ಹಾಸಿಗೆಯಲ್ಲೇ ಮೂತ್ರ ಮಾಡುವ ಈ ಮನೆಮದ್ದುಗಳನ್ನು ನೀಡಿ

Posted By: Lekhaka
Subscribe to Boldsky

ಹಾಸಿಗೆ ಒದ್ದೆ ಮಾಡುತ್ತಾನೆ/ತ್ತಾಳೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಸಣ್ಣ ಮಕ್ಕಳ ತಾಯಂದಿರು ಇಂತಹ ಮಾತು ಹೇಳುವರು. ಮಕ್ಕಳು ಹಾಸಿಗೆಯಲ್ಲೇ ಉಚ್ಚೆ ಒಯ್ಯುವುದೇ ಇದಕ್ಕೆ ಕಾರಣ. ನಿದ್ರಿಸುವ ವೇಳೆ ಮಕ್ಕಳು ತಮಗೆ ಅರಿವಿಲ್ಲದಂತೆ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತದೆ. ಸಣ್ಣ ಮಕ್ಕಳಿಗೆ ಇಂದಿನ ದಿನಗಳಲ್ಲಿ ಡೈಪರ್ ಹಾಕಿ ಮಲಗಿಸುವರು. ಏಳರ ಹರೆಯಕ್ಕಿಂತ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಯಾವುದೇ ತೊಂದರೆಯಿಲ್ಲ. ಆದರೆ ಅದಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ಇದ್ದರೆ ಗಂಭೀರವಾಗಿ ಚಿಂತಿಸಬೇಕು.

ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಗೆ ಫಲಪ್ರದ ಮನೆಮದ್ದು

ಮನೆಯಲ್ಲಾದರೆ ಬೆಳಗ್ಗೆ ಎದ್ದ ಬಳಿಕ ಒದ್ದೆ ಹೊದಿಕೆಯನ್ನು ತಾಯಿ ಒಗೆದು ಹಾಕಬಹುದು. ಆದರೆ ಹೊರಗಡೆ ಹೋದಾಗ ತುಂಬಾ ಸಮಸ್ಯೆ ಎದುರಿಸಬೇಕಾಗುವುದು. ನೀವು ಯಾವುದಾದರೂ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ರಾತ್ರಿ ಕಳೆಯಬೇಕಾಗಿ ಬಂದರೆ ಆಗ ಹಲವಾರು ಸಮಸ್ಯೆ ನಿಮಗೆ ಆಗುವುದು. ಸಾಮಾಜಿಕವಾಗಿಯೂ ಕೆಲವರು ನಿಮ್ಮನ್ನು ಹಾಗೂ ಮಗುವನ್ನು ಹೀಯಾಳಿಸಬಹುದು. ಇದರಿಂದ ಮುಜುಗರ ಅನುಭವಿಸಬೇಕಾಗುತ್ತದೆ. ಹಾಸಿಗೆ ಒದ್ದೆ ಮಾಡುವಂತ ಮಕ್ಕಳಿಗೆ ಕೆಲವೊಂದು ಸುಲಭ ಹಾಗೂ ಸರಳ ಮನೆಮದ್ದುಗಳು ಇಲ್ಲಿವೆ. ಇದನ್ನು ನೀವು ಬಳಸಿನೋಡಿ...

ಕಾರಣ

ಮಕ್ಕಳು ಹಾಸಿಗೆ ಒದ್ದೆ ಮಾಡಲು ಪ್ರಮುಖ ಕಾರಣವೆಂದರೆ ಮೂತ್ರಕೋಶ ಸಣ್ಣದಾಗಿರುವುದು. ಇತರ ಕಾರಣವೆಂದರೆ ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ಮೂತ್ರನಾಳದಲ್ಲಿ ಸೋಂಕು, ಮಧುಮೇಹ, ಮೂತ್ರಕೋಶ ನಿಯಂತ್ರಿಸಲು ಪಕ್ವತೆಯ ವಿಳಂಬ, ಅತಿಯಾದ

ಮೂತ್ರ ಉತ್ಪತ್ತಿ ಮತ್ತು ಹಾರ್ಮೋನು ಅಸಮತೋಲನ

ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಮಕ್ಕಳಲ್ಲಿ ಹಠಾತ್ ಆಗಿ ಮೂತ್ರ ಮಾಡುವ ಒತ್ತಡವಿರುವುದು. ಮಲಬದ್ಧತೆ, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ವೇಳೆ ನೋವು ಮತ್ತು ಜನನಾಂಗದ ಬಳಿ ಗಾಯಗಳಾಗಿರುವುದು...

ಆಕ್ರೋಟು ಮತ್ತು ದ್ರಾಕ್ಷಿ

ಆಕ್ರೋಟು ಮತ್ತು ದ್ರಾಕ್ಷಿ

ಆಕ್ರೋಟು ಮತ್ತು ದ್ರಾಕ್ಷಿ ಒಳ್ಳೆಯ ತಿಂಡಿ. ಮಕ್ಕಳು ಇದನ್ನು ಇಷ್ಟಪಟ್ಟರೆ ಖಂಡಿತವಾಗಿಯೂ ನೀಡಿ. ರಾತ್ರಿ ಮಲಗುವ ಮೊದಲು ಇದನ್ನು ಸೇವನೆ ಮಾಡಲು ಸೂಚಿಸಿ. ಇದನ್ನು ಒಟ್ಟಿಗೆ ಸೇವನೆ ಮಾಡಬೇಕು ಮತ್ತು ಒಂದೊಂದನ್ನು ಒಂದೊಂದು ಸಲ ಸೇವಿಸಬಾರದು. ಪರಿಣಾಮಕಾರಿ ಫಲಿತಾಂಶ ಸಿಗುವ ತನಕ ಮಕ್ಕಳಿಗೆ ಇದನ್ನು ನೀಡಿ.

ಜೇನುತುಪ್ಪ

ಜೇನುತುಪ್ಪ

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮಕ್ಕಳಿಗೆ ಇದು ತುಂಬಾ ಸರಳ ಮದ್ದು. ಜೇನುತುಪ್ಪ ಇಷ್ಟಪಡದೇ ಇರುವ ಮಕ್ಕಳು ತುಂಬಾ ಕಡಿಮೆ. ಇದು ನೈಸರ್ಗಿಕ ಸಿಹಿಯಾಗಿರುವ ಕಾರಣ ಯಾವುದೇ ರೀತಿಯಿಂದಲೂ ದೇಹಕ್ಕೆ ಹಾನಿಯಿಲ್ಲ ಮತ್ತು ಪ್ರತಿನಿತ್ಯ ಸೇವಿಸಬಹುದು. ಸ್ವಭಾವದಲ್ಲಿ ಜೇನುತುಪ್ಪವು ಮೊಶ್ಚಿರೈಸ್ ಮತ್ತು ನೀರಿನಾಂಶ ಹೀರಿಕೊಂಡು ಅದನ್ನು ಹಿಡಿದಿಟ್ಟುಕೊಳ್ಳುವುದು. ಮೂತ್ರಕೋಶವು ತುಂಬಿದ್ದರೂ ಮೂತ್ರವನ್ನು ಹಿಡಿದಿಡುವಲ್ಲಿ ಜೇನುತುಪ್ಪವು ಪ್ರಮುಖ ಪಾತ್ರ ವಹಿಸುವುದು. ಸಣ್ಣ ಮಕ್ಕಳಿಗೆ ಅರ್ಧ ಮತ್ತು ದೊಡ್ಡ ಮಕ್ಕಳಿಗೆ ಒಂದು ಚಮಚ ನೀಡಿ.

ಬೆಲ್ಲ

ಬೆಲ್ಲ

ದೇಹದ ಉಷ್ಣತೆಯ ಮಟ್ಟವು ಕಡಿಮೆಯಾದಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆಯಾಗುವ ಸಾಧ್ಯತೆಯಿರುವುದು. ಸುಮಾರು ಎರಡು ತಿಂಗಳ ಕಾಲ ಪ್ರತಿನಿತ್ಯ ಬೆಲ್ಲ ಸೇವಿಸಿದರೆ ಅದರಿಂದ ದೇಹದ ಉಷ್ಣತೆಯು ಹೆಚ್ಚುವುದು ಮತ್ತು ಹಾಸಿಗೆ ಒದ್ದೆ ಮಾಡುವ ಸಮಸ್ಯೆ ನಿವಾರಣೆಯಾಗುವುದು. ಬೆಲ್ಲವನ್ನು ಹಾಗೆ ಅಥವಾ ಹಾಲಿನೊಂದಿಗೆ ಸೇವಿಸಬಹುದು. ಒಂದು ಪ್ರಮಾಣದಲ್ಲಿ ಮಾತ್ರ ನೀಡಬೇಕು. ಅತಿಯಾದರೆ ಸಮಸ್ಯೆಯಾಗಬಹುದು.

ದಾಲ್ಷಿನ್ನಿ

ದಾಲ್ಷಿನ್ನಿ

ದಾಲ್ಚಿನ್ನಿಯು ಭಾರತೀಯ ಅಡುಗೆ ಮನೆಗಳಲ್ಲಿ ಕಂಡುಬರುವ ಅದ್ಭುತವಾಗಿರುವ ಗಿಡಮೂಲಿಕೆ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿರುವ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಹಾಸಿಗೆ ಒದ್ದೆ ಮಾಡುವ ಸಮಸ್ಯೆಗೂ ಇದು ಒಳ್ಳೆಯದು. ಬ್ಯಾಕ್ಟೀರಿಯಾ ಸೋಂಕು ಅಥವಾ ಮಧುಮೇಹದಿಂದಾಗಿ ಮಕ್ಕಳು ಹಾಸಿಗೆ ಒದ್ದೆ ಮಾಡುತ್ತಿದ್ದರೆ ಇದು ಅತೀ ಉತ್ತಮ. ಮಕ್ಕಳು ಇದನ್ನು ಇಷ್ಟಪಡದೇ ಇದ್ದರೆ ಹುಡಿ ಮಾಡಿ ಅದನ್ನು ಉಪಾಹಾರ, ಸ್ಮೂಥಿ ಮತ್ತು ಬೇರೆ ಆಹಾರಕ್ಕೆ ಬೆರೆಸಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ನೆಲ್ಲಿಕಾಯಿ ಇಂದಿನ ದಿನಗಳಲ್ಲಿ ಎಲ್ಲಾ ಕಾಲದಲ್ಲೂ ಲಭ್ಯವಿರುವುದು. ಆದರೆ ಬೆಟ್ಟದ ನೆಲ್ಲಿಕಾಯಿ ತುಂಬಾ ಒಳ್ಳೆಯದು. ಹಾಸಿಗೆ ಒದ್ದೆ ಮಾಡುವ ಮಕ್ಕಳಿಗೆ ಇದು ಅತ್ಯುತ್ತಮ ಆಯುರ್ವೇದ ಮದ್ದು. ಕಹಿ ಹಾಗೂ ಹುಳಿ ಮಿಶ್ರಿತವಾಗಿರುವ ನೆಲ್ಲಿಕಾಯಿಯನ್ನು ಹೆಚ್ಚಿನ ಮಕ್ಕಳು ಇಷ್ಟಪಡುವುದಿಲ್ಲ. ಆದರೆ ಇದನ್ನು ಮಕ್ಕಳಿಗೆ ನೀಡಲು ಬೇರೆ ವಿಧಾನವಿದೆ. ಇದರ ಬೀಜ ತೆಗೆದು ಅದನ್ನು ಜಜ್ಜಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಿಶಿನ ಹಾಕಿ ಕೊಡಿ. ನೆಲ್ಲಿಕಾಯಿ ತಿರುಳಿಗೆ ಕಪ್ಪುಉಪ್ಪು ಹಾಕಿ ಕೊಟ್ಟರೆ ಮಕ್ಕಳು ಇಷ್ಟಪಡಬಹುದು.

ಕ್ರ್ಯಾನ್ಬೆರಿ ಜ್ಯೂಸ್

ಕ್ರ್ಯಾನ್ಬೆರಿ ಜ್ಯೂಸ್

ಹಾಸಿಗೆ ಒದ್ದೆ ಮಾಡುವ ಸಮಸ್ಯೆಗೆ ಕ್ರ್ಯಾನ್ಬೆರಿ ಜ್ಯೂಸ್ ಉಪಯುಕ್ತ. ಮಕ್ಕಳಿಗೆ ಮಲಗುವುದಕ್ಕಿಂತ ಮೊದಲು ಒಂದು ಲೋಟ ಕ್ರ್ಯಾನ್ಬೆರಿ ಜ್ಯೂಸ್ ನೀಡಬೇಕು. ಆದರೆ ಪ್ಯಾಕ್ ಮಾಡಿರುವಂತಹ ಜ್ಯೂಸ್ ಅಲ್ಲ, ಬದಲಿಗೆ ತಾಜಾ ಜ್ಯೂಸ್ ನೀಡಿ. ಮೂತ್ರಕೋಶದ ಸೋಂಕಿನಿಂದಾಗಿ ಮಗು ಹಾಸಿಗೆ ಒದ್ದೆ ಮಾಡುತ್ತಿದೆ ಎಂದು ನಿಮಗನಿಸಿದರೆ ಆಗ ದಿನಕ್ಕೆ ಮೂರು ಸಲ ಅರ್ಧ ಕಪ್ ಜ್ಯೂಸ್ ನೀಡಿ.

ಜೀರಿಗೆ

ಜೀರಿಗೆ

ಮಕ್ಕಳು ಹಾಸಿಗೆ ಒದ್ದೆ ಮಾಡುವ ಸಮಸ್ಯೆಗೆ ಜೀರಿಗೆ ಕೂಡ ಒಳ್ಳೆಯ ಮನೆಮದ್ದು. ಬಿಸಿ ಹಾಲಿಗೆ ಒಂದು ಚಮಚ ಜೀರಿಗೆ ಹಾಕಿಕೊಂಡು ಕುಡಿಯಬೇಕು. ಇದಕ್ಕೆ ಜೇನುತುಪ್ಪ ಬೆರೆಸಿಕೊಂಡು ಕುಡಿಯಬಹುದು. ಪ್ರತಿನಿತ್ಯ ಮಲಗುವ ಮೊದಲು ಇದನ್ನು ಕುಡಿಯಬೇಕು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಮಕ್ಕಳು ಕೂಡ ಇದನ್ನು ಇಷ್ಟಪಡದೆ ಇರಲಾರರು. ಜೀರ್ಣಕ್ರಿಯೆಯ ಸಮಸ್ಯೆಯೊಂದಿಗೆ ಮಕ್ಕಳಲ್ಲಿ ಕಂಡುಬರುವಂತಹ ಹಾಸಿಗೆ ಒದ್ದೆ ಮಾಡುವ ತೊಂದರೆ ನಿವಾರಿಸಿಕೊಳ್ಳಬಹುದು. ಮಕ್ಕಳಿಗೆ ಪ್ರತಿನಿತ್ಯ 2-3 ಹಣ್ಣಾಗಿರುವ ಬಾಳೆಹಣ್ಣು ನೀಡಿ. ಇದು ಮೂತ್ರ ವಿಸರ್ಜಿಸಬೇಕೆಂಬ ಒತ್ತಡ ನಿವಾರಿಸುವುದು.

ಮೂತ್ರಕೋಶದ ವ್ಯಾಯಾಮ

ಮೂತ್ರಕೋಶದ ವ್ಯಾಯಾಮ

ಹಾಸಿಗೆ ಒದ್ದೆ ಮಾಡುವ ಸಮಸ್ಯೆ ಇರುವ ಮಕ್ಕಳಿಗೆ ಮೂತ್ರಕೋಶದ ವ್ಯಾಯಾಮವು ತುಂಬಾ ಪರಿಣಾಮಕಾರಿ. ಇದರಿಂದ ಮೂತ್ರಕೋಶದ ನಿಯಂತ್ರಣವಾಗುವುದು ಮತ್ತು ದೊಡ್ಡದಾಗುವುದು. ಮೂತ್ರ ವಿಸರ್ಜನೆ ಬಂದಾಗ ಅದನ್ನು 10-20 ನಿಮಿಷ ಕಾಲ ತಡೆಯುವುದು ಮೊದಲ ವ್ಯಾಯಾಮ. ಹೆಚ್ಚು ನೀರು ಸೇವನೆ ಮಾಡಿ ಮೂತ್ರಕೋಶ ಹಿಗ್ಗಿಸಬಹುದು. ಮೊಣಕಾಲುಗಳ ಮೇಲೆ ಸಣ್ಣ ಚೆಂಡನ್ನು ಹಿಡಿದಿಟ್ಟುಕೊಂಡು ಹಿಸುಕುವ ಮೂಲಕ ಮಾಡುವಂತಹ ಕೆಗೆಲ್ ವ್ಯಾಯಾಮವು ಸಹ ಶ್ರೋಣಿಯ ಸ್ನಾಯುಗಳನ್ನು ಬಲಪಡಿಸಲು ನೆರವಾಗುವುದು.

ಮಸಾಜ್

ಮಸಾಜ್

ಶ್ರೋಣಿ ಕುಹರದ ಸ್ನಾಯುಗಳು ಅನಿಯಂತ್ರಿತ ಬಾಗುವಿಕೆಯ ಪರಿಣಾಮವಾಗಿ ಮಕ್ಕಳು ಹಾಸಿಗೆ ಒದ್ದೆ ಮಾಡುತ್ತವೆ. ರಾತ್ರಿ ವೇಳೆ ಆಲಿವ್ ತೈಲದಿಂದ ಮಸಾಜ್ ಮಾಡಿದರೆ ಪರಿಣಾಮಕಾರಿಯಾಗಿ ಈ ಸಮಸ್ಯೆ ನಿವಾರಿಸಬಹುದು. ಸ್ವಲ್ಪ ಆಲಿವ್ ತೈಲ ತೆಗೆದುಕೊಂಡು ಅದನ್ನು ಅಂಗೈಗಳಿಗೆ ಉಜ್ಜಿಕೊಂಡು ಮಗುವಿನ ಹೊಟ್ಟೆಯ ಕೆಳಭಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಆಲಿವ್ ತೈಲವು ಮೂತ್ರ ನಾಳದ ಸ್ನಾಯುಗಳನ್ನು ಬಲಗೊಳಿಸುವುದು ಮತ್ತು ಮೂತ್ರಕೋಶದ ನಿಯಂತ್ರಣ ಸುಧಾರಿಸುವುದು.

English summary

Simple Home Remedies To Stop Bedwetting In Kids

Parents get to deal with so many health issues of their children during their lifetime and bedwetting is one among them. It is called 'Nocturnal enuresis' in the medical field. It is nothing but the passing of urine when in deep sleep, in the unconscious state. It is a common scenario among toddlers and kids. This need not be a matter of concern as long as the child is below 7 years of age. If the condition persists even after seven years, it must be addressed immediately.
Story first published: Friday, January 5, 2018, 13:49 [IST]