ಮಕ್ಕಳು ಮಳೆಗಾಲದ ಮೋಜನ್ನು ಅನುಭವಿಸಲು ಏಳು ಬಗೆಯ ಆಟಗಳು

By: jaya subramanya
Subscribe to Boldsky

ಮಕ್ಕಳ ಲೋಕವೆಂದರೆ ಅದೊಂದು ತರಹ ಸುಂದರ ಸ್ವರ್ಗವಿದ್ದಂತೆ. ನಾವು ಎಷ್ಟೇ ದೊಡ್ಡವರಾಗಿದ್ದರೂ ಸಣ್ಣ ಮಕ್ಕಳೊಂದಿಗೆ ಬೆರೆತಾಗ ನಮ್ಮೊಳಗಿರುವ ಪುಟ್ಟ ಕೂಸು ಹೊರಕ್ಕೆ ಬಂದುಬಿಡುತ್ತದೆ. ನಾವು ಅವರೊಂದಿಗೆ ಮಕ್ಕಳಾಗಿಬಿಡುತ್ತೇವೆ. ಆದರೆ ಇಂದಿನ ಮಕ್ಕಳು ಹೊರಾಂಗಣ ಆಟಕ್ಕಿಂತ ಕೈಯಲ್ಲಿರುವ ಮೊಬೈಲ್‌ಗಳನ್ನು ಹಿಡಿದುಕೊಂಡು ಅದರಲ್ಲಿರುವ ಆಟಗಳಲ್ಲೇ ಮಗ್ನರಾಗಿಬಿಡುತ್ತಾರೆ. ಇದಕ್ಕೆ ಕಾರಣ ಅವರೊಂದಿಗೆ ಆಟವಾಡಲು ಯಾರೂ ಜೊತೆಗಾರರು ಇಲ್ಲದೇ ಇರುವುದಾಗಿದೆ.

ಮನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಹೊರಗೆ ದುಡಿಯುವವರು ಎಂದಾದಲ್ಲಿ ಅವರುಗಳ ಕೆಲಸದ ಒತ್ತಡದಿಂದಾಗಿ ಮನೆಗೆ ಬಂದರೆ ಸಾಕು, ವಿಶ್ರಾಂತಿ ತೆಗೆದುಕೊಂಡರೆ ಸಾಕು ಎಂಬ ತೊಳಲಾಟ ಅವರಿಗಿರುತ್ತದೆ. ಟ್ರಾಫಿಕ್, ಕೆಲಸದ ಕಿರಿಕಿರಿಯಿಂದ ತಪ್ಪಿಸಿಕೊಂಡು ಮನೆಗೆ ಬಂದಾಗ ಮಕ್ಕಳು ಆಟಕ್ಕೆ ಬಾ ಎಂದು ಕರೆದಾಗ ಸಿಟ್ಟು ಸಹಜವಾಗಿಯೇ ಬಂದುಬಿಡುತ್ತದೆ. ಪಾಪ ಅವರಿಗೆ ನಿಮ್ಮ ಕಷ್ಟದ ಅರಿವು ಇರುವುದಿಲ್ಲ.

ಆದರೆ ಈ ರೀತಿ ಸಿಟ್ಟು ಮಾಡದೇ ಸ್ವಲ್ಪ ಹೊತ್ತು ಅವರೊಂದಿಗೆ ಆಡಿದರೆ ನಿಮ್ಮ ಮನಸ್ಸಿಗೂ ನೆಮ್ಮದಿ ಅವರಿಗೂ ಖುಷಿ ಇರುವುದು ಖಂಡಿತ.ಹೇಳಿ ಕೇಳಿ ಈಗ ಮಳೆಯ ಸಮಯ, ಮಳೆಗಾಲದಲ್ಲಿ ಹೊರಗೆ ಆಟವಾಡುವ ಮಜ ಬೇರೆಯೇ ಇರುತ್ತದೆ. ವಾರಾಂತ್ಯದಲ್ಲಿ ಆಟೋಟಗಳ ಮೂಲಕ ನಿಮ್ಮ ಮಕ್ಕಳೊಂದಿಗೆ ಸಮಯ ಕಳೆಯಿರಿ. ಇಂದಿನ ಲೇಖನದಲ್ಲಿ ಮಳೆಗಾಲದಲ್ಲಿ ಆಡಬಹುದಾದ ಆಟಗಳ ವಿವರಗಳನ್ನು ನಾವು ನೀಡುತ್ತಿದ್ದು ಅವುಗಳೇನು ಎಂಬುದನ್ನು ನೋಡೋಣ....

ರೈನ್ ಗೇಮ್ಸ್

ರೈನ್ ಗೇಮ್ಸ್

ಫುಟ್‌ಬಾಲ್, ಚೆಂಡಾಡ ಮೊದಲಾದ ಆಟಗಳನ್ನು ಮಳೆಗಾಲದಲ್ಲಿ ಆಡಬಹುದಾಗಿದೆ. ಮಳೆಗಾಲದ ವಿಶಿಷ್ಟ ಅನುಭೂತಿಯನ್ನು ಈ ಆಟಗಳು ನೀಡುತ್ತವೆ.

ಕೊಡೆಯ ಚಿತ್ರ

ಕೊಡೆಯ ಚಿತ್ರ

ನಿಮ್ಮ ಕಪ್ಪು ಬಣ್ಣರಹಿತ ಕೊಡೆಯನ್ನು ತಂದು ಅದರಲ್ಲಿ ಚಿತ್ತಾರವನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಿ. ಇದು ಅವರ ಮುಖದಲ್ಲಿ ನಗುವನ್ನು ಚಿಮ್ಮಿಸುವುದು ಖಂಡಿತ.

ಅಡುಗೆಯ ಸಮಯ

ಅಡುಗೆಯ ಸಮಯ

ಹೊರಗಡೆ ಧಾರಾಕಾರ ಮಳೆ ಸುರಿಯುತ್ತಿದೆ ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲ ಎಂದಾಗ ಅವರನ್ನು ಅಡುಗೆ ಮನೆಯ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡಿ. ಇದರೊಂದಿಗೆ ಅವರು ಅಲ್ಪ ಸ್ವಲ್ಪ ಅಡಿಗೆಯನ್ನು ಕಲಿತುಕೊಳ್ಳುತ್ತಾರೆ.

ಕ್ರಾಫ್ಟ್ ಸಮಯ

ಕ್ರಾಫ್ಟ್ ಸಮಯ

ನಿಮ್ಮ ಮಕ್ಕಳಿಗೆ ಮಳೆಗಾಲದಲ್ಲಿ ಆಟಿಕೆಗಳನ್ನು ಮಾಡುವುದು, ಕರಕುಶಲ ವಸ್ತುಗಳನ್ನು ರಚಿಸುವುದು ಮೊದಲಾದ ಕ್ರಾಫ್ಟ್‌ಗಳನ್ನು ತಿಳಿಸಿಕೊಡಬಹುದು.

ಮಳೆಯ ಅಳತೆ

ಮಳೆಯ ಅಳತೆ

ಪ್ರತೀ ದಿನ ಬಿದ್ದ ಮಳೆಯ ಪ್ರಮಾಣವನ್ನು ಅರಿತುಕೊಳ್ಳುವ ಆಟ ಕೂಡ ಇದ್ದು ನಿಮ್ಮ ಮಕ್ಕಳೊಂದಿಗೆ ಸೇರಿಕೊಂಡು ನೀವು ಇದನ್ನು ಆಡಬಹುದು. ಒಂದು ಖಾಲಿ ಬಾಟಲ್ ಅನ್ನು ತೆಗೆದುಕೊಂಡು ಅದಕ್ಕೆ ಮಾರ್ಕ್ ಮಾಡಿ. ಅದನ್ನು ಸುರಿಯುತ್ತಿರುವ ಮಳೆಯಲ್ಲಿರಿಸಿ ಮತ್ತು ಪ್ರತೀ ದಿನ ಇದನ್ನು ಅಳತೆ ಮಾಡಿ.

ದೀರ್ಘ ಪ್ರಯಾಣ

ದೀರ್ಘ ಪ್ರಯಾಣ

ಕಾರಿನ ಗಾಜಿನ ಕಿಟಕಿಗಳ ಮೂಲಕ ಮಳೆ ಸುರಿಯುವುದನ್ನು ನೋಡಲು ಮಕ್ಕಳು ಇಷ್ಟಪಡುತ್ತಾರೆ. ಅವರನ್ನು ಹೊರಕ್ಕೆ ಕರೆದುಕೊಂಡು ಹೋಗಿ.

ಜೋಕಾಲಿಯಾಟ

ಜೋಕಾಲಿಯಾಟ

ಮಳೆಯಲ್ಲಿ ಜೋಕಾಲಿಯಾಟದ ಅನುಭವವನ್ನು ಮಗುವಿಗೆ ನೀಡಿ. ನಿಮ್ಮ ಮನೆಯ ಉದ್ಯಾನವನದಲ್ಲಿ ಜೋಕಾಲಿಯನ್ನು ಸಿದ್ಧಪಡಿಸಿಕೊಂಡು ಮಕ್ಕಳನ್ನು ಅದರಲ್ಲಿ ಆಡುವಂತೆ ಹೇಳಿ.

English summary

Fun Things To Do With Your Kids This Monsoon!

If there is one season that makes children smile wide with glee, it is the monsoon season. The prospect of going out to play with their friends in the rain, splashing around in the puddles of water, making paper boats and watch them float away in the rain water, etc, can bring an immense joy to the children.
Story first published: Friday, July 28, 2017, 23:41 [IST]
Subscribe Newsletter