For Quick Alerts
ALLOW NOTIFICATIONS  
For Daily Alerts

ನಿಮಗೆ 15ರ ಹರೆಯಕ್ಕೆ ಕಾಲಿಡುತ್ತಿರುವ ಮಗ/ಮಗಳು ಇದ್ದರೆ....

By Manjula Balaraj
|

ಮೇಲಿನ ಶೀರ್ಷಿಕಿಗೆ ಹೌದು ಎಂದಾದರೆ ಪೋಷಕರ ಪಾಲಿಗೆ ಮಕ್ಕಳನ್ನು ಬೆಳೆಸುವಲ್ಲಿ ನಾನಾ ತರಹದ ಸವಾಲುಗಳನ್ನು ಎದುರಿಸಬೇಕಾಗಬಹುದು. ಇದನ್ನು ಮಕ್ಕಳು ಮತ್ತು ಪೋಷಕರು ಇಬ್ಬರೂ ಎದುರಿಸಬೇಕಾಗುತ್ತದೆ. ಮಗುವಿಗೆ ಒಂದು ವರ್ಷ ಇರುವಾಗ ಸಣ್ಣ ಪುಟ್ಟ ವಿಷಯಗಳಿಗೂ ತರಬೇತಿ ಕೊಡಬೇಕಾಗುತ್ತದೆ.

ಮಗು 5 ವರ್ಷದ ಆಸುಪಾಸಿರುವಾಗ ತಂದೆ ತಾಯಿಯರು ಮಗುವಿಗೆ ಶಾಲೆಗೆ ಹೋಗುವ ಬಗ್ಗೆ ಮತ್ತು ಇನ್ನಿತರ ಆಟೋಟಗಳ ಬಗ್ಗೆ ತರಬೇತಿಯನ್ನು ಕೊಡಲು ಪ್ರಾರಂಭಿಸುತ್ತಾರೆ. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

ಹೀಗೆಯೇ ನಿಮ್ಮ ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿರುವಾಗ ಕೂಡ ಕೆಲವು ನಿರ್ದಿಷ್ಟ ಜೀವನ ಶೈಲಿಯನ್ನು ಅನುಸರಿಸುವ ಹಾಗೂ ಅದನ್ನು ಕಲಿಯುವ ಅವಶ್ಯಕತೆ ಇರುತ್ತದೆ. ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಸಮಾಜದಲ್ಲಿ ಬದುಕಲು ಹಾಗೂ ಮುಂದುವರಿಯುತ್ತಿರುವ ಯುಗದಲ್ಲಿ ತಮ್ಮ ಜೀವನವನ್ನು ಸಾಗಿಸಲು ಕೆಲವು ಸಹಾಯಕವಾಗುವ ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಒಬ್ಬನೇ ಮಗ/ಮಗಳಿದ್ದರೆ ಅವರ ಸ್ವಭಾವ ಹೀಗಿರುವುದೇ?

ಕೆಲವು ಸಂದರ್ಭಗಳಲ್ಲಿ ತಂದೆ ತಾಯಿಯರು ಕೇವಲ ತಮ್ಮ ಮಕ್ಕಳ ಜ್ನಾನ ಮತ್ತು ಓದುವಿಕೆಗೆಯ ಕಡೆಗ ಮಾತ್ರ ಗಮನ ಕೊಡುತ್ತಾರೆ ಆದರೆ ಅವರಿಗೆ ಮುಖ್ಯವಾದ ಜೀವನ ಶೈಲಿಯನ್ನು ಕಲಿಸಲು ಮರೆಯುತ್ತಾರೆ. ಇದಿಲ್ಲದೆ ಮಕ್ಕಳು ಸ್ವಾವಲಂಬಿ ಪ್ರೌಢರಾಗಲು ಸಾಧ್ಯವಿಲ್ಲ. ಈ ಕೆಳಗಿನ ಕೆಲವು ಜೀವನದ ಕೌಶಲ್ಯಗಳು 15ರ ಹರೆಯದಲ್ಲಿರುವ ಮಕ್ಕಳಿಗೆ ತುಂಬಾ ಉಪಯುಕ್ತವಾದುದು ಮತ್ತು ಅನುಕರಣೀಯವಾದುದು.

ಮನೆ ಕೆಲಸಗಳು

ಮನೆ ಕೆಲಸಗಳು

ನಿಮ್ಮ ಮನೆಗಳಲ್ಲಿ ಕೆಲಸದಾಳುಗಳು ಇದ್ದರೂ ಕೂಡ ಮಕ್ಕಳಿಗೆ ಕೆಲವು ಅಗತ್ಯವಾಗಿರುವ ಮನೆ ಕೆಲಸದ ಬಗ್ಗೆ ಕಲಿಸಿಕೊಡುವುದು ತಪ್ಪಲ್ಲ. ಇಸ್ತ್ರಿ ಮಾಡುವುದು, ಪಾತ್ರೆ ತೊಳೆಯುವುದು, ಮನೆಯನ್ನು ಸ್ವಚ್ಛಗೊಳಿಸುವುದು. ಮುಂತಾದ ಕೆಲಸಗಳನ್ನು ಕಲಿಸುವುದರಿಂದ ಮಕ್ಕಳು ದೊಡ್ಡವರಾದಾಗ ತಮ್ಮ ಜೀವನಕ್ಕೆ ಉಪಯೋಗವಾಗಬಹುದು.

ಬ್ಯಾಂಕ್ ವ್ಯವಹಾರಗಳ ಬಗ್ಗೆ ಜ್ಞಾನ

ಬ್ಯಾಂಕ್ ವ್ಯವಹಾರಗಳ ಬಗ್ಗೆ ಜ್ಞಾನ

ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಾಮಾನ್ಯ ಜ್ಞಾನ ಮಕ್ಕಳಿಗೆ ಕಲಿಸಿಕೊಡುವುದು ತುಂಬಾ ಅಗತ್ಯ. ಉಳಿತಾಯ ಯೋಜನೆ, ಚೆಕ್ ಗಳನ್ನು ಬ್ಯಾಂಕಿನಲ್ಲಿ ಹೇಗೆ ಠೇವಣಿ (ಡಿಪಾಸಿಟ್) ಮಾಡುವುದು ಮುಂತಾದುವುಗಳನ್ನು ಕಲಿಸಿಕೊಡುವುದರಿಂದ ಅವರಿಗೆ ಒಂದು ಉತ್ತಮವಾದ ಆಲೋಚನೆ ಬರುತ್ತದೆ ಮತ್ತು ಅವರಿಗೆ ಅವರದೇ ಆದ ಖಾತೆಗಳನ್ನು ಹೊಂದುವಾಗ ಉಪಯೋಗಕ್ಕೆ ಬರುತ್ತದೆ.

ಸ್ವಯಂ ರಕ್ಷಣೆ

ಸ್ವಯಂ ರಕ್ಷಣೆ

ಮಕ್ಕಳಲ್ಲಿ ಪೋಷಕರು ಸ್ವಯಂ ರಕ್ಷಣೆಯ ಬಗ್ಗೆ ಮತ್ತು ಅದರ ಉಪಯುಕ್ತತೆಯ ಬಗ್ಗೆ ಮಾತಾಡುವುದು ತುಂಬಾ ಅವಶ್ಯಕ. ಅದೂ ಕೆಲವು ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಕೆಲವು ಸಣ್ಣ ಪುಟ್ಟ ಸುಳಿವುಗಳನ್ನು ಕೊಡುವುದರಿಂದ ತಮ್ಮ ಸುತ್ತಮುತ್ತಲಿರುವ ಜನರ ಜೊತೆ ಸುರಕ್ಷಿತವಾಗಿರಬಹುದು.

ಸುರಕ್ಷಿತ ಸೆಕ್ಸ್

ಸುರಕ್ಷಿತ ಸೆಕ್ಸ್

ಅನೇಕ ಹದಿಹರೆಯದವರು ಈ ದಿನಗಳಲ್ಲಿ ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ. ಪೋಷಕರು ಅಸುರಕ್ಷಿತ ಸೆಕ್ಸ್ ನ ಬಗ್ಗೆ ತಮ್ಮ ಮಕ್ಕಳಿಗೆ ಜ್ಞಾನ ನೀಡುವುದು ತುಂಬಾ ಅವಶ್ಯಕ.

ಕೆಲವು ಅಡುಗೆಯ ಬಗ್ಗೆ ಸಾಮಾನ್ಯ ಜ್ಞಾನ

ಕೆಲವು ಅಡುಗೆಯ ಬಗ್ಗೆ ಸಾಮಾನ್ಯ ಜ್ಞಾನ

ಮಕ್ಕಳು ಹದಿ ಹರೆಯಕ್ಕೆ ಬರುತ್ತಿದ್ದಂತೆಯೇ ಅವರಿಗೆ ಅಡುಗೆಯ ಸಾಮಾನ್ಯ ಜ್ಞಾನ ಕಲಿಸಿ ಕೊಡುವುದು ತುಂಬಾ ಅವಶ್ಯಕ. ಇದರಿಂದ ಅವರು ದೊಡ್ಡವರಾದಾಗ ತುಂಬಾ ಸಹಾಯಕವಾಗುವುದು.

ಪ್ರಥಮ ಚಿಕೆತ್ಸೆ

ಪ್ರಥಮ ಚಿಕೆತ್ಸೆ

ಗಾಯ ಅಥವಾ ಉಳುಕಿನಂತಹ ಕೆಲವು ಸಂಧರ್ಭಗಳಲ್ಲಿ ಪ್ರಥಮ ಚಿಕಿತ್ಸಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿಕೊಡುವುದರಿಂದ ಇಂತಹ ಸಮಯದಲ್ಲಿ ದೊಡ್ಡವರು ಹತ್ತಿರದಲ್ಲಿರದಾಗ ತುಂಬಾ ಉಪಯೋಗಕ್ಕೆ ಬರುತ್ತದೆ.

English summary

7 Important Things To Teach Your Kid Before Age 15

Do you have a kid who is soon going to be stepping into his/her teenage years? If yes, then as parents you would surely know that there are many challenges when it comes to growing children, which have to be faced by both you and your kid. When your kid is over 1 year of age, you potty-train your kid, when your child is around 5 years old, you start to mentally prepare them for school and other extra-curricular activities.
X
Desktop Bottom Promotion