ಅಧ್ಯಯನ ವರದಿ: ಆಹಾರದ ಅಲರ್ಜಿಯಿಂದ ಮಕ್ಕಳಲ್ಲಿ ಆತಂಕ!

By: Hemanth
Subscribe to Boldsky

ಮಕ್ಕಳಿಗೆ ಯಾವುದೇ ಆಹಾರವನ್ನು ನೀಡಲು ತಂದೆ-ತಾಯಿ ನಿರಾಕರಿಸಿದರೂ ಮಕ್ಕಳು ಅದನ್ನು ಹಠ ಮಾಡಿಕೊಂಡು ಪಡೆದೇ ಪಡೆಯುತ್ತದೆ. ಕೆಲವೊಂದು ಆಹಾರಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಮಕ್ಕಳಿಗೆ ನೀಡದಿರಲು ಪೋಷಕರು ನಿರ್ಧರಿಸುತ್ತಾರೆ. ಆದರೆ ಇನ್ನು ಕೆಲವು ಆಹಾರಗಳು ಮಕ್ಕಳಿಗೆ ಅಲರ್ಜಿ ಉಂಟು ಮಾಡುತ್ತದೆ. ಇದು ತುಂಬಾ ಅಪಾಯಕಾರಿ.

ಆಹಾರದ ಅಲರ್ಜಿಯಿಂದ ಮಕ್ಕಳಲ್ಲಿ ಪ್ರಾಣಾಪಾಯವು ಉಂಟಾಗಬಹುದು. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಗು ತುಂಬಾ ಆತಂಕಕ್ಕೆ ಒಳಗಾಗುವಂತಹ ಸಮಸ್ಯೆಗೆ ಸಿಲುಕಿದ್ದರೆ ಆಹಾರದ ಅಲರ್ಜಿಯು ಇದಕ್ಕೆ ಕಾರಣವಾಗಿರಬಹುದು ಎಂದು ಅಧ್ಯಯನಗಳು ಹೇಳಿವೆ. 

Food Allergy in Kid

ಆಹಾರದ ಅಲರ್ಜಿಗೆ ಒಳಗಾಗುವಂತಹ ಮಕ್ಕಳು ಬಾಲ್ಯದಲ್ಲಿ ಆತಂಕಕ್ಕೆ ಒಳಗಾಗುವ ಸಾಧ್ಯತೆ ತುಂಬಾ ಹೆಚ್ಚಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಸಾಮಾಜಿಕ ಆತಂಕ ಮತ್ತು ಸಮಾಜದಲ್ಲಿ ತಿರಸ್ಕರಿಸಲ್ಪಡುವ ಹಾಗೂ ಅವಮಾನಕ್ಕೆ ಒಳಗಾಗುವ ಭೀತಿಯು ಆಹಾರ ಅಲರ್ಜಿಯಿಂದ ಉಂಟಾಗುವುದು ಎಂದು ಅಧ್ಯಯನಗಳು ತಿಳಿಸಿವೆ.

ಜೀವಕ್ಕೆ ಅಪಾಯ ಉಂಟು ಮಾಡುವಂತಹ ಆಹಾರದ ಅಲರ್ಜಿಯು ಆತಂಕವನ್ನು ಉತ್ತೇಜಿಸಬಹುದು ಮತ್ತು ಕೆಲವು ಮಕ್ಕಳಲ್ಲಿ ಇತರ ಮಕ್ಕಳಿಗಿಂತ ತಾವು ಭಿನ್ನವಾಗಿದ್ದೇವೆ ಎಂಬ ಸಾಮಾಜಿಕ ಆತಂಕವು ಬೆಳೆದು ಬಿಡಬಹುದು. ಆಹಾರ ಅಲರ್ಜಿಯನ್ನು ದೊಡ್ಡವರು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಮಕ್ಕಳ ಆತಂಕದ ಪರಿಸ್ಥಿತಿಯನ್ನು ಅವಲಂಬಿಸಿದೆ ಎಂದು ಅಮೆರಿಕಾದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದ ಲೇಖಕ ರೆನ್ನಿ ಗುಡ್ವಿನ್ ತಿಳಿಸಿದರು.

ಜರ್ನಲ್ ಆಫ್ ಪೆಡಿಯಾಟ್ರಿಕ್ಸ್‌ನಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ 4ರಿಂದ 12ನೇ ವಯಸ್ಸಿನ ಸುಮಾರು 80 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಇದರಲ್ಲಿ ಆಹಾರದ ಅಲರ್ಜಿ ಇರುವವರು ಮತ್ತು ಇಲ್ಲದೆ ಇರುವವರು ಕೂಡ ಇದ್ದರು. ಆಹಾರದ ಅಲರ್ಜಿಗೆ ಒಳಗಾಗಿರುವ ಶೇ.57ರಷ್ಟು ಮಕ್ಕಳಲ್ಲಿ ಭೀತಿಯ ಲಕ್ಷಣಗಳು ಕಾಣಿಸಿಕೊಂಡಿವೆ. ಆಹಾರದ ಅಲರ್ಜಿ ಇಲ್ಲದೆ ಇರುವಂತಹ ಶೇ.48ರಷ್ಟು ಮಕ್ಕಳಲ್ಲಿ ಇದು ಕಾಣಿಸಿಕೊಂಡಿದೆ.

Food Allergy in Kid

ಬಾಲ್ಯದಲ್ಲಿ ಕಾಣಿಸಿಕೊಳ್ಳುವಂತಹ ಖಿನ್ನತೆಯ ಲಕ್ಷಣ ಅಥವಾ ಮಕ್ಕಳ ಪೋಷಕರಲ್ಲಿರುವ ಆತಂಕ ಮತ್ತು ಖಿನ್ನತೆಗೆ ಆಹಾರದ ಅಲರ್ಜಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಹದಿಹರೆಯದವರು ಹಾಗೂ ವಯಸ್ಕರಲ್ಲಿ ಕಾಣಿಸಿಕೊಳ್ಳುವಂತಹ ಖಿನ್ನತೆ ಹಾಗೂ ಆಹಾರದ ಅಲರ್ಜಿಗೆ ಯಾವುದೇ ರೀತಿಯ ಸಂಬಂಧವಿದೆಯಾ ಎಂದು ತಿಳಿದುಕೊಳ್ಳಲು ಅಧ್ಯಯನವು ಬಯಸಿದೆ. ಯಾಕೆಂದರೆ ಆರಂಭದಲ್ಲಿ ಇರುವಂತಹ ಆತಂಕವು ಮುಂದಿನ ದಿನಗಳಲ್ಲಿ ಖಿನ್ನತೆಗೆ ತಿರುಗುವ ಸಾಧ್ಯತೆ ಇದೆ ಎಂದು ಅಧ್ಯಯನವು ಹೇಳಿದೆ.

English summary

Does Food Allergy Cause Anxiety In Children?

Is your kid suffering from an anxiety disorder? Beware, a food allergy might be the reason, a research has claimed. The findings showed that children with a food allergy had a significantly higher prevalence of childhood anxiety. Food allergy is particularly linked to elevated social anxiety and fear of social rejection and humiliation, the researchers said.
Subscribe Newsletter