಪನ ಬೆಚ್ಚನೆಯ ಶಾಖದಲ್ಲಿ ಮಲಗುವುದೆಂದರೇ ಅಭ್ಯಾಸವಾಗಿದ್ದರೆ ಅದನ್ನು ಬಿಡಿಸುವುದು ಹೇಗೆ?

ಮುದ್ದು ಕಂದಮ್ಮಗಳಿಗೆ ಅಪ್ಪ-ಅಮ್ಮನ ಜೊತೆ ಮಲಗುವುದೆಂದರೆ ಸುರಕ್ಷತೆಯ ಭಾವವಿರುತ್ತದೆ. ಆದರೆ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರಿಗೆ ಧೈರ್ಯ ತುಂಬಿ ಒಬ್ಬರೆ ಮಲಗುವಂತೆ ಪ್ರೋತ್ಸಾಹಿಸುವುದು ಹೇಗೆ? ನೀವು ಮಗುವನ್ನು ಸಪರೇಟ್ ಆಗಿ ಮಲಗಿಸಬೇಕು ಎಂದು ಬಯಸುತ್ತಿದ್ದರೂ ಕೂಡ ಅವರು ಅದಕ್ಕೆ ಒಪ್ಪಬೇಕಲ್ಲವೇ? ಕೆಲವು ಮಕ್ಕಳು ಅಪ್ಪಅಮ್ಮನ ಜೊತೆಗೆ ಮಲಗಬೇಕು ಎಂದು ಹಠ ಮಾಡುವುದಕ್ಕೆ ಪ್ರಾರಂಭಿಸಿ ಅಳುವುದೂ ಉಂಟು.

ಒಂದೇ ರಾತ್ರಿಯಲ್ಲಿ ನಿಮ್ಮ ಮಗುವನ್ನು ಬೇರೆ ಕಡೆ ಮಲಗಿಸುವ ಅಭ್ಯಾಸವನ್ನು ಪ್ರಾರಂಭಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಿಜ ಹೇಳಬೇಕು ಎಂದರೆ ನಿಮ್ಮ ಜೊತೆ ಮಲಗುತ್ತಿರುವ ಮಗುವನ್ನು ಬೇರೆಡೆಗೆ ಮಲಗಿಸುವ ಅಭ್ಯಾಸ ಪ್ರಾರಂಭಿಸುವುದು ಅಷ್ಟು ಸುಲಭವೂ ಅಲ್ಲ. ಹಾಗಂತ ಆಗದೇ ಇರುವ ಕೆಲಸವೂ ಅಲ್ಲ.

ಹಾಗಾದ್ರೆ ಮಗುವನ್ನು ಬೇರೆಡೆಗೆ ಮಲಗಿಸುವುದಕ್ಕಾಗಿ ಏನು ಮಾಡಬೇಕು? ಈ ಅಭ್ಯಾಸ ಪ್ರಾರಂಭಿಸುವುದಕ್ಕೆ ಸರಿಯಾದ ಸಮಯ ಯಾವುದು ಮತ್ತು ಈ ಬದಲಾವಣೆಯನ್ನು ಬಹಳ ಸುಲಭವಾಗಿ ಮಾಡುವುದು ಹೇಗೆ? ಇಲ್ಲಿದೆ ಟಿಪ್ಸ್

 ಒಟ್ಟಿಗೆ ಮಲಗುವುದನ್ನು ಯಾವಾಗ ನಿಲ್ಲಿಸಬಹುದು?

ಒಟ್ಟಿಗೆ ಮಲಗುವುದನ್ನು ಯಾವಾಗ ನಿಲ್ಲಿಸಬಹುದು?

ನಿಮ್ಮ ಮಗು ಒಂದು ನಿಗದಿತ ವಯಸ್ಸಿಗೆ ತಲುಪಿದ ಕೂಡಲೇ ಅವರು ನಿಮ್ಮ ಜೊತೆ ಮಲಗುವುದು ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿರುತ್ತದೆಯೇ?

ತಜ್ಞರು ಅಭಿಪ್ರಾಯ ಪಡುವ ಪ್ರಕಾರ ನಿಮ್ಮ ಮಗು ಫೀಡಿಂಗ್ ಮಾಡುವಾಗ ಅಥವಾ 6 ತಿಂಗಳ ಅವಧಿಯವರೆಗೂ ಕೂಡ ತೊಟ್ಟಿಲಲ್ಲೋ ಅಥವಾ ಜೋಲಿಯಲ್ಲೋ ಮಲಗಿಸುವ ಅಭ್ಯಾಸವಿರುತ್ತದೆ. ಇದು ಮಕ್ಕಳಿಗೆ ಸುರಕ್ಷತೆಯ ಭಾವವನ್ನು ಒದಗಿಸುತ್ತದೆ ಮತ್ತು SIDS ನ ಅಪಾಯವನ್ನು ತಡೆಯುತ್ತದೆ. ಆದರೆ ಒಂದು ವರ್ಷದ ನಂತರ ನಿಮ್ಮ ಮಗು ಹೀಗೆ ಮಲಗಬೇಕು ಎಂಬ ಯಾವುದೇ ನಿಯಮವಿಲ್ಲ.

ಆದರೆ ಮಕ್ಕಳನ್ನು ಮಲಗಿಸಿಕೊಳ್ಳುವ ಇನ್ನೊಂದು ವಿಧಾನವೆಂದರೆ ತಾಯಿಯ ಅಥವಾ ತಂದೆಯ ಪಕ್ಕದಲ್ಲೇ ಹಾಸಿಗೆಯಲ್ಲಿ ಅಪ್ಪಿಕೊಂಡು ಮಲಗುವುದು. ಒಂದೇ ಹಾಸಿಗೆಯಲ್ಲಿ ಹೀಗೆ ಮಲಗುವ ವಿಧಾನಕ್ಕೆ ತಜ್ಞರು ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಇದು SIDS ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಅಮೇರಿಕನ್ ಅಕಾಡಮೆ ಆಫ್ ಪೀಡ್ರಿಯಾಟಿಕ್ಸ್ (AAP) ಮತ್ತು ಕನ್ಸ್ಯೂಮರ್ ಪ್ರೊಡಕ್ಟ್ ಸೇಫ್ಟಿ ಕಮಿಷನ್ (CPSC) ಇವೆರಡೂ ಕೂಡ ಒಂದೇ ಹಾಸಿಗೆಯಲ್ಲಿ ಮಕ್ಕಳನ್ನು ಮಲಗಿಸಿಕೊಳ್ಳುವ ವಿಧಾನವನ್ನು ವಿರೋಧಿಸುತ್ತಾರೆ.

ನಿಮ್ಮ ಮಗು ಟಾಡಲ್ವುಡ್ ಅಥವಾ ಮೊದಲ ಹುಟ್ಟುಹಬ್ಬದ ನಂತರ SIDS ನ ಅಪಾಯದಿಂದ ದೂರವಿರುತ್ತದೆ. ಹಾಗಾಗಿ ಒಂದೇ ಕೋಣೆಯನ್ನು ಹಂಚಿಕೊಂಡು ತಂದೆತಾಯಿಯ ಜೊತೆ ಮಲಗುವ ಅಭ್ಯಾಸದ ಅಗತ್ಯವಿರುವುದಿಲ್ಲ. ನೀವು ನಿಮ್ಮ ಮಗುವನ್ನು ಬೇರೆಯ ಕೋಣೆಯಲ್ಲಿ ಮಲಗಿಸುವುದಕ್ಕೆ ಖಂಡಿತ ಅವಕಾಶವಿರುತ್ತದೆ ಎನ್ನುತ್ತಾರೆ ತಜ್ಞರು. ಆದರೆ ಭಾರತೀಯರಲ್ಲಿ ಈ ಅಭ್ಯಾಸ ಕಡಿಮೆಯೇ ಎಂದರೆ ತಪ್ಪಿಲ್ಲ.

ಕೊನೆಯದಾಗಿ ಹೇಳುವುದೆಂದರೆ ಒಂದನೇ ವರ್ಷದ ಹುಟ್ಟುಹಬ್ಬದ ನಂತರ ನಿಮ್ಮ ಮಗುವನ್ನು ಯಾವಾಗ ಬೇಕಿದ್ದರೂ ಕೂಡ ಬೇರೆಯ ಕೋಣೆಗೆ ಶಿಫ್ಟ್ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ. ಆ ಮೂಲಕ ನಿಮ್ಮ ಅಂದರೆ ಗಂಡ-ಹೆಂಡತಿಗೆ ಬೇಕಾಗುವ ವಯಕ್ತಿಯ ಸಮಯವನ್ನು ಪಡೆಯುವುದಕ್ಕೆ ಖಂಡಿತ ಅವಕಾಶವಿರುತ್ತದೆ ಎಂಬುದು ಅವರ ಅಭಿಪ್ರಾಯ. ಪುನಃ ನಿಮ್ಮ ಸಹಜ ಜೀವನಕ್ಕೆ ಬರುವುದಕ್ಕೆ ಇದು ನೆರವಾಗುತ್ತದೆ ಎನ್ನುತ್ತಾರೆ. ಆದರೆ ಇದು ಅಷ್ಟು ಸುಲಭವಲ್ಲ ಎಂಬುದು ಭಾರತೀಯರ ಅಭಿಪ್ರಾಯವಾಗಿದೆ.

ನಾವಿಲ್ಲಿ ಕೆಲವು ನಾಜೂಕಿನ ಟ್ರಿಕ್ಸ್ ಗಳನ್ನು ನಿಮಗೆ ತಿಳಿಸಿಕೊಡುತ್ತಿದ್ದು, ಇವುಗಳ ಮೂಲಕ ನೀವು ನಿಮ್ಮ ಮಗುವು ನಿಮ್ಮ ಜೊತೆಗೆ ಮಲಗುವುದನ್ನು ಸುಲಭವಾಗಿ ತಪ್ಪಿಸುವುದಕ್ಕೆ ಸಾಧ್ಯವಾಗುತ್ತದೆ.

ನಿಮ್ಮ ಮುದ್ದು ಕಂದಮ್ಮನಿಗೆ ಉತ್ತಮ ಸ್ಟೇಸ್ ನಿರ್ಮಿಸಿ.

ನಿಮ್ಮ ಮುದ್ದು ಕಂದಮ್ಮನಿಗೆ ಉತ್ತಮ ಸ್ಟೇಸ್ ನಿರ್ಮಿಸಿ.

ಮಾನಸಿಕವಾಗಿ ನಿಮ್ಮ ಮಗು ಬೇರೆಯ ಕೋಣೆಯಲ್ಲಿ ಮಲಗುವುದಕ್ಕೆ ತಯಾರಿ ನಡೆಸುವುದು ಬಹಳ ಮುಖ್ಯ. 2 ಅಥವಾ ಎರಡುವರೆ ವರ್ಷದ ನಂತರ ನಿಮ್ಮ ಮಗುವಿಗೆ ನೀನು ದೊಡ್ಡವಾಗುತ್ತಿದ್ದೀಯ ಎಂಬ ಭಾವನೆ ಬರುವಂತೆ ಮಾಡಬೇಕು. ನಿನೊಬ್ಬಳೆ/ನೀನೊಬ್ಬನೆ ನಿನ್ನ ಅಂದದ ಕೋಣೆಯಲ್ಲಿ ಮಲಗಬಹುದು ಎಂಬುದನ್ನು ಮನದಟ್ಟು ಮಾಡಲು ಪ್ರಾರಂಭಿಸಬೇಕು.

ಅಪ್ಪ-ಅಮ್ಮ ಇಬ್ಬರಿಗೂ ಟೈಮ್ ಬೇಕು ಎಂದು ಹೇಳಲು ಪ್ರಾರಂಭಿಸಿ. ಮಕ್ಕಳ ಮನೋಶಕ್ತಿ ಮತ್ತು ಧೈರ್ಯವನ್ನು ಹೆಚ್ಚುಗೊಳಿಸಿ. ಹೊಸ ಕೋಣೆಯನ್ನು ಮಗುವು ಪ್ರೀತಿಸುವಂತೆ ಮಾಡಿ. ಮೊದಮೊದಲು ಮಗುವಿಗೆ ಕಷ್ಟವೆನಿಸಬಹುದು. ನೀನು ಬಾ ನನ್ನ ಜೊತೆ ಮಲಗು ಎಂದು ಹೇಳಬಹುದು. ಆದರೆ ಪದೇ ಪದೇ ಪ್ರಯತ್ನಿಸುವ ಮೂಲಕ 3ನೇ ವರ್ಷದ ನಂತರವಾದರೂ ಒಬ್ಬರೇ ಮಲಗುವ ಅಭ್ಯಾಸವನ್ನು ನಿಮ್ಮ ಮಗುವಿಗೆ ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗಬಹುದು.

ಒಂದೇ ರೀತಿಯ ಪದಬಳಕೆಯನ್ನು ಅಥವಾ ವಾಕ್ಯವನ್ನು ಮಕ್ಕಳಿಗೆ ಹೇಳುತ್ತಲೇ ಇದ್ದರೆ ಅವರು ಅದನ್ನು ಕೇಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಅದರಲ್ಲೂ 2 ವರ್ಷದ ಒಳಗಿನ ಮಕ್ಕಳಿಗೆ ಖಂಡಿತ ಅದು ಅರ್ಥವಾಗುವುದಿಲ್ಲ. ಆದರೂ ಅವರು ಹೇಳಿದ್ದನ್ನು ಕೇಳಿಸಿಕೊಳ್ಳುವ ಹಂತಕ್ಕೆ ತಲುಪುವುದಕ್ಕೆ ಪ್ರಾರಂಭಿಸಿರುತ್ತಾರೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. ಹೊಸ ಬೆಡ್ ರೂಂ ಬಗ್ಗೆ ಆಸಕ್ತಿ ಬರುವಂತೆ ಮಾಡಿ ಮತ್ತು ಮಲಗುವುದಕ್ಕೆ ಪ್ರೊತ್ಸಾಹಿಸಿ.

ಸರಿಯಾದ ಸಮಯ ಹುಡುಕಿ

ಸರಿಯಾದ ಸಮಯ ಹುಡುಕಿ

ಮಗುವನ್ನು ಬೇರೆಯಾಗಿ ಮಲಗಿಸುವುದಕ್ಕೆ ಸರಿಯಾದ ಸಮಯವನ್ನು ಆಯ್ಕೆ ಮಾಡಿಕೊಳ್ಳಿ. ಹೊಸ ಮಗು, ಹೊಸ ಶಾಲೆ ಅಥವಾ ಬೇರೆಯಾರೋ ಕೇರ್ ತೆಗೆದುಕೊಳ್ಳುವ ಹೊಸ ವ್ಯಕ್ತಿ, ಟಾಯ್ಲೆಟ್ ಗೆ ಹೋಗಿ ವಿಸರ್ಜನೆ ಪ್ರಾರಂಭಿಸುವುದು ಇತ್ಯಾದಿಗಳು ಸಹಜವಾಗಿ ಒಂದು ವಯಸ್ಸಿಗೆ ಪ್ರಾರಂಭವಾಗಿ ಬಿಡುತ್ತದೆ. ಆದರೆ ಈ ಎಲ್ಲಾ ಪ್ರಮುಖ ಕೆಲಸಗಳ ಮಧ್ಯೆ ಮಗುವನ್ನ ಬೇರೆಯ ಕಡೆ ಮಲಗಿಸುವ ಅಭ್ಯಾಸ ಪ್ರಾರಂಭಿಸುವುದಕ್ಕೆ ಪ್ರಯತ್ನಿಸಿದರೆ ಮಗು ಭಯಪಡುವ ಸಾಧ್ಯತೆ ಇದೆ ಅಥವಾ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

ಪ್ಲಾನ್ ನ್ನು ಆರಿಸಿ- ಮತ್ತು ಅದಕ್ಕೆ ಬದ್ಧರಾಗಿರಿ

ಪ್ಲಾನ್ ನ್ನು ಆರಿಸಿ- ಮತ್ತು ಅದಕ್ಕೆ ಬದ್ಧರಾಗಿರಿ

ಪ್ರತಿ ದಿನ ರಾತ್ರಿ ನಿಮ್ಮ ಜೊತೆಗೆ ಮಲಗುತ್ತಿದ್ದ ಮಗು ಒಂದೇ ರಾತ್ರಿಗೆ ಇನ್ನೊಂದು ಕೋಣೆಗೆ ಶಿಫ್ಟ್ ಆಗುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದು ಮಗುವಿಗೆ ಬಹಳ ಕಠಿಣವೆನಿಸಬಹುದು. ರಾತ್ರಿ ಪೂರ್ತಿ ಮಗು ಒಬ್ಬಂಟಿಯಾಗಿ ಮಲಗುವುದು ಮೊದಮೊದಲು ಬಹಳ ಕಷ್ಟವಾಗಬಹುದು.

ನೀವು ಈ ಕೆಲಸವನ್ನು ಮಾಡುವುದಕ್ಕೆ ಯಾವ ಪ್ಲಾನ್ ರೂಪಿಸುತ್ತಿದ್ದೀರೋ ಆ ಪ್ಲಾನ್ ನ್ನು ಮುಂದುವರಿಸಿ ಮತ್ತು ಅದಕ್ಕೆ ಬದ್ಧರಾಗಿರಿ.ಮಗು ಕೇಳುವುದೇ ಇಲ್ಲ ಎಂಬ ಕಾರಣಕ್ಕೋ ಅಥವಾ ಮಗುವಿನ ಮೇಲಿನ ಅತಿಯಾದ ಪ್ರೀತಿಯ ಕಾರಣಕ್ಕೋ ನಿಮ್ಮ ಬದ್ಧತೆಯನ್ನು ಮುರಿದರೆ ನೀವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಯಾವುದು ಸರಿಯಾದ ಅಥವಾ ಅತ್ಯುತ್ತಮವಾದ ಕ್ರಮ ಎಂಬುದು ನಿಮ್ಮ ಪ್ರಶ್ನೆಯೇ? ಯಾವ ವಿಧಾನ ಸರಿ, ಯಾವ ವಿಧಾನ ತಪ್ಪು ಎಂಬ ಬಗ್ಗೆ ಯಾವುದೇ ನಿರ್ಧಿಷ್ಟ ಮಾರ್ಗಸೂಚಿಗಳಿಲ್ಲ. ಆದರೆ ಮಕ್ಕಳ ತಜ್ಞರು ಅಭಿಪ್ರಾಯ ಪಡುವ ಕೆಲವು ಸೂಕ್ತ ಸಲಹೆಗಳಿವೆ. ಅವುಗಳಿಂದಾಗಿ ನೀವು ನಿಮ್ಮ ಮಗುವನ್ನು ಬೇರೆಯ ಕೋಣೆಗೆ ಶಿಫ್ಟ್ ಮಾಡುವುದಕ್ಕೆ ಸಹಾಯವಾಗುತ್ತದೆ.

ಮಗುವು ನಿಮ್ಮ ಪಕ್ಕದಲ್ಲಿಯೇ ಮಲಗುತ್ತಿದ್ದರೆ ಮಗುವಿಗಾಗಿ ಹೊಸದೊಂದು ತೊಟ್ಟಿಲನ್ನು ಖರೀದಿಸಿ ಅದರಲ್ಲಿ ಮಲಗಿಸುವ ಅಭ್ಯಾಸ ಬೆಳೆಸಿ. ಬೇರೆಯ ಕೋಣೆಯ ಬದಲಿಗೆ ತೊಟ್ಟಿಲಿನಲ್ಲಿ ಮಲಗಿಸಿ ಸಪರೇಟ್ ಆಗಿ ಮಲಗುವ ಅಭ್ಯಾಸವನ್ನು ರೂಢಿಸಿ. ತನ್ನದೇ ಆದ ವಿಭಿನ್ನ ಜಾಗದಲ್ಲಿ ನಿಮ್ಮ ಅಪ್ಪುಗೆಯಿಲ್ಲದೆ ಮಲಗುವ ಅಭ್ಯಾಸವನ್ನು ಮಗುವು ರೂಢಿಸಿಕೊಂಡ ನಂತರ ತೊಟ್ಟಿಲನ್ನು ಇನ್ನೊಂದು ಕೋಣೆಗೆ ಶಿಫ್ಟ್ ಮಾಡಿ. ಕೆಲವೇ ದಿನಗಳಲ್ಲಿ ಮಗುವು ಏಕಾಂಗಿಯಾಗಿ ಮಲಗುವ ಅಭ್ಯಾಸವನ್ನು ರೂಢಿಸಿಕೊಂಡು ಬಿಡುತ್ತದೆ.

 ಇತರ ಟಿಪ್ಸ್

ಇತರ ಟಿಪ್ಸ್

ತನ್ನದೇ ಬೆಡ್ ನಲ್ಲಿ ಅಥವಾ ತೊಟ್ಟಿಲಿನಲ್ಲಿ ಮಗುವು ಮಲಗುವುದಕ್ಕೆ ಅಭ್ಯಾಸ ಮಾಡಿಕೊಂಡ ನಂತರ ಆ ತೊಟ್ಟಿಲನ್ನು ಅಥವಾ ಬೆಡ್ ನ್ನು ಮಗುವಿನ ಸಪರೇಟ್ ಕೋಣೆಗೆ ಶಿಫ್ಟ್ ಮಾಡಿ ಮತ್ತು ಕೆಲವು ದಿನಗಳ ವರೆಗೆ ಆ ಕೋಣೆಯಲ್ಲಿ ಬೇಕಿದ್ದರೆ ನೀವೂ ಮಲಗಿ. ಒಂದು ಮಂಚವನ್ನು ಸೆಟ್ ಮಾಡಿ ಅಥವಾ ನೆಲದಲ್ಲಿ ಹಾಸಿಗೆಯನ್ನು ಸೆಟ್ ಮಾಡಿ. ರಾತ್ರಿಯ ವೇಳೆ ಮಗುವಿಗೆ ಸಹಾಯ ಮಾಡುವುದಕ್ಕಾಗಿ ನೀವು ಕೆಲವು ದಿನಗಳವರೆಗೆ ಮಗುವಿನ ಜೊತೆಗೆ ಇರಿ. ನೀವು ನಿಧಾನವಾಗಿ ಮಗುವಿನಿಂದ ರಾತ್ರಿಯ ವೇಳೆ ದೂರವಾಗುವುದಕ್ಕೆ ಪ್ರಯತ್ನಿಸಬಹುದು.

ಇನ್ನೊಂದು ಸಲಹೆ: ಮಗುವಿನ ಹಾಸಿಗೆಯ ಪಕ್ಕದಲ್ಲಿ ಒಂದು ಕುರ್ಚಿ ಹಾಕಿಕೊಂಡು ಕುಳಿತುಕೊಳ್ಳಿ. ಅವರಿಗೆ ನಿದ್ದೆ ಬಂದರ ನಂತರ ನೀವು ನಿಧಾನವಾಗಿ ನಿಮ್ಮ ಕೋಣೆಗೆ ಬನ್ನಿ. ದಿನದಿಂದ ದಿನಕ್ಕೆ ಖುರ್ಚಿಯು ಹಾಸಿಗೆಯಿಂದ ದೂರವಾಗುತ್ತಾ ಸಾಗಲಿ. ಒಂದು ದಿನ ಮಗು ನೀವಿಲ್ಲದೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡು ಬಿಡುತ್ತದೆ.

ಮಗುವಿಗೆ ಕಥೆ ಹೇಳಿ ಮಲಗಿಸುವ ಅಭ್ಯಾಸ ರೂಢಿಸಬಹುದು. ಕಥೆ ಕೇಳುತ್ತಾ ಮಗುವು ನಿದ್ರಿಸಿದ ನಂತರ ನೀವು ಅವರ ಕೋಣೆಯಿಂದ ನಿಮ್ಮ ಕೋಣೆಗೆ ಶಿಫ್ಟ್ ಆಗಬಹುದು.. ಹೀಗೆ ವಿಭಿನ್ನ ವಿಧಾನಗಳನ್ನು ಅನುಸರಿಸುವ ಮೂಲಕ ಮಗುವಿನ ಮನಸ್ಸಿನ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗದಂತೆ ಮಲಗುವ ಜಾಗವನ್ನು ಬದಲಾಯಿಸಲು ಪ್ರಯತ್ನಿಸಿ.

English summary

How To Stop Co-Sleeping With Your Baby

Are you thinking to make your kid sleep seperately, here are useful tips, have a look.
X
Desktop Bottom Promotion