ಮಕ್ಕಳ ಮನಸ್ಸು ಹೂವಿನಂತೆ, ಪದೇ ಪದೇ ನೋವು ಮಾಡಬೇಡಿ

By: Jayasubramanya
Subscribe to Boldsky

ಸಣ್ಣ ಮಕ್ಕಳು ಅತಿ ಶೀಘ್ರದಲ್ಲಿಯೇ ಬೆಳವಣಿಗೆಯನ್ನು ಕಂಡುಕೊಳ್ಳುತ್ತಾರೆ. ನಾವು ನೋಡುತ್ತಿದ್ದಂತೆಯೇ ನಮ್ಮ ಕಂದಮ್ಮ ಬೇಗನೇ ಬೆಳೆದು ನಮ್ಮ ಎತ್ತರಕ್ಕೆ ಬೆಳೆದು ಬಿಡುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬ ಮಾತಿನಂತೆ ಮಕ್ಕಳು ಸಣ್ಣ ವಯಸ್ಸಿನಲ್ಲಿ ಹೇಗೆ ಬೆಳವಣಿಗೆಯನ್ನು ಕಂಡುಕೊಳ್ಳುತ್ತಾರೋ ಅಂತೆಯೇ ದೊಡ್ಡವರಾದಂತೆ ತಮ್ಮ ರೂಢಿಗಳನ್ನು ಸ್ವಭಾವಗಳನ್ನು ಬೆಳೆಸುತ್ತಾರೆ. ಹೆತ್ತವರೇ ಮಕ್ಕಳ ಪಾಲಿಗೆ ಮೊದಲ ರೋಲ್ ಮಾಡೆಲ್...

ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎಂದಾದಾಗ ಅವರೊಂದಿಗೆ ತಂದೆ ತಾಯಿ ಸ್ನೇಹಿತರಂತೆ ವರ್ತಿಸಬೇಕು. ಅವರನ್ನು ಹೆಚ್ಚು ದಂಡಿಸುವುದು ಇಲ್ಲವೇ ಹೆಚ್ಚು ಶಿಕ್ಷಿಸುವುದು ಮೊದಲಾದ ಕಾರ್ಯಗಳನ್ನು ಮಾಡಬಾರದು. ಅವರನ್ನು ಸ್ನೇಹಿತರಂತೆ ಕಂಡು ಅನುನಯಿಸುವ ಅಗತ್ಯವಿದೆ. ತಪ್ಪು ಮಾಡಿದಲ್ಲಿ ಪ್ರೀತಿಯಿಂದ ತಿದ್ದಿ ಅವರಿಗೆ ಅದನ್ನು ಮನದಟ್ಟು ಮಾಡಿಕೊಡಬೇಕು. ನಿಮಗೆ 15ರ ಹರೆಯಕ್ಕೆ ಕಾಲಿಡುತ್ತಿರುವ ಮಗ/ಮಗಳು ಇದ್ದರೆ....

ಈ ವಯಸ್ಸಿನಲ್ಲಿ ಮಕ್ಕಳ ಮನಸ್ಸು ಹೆಚ್ಚು ಮೃದುವಾಗಿರುತ್ತದೆ. ಬಟ್ಟೆಯಷ್ಟು ಶುಭ್ರ ಮತ್ತು ಮೆತ್ತಗಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಮಾತುಗಳು ಮುಳ್ಳಿನಂತೆ ಅವರನ್ನು ಇರಿಯುವ ಸಾಧ್ಯತೆ ಇದೆ. ಅವರ ಮನಸ್ಸನ್ನು ಘಾಸಿಗೊಳಿಸುವ ಸಂಭವ ಇರುತ್ತದೆ. ಕೆಲವೊಮ್ಮೆ ಖಿನ್ನತೆಗೂ ಒಳಗಾಗುತ್ತಾರೆ ಇಲ್ಲವೇ ಮನಸ್ಸಿಗೆ ಘಾಸಿಯನ್ನುಂಟು ಮಾಡಿಕೊಂಡು ಆತ್ಮಹತ್ಯೆಯಂತಹ ಕೆಟ್ಟ ಕೆಲಸಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಹಾದಿ ತಪ್ಪುತ್ತಿರುವ ಮಕ್ಕಳ ವರ್ತನೆಯ ಬಗ್ಗೆ ಎಚ್ಚರ....

 

ಆದ್ದರಿಂದ ಇಂದಿನ ಲೇಖನದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ನೀವು ಹೇಳಬಾರದಿರುವ ಅಂಶಗಳನ್ನು ತಿಳಿಸುತ್ತಿದ್ದೇವೆ.

"ನನ್ನ ಪಾಡಿಗೆ ಬಿಟ್ಟುಬಿಡಿ"

ನಿಮ್ಮ ಮಗುವಿನೊಂದಿಗೆ ನೀವು ಸಮಯ ಕಳೆಯುತ್ತಿಲ್ಲ ಎಂದಾದಾಗ ಮಗು ಪ್ರತಿಯೊಂದು ವಿಷಯಕ್ಕೂ ಕ್ರುದ್ಧಗೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮಿಂದ ಕಡೆಗಣಿಸಲ್ಪಟ್ಟೆ ಎಂಬ ಭಾವನೆ ಅವರಲ್ಲಿ ಚಿಗುರೊಡೆಯುತ್ತದೆ. ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ ಮಾತನ್ನು ಕೇಳದೇ ಇರುವ ಪರಿಸ್ಥಿತಿ ಬಂದೊದಗಬಹುದು.

ನೀನು ಭೂಮಿಗೆ ಭಾರ!

ನೀನು ಭೂಮಿಗೆ ಭಾರ!

ಮಕ್ಕಳು ಅಳುತ್ತಿರುವಾಗ ಅವರನ್ನು ಹಿಯಾಳಿಸುವುದು ಮೊದಲಾದ ಕಾರ್ಯಗಳನ್ನು ಎಂದಿಗೂ ಮಾಡದಿರಿ. ಬದಲಿಗೆ ಅವರ ಸಮಸ್ಯೆಗಳನ್ನು ಅರಿತುಕೊಂಡು ಅದನ್ನು ನಿವಾರಿಸುವಲ್ಲಿ ಅವರಿಗೆ ಸಹಾಯ ಮಾಡಿ.

ಅಳುತ್ತಿರುವುದೇ ನಿನಗೆ ಕೆಲಸ

ಅಳುತ್ತಿರುವುದೇ ನಿನಗೆ ಕೆಲಸ

ನಿಮ್ಮ ಮಗು ಅಳುತ್ತಿರುವಾಗ ಅದನ್ನು ಮೂದಲಿಸಲು ಹೋಗದಿರಿ. ಇದರಿಂದ ಅತ್ತು ಅತ್ತು ಮಾನಸಿಕ ಖಿನ್ನತೆಗೆ ಮಗು ಒಳಗಾಗುವ ಸಾಧ್ಯತೆ ಇರುತ್ತದೆ. ಬದಲಿಗೆ ಅವರೊಂದಿಗೆ ಸ್ನೇಹದೊಂದಿಗೆ ವರ್ತಿಸಿ.

ಸ್ನೇಹಿತರಂತೆ ಇರಿ

ಸ್ನೇಹಿತರಂತೆ ಇರಿ

ಮಗು ಹೆಚ್ಚು ಖಿನ್ನತೆ ಇಲ್ಲವೇ ಒಂಟಿತನವನ್ನು ಅನುಭವಿಸುತ್ತಿದೆ ಎಂದಾದಲ್ಲಿ ಅವರೊಂದಿಗೆ ಸ್ನೇಹದೊಂದಿಗೆ ವರ್ತಿಸಿ. ಬದಲಿಗೆ ಚುಚ್ಚು ಮಾತು, ಹಿಯಾಳಿಸುವುದು, ಮೂದಲಿಸುವುದು ಮೊದಲಾದ ಕೆಲಸಗಳನ್ನು ಮಾಡದಿರಿ.

ನಿನ್ನನ್ನು ಹೊಡೆಯುತ್ತೇನೆ

ನಿನ್ನನ್ನು ಹೊಡೆಯುತ್ತೇನೆ

ನಿಮ್ಮ ಮಗುವನ್ನು ಸದಾ ಕಾಲವೂ ಹೊಡೆಯುವುದರಿಂದ ಮಗುವು ಉತ್ತಮ ಪಾಠವನ್ನು ಕಲಿಯುತ್ತಾರೆ ಎಂಬುದು ನಿಮ್ಮ ತಪ್ಪು ಅಭಿಪ್ರಾಯವಾಗಿದೆ. ಹೊಡೆತದಿಂದಲೇ ಮಗುವಿಗೆ ಬುದ್ಧಿ ಕಲಿಸಬಹುದು ಎಂಬುದಾಗಿ ಎಂದಿಗೂ ಭಾವಿಸದಿರಿ.

ಲಿಂಗ ತಾರತಮ್ಯ

ಲಿಂಗ ತಾರತಮ್ಯ

ಹುಡುಗರು ಈ ರೀತಿ ಮಾಡಬಾರದು, ಹುಡುಗಿಯರು ಈ ರೀತಿ ಇರಬಾರದು ಎಂಬುದಾಗಿ ಅವರಿಗೆ ಉಪದೇಶವನ್ನು ಮಾಡಬೇಡಿ. ಹುಡುಗ, ಹುಡುಗಿ ಎಂಬ ಬೇದಭಾವವನ್ನು ಅವರ ನಡುವೆ ಎಂದಿಗೂ ಸೃಷ್ಟಿಸದಿರಿ. ಇಂದು ಎಷ್ಟೋ ಹುಡುಗಿಯರು ಪುರುಷರು ಸಾಧಿಸುವಂತಹ ಕಾರ್ಯಗಳನ್ನು ಕೂಡ ಸಾಧಿಸಿ ಹೆಗ್ಗಳಿಕೆಯನ್ನು ಗಳಿಸಿದ್ದಾರೆ. ಆದ್ದರಿಂದ ಪ್ರತಿ ಮೆಟ್ಟಿಲಿನಲ್ಲೂ ಅವರಿಗೆ ಬೆಂಬಲವನ್ನು ನೀಡಿ.

ನೀನು ತುಂಬಾ ದಪ್ಪ

ನೀನು ತುಂಬಾ ದಪ್ಪ

ನಿಮ್ಮ ಮಗುವಿನ ದೇಹದ ಕುರಿತಾಗಿ ಅವರನ್ನು ಹಿಯಾಳಿಸುವುದು ಉತ್ತಮವಾದ ಕೆಲಸವಲ್ಲ. ನಿಮ್ಮದೇ ಕಂದಮ್ಮನನ್ನು ನೀವು ಹಂಗಿಸುತ್ತೀರಿ ಎಂದಾದಲ್ಲಿ ಅವರು ನೈತಿಕವಾಗಿ ಕುಸಿಯುತ್ತಾರೆ. ಆದ್ದರಿಂದ ಪ್ರತಿ ವಿಧದಲ್ಲೂ ಅವರಿಗೆ ಬೆಂಬಲವನ್ನು ನೀಡಿ.

English summary

Things You Should Never Say To A Growing Child!

The ages between 7 and 18 years is the molding period for a child; and as a parent you should be very careful not to hurt the child's feelings deeply, as it may leave a negative impact on them forever! So, here are a few negative things that you should never say to a growing child, have a look.
Please Wait while comments are loading...
Subscribe Newsletter