ಮಕ್ಕಳಿಗೆ ಕಾಡುವ ಕೆಲವು ಆರೋಗ್ಯ ಸಮಸ್ಯೆಗೆ ದಾಲ್ಚಿನ್ನಿ ಅತ್ಯುತ್ತಮ ಪರಿಹಾರ

Posted By: Divya Pandith
Subscribe to Boldsky

ಮಕ್ಕಳ ಆರೋಗ್ಯ ಸಾಮಾನ್ಯವಾಗಿ ಆಗಾಗ ಹದಗೆಡುತ್ತಲೇ ಇರುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಆಗಷ್ಟೇ ಪ್ರಗತಿಯನ್ನು ಕಾಣುತ್ತಿರುತ್ತವೆ. ಹಾಗಾಗಿ ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ಕೆಲವು ಸೋಂಕುಗಳು ಅವರನ್ನು ಬಾಧಿಸುತ್ತವೆ. ಸೂಕ್ಷ್ಮವಾದ ದೇಹ ಸ್ಥಿತಿ ಹಾಗೂ ಈಗಷ್ಟೆ ಬೆಳವಣಿಗೆ ಕಾಣುತ್ತಿರುವ ಮಕ್ಕಳ ಆರೋಗ್ಯವು ಬಹಳ ನಾಜೂಕುತನವನ್ನು ಒಳಗೊಂಡಿರುತ್ತದೆ. ಅಂತಹ ದೇಹ ಸ್ಥಿತಿ ಇರುವವರಿಗೆ ಅಧಿಕ ಬಗೆಯ ಔಷಧಗಳನ್ನು ನೀಡುವುದು ಅಷ್ಟು ಸೂಕ್ತವಲ್ಲ. ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಆರೋಗ್ಯ ಸುಧಾರಣೆ ಮಾಡಬಹುದು.

Cinnamon

ಆಯುರ್ವೇದದಲ್ಲಿ ಅನೇಕ ಬಗೆಯ ನೈಸರ್ಗಿಕ ಉತ್ಪನ್ನಗಳು ಔಷಧೀಯ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಅವುಗಳಲ್ಲಿ ದಾಲ್ಚಿನ್ನಿಯು ಒಂದು. ಇದನ್ನು ಆಹಾರೋತ್ಪನ್ನಗಳ ತಯಾರಿಕೆಯಲ್ಲಿ, ಪರಿಮಳಯುಕ್ತ ಆಹಾರಗಳ ಬಳೆಕೆಗಾಗಿ ಹಾಗೂ ಮಸಾಲ ಪದಾರ್ಥಗಳಲ್ಲಿ ಬಳಸುತ್ತಾರೆ. ಅಂತೆಯೇ ಇದೊಂದು ಔಷಧೀಯಗುಣವನ್ನು ಒಳಗೊಂಡಿರುವ ನೈಸರ್ಗಿಕ ಉತ್ಪನ್ನವೂ ಹೌದು. ಇದರ ಬಳಸುವುದರ ಮೂಲಕ ಅನೇಕ ಔಷಧಗಳ ತಯಾರಿಕೆಯನ್ನು ಮಾಡಬಹದು.

ದಾಲ್ಚಿನ್ನಿ ಒಂದು ಬೆಚ್ಚಗಿನ ಸಿಹಿ ಮತ್ತು ಬಲವಾದ-ವಾಸನೆಯ ಮಸಾಲೆಯಾಗಿದೆ. ಇದು ಕೂಮರಿನ್ ಎಂಬ ನೈಸರ್ಗಿಕ ಪದಾರ್ಥವನ್ನು ಹೊಂದಿರುತ್ತದೆ. ಇದು ಬಹುಕಾಲದಿಂದ ಔಷಧಿಗಳಲ್ಲಿ ಬಳಸಲ್ಪಡುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳ ಒಂದು ಶಕ್ತಿಶಾಲಿಯಾಗಿದೆ. ದಾಲ್ಚಿನ್ನಿ ಪಾಲಿಫೀನಾಲ್ಗಳಲ್ಲಿ ಸಮೃದ್ಧವಾಗಿದೆ. ಅದರ ತೈಲವು ಉತ್ತಮ ಜೀವಿರೋಧಿ ಮತ್ತು ಶಿಲೀಂಧ್ರವಾಗಿದೆ. ದಾಲ್ಚಿನ್ನಿ ವ್ಯಾಪಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ಆದರೆ ಸಾಮಾನ್ಯ ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುತ್ತದೆ. ಇಲ್ಲಿ ದಾಲ್ಚಿನ್ನಿ ವಿಭಿನ್ನ ಉಪಯೋಗಗಳು ಮತ್ತು ಕೆಲವು ಸೋಂಕುಗಳಿಗೆ ಚಿಕಿತ್ಸೆ ನೀಡಲು ಇದನ್ನು ಹೇಗೆ ಬಳಸಬಹುದು ಎನ್ನುವುದನ್ನು ತಿಳಿಯೋಣ ಬನ್ನಿ.

ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ

ದಾಲ್ಚಿನ್ನಿ ಜೀರ್ಣಕಾರಿ ರಸವನ್ನು ಸ್ರವಿಸಲು ಉತ್ತೇಜಿಸುತ್ತದೆ. ಇದರಿಂದ ಮಕ್ಕಳ ಜೀರ್ಣಕ್ರಿಯೆಯು ಸುಧಾರಣೆ ಕಾಣುತ್ತದೆ. ಇದು ರಕ್ತ ಪರಿಚಲನೆ ಮತ್ತು ಹೊಟ್ಟೆಯ ಶಕ್ತಿಯ ಸುಧಾರಣೆ ಮಾಡುತ್ತದೆ. ಇದನ್ನು ಬಳಸಿಕೊಂಡು ಔಷಧ ತಯಾರಿಸಬಹುದು.-ಊಟಕ್ಕೆ ಮುಂಚೆ ಒಂದು ಟೀ ಚಮಚ ಜೇನುತುಪ್ಪಕ್ಕೆ ಚಿಟಕಿ ಶುದ್ಧ ದಾಲ್ಚಿನ್ನಿ ಪುಡಿ ಮಿಶ್ರಮಾಡಿ, ತಿನ್ನಿಸಿ.

ಫಂಗಸ್ ಸೋಂಕು ನಿವಾರಣೆಗೆ

ಶಿಲೀಂಧ್ರ/ಫಂಗಸ್ ಸೋಂಕು ತಡೆಗಟ್ಟುವಲ್ಲಿ ದಾಲ್ಚಿನ್ನಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.

-ತೆಂಗಿನ ಎಣ್ಣೆ ಮತ್ತು ದಾಲ್ಚಿನ್ನಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ.

-ಮಿಶ್ರಣವನ್ನು ಪೀಡಿತ ಪ್ರದೇಶದಲ್ಲಿ ಅನ್ವಯಿಸಿ.

- ದಿನದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಹಚ್ಚಿದರೆ ಬಹುಬೇಗ ಗುಣವಾಗುವುದು.

kids

ಕಫ ಕರಗಿಸುವುದು

ಮಕ್ಕಳು ಸಾಮಾನ್ಯವಾಗಿ ಶೀತ, ನೆಗಡಿ ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಾರೆ. ದಾಲ್ಚಿನ್ನಿಯು ಇಂತಹ ಸಮಸ್ಯೆಗಳ ವಿರುದ್ಧ ಹಾಗೂ ಉಬ್ಬರಗಳಂತಹ ಸಸ್ಯೆಗಳನ್ನು ನಿವಾರಿಸುತ್ತದೆ. ದಾಲ್ಚಿನ್ನಿ ಬೆಚ್ಚಗಿನ ಮಸಾಲೆಯಾಗಿರುವುದರಿಂದ ಇದು ಕಫದಂತಹ ಕಣಗಳನ್ನು ಬಹುಬೇಗ ನಿವಾರಿಸುತ್ತದೆ.

-ನಿತ್ಯವೂ ಮಗು ಸೇವಿಸುವ ಹಾಲಿನಲ್ಲಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕೊಡಿ.

-ಬಹುಬೇಗ ಕಫದ ಸಮಸ್ಯೆ ನಿವಾರಣೆ ಕಾಣುವುದು.

ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಸಕ್ಕರೆ ಬದಲಿಗೆ ಬಳಸಿ

ದಾಲ್ಚಿನ್ನಿ ನೈಸರ್ಗಿಕವಾಗಿಯೇ ಸಿಹಿಯಾಗಿರುತ್ತದೆ. ಸಕ್ಕರೆ ಬದಲಿಗೆ ಇದನ್ನು ಬಳಸಬಹುದು. ಸಕ್ಕರೆಯಿಂದ ಅನೇಕ ಆರೋಗ್ಯ ಸಮಸ್ಯೆ ಉಂಟಾಗಬಹುದು. ಆದರೆ ದಾಲ್ಚಿನ್ನಿ ಅತ್ಯುತ್ತಮ ಆರೋಗ್ಯ ಸುಧಾರಕವಾಗಿರುತ್ತದೆ.

-ಯಾವೆಲ್ಲಾ ಆಹಾರ ಪದಾರ್ಥಗಳಿಗೆ ಸೇರಿಸಲು ಸಾಧ್ಯವಾಗುವುದೋ ಅಂತಹ ಆಹಾರ ಪದಾರ್ಥಗಳಿಗೆ ಸೇರಿಸಿ ನೀಡಬಹುದು. ಬಿಸಿಯಾದ ಚಾಕೋಲೇಟ್ಗೆ ಸೇರಿಸಿಕೊಟ್ಟೆ ಉತ್ತಮ ರುಚಿ ಮತ್ತು ಆರೋಗ್ಯವಾಗಿರುತ್ತದೆ. ಹಾಲಿಗೆ ಸೇರಿಸಿ ನೀಡಬಹುದು.

ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುತ್ತದೆ

ಫಾಸ್ಟ್ ಫುಡ್‌ಗಳ ಸೇವನೆಯಿಂದ ಇಂದು ಅನೇಕ ಮಕ್ಕಳು ತಮ್ಮ ರಕ್ತದಲ್ಲಿ ಸಕ್ಕರೆ ಮಟ್ಟದ ಅಸಮತೋಲನದಿಂದ ಬಳಲುತ್ತಾರೆ. ಅಂತಹ ಸಮಸ್ಯೆಗಳಿಗೆ ದಾಲ್ಚಿನ್ನಿ ಉತ್ತಮ ಪರಿಹಾರ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇರುವಂತೆ ಮಾಡುತ್ತದೆ.

-ನಿತ್ಯವೂ ಮಲಗುವ ಮುನ್ನ ಮಕ್ಕಳಿಗೆ ಬೆಚ್ಚಗಿನ ನೀರಿನೊಂದಿಗೆ ಒಂದು ಚಿಟಕಿ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕೊಡಿ.

Kid

ಮಕ್ಕಳ ರೋಗ ನಿರೋಧಕ ಹೆಚ್ಚಿಸಲು

ಪ್ರತಿದಿನ ಒಂದು ಚಮಚದಷ್ಟು ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿಯ ದ್ರಾವಣವನ್ನು ಚ್ಯವನ್ ಪ್ರಾಶ್ ನಂತೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ದೇಹ ರಕ್ಷಣೆ ಪಡೆಯಲು ಹೆಚ್ಚು ಸಮರ್ಥವಾಗುತ್ತದೆ. 

Cinnamon

ಶೀತ ಕೆಮ್ಮು ನೆಗಡಿಗೆ ರಾಮಬಾಣ

ಒಂದು ದೊಡ್ಡ ಚಮಚ ಉಗುರುಬೆಚ್ಚನೆಯ ಜೇನಿಗೆ ಕಾಲು ಚಿಕ್ಕಚಮಚ ದಾಲ್ಚಿನ್ನಿಪುಡಿ ಹಾಕಿ ಪ್ರತಿದಿನ ಮೂರು ಬಾರಿ ಕುಡಿಯುವುದರಿಂದ ಭಾರೀ ಶೀತವೂ ಕಡಿಮೆಯಾಗುತ್ತದೆ. ಮುಚ್ಚಿದ್ದ ಮೂಗಿನ ಹೊಳ್ಳೆಗಳು ತೆರೆದುಕೊಳ್ಳುತ್ತವೆ, ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ.

English summary

Uses Of Cinnamon As Medicine For Kids

Cinnamon is rich in polyphenols and its oil is a good antibacterial and antifungal. Cinnamon can be used for treating a wide range of diseases; but is most widely used for the treatment of common cough and cold.Here are different uses of cinnamon and how it can be used to treat certain infections.
Story first published: Thursday, January 25, 2018, 12:05 [IST]