For Quick Alerts
ALLOW NOTIFICATIONS  
For Daily Alerts

ಬೇಸಿಗೆ ರಜೆಯ ಆಟಗಳು-ಮಕ್ಕಳಿಗೆ ಮಜಾವೋ ಮಜಾ!

ಹಾಗೆಯೇ ಬೇಸಿಗೆ ಶಿಬಿರಗಳಿಗೆ ನಿಮ್ಮ ಕಂದನನ್ನು ಕಳುಹಿಸುವುದು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಮನೆಯಲ್ಲಿಯೇ ಅವರಿಗಾಗಿ ಕೆಲವೊಂದು ಆಟಗಳನ್ನು ಏರ್ಪಡಿಸಿ ಅವರುಗಳ ತುಂಟತನಕ್ಕೆ ಕಡಿವಾಣವನ್ನು ಹಾಕಬಹುದು.

By Jaya subramanya
|

ಬೇಸಿಗೆ ಕಾಲ ಬಂತೆಂದರೆ ಸಾಕು! ಒಂದು ಕಡೆ ಸಹಿಸಲು ಅಸಾಧ್ಯವಾದ ಬಿಸಿಲು, ಬೆವರು, ಸುಸ್ತು ಯಾಕಪ್ಪಾ ಈ ಬೇಸಿಗೆ ಬಂತು ಮಳೆಯಾದರೂ ಬರಬಾರದೇ ಎಂಬ ಗೋಳು ಇದ್ದಿದ್ದೇ. ಇದರ ಜೊತೆಗೆ ಮಕ್ಕಳಿಗೂ ರಜೆಯ ಕಾಲ ಆರಂಭವಾಗುತ್ತದೆ. ವರ್ಷವಿಡೀ ಓದಿ ಬರೆದು ದಣಿದ ದೇಹಕ್ಕೆ ಬೇಸಿಗೆಯ ರಜೆ ಎಂದರೆ ಮಜವೇ? ಅಮ್ಮಂದಿರನ್ನು ಕಾಡಿಸುವ ಎಳೆಯ ತುಂಟರು ಆಟದೊಂದಿಗೆ ಬೈಗುಳ ಹೊಡೆತಗಳನ್ನು ತಿನ್ನುತ್ತಾರೆ. ಇವರಿಗೆ ಯಾಕಾದರೂ ರಜಾ ನೀಡಿದರಪ್ಪಾ ಎಂಬ ಉದ್ಗಾರವನ್ನು ಎಲ್ಲಾ ತಾಯಂದಿರು ಮಾಡುತ್ತಾರೆ. ಮಕ್ಕಳು ಆಡಬಹುದಾದ 5 ಸಾಹಸಿ ಕ್ರೀಡೆಗಳು

ಅದಕ್ಕೆಂದೇ ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಸಕ್ರಿಯರಾಗಿ ಇರಿಸುವುದಕ್ಕೆ ಬೇಸಿಗೆ ಶಿಬಿರಗಳನ್ನು ನಡೆಸುವುದಿದೆ. ಆಟದೊಂದಿಗೆ ಶಿಕ್ಷಣ ಕೂಡ ಈ ಶಿಬಿರಗಳ ಮೂಲ ಅರ್ಥವಾಗಿದ್ದು ಎಳೆಯರು ಹೊಸ ಗೆಳೆಯರನ್ನು ಪರಿಚಯ ಮಾಡಿಕೊಂಡು ಆಟ ಪಾಠಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬೇಸಿಗೆ ಶಿಬಿರವನ್ನು ಸಜ್ಜುಗೊಳಿಸುವ ಮುನ್ನ, ಒಂದಿಷ್ಟು ಟಿಪ್ಸ್

ಹಾಗೆಯೇ ಬೇಸಿಗೆ ಶಿಬಿರಗಳಿಗೆ ನಿಮ್ಮ ಕಂದನನ್ನು ಕಳುಹಿಸುವುದು ನಿಮಗೆ ಇಷ್ಟವಿಲ್ಲ ಎಂದಾದಲ್ಲಿ ಮನೆಯಲ್ಲಿಯೇ ಅವರಿಗಾಗಿ ಕೆಲವೊಂದು ಆಟಗಳನ್ನು ಏರ್ಪಡಿಸಿ ಅವರುಗಳ ತುಂಟತನಕ್ಕೆ ಕಡಿವಾಣವನ್ನು ಹಾಕಬಹುದು. ಕೆಲವೊಂದು ಆಟಗಳ ಬಗ್ಗೆ ಇಂದಿನ ಲೇಖನದಲ್ಲಿ ನಾವು ಮಾಹಿತಿಯನ್ನು ನೀಡುತ್ತಿದ್ದು ಈ ಆಟಗಳನ್ನು ನೀವು ಸುಲಭವಾಗಿ ಮಕ್ಕಳೊಂದಿಗೆ ಆಡಬಹುದಾಗಿದೆ.....

ಪೋಂಡ್ ಔಟ್‌ದ ಪೋಂಡ್

ಪೋಂಡ್ ಔಟ್‌ದ ಪೋಂಡ್

ವೃತ್ತವನ್ನು ರಚಿಸಿ. ಇಲ್ಲಿ ಮಕ್ಕಳು ನಿಂತುಕೊಳ್ಳಲಿ. ಕೊಳದ ಒಳಗ್ಗೆ ಇಲ್ಲವೇ ಹೊರಕ್ಕೆ ಮಗುವು ಮಕ್ಕಳನ್ನು ಕರೆಯಲಿ. ಮಗುವು ಇನ್ ದ ಪೋಂಡ್ ಎಂದು ಹೇಳಿದೊಡನೆ ಎಲ್ಲರೂ ವೃತ್ತದ ಒಳಕ್ಕೆ ಜಿಗಿಯಬೇಕು. ಯಾರು ಜಿಗಿಯುವಲ್ಲಿ ವಿಫಲರಾಗುತ್ತಾರೋ ಅವರು ಆಟದಲ್ಲಿ ಔಟ್ ಆಗುತ್ತಾರೆ.

ರೆಡ್ ಲೈಟ್ ಗ್ರೀನ್ ಲೈಟ್

ರೆಡ್ ಲೈಟ್ ಗ್ರೀನ್ ಲೈಟ್

ಇದು ಮಕ್ಕಳನ್ನು ಆಡಿಸಬಹುದಾದ ಅಚ್ಚುಮೆಚ್ಚಿನ ಹೊರಾಂಗಣ ಆಟವಾಗಿದೆ. ಮಧ್ಯದಲ್ಲಿ ಮಕ್ಕಳು ನಿಂತುಕೊಳ್ಳಬೇಕು ಮತ್ತು "ರೆಡ್ ಲೈಟ್" ಇಲ್ಲವೇ "ಗ್ರೀನ್ ಲೈಟ್" ಎಂಬುದಾಗಿ ಕೂಗಬೇಕು. ಭಾಗವಹಿಸುವವರಲ್ಲಿ ಒಬ್ಬರು ಮಧ್ಯದಲ್ಲಿ ನಿಂತು ಗ್ರೀನ್ ಲೈಟ್ ಇಲ್ಲವೇ ರೆಡ್ ಲೈಟ್ ಎಂಬುದಾಗಿ ಕೂಗಬೇಕು. ಭಾಗವಹಿಸುವವರು ರೆಡ್ ಎಂದು ಕೂಗಿರುವುದು ಕೇಳಿಸಿದೊಡನೆ ನಿಂತುಕೊಳ್ಳಬೇಕು. ಅಂತೆಯೇ ಗ್ರೀನ್ ಎಂಬುದಾಗಿ ಕೂಗಿದೊಡನೆ ಸಾಗಬೇಕು. ಯಾರು ಈ ಆಟವನ್ನು ಮಿಸ್ ಮಾಡಿಕೊಳ್ಳುತ್ತಾರೋ ಅವರು ಔಟ್ ಆಗುತ್ತಾರೆ.

ಹೈಡ್ ಏಂಡ್ ಸೀಕ್

ಹೈಡ್ ಏಂಡ್ ಸೀಕ್

ಹೈಡ್ ಏಂಡ್ ಸೀಕ್ ಗೇಮ್ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಒಂದು ಮಗುವನ್ನು ಆರಿಸಿ ಉಳಿದವರು ಅಡಗಿ ಕುಳಿತುಕೊಳ್ಳಬೇಕು. ಅಂತೆಯೇ ಈ ಮಗು ಅಡಗಿ ಕುಳಿತವರನ್ನು ಹುಡುಕಿ ಅವರನ್ನು ಕಂಡುಹಿಡಿಯಬೇಕು.

ಸ್ಕೇವೆಂಜರ್ ಹಂಟ್

ಸ್ಕೇವೆಂಜರ್ ಹಂಟ್

ಇದು ಒಂದು ಹೊರಾಂಗಣ ಆಟವಾಗಿದ್ದು ಮಕ್ಕಳ ಪಾರ್ಟಿಯಂತೆ ಕೂಡ ಇದನ್ನು ಆಡಬಹುದಾಗಿದೆ. ತಮ್ಮೊಳಗೆ ಗುಂಪುಗಳನ್ನು ರಚಿಸಿಕೊಳ್ಳುವಂತೆ ಮಕ್ಕಳನ್ನು ಕೇಳಿ. ಕೆಲವೊಂದು ಆಟಿಕೆಗಳನ್ನು ಅಡಗಿಸಿ ಈ ಮಕ್ಕಳ ಗುಂಪನ್ನು ಅದನ್ನು ಹುಡುಕುವಂತೆ ಅವರಿಗೆ ಮಾರ್ಗದರ್ಶನ ನೀಡಿ. ಯಾರು ಎಲ್ಲಾ ಆಟಿಕೆಗಳನ್ನು ಹುಡುಕಿ ತರುತ್ತಾರೋ ಅವರೇ ವಿಜಯಿಗಳು.

ಮಂಕಿ ಇನ್‌ ದ ಮಿಡಲ್

ಮಂಕಿ ಇನ್‌ ದ ಮಿಡಲ್

ಮೋಜಿನ ಆಟವನ್ನು ಎದುರು ನೋಡುತ್ತಿದ್ದೀರಾ? ಮಂಕಿ ಇನ್‌ ದ ಮಿಡಲ್ ಆಟಕ್ಕಾಗಿ ಮೂರು ಆಟಗಾರರು ಮತ್ತು ಒಂದು ಬಾಲ್ ನಿಮಗೆ ಬೇಕು. ಮಂಗನಂತೆ ಆರಿಸಿದ ವ್ಯಕ್ತಿ ಮಧ್ಯದಲ್ಲಿ ನಿಂತುಕೊಳ್ಳಬೇಕು ಮತ್ತು ಉಳಿದ ಇಬ್ಬರು ಆಟಗಾರರು ಎರಡೂ ಬದಿಗಳಲ್ಲಿ ನಿಂತುಕೊಳ್ಳಬೇಕು. ಮಧ್ಯದಲ್ಲಿ ನಿಂತ ಮಂಗ ಚೆಂಡನ್ನು ಸ್ಪರ್ಶಿಸದಂತೆ ಉಳಿದವರು ಚೆಂಡನ್ನು ಕೈಗೆತ್ತಿಕೊಳ್ಳಬೇಕು. ಮಂಗನು ಚೆಂಡನು ಕೈಗೆತ್ತಿಕೊಂಡಲ್ಲಿ, ಚೆಂಡನ್ನು ಎಸೆದ ವ್ಯಕ್ತಿ ಕೋತಿಯಾಗುತ್ತಾನೆ.

ಬ್ಲಾಂಕೆಟ್ ರೇಸ್

ಬ್ಲಾಂಕೆಟ್ ರೇಸ್

ಮಕ್ಕಳಿಗಾಗಿ ಇರುವ ಇನ್ನೊಂದು ಖ್ಯಾತ ಹೊರಾಂಗಣ ಆಟ ಬ್ಲಾಂಕೆಟ್ ರೇಸ್ ಆಗಿದೆ. ಇದಕ್ಕಾಗಿ ಕನಿಷ್ಟ ಪಕ್ಷ 4 ರಿಂದ 6 ಜನ ಇರಬೇಕು. ಬ್ಲಾಂಕೆಟ್ ಅನ್ನು ಪ್ರತಿಯೊಬ್ಬರೂ ಸರಿಯಾಗಿ ಹಿಡಿದುಕೊಳ್ಳಬೇಕು, ಯಾರು ಇದನ್ನು ಹಿಡಿದುಕೊಂಡು ಕುಳಿತುಕೊಳ್ಳುತ್ತಾರೋ ಇಲ್ಲವೇ ಮಲಗುತ್ತಾರೋ ಅವರು ಪ್ರಥಮ ಸ್ಥಾನವನ್ನು ಗಳಿಸುತ್ತಾರೆ.

English summary

Best Outdoor Games For Kids

Here, in this article, you can find some of the best outdoor games for kids. Today's kids are not aware of the variety of games they can play outdoors.Just go through this list of the best outdoor games for kids and make the childhood of your kids be more interesting and memorable.
X
Desktop Bottom Promotion