For Quick Alerts
ALLOW NOTIFICATIONS  
For Daily Alerts

ಕೊರೊನಾ ನಿಜಕ್ಕೂ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆಯೇ?

|

ಕೊರೋನ ವೈರಸ್ ಸಂಕಷ್ಟ ಎದುರಾಗಿರುವ ಈ ಸಮಯದಲ್ಲಿ ಜನರಿಗೆ ಬಂದೊದಗಿರುವ ಸವಾಲುಗಳು ಒಂದೆರಡಲ್ಲ. ಆರ್ಥಿಕವಾಗಿ ಮುಗ್ಗರಿಸಿ ಬೀಳುತ್ತಿರುವುದು ಒಂದು ಕಡೆಯಾದರೆ ಮನೆಯಲ್ಲಿರುವ ಮಕ್ಕಳನ್ನು ನೋಡಿದರೆ ಅಯ್ಯೋ ಪಾಪ ಎನಿಸುವುದು ಇನ್ನೊಂದು ಕಡೆ. ಹೋದ ವರ್ಷ ಇಷ್ಟು ಹೊತ್ತಿಗಾಗಲೇ ಮಕ್ಕಳು ಸಂತೋಷವಾಗಿ ಖುಷಿಯಿಂದ ಕುಣಿದಾಡುತ್ತಾ ತಮ್ಮ ಇತರ ಗೆಳೆಯ - ಗೆಳತಿಯರ ಜೊತೆ ಶಾಲೆ ಕಡೆಗೆ ಮುಖ ಮಾಡುತ್ತಿದ್ದರು. ಆದರೆ ಈಗ ಶಾಲೆ ಶುರುವಾಗುವ ಸಮಯ ಹತ್ತಿರ ಬಂದರೂ ಸಹ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಇದರ ಜೊತೆಗೆ ಸ್ವಚ್ಛತೆಯ ವಿಚಾರವಾಗಿ ಪಾಠ ಮಾಡಬೇಕಾದ ಅನಿವಾರ್ಯತೆ ಕೂಡ ಅಷ್ಟೇ ಇದೆ. ಒಟ್ಟಿನಲ್ಲಿ ಎಲ್ಲವೂ ಈಗ ಪೋಷಕರ ತಲೆಯ ಮೇಲೆ ಬಂದಂತಿದೆ.

ಮಕ್ಕಳ ವಿಚಾರದಲ್ಲಿ ಪೋಷಕರಾದ ನೀವು ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇಲೆ ನಿಮ್ಮ ಮಕ್ಕಳ ಭವಿಷ್ಯ ನಿಂತಿರುತ್ತದೆ ಎಂಬುದು ನೆನಪಿರಲಿ.

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಗಮನವಿರಲಿ

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಗಮನವಿರಲಿ

ಮನೆಯಲ್ಲಿ ದೊಡ್ಡವರು ಎಂದಮೇಲೆ ಅವರಿಗೆ ಸಾಕಷ್ಟು ಜವಾಬ್ದಾರಿಗಳು ಕೆಲಸ ಕಾರ್ಯಗಳು ಅಡೆತಡೆಗಳು ಇದ್ದೇ ಇರುತ್ತವೆ. ಅದರಲ್ಲೂ ತುಂಬಿದ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಅಥವಾ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಇದ್ದೇ ಇರುತ್ತದೆ. ಈಗಂತೂ ಕೊರೊನ ವೈರಸ್ ತಂದೊಡ್ಡಿರುವ ಸಂಕಷ್ಟ ಒಂದೆರಡಲ್ಲ. ಎಷ್ಟೋ ಜನರಿಗೆ ತಮಗೆ ಇದ್ದ ಕೆಲಸವೂ ಹೋಗಿ ಆರ್ಥಿಕ ಹೊರೆ ಸಾಕಷ್ಟು ಹೆಚ್ಚಾಗಿದೆ. ಇದರಿಂದ ಮನಸ್ಸಿಗೆ ಘಾಸಿಯಾಗಿ ದಿನಕಳೆದಂತೆ ಸಾಕಷ್ಟು ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ತಾಂಡವವಾಡುತ್ತಿವೆ. ಆದರೆ ಒಂದು ವಿಷಯ ನೀವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು.

ಇದು ಕೇವಲ ನಿಮ್ಮೊಬ್ಬರ ಸಮಸ್ಯೆಯಲ್ಲ. ಎಲ್ಲಾ ದೇಶಗಳಲ್ಲಿ ಎಲ್ಲಾ ಜನರದ್ದು ಇದೇ ಕಥೆ. ಸರಿಯಾಗಿ ಲೆಕ್ಕ ಹಾಕಿ ನೋಡಿದರೆ ಆರ್ಥಿಕವಾಗಿ ನಾವೆಲ್ಲರೂ ಇಂದು ಹತ್ತಿಪ್ಪತ್ತು ವರ್ಷ ಹಿಂದಕ್ಕೆ ಹೋಗಿದ್ದೇವೆ ಎನಿಸುತ್ತದೆ. ದೊಡ್ಡವರಾದ ನಮ್ಮದು ಈ ಕಥೆಯಾದರೆ ಮಕ್ಕಳ ಕಥೆ ಕೇಳುವುದೇ ಬೇಡ. ಜೂನ್ ತಿಂಗಳು ಶುರುವಾಗುತ್ತಿದ್ದಂತೆ ತಮ್ಮ ಸಹಪಾಠಿಗಳ ಜೊತೆ ಸೇರಿ ಆಟಪಾಠಗಳಲ್ಲಿ ತಲ್ಲೀನರಾಗಿ ಖುಷಿಯಾಗಿ ಕಾಲಕಳೆಯುತ್ತಿದ್ದ ಮಕ್ಕಳು ಇಂದು ಸುಮ್ಮನೆ ಮನೆಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಗಳು ಕಾಲೇಜುಗಳು ಯಾವಾಗ ಓಪನ್ ಆಗುತ್ತದೆ ಯಾರಿಗೂ ತಿಳಿದಿಲ್ಲ. ತಿಳಿದುಕೊಳ್ಳಲು ಕೊರೊನ ಎಂಬ ಮಹಾಮಾರಿ ಬಿಟ್ಟೂ ಇಲ್ಲ. ಹಾಗಾಗಿ ಮಕ್ಕಳಿಗೆ ಮಾನಸಿಕವಾಗಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭವಾಗುತ್ತದೆ. ತಮ್ಮ ಗೆಳೆಯ ಅಥವಾ ಗೆಳತಿಯರು ಮನೆಯ ಬಳಿ ಬಂದರು ಸಹ ಹತ್ತಿರಕ್ಕೆ ಕರೆದು ಮಾತನಾಡುವ ಹಾಗಿಲ್ಲ. ಹಾಗಾಗಿ ಪೋಷಕರು ತಮ್ಮ ಕಷ್ಟ ಏನೇ ಇದ್ದರೂ ಮಕ್ಕಳ ಬಗೆಗೆ ಸ್ವಲ್ಪ ಜಾಗರೂಕತೆ ವಹಿಸಿ ತಮ್ಮ ಮಕ್ಕಳನ್ನು ಒಬ್ಬಂಟಿಯಾಗಿ ಬಿಡದೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು.

ಮಕ್ಕಳಿಗೆ ಶಿಸ್ತನ್ನು ನೀವೇ ಅಭ್ಯಾಸ ಮಾಡಿಸಬೇಕು

ಮಕ್ಕಳಿಗೆ ಶಿಸ್ತನ್ನು ನೀವೇ ಅಭ್ಯಾಸ ಮಾಡಿಸಬೇಕು

ಇಷ್ಟು ದಿನ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಶಿಸ್ತು ಎಂಬ ಪದವನ್ನು ಮತ್ತು ಅದರ ಆಚರಣೆಯನ್ನು ಶಾಲೆಯ ಶಿಕ್ಷಕರು ಕಲಿಸುತ್ತಿದ್ದರು. ಆದರೆ ಈ ವರ್ಷ ಶಾಲೆಯ ಮುಖವನ್ನೇ ನೋಡದ ಮಕ್ಕಳು ದೀರ್ಘವಾಗಿ ರಜೆ ತೆಗೆದುಕೊಂಡಿದ್ದಾರೆ. ಪಠ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಾಗದೆ ಸಂಪೂರ್ಣವಾಗಿ ಆಟ ಆಡುವುದರಲ್ಲಿ ಮೈಮರೆತಿದ್ದಾರೆ.

ಇತ್ತೀಚೆಗೆ ಸುಲಭವಾಗಿ ಸಿಗುವ ಮೊಬೈಲ್ ಟಿವಿ ಗಳನ್ನೇ ತಮ್ಮ ಸಹಪಾಠಿಗಳು ಎಂದು ತಿಳಿದು ಅವುಗಳ ಜೊತೆ ತುಂಬಾ ಹೊತ್ತು ಕಾಲ ಕಳೆಯುತ್ತಿದ್ದಾರೆ. ಸಾಧಾರಣವಾಗಿ ಈ ವರ್ಷ ವಿದ್ಯಾಭ್ಯಾಸ ಕೈತಪ್ಪಿ ಹೋಗುವ ಸಂದರ್ಭ ಇರುವುದರಿಂದ ಮಕ್ಕಳಿಗೆ ಶಿಸ್ತು, ಸೌಜನ್ಯ, ವಿದ್ಯಾಭ್ಯಾಸ ಮಾಡುವ ವೇಳಾಪಟ್ಟಿ, ಆಹಾರ ಸೇವನೆಯ ಸಮಯ ಇತ್ಯಾದಿ ಎಲ್ಲವೂ ಬದಲಾಗಿ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಮಕ್ಕಳ ವಿಚಾರದಲ್ಲಿ ಅದೆಲ್ಲಾ ಒಳ್ಳೆಯದಲ್ಲ. ದಿನಕಳೆದಂತೆ ನಿಮ್ಮ ಮಕ್ಕಳು ಮೊಬೈಲ್ ಬಳಕೆ ಜಾಸ್ತಿಯಾದಂತೆ ಕೆಟ್ಟ ಚಟಗಳಿಗೆ ಬಲಿಯಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಆದ ಕಾರಣದಿಂದ ಪೋಷಕರಾಗಿ ನೀವು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ತುಂಬಾ ಇದೆ ಎಂದು ಹೇಳಬಹುದು.

ಮಕ್ಕಳ ಸ್ನೇಹಿತರ ಜೊತೆ ಸಂಪರ್ಕ ಸಾಧಿಸಲು ಬಿಡಿ

ಮಕ್ಕಳ ಸ್ನೇಹಿತರ ಜೊತೆ ಸಂಪರ್ಕ ಸಾಧಿಸಲು ಬಿಡಿ

ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಆರಾಮವಾಗಿ ತಮ್ಮ ಪಾಡಿಗೆ ತಾವು ಮನೆಯ ಹೊರಗಡೆ ಆಟವಾಡಿಕೊಂಡಿದ್ದ ಮಕ್ಕಳನ್ನು ತಂದು ಮನೆಯ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಹಾಗಾಗಿದೆ. ಮಕ್ಕಳಿಗೆ ಪೋಷಕರು ಎಷ್ಟು ಮುಖ್ಯವೋ ಅವರ ಗೆಳೆತನದ ಸಹಪಾಠಿಗಳು ಸಹ ಅಷ್ಟೇ ಮುಖ್ಯ. ಆದರೆ ಕೋರೋಣ ಎಂಬ ವಿಚಾರ ತಲೆ ಎತ್ತಿದ ಕ್ಷಣದಿಂದ ಎಲ್ಲರನ್ನೂ ದೂರ ದೂರ ಮಾಡಿಬಿಟ್ಟಿದೆ.

ಮಕ್ಕಳಿಗಂತೂ ಮಾನಸಿಕವಾಗಿ ಇದರಿಂದ ದೊಡ್ಡ ಆಘಾತವೇ ಎದುರಾಗಿದೆ ಎಂದು ಹೇಳಬಹುದು. ಕೆಲವು ಮಕ್ಕಳಿಗಂತೂ ತಮ್ಮ ಸ್ನೇಹಿತರನ್ನು ಬಿಟ್ಟಿರಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹಾಗಾಗಿ ಮಕ್ಕಳಿಗೆ ಒಂದು ದಿನದಲ್ಲಿ ಸ್ವಲ್ಪ ಹೊತ್ತು ಇತರ ಮಕ್ಕಳಿಗೆ ಫೋನ್ ಮಾಡಿ ಮಾತನಾಡಲು ಅಥವಾ ವಿಡಿಯೋ ಕಾಲ್ ಮಾಡಿ ಅವರ ಪಾಡಿಗೆ ಅವರು ಹರಟೆ ಹೊಡೆಯಲು ಬಿಡಿ. ಶಾಲೆಯ ದಿನಗಳಲ್ಲಿ ನಿಮ್ಮ ಮಗು ಇತರ ಮಕ್ಕಳ ಜೊತೆ ಯಾವ ಸಮಯದಲ್ಲಿ ಬೆರೆತು ಸಂತೋಷವಾಗಿ ಕಾಲ ಕಳೆಯುತ್ತಿತ್ತು ಈಗಲೂ ಅದೇ ಸಮಯಕ್ಕೆ ಮಾತನಾಡಲು ಅನುವು ಮಾಡಿಕೊಡಿ.

ಒಳ್ಳೆ ಹವ್ಯಾಸ ಮತ್ತು ಚಟುವಟಿಕೆಗಳನ್ನು ರೂಡಿ ಮಾಡಿಸಿ

ಒಳ್ಳೆ ಹವ್ಯಾಸ ಮತ್ತು ಚಟುವಟಿಕೆಗಳನ್ನು ರೂಡಿ ಮಾಡಿಸಿ

ನಿಮ್ಮ ಮನೆಯಲ್ಲಿರುವ ನಿಮ್ಮ ಮಗುವಿಗೆ ತನ್ನ ಬುದ್ಧಿಶಕ್ತಿ ಹೆಚ್ಚಿಸಿಕೊಳ್ಳಲು ಹಲವಾರು ಕ್ರಿಯಾತ್ಮಕ ಕೆಲಸ ಕಾರ್ಯಗಳನ್ನು ಅಥವಾ ಚಟುವಟಿಕೆಗಳನ್ನು ಸಾಧ್ಯವಾದರೆ ನೀವೇ ರೂಪಿಸಿ ನಿಮ್ಮ ಮಗುವಿಗೆ ಅನುಸರಿಸಲು ಹೇಳಿ. ಮಾನಸಿಕವಾಗಿ ಬಲಗೊಳ್ಳಲು ಕೆಲವು ಪಸಲ್ ಗಳನ್ನು ನಿರ್ವಹಿಸಲು ತಿಳಿಸಿ. ಇನ್ನು ನಿಮ್ಮ ಮಗುವಿಗೆ ಇಷ್ಟವಾಗುವ ಡ್ರಾಯಿಂಗ್, ಪೇಂಟಿಂಗ್, ಡ್ಯಾನ್ಸಿಂಗ್, ಕುಕಿಂಗ್ ಇತ್ಯಾದಿಗಳ ವಿಚಾರದಲ್ಲಿಲ್ಲೂ ಅವರ ಬುದ್ಧಿಶಕ್ತಿ ಹೆಚ್ಚಾಗಿಸಲು ಪೋಷಕರಾದ ನೀವು ಸಹಾಯ ಮಾಡಬಹುದು. ಮುಖ್ಯವಾಗಿ ಮಕ್ಕಳ ಜೊತೆ ಕಾಲಕಳೆಯಲು ನಿಮಗೆ ಇದೊಂದು ಸುಸಮಯ.

ಕೊನೆಮಾತು

ಕೊನೆಮಾತು

ಪೋಷಕರಿಗೆ ಒಂದು ಕಿವಿಮಾತು ಹೇಳುವುದೇನೆಂದರೆ, ನಿಮ್ಮ ಮಕ್ಕಳ ಜವಾಬ್ದಾರಿ ನಿಮ್ಮದು, ಸದಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಯೋಚಿಸುವ ನೀವು ಮನೆಯಲ್ಲಿರುವ ನಿಮ್ಮ ಮಕ್ಕಳ ಒಳಿತಿಗಾಗಿ, ಈ ಸಂದರ್ಭದಲ್ಲಿ ಅವರ ಜೊತೆ ಕಾಲಕಳೆಯುವುದು ಮಾತ್ರವಲ್ಲದೆ ಅವರಿಗೆ ಶಾಲೆ ಇಲ್ಲ ಎಂಬ ಯಾವುದೇ ಭಾವನೆ ಕಾಡದಂತೆ ನೋಡಿಕೊಂಡು ಮಾನಸಿಕವಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ನಿಮ್ಮಿಂದಲೇ ಆಗಬೇಕು.

English summary

Closing of Schools is Impacting Your Child's Mental Health

Here we are discussing about closing of schools may impact your child's mental health. we may overlook the impact the pandemic (and its consequences) may have on the little ones and their fragile minds. Read more to know.
Story first published: Tuesday, July 14, 2020, 19:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X